ಕಚೇರಿಯಲ್ಲಿ ಚೆನ್ನಾಗಿ ಕಾಣಿಸುವುದು ಸಹೋದ್ಯೋಗಿಗಳಿಂದ ಮೆಚ್ಚುಗೆ ತರುವುದಷ್ಟೇ ಅಲ್ಲ, ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಸ್ಮಾರ್ಟ್ ಉಡುಗೆ, ನೀಟಾದ ಕೆಲಸ ಹಾಗೂ ಟ್ರೆಂಡಿಯಾಗಿರುವುದು ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತದೆ.
ನೀವು ಕಚೇರಿಗೆ ಸೀರೆಯನ್ನೇ ಧರಿಸಿ ಅಥವಾ ಬ್ಯುಸಿನೆಸ್ ಸೂಟನ್ನೇ ಧರಿಸಿ ಎರಡರಲ್ಲೂ ಪ್ರೊಫೆಶನಲ್ ಆಗಿಯೇ ಕಾಣಿಸುತ್ತೀರಿ. ಭಾರತೀಯ ಮಹಿಳೆಯರಿಗಿರುವ ಲಾಭಗಳಲ್ಲಿ ಇದೂ ಒಂದು. ಕಚೇರಿ ಔಟ್‌ಫಿಟ್‌ಗಳ ಆಯ್ಕೆಯಲ್ಲಿ ಸಾಕಷ್ಟು ವೆರೈಟಿ ಟ್ರೈ ಮಾಡಬಹುದು. ಭಾರತೀಯ ಮಹಿಳೆಯರು ಹಿಂದೆಂದಿಗಿಂತಲೂ ಈಗ ತಮ್ಮ ಕಚೇರಿ ಔಟ್‌ಫಿಟ್‌ಗಳ ಆಯ್ಕೆಯಲ್ಲಿ ಸಾಕಷ್ಟು ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ನೀವು ಯಾವುದನ್ನೇ ಧರಿಸಿದರೂ ಚೆನ್ನಾಗಿ ಕಾಣಿಸುತ್ತೀರೆಂಬುದರಲ್ಲಿ ಎರಡು ಮಾತಿಲ್ಲ, ಆದರೆ, ಕಚೇರಿ ಔಟ್‌ಫಿಟ್‌ಗಳ ವಿಷಯದಲ್ಲಿ ಇನ್ನಷ್ಟು ಎಕ್ಸ್‌ಪೆರಿಮೆಂಟ್ ಮಾಡಬೇಕೆಂದಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಸ್ಟೈಲಿಶ್ ಆಗಿ ಕಾಣುತ್ತಲೇ ಪ್ರೊಫೆಶನಲ್ ಆಗಿ ಕೂಡಾ ಕಾಣಬೇಕೆಂದಿದ್ದರೆ ಈ ವೆರೈಟಿ ಟ್ರೈ ಮಾಡಬಹುದು.
1. ಪಲಾಜೋ ಪ್ಯಾಂಟ್ಸ್ ಹಾಗೂ ಟಾಪ್

ಸ್ಟ್ರೈಪ್ ಹೊಂದಿರುವ ಪಲಾಜೋ ಪ್ಯಾಂಟ್‌ಗಳನ್ನು ಪ್ಲೇನ್ ಬ್ಲೌಸ್‌ನೊಂದಿಗೆ ಧರಿಸಿ. ಒಂದು ವೇಳೆ ಪಲಾಜೋ ಪ್ಲೇನ್ ಇದ್ದರೆ, ಪ್ರಿಂಟೆಡ್ ಟಾಪ್ ಹಾಕಬಹುದು. ಪ್ರಮುಖವಾದ ಮೀಟಿಂಗ್ ಇರುವಾಗ, ಪ್ರೆಸೆಂಟೇಶನ್ ಇರುವಾಗ ಪಲಾಜೋ ಉತ್ತಮ ಸ್ಟೈಲ್ ಸ್ಟೇಟ್‌ಮೆಂಟ್ ಆಗುತ್ತದೆ.
ಒಂದು ಕ್ರಾಪ್‌ಟಾಪ್‌ನ ಹಲವು ಅವಸ್ಥಾಂತರ!
2. ಕಪ್ಪು ಸೂಟ್

