ನಿಶಾಂತ ಕಮ್ಮರಡಿ

ತುಸು ಎತ್ತರ ನಿಲುವಿನ ಹದವಾದ ಶರೀರದ ಪೋರಿಯೊಬ್ಬಳು ಪುಟಾಣಿ ಟಾಪ್‌, ಉದ್ದ ಲಂಗ, ಲಂಗದುದ್ದಕ್ಕೂ ಇಳಿಬಿದ್ದ ಪಾರದರ್ಶಕ ಜಾಕೆಟ್‌ ತೊಟ್ಟು ಪಟ ಪಟ ಹೆಜ್ಜೆ ಹಾಕುತ್ತ ನಡೆಯುತ್ತಿದ್ದರೆ ರೋಡ್‌ನಲ್ಲಿ ನಿಂತ ಒಬ್ಬೊಬ್ಬರದು ಒಂದೊಂದು ಥರ ರೆಸ್ಪಾನ್ಸ್‌. ‘ಥೋ..ಏನೇನೆಲ್ಲ ಅವತಾರ ಮಾಡ್ತವೆ’ ಅಂತ ಆಂಟಿ ಮೂಗು ಮುರಿದರೆ, ಪಕ್ಕ ನಿಂತ ಆಂಟಿ ಮಗಳು, ಇದ್ಯಾವ ಹೊಸ ಸ್ಟೈಲು, ನಾನೂ ಟ್ರೈ ಮಾಡಿದರೆ ಹೇಗೆ ಅಂತ ಯೋಚಿಸುತ್ತಿರುತ್ತಾಳೆ. ಡೇರಿಂಗ್‌ ಹುಡುಗಿಗೆ ಸ್ಟೇರಿಂಗ್‌ ಮಾಡ್ತಾ ನಿಂತ ಹುಡುಗನಿಗೆ ಆಕೆಯಿಂದ ಕಣ್ಣು ತೆಗೆಯಲೇ ಆಗುತ್ತಿಲ್ಲ. ಅವಳ ಬಡಕಲು ನಡುವನ್ನು ಬಯಲು ಮಾಡುತ್ತ ಮೈಯನ್ನಪ್ಪಿ ನಿಂತಿರುವ ಕ್ರಾಪ್‌ ಟಾಪ್‌ ತಾನಾಗಿರಬಾರದೇ ಎಂದು ಆತ ಕುರುಬುತ್ತಾನೆ.

ಲೇಡೀಸ್, ಸಾಲಿಡ್ ಲುಕ್‌ಗಾಗಿ ಮೆನ್ಸ್ ವೇರ್ ಟ್ರೈ ಮಾಡಿ

ದೊಡ್ಡ ಹಿಸ್ಟರಿಯೇ ಇದೆ, ಉಡಾಫೆ ಬೇಡ

ತೀರಾ ಇತ್ತೀಚಿನ ಫ್ಯಾಶನ್‌ ಅಂತ ತೆಗೆದುಹಾಕೋ ಹಾಗಿಲ್ಲ. ನೂರಾರು ವರ್ಷಗಳ ಇತಿಹಾಸ ಈ ಪುಟ್ಟಟಾಪ್‌ಗಿದೆ. 1893ರಲ್ಲಿ ಚಿಕಾಗೋದಲ್ಲಿ ನಡೆದ ‘ವಲ್ಡ್‌ರ್‍ ಫೇರ್‌’ನಲ್ಲಿ ‘ಲಿಟಲ್‌ ಈಜಿಪ್ಟ್‌’ ವೇದಿಕೆಯಲ್ಲಿ ಬೆಲ್ಲಿ ಡ್ಯಾನ್ಸರ್‌ಗಳು ಕ್ರಾಪ್‌ಟಾಪ್‌ ಧರಿಸಿ ಡ್ಯಾನ್ಸ್‌ ಮಾಡಿದ್ರು. 1930-40ರ ಸುಮಾರಿಗೆ ಇದು ಬೀಚ್‌ಡ್ರೆಸ್‌ ಆಗಿ ಪೇಮಸ್‌ ಆಯ್ತು. ಫ್ಯಾಶನ್‌ ಜಗತ್ತಿನಲ್ಲಿ 1970ರ ಸುಮಾರಿಗೆ ಬರ್ಬರಾ ಏಡೆನ್‌ನಂಥ ಪ್ರಸಿದ್ಧ ನಟಿಯರಿಂದ ಈ ಸ್ಟೈಲ್‌ ಹತ್ತಾರು ಅವತಾರ್‌ ಪಡೆಯುತ್ತಾ ಹೋಯ್ತು. ಅಲ್ಲಿಂದ ಬಾಲಿವುಡ್‌ಗೂ ಬಂದು ಈಗ ಪಕ್ಕದ್ಮನೆ ಹುಡುಗಿಯೂ ನಿರ್ಭಿಡೆಯಿಂದ ಧರಿಸುವ ಹಾಗಾಯ್ತು.

