ನಿಶಾಂತ ಕಮ್ಮರಡಿ

ಒಂದು ಕಾಲದಲ್ಲಿ ಬರೀ ಮಿಲಿಟ್ರಿಯವರು, ಫಾರೆಸ್ಟ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದವರು ತೊಡುತ್ತಿದ್ದ ಹಸಿರು ಕಂದು ಮಿಶ್ರಿತ ಮಿಲಿಟರಿ ಪ್ರಿಂಟ್‌ನ ಉಡುಗೆ ಯಾವಾಗ ಸಾಮಾನ್ಯರ ಕೈಗೂ ಸಿಕ್ಕಿತೋ ಆಗ ಫ್ಯಾಶನ್‌ ಡಿಸೈನಿಂಗ್‌ ಕ್ಷೇತ್ರದಲ್ಲಿ ಒಂದು ಕ್ರಾಂತಿಯೇ ಆಗೋಯ್ತು. ಸಮಾಜದ ಎಲ್ಲ ವರ್ಗದ ಯುವಕ, ಯುವತಿಯರು ಈ ಉಡುಗೆಯ ಕ್ರೇಜ್‌ ಹತ್ತಿಸಿಕೊಂಡರು. ದಿನಗೂಲಿ ಹುಡುಗನೂ ಐಟಿ ಫೀಲ್ಡ್‌ನ ಯುವಕನೂ ಒಂದೇ ವಿನ್ಯಾಸಕ್ಕೆ ಮಾರು ಹೋದ್ರು. ಇಷ್ಟೊತ್ತಿಗೆ ಡಿಸೈನ​ರ್‍ಸ್ ತಲೆಗೆ ಹುಳ ಬಿಟ್ಕೊಂಡ್ರು. ಮಿಲಿಟರಿ ಪ್ರಿಂಟ್‌ನಲ್ಲೇ ಹೊಸತೇನನ್ನ ಮಾಡಬಹುದು ಅಂತ. ಹಾಗೆ ಅವರಿಗೆ ಹೊಳೆದ ಡಿಸೈನ್‌ಗಳನ್ನು ಇಂದು ತಾರೆಯರು ತೊಟ್ಟು ಮಿಂಚುತ್ತಿದ್ದಾರೆ.

ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

ಟೀ ಶರ್ಟ್‌, ಪ್ಯಾಂಟ್‌ಗಳು

ಇದು ಸಿಂಪಲ್ಲಾದ ಆದರೆ ಬಹಳ ಕಂಫರ್ಟ್‌ ಫೀಲ್‌ ನೀಡುವ ಉಡುಗೆ. ನೀವು ವೀಕೆಂಡ್‌ ಔಟಿಂಗ್‌ಗೂ ಹಾಕ್ಕೊಂಡು ಹೋಗ್ಬಹುದು, ಕಾಡಲ್ಲಿ ಟ್ರೆಕ್ಕಿಂಗ್‌ ಮಾಡುವಾಗ, ಯಾವುದೋ ಸ್ಪೋಟ್ಸ್‌ರ್‍ನಲ್ಲಿ ಭಾಗವಹಿಸುವಾಗ..ಹೀಗೆ ಇನ್‌ಫಾರ್ಮಲ್‌ ಆಗಿ ಎಲ್ಲಿಗೆ ಬೇಕಾದರೂ ಧರಿಸಬಹುದು. ಲುಕ್‌ ಚೆನ್ನಾಗಿರುತ್ತೆ, ಕಂಫರ್ಟ್‌ ಫೀಲ್‌ ಇರುತ್ತೆ. ಶರ್ಟ್‌, ಟೀ ಶರ್ಟ್‌ ಹಾಗೂ ಪ್ಯಾಂಟ್‌ಗೆ ರಗಡ್‌ ಲುಕ್‌ ಇದೆ. ದಪ್ಪ ಕಾಟನ್‌ ಮೆಟೀರಿಯಲ್‌ನ ಈ ಪ್ಯಾಂಟ್‌ಗಳಲ್ಲೂ ವೈವಿಧ್ಯತೆ ಇದೆ.