ನೀವು ಪರ್ಫೆಕ್ಟ್ ಕಾರ್ಪೋರೇಟ್ ಲುಕ್ ಹೊಂದಬೇಕಿದ್ದರೆ, ಬಿಳಿ ಸ್ಕರ್ಟ್‌ಗೆ ಕಪ್ಪು ಸೂಟ್ ಧರಿಸಿ. ಇದು ಎಂದಿಗೂ ಔಟ್ ಆಫ್ ಸ್ಟೈಲ್ ಆಗುವುದಿಲ್ಲ ಜೊತೆಗೆ ಅಡಿಯಿಂದ ಮುಡಿವರೆಗೂ ಬುಸಿನೆಸ್‌ವುಮನ್ ಆಗಿ ಕಾಣಬಲ್ಲಿರಿ.
3. ಫಾರ್ಮಲ್ ಟಾಪ್ ಹಾಗೂ ಟ್ರೌಸರ್ಸ್
ಪೂರ್ಣ ಫಾರ್ಮಲ್ ಲುಕ್‌ಗಾಗಿ ಟ್ರೌಸರ್ಸ್ ಜೊತೆ ಚೆನ್ನಾದ ಫಾರ್ಮಲ್ ಟಾಪ್ ಧರಿಸಿ. ತೆಳುವಾದ ಲೆದರ್ ಬೆಲ್ಟ್ ಹಾಕಿ ಇನ್ ಶರ್ಟ್ ಮಾಡಿ. ಇದಕ್ಕೆ ಹೈ ಹೀಲ್ಸ್ ಇಲ್ಲವೇ ಬ್ಲ್ಯಾಕ್ ಫಾರ್ಮಲ್ ಶೂ ಚೆನ್ನಾಗಿ ಸೂಟ್ ಆಗುತ್ತದೆ.
ಓವರ್ ಸೈಜ್ ಟೀ ಶರ್ಟ್ ನ್ನು ಈ ರೀತಿ ಸ್ಟೈಲಿಶ್ ಆಗಿ ಧರಿಸಿ....
4. ಉದ್ದನೆಯ ಕುರ್ತಿ ಹಾಗೂ ಸಿಗರೇಟ್ ಪ್ಯಾಂಟ್
ಇಂಡೋ ವೆಸ್ಟರ್ನ್ ಫಾರ್ಮಲ್ ಲುಕ್ ಬೇಕೆನ್ನುವವರಿಗೆ ಉದ್ದನೆಯ ಕುರ್ತಿ ಹಾಗೂ ಸಿಗರೇಟ್ ಪ್ಯಾಂಟ್ ಬೆಸ್ಟ್ ಆಯ್ಕೆ. ಸಿಗರೇಟ್ ಪ್ಯಾಂಟ್‌ಗಳು ಕಳೆದೆರಡು ವರ್ಷಗಳಿಂದ ಟ್ರೆಂಡ್‌ನಲ್ಲಿವೆ. ಕುರ್ತಿ ಮಹಿಳೆಯರ ಆಲ್ ಟೈಮ್ ಫೇವರೇಟ್. ಇವೆರಡನ್ನೂ ಸೇರಿಸಿ ಧರಿಸಿ. ಪ್ರೊಫೆಷನಲ್ ಹಾಗೂ ಎಲಿಗೆಂಟ್ ಆಗಿ ಕಾಣಬಲ್ಲಿರಿ.
5. ಸೀರೆ

ಸೀರೆ ಎಲ್ಲ ಸಂದರ್ಭಕ್ಕೂ, ಕಾರ್ಯಕ್ರಮಕ್ಕೂ ಆಗುವ ಉಡುಗೆ. ಆದರೆ ಅದರಲ್ಲೂ ಆಯ್ಕೆಗಳಿವೆ. ಸಿಂಪಲ್ ಜಾರ್ಜೆಟ್ ಸೀರೆ ಅಥವಾ ತಿಳಿವರ್ಣದ ಕಾಟನ್ ಸೀರೆಗಳು ಆಫೀಸ್‌ಗೆ ಹೆಚ್ಚು ಸೂಟ್ ಆಗುತ್ತವೆ. ವರ್ಕ್ ಇಲ್ಲದ ಆದರೆ, ಹೊಸ ವಿನ್ಯಾಸದಲ್ಲಿ ಹೊಲಿಸಿದ ಬ್ಲೌಸ್ ಧರಿಸಿ. ಮಿಸ್ ಮ್ಯಾಚ್ ಮಾಡಿದರೂ ನಡೆದೀತು. ಹೈ ನೆಕ್ ಹಾಗೂ ಲಾಂಗ್ ಸ್ಲೀವ್ ಬ್ಲೌಸ್‌ಗಳು ಎಲಿಗೆನ್ಸ್ ನೀಡುತ್ತವೆ. ಗಾಢವರ್ಣದ ಸೀರೆಗಳು ಕಚೇರಿಗೆ ಬೇಡ. ಕಚೇರಿಗೆ ಹೆಚ್ಚಿನ ಆಭರಣಗಳು ಕೂಡಾ ಬೇಡ. ಸೀರೆಯೊಂದಿಗೆ ಆರ್ಟಿಫಿಷಿಯಲ್, ಕಂಟೆಂಪರರಿ ಓಲೆ ಧರಿಸಿದರೂ ಸಾಕಾದೀತು.
6. ಕ್ಯಾಶುಯಲ್ ವೇರ್