ಕ್ರಾಪ್‌ ಟಾಪ್‌ ಲಾಂಗ್‌ ಸ್ಕರ್ಟ್‌ ಮತ್ತು ಉದ್ದ ಜಾಕೆಟ್‌

ಟ್ರೆಂಡಿ ಅನಿಸುವ ಫ್ಯಾಶನ್‌. ಕಳೆದ ವರ್ಷದಿಂದಲೇ ಸೆಲೆಬ್ರಿಟಿಗಳು ಈ ಸ್ಟೈಲ್‌ ಹಿಂದೆ ಬಿದ್ದಿದ್ದಾರೆ. ಇಂಡೋ ವೆಸ್ಟನ್‌ ಮಾದರಿಯ ಈ ಸ್ಟೈಲ್‌ ಉದ್ದ ನಿಲುವಿನ ಹುಡುಗಿಯರಿಗೆ ಚೆನ್ನಾಗಿ ಕಾಣುತ್ತೆ. ಕುಳ್ಳಗಿರೋರು ಉದ್ದ ಕಾಣ್ತಾರೆ. ದಪ್ಪಗಿರೋರು ತೆಳು ಕಾಣ್ತಾರೆ. ಒಂಥರ ಎಲ್ಲ ನಿಲುವಿನವರಿಗೂ ಚೆನ್ನಾಗಿ ಕಾಣುವ ಫ್ಯಾಶನ್‌ ಇದು. ಕ್ರಾಪ್‌ ಟಾಪ್‌, ಲಂಗ ಸಿಂಪಲ್‌ ಆಗಿರುವಾಗ ಓವರ್‌ಕೋಟ್‌ ಸ್ವಲ್ಪ ಅದ್ಧೂರಿಯಾಗಿದ್ದರೆ ಆ ಚೆಂದವೇ ಬೇರೆ. ಮೋಡಗಟ್ಟಿದ ಆಕಾಶ, ಸಂಜೆಯ ಹೊತ್ತಿಗೆ ಉಧೋ ಎಂದು ಸುರಿಯುವ ಮಳೆಯಲ್ಲಿ ತಿಳಿ ಬಣ್ಣಗಳ ಕ್ರಾಪ್‌ ಟಾಪ್‌ ಲಂಗ ತೊಟ್ಟು ಹಳದಿ, ಹಸಿರು, ಪೀಚ್‌ ಕಲರ್‌ನ ತೆಳುವಾದ ಉದ್ದ ಜಾಕೆಟ್‌ ತೊಟ್ಟು ನಡೆದರೆ ನೋಡೋದಕ್ಕೆ ಎರಡು ಕಣ್ಣು ಸಾಲದು.

ಓವರ್ ಸೈಜ್ ಟೀ ಶರ್ಟ್ ನ್ನು ಈ ರೀತಿ ಸ್ಟೈಲಿಶ್ ಆಗಿ ಧರಿಸಿ....

