ಅಬ್ಬಾ, ಮಗು ಮನೆಯಲ್ಲಿದ್ದರೆ ರಂಪ ರಾದ್ಧಾಂತ. ಮನೆ ತುಂಬಾ ಗಲೀಜು. ಸದಾ ಸಹನೆ ತೋರುವ ತಾಯಿ, ತಾಳ್ಮೆಯಿಂದ ಎಲ್ಲವನ್ನೂ ಕ್ಲೀನ್ ಮಾಡುತ್ತಾಳೆ. ಆದರೆ, ಕೆಲವೊಂದು ಶಾಶ್ವತವಾಗಿ ಉಳಿದು ಬಿಡುತ್ತದೆ. ಅಲ್ಲದೇ, ಸುರಕ್ಷತೆ ಬಗ್ಗೆ ಎಚ್ಚರ ವಹಿಸುವುದೂ ಅನಿವಾರ್ಯ. ಇದಕ್ಕೇನು ಮಾಡಬೇಕು?

ಮಗು ಅಂಬೆಕಾಲಿಟ್ಟು ಮನೆ ತುಂಬಾ ಓಡಾಡಬೇಕೆಂದು ಪ್ರತಿಯೊಬ್ಬ ತಂದೆ ತಾಯಿ ಸಂಭ್ರಮಿಸೋ ಅದ್ಭುತ ಕ್ಷಣಗಳು. ಆ ಸಮಯದಲ್ಲಿ ಮಗು ಪೋಷಕರ ಸಹಾಯವಿಲ್ಲದೆ ತಾನಾಗಿಯೇ ಏನಾದರೂ ಮಾಡುತ್ತಿರುತ್ತದೆ. ಇದನ್ನು ನೋಡಿ, ಸಂಭ್ರಮಿಸುವ ಪೋಷಕರಿಗೆ ಇನ್ಯಾವ ಸುಖ ಬೇಕು ಹೇಳಿ? ಆದರೆ ಮನೆಯಲ್ಲಿ ಮಗು ಓಡಾಡುವಾಗ ಎಚ್ಚರ ವಹಿಸಬೇಕಾದ ಅಂಶಗಳು ತುಂಬಾ ಇವೆ. 

ಮಗು ತಾಗಾಗಿ ಹೊಸ ಹೊಸ ಚಟುವಟಿಕೆಗಳನ್ನು ಆರಂಭಿಸಿದಾಗ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕುವುದು, ಕೈ-ಕಾಲಿಗೆ ತಾಗಿಸುವುದು ಎಲ್ಲವನ್ನೂ ಮಾಡುತ್ತವೆ. ಮಕ್ಕಳಿಗೆ ಏನೂ ಸಮಸ್ಯೆ ಉಂಟಾಗಬಾರದು ಎಂದರೆ ಬೇಬಿ ಪ್ರೂಫ್ ಮನೆಯಾಗಿಸಬೇಕು. ಅದು ಹೇಗೆ ನೋಡಿ...  