ಕೇಮೋ ದಿರಿಸಿನಲ್ಲಿ ಮಿಂಚಿದ ಕತ್ರಿನಾ

ಮಿಲಿಟರಿ ಸ್ಟೈಲ್‌ನ ಉಡುಗೆಯನ್ನೇ ತುಸು ಸ್ಟೈಲ್‌ ಆಗಿ ಒಂಟೆಯ ಚರ್ಮಕ್ಕೆ ಹೋಲಿಕೆ ಮಾಡ್ತಾ ‘ಕೆಮೋ’ ಡ್ರೆಸ್‌ ಅಂತಾರೆ ಡಿಸೈನರ್ಸ್‌. ಮೊನ್ನೆ ಮುಂಬೈಯಲ್ಲಿ ಮಿಸ್‌. ಇಂಡಿಯಾ ಸ್ಪರ್ಧೆ ನಡೆಯಿತು. ಚೆಂದದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂಥಾ ಸ್ಪರ್ಧಿಗಳು, ಅವರಿಗಿಂತ ತುಸು ಪ್ರಬುದ್ಧರಾಗಿದ್ದ ಸೆಲೆಬ್ರಿಟಿಗಳು. ಆ ಸೆಲೆಬ್ರಿಟಿಗಳಲ್ಲಿ ಎದ್ದು ಕಾಣುತ್ತಿದ್ದಾಕೆ ಕತ್ರಿನಾ ಕೈಫ್‌. ಕಾರಣ ಈಕೆ ತೊಟ್ಟಿದ್ದ ಕೆಮೋ ಅರ್ಥಾತ್‌ ಆರ್ಮಿ ಪ್ರಿಂಟ್‌ ಡಿಸೈನ್‌ನಿಂದ ಪ್ರೇರಿತವಾಗಿದ್ದ ಮಿನಿ ಡ್ರೆಸ್‌. ಇದು ಆರ್ಮಿ ಫ್ಯಾಶನ್‌ನ ಹೊಸ ಸಾಧ್ಯತೆ. ಹಿನ್ನೆಲೆಯಲ್ಲಿ ಕೆಮೋ ಪ್ರಿಂಟ್‌ ಅದರ ಮೇಲೆ ಬಂಗಾರದ ಬಣ್ಣದ ಟಸೆಲ್‌ ಅರ್ಥಾತ್‌ ನೂಲೆಳೆ ಡಿಸೈನ್‌. ಗೋಲ್ಡನ್‌ ಹಾಗೂ ಕೆಮೋ ಡಿಸೈನ್‌ನ ಕಿವಿಯೋಲೆ, ಕೈಗೆ ಗೋಲ್ಡನ್‌ ಕಲರ್‌ ಕಡಗಕ್ಕಿಂತ ದಪ್ಪದ ಬಳೆ. ಕೂದಲನ್ನೆಲ್ಲ ಸೇರಿಸಿ ಪೋನಿಟೈಲ್‌ ಮಾಡಿದ್ದು ಇಡೀ ಸ್ಟೈಲ್‌ಅನ್ನ ಎದ್ದು ಕಾಣೋ ಹಾಗೆ ಮಾಡಿತ್ತು.

ಹೀಗಿದ್ದರೆ ನೀಟ್ ಆ್ಯಂಡ್ ಡಿಗ್ನಿಫೈಡ್ ಆಗಿ ಕಾಣಿಸ್ತೀರಿ!

ರಾಧಿಕಾ ಆಪ್ಟೆಡ್ರೆಸ್‌ನಲ್ಲೂ ಮಿಲಿಟ್ರಿ ಪ್ರಭಾವ

ಕೆಲ ಸಮಯದ ಹಿಂದೆ ರಾಧಿಕಾ ಆಪ್ಟೆತೊಟ್ಟಚೆಂದದ ದಿರಿಸನ್ನು ಈ ಸಂದರ್ಭ ನೆನಪಿಸಿಕೊಳ್ಳಲೇ ಬೇಕು. ಇದು ಪಕ್ಕ ಮಿಲಿಟರಿ ಪ್ರಿಂಟ್‌ನ ಡ್ರೆಸ್‌ ಅಲ್ಲ. ಬದಲಾಗಿ ಆರ್ಮಿ ಪ್ರಿಂಟ್‌ನಿಂದ ಪ್ರಭಾವಿತವಾಗಿ ತಯಾರಿಸಿದ ಉಡುಗೆ. ಕಪ್ಪು ಮತ್ತು ಕೆಮೋ ಕಾಂಬಿನೇಶನ್‌ನಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಕಂದು ಬಣ್ಣಕ್ಕೆ ಮತ್ತಷ್ಟುಹೊಳಪು ನೀಡಿ ತುಸು ಗೋಲ್ಡನ್‌ ಶೇಡ್‌ಗೆ ಬದಲಾಯಿಸಲಾಗಿದೆ. ಪಕ್ಕದಲ್ಲಿ ಜಿಪ್‌ ಡಿಸೈನ್‌ ಮಾಡಲಾಗಿದೆ. ಇದೊಂಥರ ಎಲ್ಲ ಕಾಲಕ್ಕೂ ಹುಡುಗಿಯರಿಗೆ ಇಷ್ಟವಾಗುವಂಥ ಉಡುಗೆ. ಸಣ್ಣಪುಟ್ಟಮಾರ್ಪಾಡುಗಳೊಂದಿಗೆ ಇಂಥ ಡ್ರೆಸ್‌ಅನ್ನು ಸಾಮಾನ್ಯ ಹುಡುಗಿಯರೂ ತೊಟ್ಟುಕೊಂಡರೆ ಸಖತ್ತಾಗಿ ಕಾಣಬಹುದು.

