ಕಂದಮ್ಮನ ಬಟ್ಟೆ ಬಗ್ಗೆ ಇರಲಿ ಎಚ್ಚರ

First Published 11, Jul 2018, 4:45 PM IST
Be careful while managing kids cloths
Highlights

ಮಕ್ಕಳ ಚರ್ಮ ಸೂಕ್ಷ್ಮವಾದದ್ದು. ಆದ್ದರಿಂದ ಅವುಗಳಿಗೆ ಬಟ್ಟೆ ಆರಿಸುವಾಗ ಸಾಧ್ಯವಾದಷ್ಟು ಮೃದುವಾಗಿರುವ ಹಾಗೂ ತಿಳಿ ಬಣ್ಣದ ಬಟ್ಟೆಗಳನ್ನೇ ಆರಿಸಬೇಕು. ಅಷ್ಟೆ ಅಲ್ಲ, ಒಗೆಯುವಾಗ, ಒಣ ಹಾಕುವಾಗ ಹಾಗೂ ಎತ್ತಿಡುವಾಗಲೂ ಹುಷಾರಾಗಿರಬೇಕು. ಹೇಗೆ?

ಹಲವಾರು ಜವಾಬ್ದಾರಿಗಳ ಹೊರೆ ತಾಯ್ತನ. ಮಗುವಿನ ಆರೋಗ್ಯದ ಬಗ್ಗೆ, ತಿನ್ನುವ ಆಹಾರದ ಬಗ್ಗೆ, ಮಗುವಿಗಾಗಿ ಉಪಯೋಗಿಸುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಅಮ್ಮನಾದವಳಿಗೆ ಅನಿವಾರ್ಯ. ಅದರಲ್ಲೂ ಮುಖ್ಯವಾಗಿ ಮಗು ಧರಿಸುವ ಬಟ್ಟೆ ಬಗ್ಗೆ ಸ್ವಲ್ಪ ಮಿಸ್ಟೇಕ್ ಮಾಡಿದರೂ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಗುವಿನ ಬಟ್ಟೆ ಖರೀದಿ ಮಾಡುವ ಮುನ್ನ, ತೊಳೆಯುವ ಮುನ್ನ ಇದನ್ನು ಓದಿಕೊಂಡರೆ ನಿಮಗೆ ಸಹಾಯವಾಗುತ್ತೆ...

ಸರಿಯಾದ ಬಟ್ಟೆ: 
ಮಗುವಿನ ಬಟ್ಟೆ ಆಯ್ಕೆ ಮಾಡುವಾದ ಅದು ಮಗುವಿಗೆ ಕಂಫೋರ್ಟ್ ಇದೆಯೋ, ಇಲ್ಲವೋ ನೋಡಬೇಕು. ಮಗುವಿನ ತ್ವಚೆ ತುಂಬಾ ಸೂಕ್ಷ್ಮವಾಗಿದ್ದು, ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ತಿಳಿ ಬಣ್ಣದ, ಮೃದು ಬಟ್ಟೆಯನ್ನೇ ಆರಿಸಿಕೊಳ್ಳಿ.

ಬಟ್ಟೆ ವಾಷ್ ಮಾಡುವಾಗ:
ಮಗುವಿನ ಬಟ್ಟೆ ವಾಶ್ ಮಾಡುವಾಗ ತುಂಬಾ ಕೇರ್ ಫುಲ್ ಆಗಿರಿ. ಹೆಚ್ಚು ಕೆಮಿಕಲ್ ಇರುವಂಥ ಡಿಟರ್ಜೆಂಟ್ ಬಳಸಬೇಡಿ. ಮೈಲ್ಡ್ ಸೋಪ್‌ಗಳನ್ನು ಬಳಸಿ. ಅದೇ ರೀತಿ ನೆರಳಿನಲ್ಲಿ ಮಕ್ಕಳ ಬಟ್ಟೆಯನ್ನು ಒಣ ಹಾಕಿ. 

ಸ್ಟೋರೇಜ್: 
ಶುದ್ಧವಾದ ಜಾಗದಲ್ಲಿ ಇಡೋದು ಕೂಡ ಮುಖ್ಯ. ಬೆಚ್ಚಗಿರುವ ಒಣಗಿದ ಜಾಗದಲ್ಲಿ ಮಗುವಿನ ಬಟ್ಟೆಯನ್ನಿಟ್ಟರೆ ಮಗು ಸಹ ಬೆಚ್ಚಗಿರಲು ಸಾಧ್ಯ. ಹುಳ-ಹುಪ್ಪಟೆ ಸೇರಿಕೊಳ್ಳುವ ಜಾಗದಲ್ಲಿ, ಇರುವೆ ಇರೋ ಜಾಗದಲ್ಲಿ ಅಪ್ಪಿ ತಪ್ಪಿಯೂ ಮಗುವಿನ ಬಟ್ಟೆ ಇಡಬೇಡಿ.

ಮಲಗೋ ಬಟ್ಟೆ:

ಮಗು ಮಲಗೋ ಬಟ್ಟೆಯನ್ನೂ ಪ್ರತಿ ದಿನ ಕ್ಲೀನ್ ಮಾಡಿ. ಇಲ್ಲವಾದರೆ ಮಗುವಿನ ಮೂತ್ರ ಹಾಗೂ ಇತರೆ ಕೊಳಕು ಸೇರಿ ಬಟ್ಟೆಯಲ್ಲಿ ಸೂಕ್ಷ್ಮ ಜೀವಿಗಳು ಹೆಚ್ಚಾಗಬಹುದು. ಇದು ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗುತ್ತದೆ. 

ಮಗುವಿನ ಆಹಾರ ಹೇಗಿರಬೇಕು?
ಮಗುವಿನ ಬುದ್ಧಿಮತ್ತೆ ಹೆಚ್ಚಿಸಲು ಈ ಆಹಾರ ಬೆಸ್ಟ್
ಇಂಜೆಕ್ಷನ್ ಕೊಟ್ಟಿದ್ದು ಮಗುವಿಗೆ ಗೊತ್ತಾಗದಂತೆ ಡಾಕ್ಟರು ಮಾಡಿದ ಟ್ರಿಕ್ ನೋಡಿ
ಕುಕ್ಕರ್ ವಿಷಲ್‌ನಿಂದ ಮಗುವಿನ ಪ್ರಾಣವೇ ಹೋಯಿತು
ಮಗುವಿನೊಂದಿಗಿನ ಲೀಸಾ ಫೋಟೋವಾಯಿತು ಟ್ರಾಲ್

loader