ಮಗು ಮಣ್ಣು ತಿನ್ನುತ್ತಾ? ಏಕೆ ಹೀಗೆ?

Why do toddlers eat mud?
Highlights

ಹೆಚ್ಚಾಗಿ ಮಕ್ಕಳಿಗೆ ಮಣ್ಣು ತಿನ್ನುವ ಅಭ್ಯಾಸ ಇರುತ್ತದೆ. ನಿಮ್ಮ ಮಗುವಿಗೂ ಈ ಅಭ್ಯಾಸ ಇದ್ದು, ಅದು ನಿಮ್ಮನ್ನು ಚಿಂತೆಗೀಡು ಮಾಡಿದೆಯೇ? 

ಮಣ್ಣು ತಿಂದ ಕೃಷ್ಣನ ಬಾಯಿ ನೋಡಿದ ಯಶೋಧೆಗೆ ಆಘಾತವೊಂದು ಕಾದಿತ್ತು. ಇಡೀ ಬ್ರಹ್ಮಾಂಡವೇ ಮಗ ಬಾಯಲ್ಲಿ ಕಂಡ ಈ ಅಮ್ಮ ಶಾಕ್ ಆಗಿದ್ದಳು. ಕೃಷ್ಣನ ತರ ಮಣ್ಣು ತಿನ್ನೋ ಅಭ್ಯಾಸ ಎಲ್ಲ ಮಕ್ಕಳಲ್ಲಿಯೂ ಇರುತ್ತೆ. ಇದಕ್ಕೇ ವಿವಿಧ ಕಾರಣಗಳಿರಬಹುದು. ಆದರೆ, ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್.

ಏನೇನೋ ಮಾಡಿದರೂ, ಮಗು ಮಣ್ಣು ತಿನ್ನೋದನ್ನು ಬಿಟ್ಟಿಲ್ಲವೇ? ಹಾಗಿದ್ದರೆ  ಈ ವಿಧಾನಗಳನ್ನು ಬಳಸಿ. ಮಗುವಿನ ಮಣ್ಣು ತಿನ್ನುವ ಅಭ್ಯಾಸ ನಿಧಾನವಾಗಿ ಕಡಿಮೆಯಾಗಬಹುದು. 

  • ಲವಂಗವನ್ನು ಪುಡಿ ಮಾಡಿ ನೀರಿನಲ್ಲಿ ಸ್ವಲ್ಪ ಸ್ವಲ್ಪ ಕುಡಿಸುತ್ತಿರಿ. ಇದರಿಂದ ಮಗುವಿನ ಮಣ್ಣು ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. 
  • ಮಗು ಮಣ್ಣು ತಿನ್ನುತ್ತಿರುವ ಸಮಯದಲ್ಲಿ ಬಾಳೆಹಣ್ಣು ಮತ್ತು ಜೇನು ನೀಡಿ. ಹೀಗೆ ಕೆಲವೊಮ್ಮೆ ಮಾಡಿದರೆ ಮಗು ಮಣ್ಣು ತಿನ್ನುವುದನ್ನು ಬಿಡುತ್ತದೆ.
  • ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಓಂ ಕಾಳನ್ನು ಪುಡಿ ಮಾಡಿ, ಬಿಸಿ ನೀರಿಗೆ ಹಾಕಿ ನೀಡಿ. 
  • ಮಕ್ಕಳ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ಈ ಸಮಸ್ಯೆ ಕಾಡುತ್ತದೆ. ಆದುದರಿಂದ ವೈದ್ಯರನ್ನು ಕಾಣುವುದು ಉಚಿತ. 
  • ಮಗುವಿಗೆ ಪೌಷ್ಟಿಕಾಂಶ ಭರಿತ ಆಹಾರವನ್ನು ತಪ್ಪಗೇ ನೀಡಿ. ಇದರಿಂದ ಮಗುವಿಗೆ ಅಂಶಗಳು ಪೂರೈಕೆಯಾಗುವುದು ಹಾಗು ಮಣ್ಣು ಸಹ ತಿನ್ನುವುದಿಲ್ಲ. 
  • ಮಕ್ಕಳಿಗೆ ಕ್ಯಾಲ್ಸಿಯಂ ಅಂಶ ಸರಿಯಾಗಿ ದೊರೆಯುವಂತೆ ಮಾಡಿ, ಇಲ್ಲವಾದರೆ ಮಗುವಿಗೆ ಮಣ್ಣು ತಿನ್ನುವ ಅಭ್ಯಾಸ ಬೆಳೆಯುತ್ತದೆ. 
loader