ಆಫ್‌ ಶೋಲ್ಡರ್‌ ಶರ್ಟ್‌

ಆರ್ಮಿ ಪ್ರಿಂಟ್‌ನ ಆಫ್‌ಶೋಲ್ಡರ್‌ ಫ್ಯಾನ್ಸಿ ಶರ್ಟ್‌ ಜೊತೆಗೆ ಜೀನ್ಸ್‌ನ ಪುಟಾಣಿ ಸ್ಕರ್ಟ್‌, ಅದಕ್ಕೊಂದು ಚಿಕ್ಕ ಬೆಲ್ಟ್‌ ತೊಟ್ಟು ಕೃತಿ ಸನೂನ್‌ ಸ್ಟ್ರೀಟ್‌ನಲ್ಲಿ ಹೆಜ್ಜೆ ಹಾಕ್ತಿದ್ರೆ ಹುಡುಗ್ರುಫಿದಾ. ರಫ್‌ ಆ್ಯಂಡ್‌ ಅಫ್‌ ಮಿಲಿಟ್ರಿ ಪ್ರಿಂಡ್‌ನ ಆದ್ರ್ರ ಮುಖ ಇದು. ಮಿಲಿಟರಿ ಅಂದ ಕೂಡಲೇ ನೆನಪಾಗೋ ಒರಟುತನಕ್ಕೆ ವಿರುದ್ಧದ ಮೃದುಭಾವ ಸೂಸುವ ಡ್ರೆಸ್‌. ಒಂದು ಪ್ರಿಂಟ್‌ ಬಗೆಗಿನ ಪೂರ್ವಾಗ್ರಹವನ್ನು ತೊಡೆದುಹಾಕಿದ ಕೀರ್ತಿಯೂ ಇದಕ್ಕೆ ಸಲ್ಲಬೇಕು.

ಒಂದು ಕ್ರಾಪ್‌ಟಾಪ್‌ನ ಹಲವು ಅವಸ್ಥಾಂತರ!

ಆರ್ಮಿ ಪ್ರಿಂಟ್‌ನ ತುಂಡು ಲಂಗ, ಜಾಕೆಟ್‌ ಇತ್ಯಾದಿ

ಆರ್ಮಿ ಪ್ರಿಂಟ್‌ನಲ್ಲಿ ತುಂಡು ಲಂಗಗಳು ಅಂದರೆ ಮಿನಿ ಸ್ಕರ್ಟ್‌ಗಳು ಬಂದಿವೆ. ಇದಕ್ಕೆ ಕಾಂಬಿನೇಶನ್‌ ಆಗಿ ಬೆಳ್ಳನೆಯ ಟಾಪ್‌ ತೊಟ್ಟು ಮಿಂಚಿದ್ದು ಸಿಂಹಳೀಯ ಹುಡುಗಿ ಜಾಕ್ವಲಿನ್‌ ಫೆರ್ನಾಂಡಿಸ್‌. ಜೀನ್ಸ್‌ ಪ್ಯಾಂಟ್‌ ಹಾಗೂ ಟೀ ಶರ್ಟ್‌ ಮೇಲೆ ಮಿಲಿಟರಿ ಪ್ರಿಂಟ್‌ ಜಾಕೆಟ್‌ ಹಾಕ್ಕೊಂಡು ಬಂದ ಕಂಗನಾ ಕಂಡು ಮಿಂಚಿನ ಕ್ಯಾಮೆರ ಫ್ಲಾಶ್‌ಗಳೆಷ್ಟೋ. ಇದೇ ಪ್ಲೇನ್‌ ಮಿಲಿಟರಿ ಬಣ್ಣದ ಲಾಂಗ್‌ ಜಾಕೆಟ್‌ ತೊಟ್ಟಮಿಂಚಿದ ಬಾಲಿವುಡ್‌ ಹುಡುಗಿಯರೂ ಬಹಳ ಮಂದಿ. ಮತ್ತೊಂದು ವಿಷ್ಯ ಗೊತ್ತಾ, ಮಿಲಿಟ್ರಿ ಪ್ರಿಂಟ್‌ನಲ್ಲಿ ಪಲಾಝೋ ಪ್ಯಾಂಟ್‌ಗಳೂ ಬಂದಿವೆ. ಕಡುಬಣ್ಣದ ಪ್ಲೇನ್‌ ಟೀ ಶರ್ಟ್‌ ಅಥವಾ ಟಾಪ್‌ಗೆ ಇದನ್ನು ಕಾಂಬಿನೇಷನ್‌ ಮಾಡ್ಕೊಂಡು ತೊಟ್ಕೊಳ್ಳೋ ಹುಡುಗೀರು ಟ್ರೆಂಡಿ ಅನಿಸಿಕೊಳ್ತಿದ್ದಾರೆ. ಇನ್ನೊಂದು ಪ್ಯಾಶನ್‌ ಇದೆ, ಅದು ಆರ್ಮಿಪ್ರಿಂಟ್‌ನ ಡಾಂಗರಿಗಳು. ಟೀ ಶರ್ಟ್‌ ಮೇಲೆ ಚಡ್ಡಿ ಅಥವಾ ಪ್ಯಾಂಟ್‌ ಮಾದರಿಯ ಮೇಲು ಲಾಡಿ ಇರೋ ಈ ಡಾಂಗಡಿಗಳನ್ನು ತೊಟ್ಟು ಮೆರೆದಾಡೋದು ಫ್ಯಾಶನ್‌ನ ಮತ್ತೊಂದು ಆ್ಯಂಗಲ್ಲು.