ಫೋಟೋ ಶೂಟ್ ಮಾಡ್ಬೇಕಂದ್ರೆ ಮಿನಿಮಮ್ ಲುಕ್, ಹೈಟ್ ಹೀಗೆ ಇರ್ಬೇಕು, ಹೀಗಿದ್ರೆ ಮಾತ್ರ ಮಾಡೆಲಿಂಗ್ ಅನ್ನೋರಿಗೆ ಸವಾಲಿನಂತೆ ವಿಭಿನ್ನವಾಗಿ ಫೋಟೋ ಶೂಟ್ ಮಾಡಿದ್ದಾರೆ ಇಲ್ಲೊಬ್ಬ ಫೋಟೋಗ್ರಫರ್.

ಸ್ಟ್ರೀಟ್‌ನಲ್ಲಿದ್ದ ಸಾಧಾರಣ ಯುವತಿಯನ್ನು ಕರೆತಂದು ಕ್ಯಾಮೆರಾ ಚಳಕ ತೋರಿಸಿದ ಛಾಯಾಗ್ರಾಹಕ ಈಗ ತನ್ನ ಶೂಟ್ ಮೂಲಕವೇ ಸುದ್ದಿಯಾಗಿದ್ದಾನೆ. ಫುಟ್‌ಪಾತ್‌ನಲ್ಲಿ ಬದುಕೋ ಮುಗ್ಧ ಹೆಣ್ಮಗಳ ಮುಖ ಮುದ್ದಾಗಿ ಸೆರೆ ಹಿಡಿಯಲಾಗಿದೆ.

ಹನಿಮೂನ್ ಕ್ಯಾನ್ಸಲ್ ಮಾಡಿ ಬೀಚ್‌ನಲ್ಲಿ ಕಸ ಹೆಕ್ಕೋಕೋದ್ರು ಈ ನವಜೋಡಿ..!

ರಸ್ತೆ ಬದಿ ವ್ಯಾಪಾರ ಮಾಡಿ ಬದುಕೋ ಯುವತಿ ಅಸ್ಮಾನ್ ಸದ್ಯ ವೈರಲ್ ಆಗಿದ್ದಾಳೆ. ಫೋಟೋಗ್ರಫರ್ ಮಹಾದೇವನ್ ತಂಬಿ ಅವರ ಚಂದದ ಕ್ಲಿಕ್ ಈಗ ಎಲ್ಲೆಡೆ ಮೆಚ್ಚುಗೆ ಪಡೆದಿದೆ.

ಕೊಚ್ಚಿಯ ಜನರಿಗೆ ಇದು ಪರಿಚಿತ ಮುಖವಾಗಿರಬಹುದು. ಕೊಚ್ಚಿಯ ಟ್ರಾಫಿಕ್‌ನಲ್ಲಿ ಬಿರುಬಿಸಿಲಿನಲ್ಲಿ ವಾಹನ ಸವಾರರಿಗೆ ಅಗತ್ಯ ವಸ್ತುಗಳನ್ನು ನೀಡೋ ಈಕೆ ಹೇಗೆ ಮಿಂಚಿದ್ದಾಳೆ ನೋಡಿ.

ಈಜಿಪ್ಟ್ ಪಿರಮಿಡ್ ಮುಂದೆ ಸೆಕ್ಸೀ ಫೋಟೋ ಶೂಟ್, ಸುಂದರಿಗೆ ಸಂಕಟ

ನರ್ಮಾಲ್‌ಗಿಂತ ಸ್ಪೆಷಲ್ ಆಗಿ ಏನಾದ್ರೂ ಮಾಡ್ಬೇಕು ಅಂತ ಪ್ರತಿಬಾರಿ ಫೋಟೋಶೂಟ್ ಮಾಡೋವಾಗ ಥಿಂಕ್ ಮಾಡ್ತಾರೆ ಇವರು. ನಂತರ ಸ್ಟ್ರೀಟ್‌ ಟು ಸ್ಟುಡಿಯೋ ಕಾನ್ಸೆಪ್ಟ್ ಹೊಳೆಯಿತು. ಈ ಐಡಿಯಾ ಕಮಾಲ್ ಮಾಡಿದೆ.

ಫೋಟೋ. ಫ್ಲಾಶ್, ಸ್ಟುಡಿಯೋ, ಮೇಕಪ್ ಏನೊಂದೂ ಅರಿಯದ ಈಕೆಯನ್ನು ಅತ್ಯಂತ ಸುಂದರವಾಗಿ ತೋರಿಸಿದ್ದಾರೆ ಫೋಟೋಗ್ರಫರ್. ಫೋಟೋಶೂಟ್‌ಗಾಗಿ ಅಸ್ಮಾನ್‌ ಫ್ಯಾಮಿಲಿಯನ್ನು ಒಪ್ಪಿಸೋದು ಸುಲಭವಿರಲಿಲ್ಲ. ಆದರೂ ಹೇಗೋ ಸಾಧ್ಯವಾಯ್ತು ಎಂದಿದ್ದಾರೆ ತಂಬಿ.

ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!

ಮೇಕಪ್‌ ಮ್ಯಾನ್ ಹುಡುಗೀನಾ ನೋಡಿ ನೀನ್ ಜೋಕ್ ಮಾಡ್ತಿದ್ಯಾ ಎಂದಾಗ ಕಾನ್ಸೆಪ್ಟ್ ವಿವರಿಸಿದ್ದರು ಫೋಟೋಗ್ರಫರ್. ನಂತರ ಸರಿಯಾದ ಕಾಸ್ಟ್ಯೂಮ್, ಮೇಕಪ್ ಮಾಡಿ ಕ್ಲಿಕ್ಕಿಸಿದ ಫೋಟೋ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನರ ಗಮನ ಸೆಳೆದಿದೆ. ಇದು ನಾನು ಕ್ಲಿಕ್ಕಿಸಿದ ಸುಂದರ ಫೋಟೋ ಎಂದು ನಾನು ಹೇಳುವುದಿಲ್ಲ, ಆದರೆ ಇದು ಅತ್ಯಂತ ಹೆಚ್ಚು ತೃಪ್ತಿ ಕೊಟ್ಟ ಫೋಟೋ ಎಂದಿದ್ದಾರೆ ಮಹಾದೇವನ್ ತಂಬಿ.