- ಮನೆಯನ್ನು ಯಾವಾಗ್ಲೂ ಕ್ಲೀನ್ ಆಗಿಟ್ಟುಕೊಳ್ಳಿ. ಇಲ್ಲವಾದರೆ ಮಗು ಗಲೀಜಾದ ಜಾಗದಲ್ಲಿ ಓಡಾಡಿದರೆ ಸೋಂಕು ತಾಗುವ ಸಾಧ್ಯತೆಗಳಿರುತ್ತವೆ. 
- ಸಣ್ಣ ಪುಟ್ಟ ವಸ್ತುಗಳನ್ನು ಯಾವತ್ತೂ ನೆಲದ ಮೇಲೆ ಇಡಬೇಡಿ. ಯಾಕೆಂದರೆ ಸಣ್ಣ ವಸ್ತುಗಳು ಮಕ್ಕಳಿಗೆ ಬೇಗನೆ ಕೈಗೆ ಸಿಗುತ್ತವೆ. ಇದರಿಂದ ಮಕ್ಕಳು ಅದನ್ನು ಬಾಯಿಗೆ ಹಾಕುವ ಸಾಧ್ಯತೆ ಇದೆ. ಇದರಿಂದ  ಮುಂದೆ ಏನೆಲ್ಲಾ ಸಮಸ್ಯೆ ಇದೆ ನಿಮಗೆ ಗೊತ್ತು. 
- ಗಾಜಿನ ವಸ್ತುಗಳನ್ನು ಟೇಬಲ್ ಮೇಲೆ ಅಥವಾ ಮಕ್ಕಳ ಕೈಗೆ ಸಿಗುವಲ್ಲಿ ಇಡಬೇಡಿ. ಮಗು  ಆಟವಾಡುವ ಭರದಲ್ಲಿ ಕೆಳಕ್ಕೆ ಬಿದ್ದು ಒಡೆದು ಹೋಗುವ ಸಾಧ್ಯತೆ ಇದೆ. ಮಕ್ಕಳಿಗೆ ಭಾರಿ ಪ್ರಮಾಣದ ಗಾಯ ಉಂಟಾಗಬಹುದು. 
- ಗ್ಲಾಸ್‌ಗಳನ್ನು ತೆಗೆದಿಡಿ. ದೊಡ್ಡ ದೊಡ್ಡ ವಸ್ತುಗಳನ್ನು ಅದರಲ್ಲಿ ಇಡಬೇಡಿ. ಯಾಕೆಂದರೆ ಆ ವಸ್ತು ಮಗುವಿನ ತಲೆ ಮೇಲೆ ಬೀಳುವ ಸಾಧ್ಯತೆ ಇದೆ. 
- ಎಲೆಕ್ಟ್ರಾನಿಕ್ ವಸ್ತುಗಳ ಮೇಲಂತೂ ತುಂಬಾ ಜಾಗರೂಕರಾಗಿರಿ. ಸ್ವಿಚ್ ಬೋರ್ಡ್‌ ಹೋಲ್‌ಗಳನ್ನೂ ಪ್ಲಾಸ್ಟರ್‌ಗಳ ಸಹಾಯದಿಂದ ಮುಚ್ಚಿ . ಇಲ್ಲವಾದರೆ ಶಾಕ್ ಹೊಡೆಯುವ ಸಾಧ್ಯತೆ ಇದೆ. 
- ಫರ್ನೀಚರ್ , ಬಾಗಿಲು ಇತರ ವಸ್ತುಗಳ ಮೂಲೆ ಶಾರ್ಪ್ ಆಗಿದ್ದರೆ ಅದನ್ನು ಕವರ್ ಮಾಡಿ, ಮಕ್ಕಳು ಆಟವಾಡುವಾಗ ತಲೆಗೆ ತಾಗುವ ಸಾಧ್ಯತೆ ಇದೆ. 
- ಮಕ್ಕಳಿಗೆ ಕಾಯಿನ್‌ಗಳು ಸಿಗದಂತೆ ನೋಡಿಕೊಳ್ಳಿ. ಅದು ನೆರವಾಗಿ ಬಾಯಿಗೆ ಹಾಕುವುದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. 
- ಮಗುವಿನ ಬೆಡ್ ಸುತ್ತಲೂ ಮೃದುವಾದ ಹಾಸಿಗೆ ಅಥವಾ ದಿಂಬನ್ನು ಹಾಕಿ. ಮಗು ಬೆಡ್‌ನಿಂದ ಬೀಳುವ ಸಾಧ್ಯತೆ ಇದೆ. ಅದಕ್ಕೆ ನೋವಾಗದಂತೆ ತಡೆಯಲು ಈ ವಿಧಾನ ಸೂಕ್ತ. 
- ಬಾಗಿಲಿನ ಮಧ್ಯ ಯಾವುದಾದರೂ ದಪ್ಪವಾದ ವಸ್ತುಗಳನ್ನು ಕಟ್ಟಿ. ಇಲ್ಲವಾದರೆ ಮಗುವಿನ ಕೈ ಬಾಗಿಲಿನೆಡೆಗೆ ಬೀಳುವ ಸಾಧ್ಯತೆ ಹೆಚ್ಚಿದೆ. 

ಈ ಸಣ್ಣ ಪುಟ್ಟ ವಿಷಯಗಳನ್ನು ನೀವು ನೆನಪಿನಲ್ಲಿಟ್ಟರೆ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. 

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸೋನಾಲಿಗೆ ಮಗನೇ ಸ್ಫೂರ್ತಿ
ಮಗು ಮಣ್ಣು ತಿನ್ನುತ್ತಾ?
ಕಂದಮ್ಮನ ಬಟ್ಟೆ ಬಗ್ಗೆ ಇರಲಿ ಎಚ್ಚರ
ಮಕ್ಕಳಿಗಾಗಿ ಕಾರು ಕಳ್ಳನಿಗೆ ಶೂಟ್ ಮಾಡಿದ ತಾಯಿ