ವ್ಯಕ್ತಿತ್ವ ಚೆನ್ನಾಗಿರಬೇಕೆಂದರೆ ಪುರುಷರು ತಮ್ಮ ಬಾಹ್ಯ ಸೌಂದರ್ಯವನ್ನು ಗಮನಿಸಬೇಕು. ಮುಖದ ಮೇಲೆ ಕಲೆ, ಮೊಡವೆ, ಹರಡಿರುವ ಕೂದಲು, ಟ್ರಿಮ್ ಮಾಡದ ಗಡ್ಡ ಇವೆಲ್ಲಾ ಸೇರಿದರೆ ವ್ಯಕ್ತಿತ್ವವೇ ಸರಿ ಇಲ್ಲ ಎನಿಸಿಬಿಡುತ್ತೆ. ಅದಕ್ಕೆ ಏನು ಮಾಡಬೇಕು? 

ಟೈಟ್ ಜಿನ್ಸ್ ಹಾಕೋ ಮುನ್ನ

- ಕೂದಲಿಗೆ ಶ್ಯಾಂಪೂ ಮಾಡೋದು ಹುಡುಗಿಯರಿಗೆ ಮಾತ್ರ ಅನ್ನೋರು ಇದ್ದಾರೆ. ತಲೆಗೆ ಸ್ನಾನ ಮಾಡುವಾಗ ಶ್ಯಾಂಪೂ ಬಳಸಿ. ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯ ಕಾಪಾಡುವಂತೆ ಮಾಡುತ್ತದೆ. ಹೊಟ್ಟಿನಂಥ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಮುಖದ ಲುಕ್ ಅನ್ನೇ ಬದಲಿಸಬಲ್ಲದು. 


-ಅರ್ಜೆಂಟ್‌ನಲ್ಲಿ ಶೇವಿಂಗ್ ಕ್ರೀಮ್ ಇಲ್ಲದೆ ಶೇವ್ ಮಾಡಬೇಡಿ. ಬದಲಾಗಿ ಕ್ರೀಮ್‌ನಿಂದಲೇ ಶೇವ್ ಮಾಡಿ. ಇಲ್ಲವಾದರೆ ಗಾಯ, ಕಲೆಯಾಗುತ್ತದೆ. ಸೌಂದರ್ಯಕ್ಕಿದು ಕಪ್ಪು ಚುಕ್ಕಿಯಾಗಿಬಿಡುತ್ತದೆ.
- ಟ್ರಿಮ್ ಮಾಡದಿರುವುದೂ ತಪ್ಪು. ಉದ್ದ ಗಡ್ಡ, ಕೂದಲು ಬಿಟ್ಟರೆ ರೌಡಿ ಲುಕ್ ತರಿಸುತ್ತದೆ. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಕೂದಲು ಟ್ರಿಮ್ ಮಾಡಿಸುತ್ತೀರಿ. 
- ಇತ್ತೀಚಿಗೆ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯ. ಸೂಕ್ತ ಆರೈಕೆ ಹಾಗೂ ಪ್ರೊಟೀನ್ ಕೊರತೆಯಿಂದ ಇಂಥ ಸಮಸ್ಯೆ ತಲೆದೂರುತ್ತದೆ. ಇದನ್ನು ಕೀಳುವುದರಿಂದ ಇತರೆ ಕೂದಲು ದುರ್ಬಲವಾಗುತ್ತದೆ. ಆದುದರಿಂದ ಅದನ್ನು ಕೀಳಬೇಡಿ. ಬದಲಾಗಿ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ. 

ರೆಡ್ ಫ್ಯಾಷನ್ ಲೋಕದ ಬೆಸ್ಟ್ ಕಲರ್...
- ಮೂಗು ಮತ್ತು ಕಿವಿ ಕೂದಲನ್ನು ಕಡೆಗಣಿಸಬಾರದು. ಅದನ್ನು ಹಾಗೆ ಉದ್ದವಾಗಿ ಬೆಳೆಯಲು ಬಿಟ್ಟರೆ ಅಸಹ್ಯವಾಗಿ ಕಾಣುತ್ತದೆ.
- ಹೆಚ್ಚಿನ ಹುಡುಗರು ಕೂದಲು ಒದ್ದೆ ಮಾಡಿ, ಅದಕ್ಕೆ ಜೆಲ್ ಹಾಕಿ ಜೆಲ್ ಹಚ್ಚುತ್ತಾರೆ. ಹೀಗೆ ಮಾಡಿದರೆ ಕೂದಲು ಡ್ಯಾಮೇಜ್ ಆಗಿ ಕೂದಲು ಉದುರುತ್ತವೆ. 
- ಸಾಧ್ಯವಾದಷ್ಟು ಒಗೆದು, ಐರನ್ ಮಾಡಿರುವ ಬಟ್ಟೆಯನ್ನೇ ಬಳಸಿ. ಗಬ್ಬು ನಾರುತ್ತಿದ್ದರೆ, ಕೊಳಕು ಕೊಳಕಾಗಿದ್ದರೆ ಯಾರೂ ನಿಮ್ಮ ಹತ್ತಿರ ಸುಳಿಯುವುದೇ ಇಲ್ಲವೆಂಬುವುದು ನೆನಪಿರಲಿ.