ಧೋತಿ ಪ್ಯಾಂಟ್‌ಗೆ ಕ್ರಾಪ್‌ ಟಾಪ್‌

ಮಾಮೂಲಿ ಹೆಣ್ಮಗಳಿಗೂ ಟ್ರೆಂಡಿ ಲುಕ್‌ ಕೊಡುವ ಕಾಂಬಿನೇಶನ್‌ ಇದು. ಧೋತಿ ಪ್ಯಾಂಟ್‌ ಅಥವಾ ಸೆಲ್ವಾರ್‌ ಕಮೀಜ್‌ ಪ್ಯಾಂಟ್‌ ಮೇಲಿಂದ ಕ್ರಾಪ್‌ ಟಾಪ್‌ ತೊಟ್ಟುಕೊಂಡರೆ ಸಖತ್‌ ಹಾಟ್‌ ಲುಕ್‌. ಇದಕ್ಕೆ ಪಾರದರ್ಶಕ ಲಾಂಗ್‌ ಜಾಕೆಟ್‌ ಒಳ್ಳೆಯ ಕಾಂಬಿನೇಷನ್‌. ತಾಪ್ಸಿ ಪನ್ನು ಇತ್ತೀಚೆಗೆ ಈ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಫ್ಯಾಶನ್‌ ಪಂಡಿತರಿಂದ ಹೊಗಳಿಸಿಕೊಂಡರು. ಪಲಾಝೋ ಪ್ಯಾಂಟ್‌ ಕ್ರಾಪ್‌ಟಾಪ್‌ ಹಾಗೂ ಲಾಂಗ್‌ ಜಾಕೆಟ್‌ ಸ್ಟೈಲೂ ಸಖತ್ತಾಗಿರುತ್ತೆ.

ಡೆನಿಮ್‌ ಜೊತೆ ಕ್ರಾಪ್‌ಟಾಪ್‌

ಈ ಸ್ಟೈಲ್‌ಅನ್ನು ಸಖತ್‌ ಪಾಪ್ಯುಲರ್‌ ಮಾಡಿರೋದು ಪಿಂಕಿ ಅಲಿಯಾಸ್‌ ಪ್ರಿಯಾಂಕಾ ಚೋಪ್ರಾ. ಆಕೆ ಇಂದಿಗೂ ಹೆಚ್ಚು ಕಾಣಿಸಿಕೊಳ್ಳುವುದು ಡೆನಿಮ್‌ ಹಾಗೂ ಕ್ರಾಪ್‌ಟಾಪ್‌ ಕಾಂಬಿನೇಶನ್‌ನಲ್ಲೇ. ಪ್ರಿಂಟೆಡ್‌ ಡೆನಿಮ್‌, ಹೈ ವೆಸ್ಟ್‌ ಡೆನಿಮ್‌ ಜೊತೆಗೆ ಕ್ರಾಪ್‌ ಟಾಪ್‌ ಹಾಕ್ಕೊಂಡ್ರೆ ಸಖತ್‌ ಹಾಟ್‌ ಕಾಣುತ್ತೆ ಅನ್ನೋದು ರಿವೀಲ್‌ ಆಗಿದ್ದೇ ಪ್ರಿಯಾಂಕಾ ಸ್ಟೈಲ್‌ ಮಾಡೋದು ನೋಡಿದ ಮೇಲೆ. ಜಾಕ್ವೆಲಿನ್‌ ಫರ್ನಾಂಡಿಸ್‌, ಸೋನಮ್‌ ಕಪೂರ್‌ ಡೆನಿಮ್‌ ಮತ್ತು ಕ್ರಾಪ್‌ಟಾಪ್‌ನ ಹಲವು ಸಾಧ್ಯತೆಗಳನ್ನು ಪತ್ತೆ ಮಾಡಿದ ಇತರರು. ಯಾವ್ದಾದರೂ ಕಾಲೇಜ್‌ ಹತ್ರ ಹೋಗಿ ನಿಂತರೆ ಇದೇ ಸ್ಟೈಲ್‌ ಮಾಡಿರುವ ನೂರಾರು ಹುಡುಗಿಯರು ಕಾಣ ಸಿಗುತ್ತಾರೆ. ಅಷ್ಟರ ಮಟ್ಟಿಗೆ ಪಾಪ್ಯುಲರ್‌ ಈ ಟ್ರೆಂಡ್‌.