ಜೀನ್ಸ್ ತೊಡಲು ಕಚೇರಿಯಲ್ಲಿ ಅವಕಾಶವಿದ್ದರೆ ಅದನ್ನು ಕೂಡಾ ಪ್ರೊಫೆಷನಲ್ ಆಗಿ ತೊಡಬಹುದು. ಬ್ಲೂ ಜೀನ್ಸ್ ಜೊತೆಗೆ ಬಿಳಿ ಶರ್ಟ್ ಹಾಗೂ ಕಪ್ಪು ಬ್ಲೇಜರ್ ಹೆಚ್ಚು ಚೆನ್ನಾಗಿ ಕಾಣುತ್ತದೆ. ಇದಕ್ಕೆ ಹೈ ಹೀಲ್ಸ್ ಅಥವಾ ಪೀಪ್ ಟೋಸ್ ಧರಿಸಿ. ಕ್ಯಾಶುಯಲ್ ಆಗಿಯೂ ಪ್ರೊಫೆಷನಲ್ ಆಗಿಯೂ ಕಾಣಬಹುದು.
7. ಸ್ಕರ್ಟ್ಸ್

ಫೆಮಿನೈನ್ ಆಗಿಯೂ ಬುಸಿನೆಸ್ ಮೈಂಡೆಡ್ ಆಗಿಯೂ ಕಾಣಬೇಕೆಂದರೆ ಪೆನ್ಸಿಲ್ ಸ್ಕರ್ಟ್ ಧರಿಸಿ ಅದಕ್ಕೆ ಫಾರ್ಮಲ್ ಶರ್ಟ್ ಹಾಗೂ ಬ್ಲೇಜರ್ ಜೊತೆ ಮ್ಯಾಚ್ ಮಾಡಿ. ಇದಕ್ಕೆ ಪೆನ್ಸಿಲ್ ಹೀಲ್ ಪಂಪ್ಸ್ ಹಾಗೂ ಕನಿಷ್ಠ ಆಭರಣ ಧರಿಸಿ.
8. ಪೋಲೋ ಟಿ ಶರ್ಟ್ ಹಾಗೂ ಫಾರ್ಮಲ್ ಟ್ರೌಸರ್ಸ್
ಪ್ಲೇನ್ ಫಾರ್ಮಲ್ ಟ್ರೌಸರ್‌ನೊಂದಿಗೆ ಕಲರ್‌ಫುಲ್ ಆಗಿರೋ ಪೋಲೋ ನೆಕ್ ಟಿ ಶರ್ಟ್ಸ್ ಕ್ಯಾಶುಯಲ್ ವರ್ಕ್ ಡೇಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ಬ್ರೈಟ್ ಕಲರ್ ಟಿ ಶರ್ಟ್‌ಗಳು ನಿಮ್ಮ ಔಟ್‌ಫಿಟ್‌ಗೆ ಫನ್ ಎಲಿಮೆಂಟ್ ಆ್ಯಡ್ ಮಾಡುತ್ತವೆ.
ದುಬಾರಿ ಕಾಂಜೀವರಂ ಸೀರೆ ಕೇರ್ ಹೀಗಿರಲಿ....
9. ಕ್ಯಾಶುಯಲ್ ಬೆಸ್ಟ್
ಗಿಡ್ಡ ಕುರ್ತಿಯನ್ನು ಜೀನ್ಸ್‌ಗೆ ಧರಿಸುವುದು ಇಂದಿನ ಟ್ರೆಂಡ್. ಭಾರತದಲ್ಲಿ ಬಹುತೇಕ ಕಾರ್ಪೋರೇಟ್ ಕಂಪನಿಗಳು ಕಂಫರ್ಟೇಬಲ್ ವೇರ್‌ಗೆ ಅವಕಾಶ ಕಲ್ಪಿಸಿರುವುದರಿಂದ ಬಹುತೇಕರು ಈ ಇಂಡೋ ವೆಸ್ಟರ್ನ್ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಅಂದದ ಕಾಟನ್ ಸ್ಕಾರ್ಫ್ ಹಾಕಿದರೆ ನೀವು ರೆಡಿ.
10. ಸಲ್ವಾರ್ ಸೂಟ್

ಸಲ್ವಾರ್ ಸೂಟ್‌ನಲ್ಲಿ ಚೆಂದ ಕಾಣಿಸದ ಹುಡುಗಿಯರೇ ಇಲ್ಲ. ಕಾಟನ್ ಸಲ್ವಾರ್, ಟ್ರೆಡಿಶನಲ್ ಇಂಡಿಯನ್ ಹ್ಯಾಂಡ್‌ಲೂಮ್ ಪ್ರಿಂಟ್ ಇರುವ ಸಲ್ವಾರ್‌ಗಳು ಹೆಚ್ಚು ಪ್ರೊಫೆಶನಲ್ ಎನಿಸುತ್ತವೆ.
