ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

ನೀವು ಮಾಡುವ ಫ್ಯಾಷನ್ ಮಿಸ್ಟೇಕ್ಸ್ ನಿಮಗೆ ಮುಜುಗರ ತರುವಂತಿರಬಾರದು. ಇಂಥ ಫ್ಯಾಷನ್ ಮಿಸ್ಟೇಕ್‌ಗಳನ್ನೂ ನೀವು ಮಾಡಲೇಬಾರದು. ಏನವು? 

Fashion Mistakes not to make in 2019

ನಿಮ್ಮ ಔಟ್‌ಫಿಟ್‌ಗೆ ಟ್ರೆಂಡಿ ಲುಕ್ ನೀಡಲು ಮಿಕ್ಸ್ ಆ್ಯಂಡ್ ಮ್ಯಾಚ್ ಫಾರ್ಮುಲಾ ಅಳವಡಿಸುವ ಮುನ್ನ ನೀವು ಧರಿಸುವ ಕಾಂಬಿನೇಷನ್ ಒಂದಕ್ಕೊಂದು ಮ್ಯಾಚ್ ಆಗುತ್ತದೆಯೇ ನೋಡಬೇಕು. ಕೆಲವೊಂದು ಬಾರಿ ಈ ಎಕ್ಸ್‌ಪಿರಿಮೆಂಟ್ ತುಂಬಾ ಕೆಟ್ಟದಾಗಿ ಕಾಣುತ್ತದೆ. ಅದಕ್ಕೆ ಫ್ಯಾಷನ್ ಹೆಸರಲ್ಲಿ ಈ ತಪ್ಪು ಮಾಡ್ಬೇಡಿ ಎನ್ನುತ್ತಿದ್ದೇವೆ ಇಲ್ ಕೇಳಿ....

- ಬಿಳಿ ಸ್ಕರ್ಟ್ ಅಥವಾ ಪ್ಯಾಂಟ್ ಜೊತೆ ಬಿಳಿ ಷೂ ಧರಿಸಲೇಬೇಡಿ. ಅದರಿಂದ ನೀವು ಸ್ನೋ ಮಹಿಳೆಯಂತೆ ಕಾಣಿಸುತ್ತೀರಿ. 

- ಕೇಪ್ರಿಯೊಂದಿಗೆ ಸಣ್ಣ ಕುರ್ತಾ ಧರಿಸಬೇಡಿ. ಕೇಪ್ರಿ ಜೊತೆ ಫಿಟ್ ಆಗಿರುವ ಟಾಪ್ ಧರಿಸಿ. ಶಾರ್ಟ್ ಕುರ್ತಾ ಜೀನ್ಸ್‌ನೊಂದಿಗೆ ಓಕೆ. 

ಮತ್ತೆ ಟ್ರೆಂಡ್ ಆಗುತ್ತಿದೆ ರೆಟ್ರೋ ಸ್ಟೈಲ್‌!

- ಮಾಡೆಲ್ಸ್ ಗಳಂತೆ ಸೀರೆಯಲ್ಲಿ ಹಾಟ್ ಆಗಿ ಕಾಣಲು ಬಿಕಿನಿ ಬ್ಲೌಸ್ ಧರಿಸಬೇಡಿ. ಸೆಕ್ಸಿಯಾಗಿ ಕಾಣಬೇಕೆಂದು ನಿಮಗೆ ಆರಾಮ ಎನಿಸದ ಡ್ರೆಸ್ ಧರಿಸಿದರೆ ಆಭಾಸವಾಗಬಹುದು.

- ವಯಸ್ಸು ಹೆಚ್ಚಾದಂತೆ ಆಸಿಡ್ ಶೇಡ್ಸ್ ಜೀನ್ಸ್ ಧರಿಸಬೇಡಿ. ಬದಲಾಗಿ ಡಾರ್ಕ್ ಬಣ್ಣದ ಜೀನ್ಸ್ ಧರಿಸಿದರೆ ಸ್ಮಾರ್ಟ್ ಲುಕ್ ನೀಡುತ್ತದೆ. 

- ಉಗುರು ನೀಟ್ ಆಗಿ ಇಟ್ಟುಕೊಳ್ಳಲು ಆಗದಿದ್ದರೆ ರೆಗ್ಯುಲರ್ ಮೆನಿಕ್ಯೂರ್ ಮಾಡಿಸಿಕೊಳ್ಳಿ. ಸಾಧ್ಯವಾದಷ್ಟು ಉಗುರು ಸಣ್ಣದಾಗಿರಲಿ. ಜೊತೆಗೆ ಸುಂದರ ಬಣ್ಣದ ನೈಲ್ ಪಾಲಿಶ್ ಹಾಕಿದರೆ ಚೆಂದ. 

- ಡಾರ್ಕ್ ಐ ಮೇಕಪ್ ಜೊತೆಗೆ ಡಾರ್ಕ್ ಲಿಪ್ಸ್ಟಿಕ್ ಹಾಕಬೇಡಿ. ಇದರಿಂದ ನಿಮ್ಮ ಮೇಕಪ್ ಬಗ್ಗೆ ಅಪಹಾಸ್ಯ ಮಾಡುವರು. 

- ಬೇಸಿಗೆಯಲ್ಲಿ ಬೂಟ್ಸ್ ಧರಿಸುವುದೊಂದು ಮಿಸ್ಟೇಕ್ . ಫುಟ್‌ವೇರ್ ಧರಿಸುವ ಮುನ್ನ ಹವಾಮಾನದ ಬಗ್ಗೆ ಇರಲಿ ಎಚ್ಚರ. 

ಇಷ್ಟು ಫೂಟ್‌ವೇರ್‌ಗಳಿದ್ದರೆ ಸಾಕು, ಬಟ್ಟೆಗೆ ಹೊಂದೋಲ್ಲ ಎಂಬ ಕ್ಯಾತೆಗೆ ಬೀಳುತ್ತೆ ಬ್ರೇಕು!

- ಒಂದು ಪ್ರಿಂಟ್ ಜೊತೆಗೆ ಇನ್ನೊಂದು ಪ್ರಿಂಟ್ ಮ್ಯಾಚ್ ಮಾಡಲು ಹೋಗಬೇಡಿ. 

- ನೀವೆಷ್ಟೇ ಟ್ರೆಂಡಿ ಆಗಿದ್ದರೂ ಬ್ರಾ ಸ್ಟ್ರಾಪ್ ತೋರಿಸಲು ಹೋಗಬೇಡಿ. ಯಾಕೆಂದರೆ ಅದರಿಂದ ನಿಮ್ಮ ಎದುರಿದ್ದವರಿಗೆ ಉತ್ತಮ ಇಂಪ್ರೆಷನ್ ಮೂಡುವುದಿಲ್ಲ.

Latest Videos
Follow Us:
Download App:
  • android
  • ios