ಕ್ರಾಪ್‌ಟಾಪ್‌ ಜೊತೆಗೆ ಸ್ಕರ್ಟ್‌, ಶಾಟ್ಸ್‌ರ್‍ ಸೇರಿದಂತೆ ಏನೆಲ್ಲ ಫ್ಯಾಶನ್‌ಗಳಿವೆಯೋ ಅವೆಲ್ಲವನ್ನೂ ಟ್ರೈ ಮಾಡಿ

ತುಂಬಾ ಶಾರ್ಟ್ ಇದ್ದೀರಾ? ಹೀಲ್ಸ್ ಇಲ್ಲದೇನೂ ಹೈಟ್ ಆಗಿ ಕಾಣಿಸ್ಕೊಳ್ಳಿ...

ಸೀರೆಗೆ ಕ್ರಾಪ್‌ಟಾಪ್‌ ಬ್ಲೌಸ್‌

ಸಖತ್‌ ಟ್ರೆಂಡಿಯಾಗಿರುವ ಕಾಂಬಿನೇಶನ್‌. ಮೌನಿ ರಾಯ್‌ ಕಳೆದವಾರ ಈ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು. ಸಿಂಪಲ್ಲಾದ ತಿಳಿನೀಲಿ ಬಣ್ಣದ ಸೀರೆ, ಅದಕ್ಕೆ ಮುದ್ದಾದ ಕ್ರಾಪ್‌ ಟಾಪ್‌ ಕಾಂಬಿನೇಶನ್‌. ಬಂಗಾರದ ಬಣ್ಣದ ಟೆಸ್ಸಲ್‌ಗಳಿದ್ದ ನೂಲಿನಂಥ ಸ್ಟ್ರಾಪ್‌ ಇದ್ದ ಮೈ ಬಣ್ಣಕ್ಕಿಂತ ತುಸು ಗಾಢವಾದ ಕ್ರಾಪ್‌ಟಾಪ್‌ ಅದು. ಮೆಟಾಲಿಕ್‌ ಸ್ಟ್ರಾಪ್‌ ಹೀಲ್ಸ್‌ ಇರುವ ಚಪ್ಪಲಿ ಬಿಟ್ಟರೆ ಆಕೆ ನಿರಾಭರಣ ಸುಂದರಿ. ಬನ್‌ ಮಾಡಿದ ಕೂದಲು, ವಿಂಗ್‌ ಐ ಮೇಕಪ್‌, ನ್ಯೂಡ್‌ ಲಿಪ್‌ಸ್ಟಿಕ್‌ ಎಲ್ಲವೂ ಆಕೆಯ ಸಹಜ ಸೌಂದರ್ಯ ಎದ್ದು ಕಾಣೋ ಹಾಗೆ ಮಾಡುತ್ತಿದ್ದವು. ಸೀರೆಗೆ ಸ್ಪೆಗೆಟಿ ಕ್ರಾಪ್‌ ಟಾಪ್‌ ಏನ್‌ ಚೆಂದ ಕಾಣುತ್ತೆ ಅಂತ ಗೊತ್ತಾದದ್ದೇ ಉಳಿದ ಕೆಲ ಸೆಲೆಬ್ರಿಟಿಗಳೂ ಈ ಲುಕ್‌ನಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಉಳಿದಂತೆ ಶ್ರದ್ಧಾ ಕಪೂರ್‌, ಸೋನಮ್‌ ಕಪೂರ್‌, ದೀಪಿಕಾ ಪಡುಕೋಣೆ ಮೊದಲಾದವರು ಈ ಸ್ಟೈಲ್‌ನಲ್ಲಿ ಆಗಾಗ ಕಾಣಿಸಿಕೊಳ್ತಾ ಇರ್ತಾರೆ.