ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ತಮ್ಮ ಕಾಯಿಲೆಯ ಬಗ್ಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ತಮ್ಮ ಜೀವನ ಸ್ಫೂರ್ತಿ ಏನು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. 

ನ್ಯೂಯಾರ್ಕ್ : ಕ್ಯಾನ್ಸರ್ ನಿಂದ ಬಳಲುತ್ತಿರುವ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆ ನ್ಯೂಯಾರ್ಕ್ ನಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ತಮ್ಮ ಪುತ್ರ ರಣ್ವೀರ್ ಜೊತೆ ಇರುವ ಫೊಟೊ ಹಾಕಿಕೊಂಡಿರುವ ಸೊನಾಲಿ ತಮ್ಮ ಪುತ್ರ ತಮ್ಮ ಕಾಯಿಲೆ ಬಗ್ಗೆ ಹೇಗೆ ಪ್ರತಿಕ್ರಿಯಿಸಿದ ಎನ್ನುವ ಬಗ್ಗೆ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ತಮ್ಮ ಪುತ್ರನೊಂದಿಗಿನ ಫೊಟೊವನ್ನು ಇನ್ ಸ್ಟಾಗ್ರಾಮ್ ನಲ್ಲಿಹಾಕಿ ಹಂಚಿಕೊಂಡಿರುವ ಸೊನಾಲಿ ಈ ಸಮಯವು ತಮ್ಮ ಮಗ ಜನಿಸಿ 12 ವರ್ಷ 11ತಿಂಗಳು 8 ದಿನಗಳಾಗಿದೆ. ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವ ತಮಗೆ ತಮ್ಮ ಪುತ್ರ ರಣ್ವೀರ್ ಸಕಾರಾತ್ಮಕ ಭಾವನೆಗಳ ಮೂಲ ಎಂದು ಹೇಳಿಕೊಂಡಿದ್ದಾರೆ. 

ಅಲ್ಲದೇ ಈ ಸಮಯದಲ್ಲಿ ತಾವು ಹೇಗೆ ಸಕಾರಾತ್ಮಕ ಚಿಂತನೆಗಳಿಂದ ದಿನ ಕಳೆಯುತ್ತಿರುವುದಾಗಿಯೂ ಕೂಡ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. 

ಜುಲೈ 4ರಂದು 43 ವರ್ಷದ ಸೊನಾಲಿ ತಮ್ಮ ಕಾಯಿಲೆ ಬಗ್ಗೆ ಟ್ವೀಟ್ ಮಾಡಿದ್ದರು. ಅಲ್ಲದೇ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯು ಹೇಳಿದ್ದರು. 

View post on Instagram