ಎಂಗೇಜ್ಮೆಂಟ್ ಆದ್ಮೇಲೆ ಜೋಡಿ ಜೊತೆಯಾಗಿ ಸುತ್ತಾಡೋದು ಕಾಮನ್. ಸ್ವಲ್ಪ ಶಾಪಿಂಗ್, ಕಾಫಿ ಶಾಪ್, ಬೀಚ್ ಅಂತ ಓಡಾಡ್ತಾರೆ. ಅದೇ ರೀತಿ ಎಂಗೇಜ್ಮೆಂಟ್ ಆದ್ಮೇಲೆ ಬೀಚ್‌ನಲ್ಲಿ ಓಡಾಡಿದ್ರು ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಂಚ.

ಆದ್ರೆ ಅಲ್ಲಿ ಓಡಾಡಿದ್ಮೇಲೆ ಅವರ ಹನಿಮೂನ್ ಕ್ಯಾನ್ಸಲ್ ಆಗುತ್ತೆ ಅಂತ ಇಬ್ಬರೂ ಅಂದುಕೊಂಡಿರಲಿಲ್ಲ. ಎಲ್ಲ ಜೋಡಿಗಳಂತೆ ಇವರೂ ತಮ್ಮ ಹನಿಮೂನ್ ಪ್ಲಾನ್ ಮಾಡಿದ್ರು. ಆದ್ರೆ ಮದುವೆ ಮೊದಲೇ ಹಲವಾರು ಬಾರಿ ಜೊತೆಯಾಗಿ ಬೀಚ್‌ನಲ್ಲಿ ಓಡಾಡಿದ ಜೋಡಿ ತಮ್ಮ ಹನಿಮೂನ್ ಕ್ಯಾನ್ಸಲ್ ಮಾಡಿದ್ರು. ರೀಸನ್ ಇಮಟ್ರೆಸ್ಟಿಂಗ್.

ಮದ್ವೆ ಊಟ ಮಿಸ್ ಮಾಡ್ಕೊತ್ತಿದ್ದೀರಾ..? 700 ಅತಿಥಿಗಳ ಮನೆಗೆ ಹೋಯ್ತು ಘಮ ಘಮ ಭೋಜನ

ಕರ್ನಾಟಕದ ಈ ಜೋಡಿ ಹನಿಮೂನ್ ಬದಲಾಗಿ ಕ್ಲೀನಿಂಗ್ ಆಯ್ಕೆ ಮಾಡಿದ್ದಾರೆ. ಎಂಗೇಜ್ಮೆಂಟ್ ಆದ ಮೇಲೆ ಹಲವಾರು ಬಾರಿ ಸೋಮೇಶ್ವರ ಬೀಚ್‌ನಲ್ಲಿ ಅಡ್ಡಾಡಿದ ಜೋಡಿಗೆ ಅಲ್ಲಿ ರೊಮ್ಯಾಂಟಿಕ್ ಫೀಲ್ ಬದಲು ಬಂದಿದ್ದು, ಕ್ಲೀನಿಂಗ್ ಫೀಲ್.

ಸುತ್ತಮುತ್ತ ಬಿದ್ದಿರೋ ಪ್ಲಾಸ್ಟಿಕ್ ಬಾಟಲಿಗಳು, ಪೇಪರ್‌ಗಳು, ಡಬ್ಬ, ತಿಂಡಿಯ ಕವರ್ ಇನ್ನೂ ಏನೇನೋ.. ಇದನ್ನು ನೋಡುತ್ತಲೇ ಈ ಜೋಡಿ ಹನಿಮೂನ್ ಪ್ಲಾನ್ ಕೈಬಿಟ್ಟು, ಸೋಮೇಶ್ವರ ಬೀಚ್ ಗಟ್ಟಿಹಿಡಿದುಕೊಂಡರು.

ಭಾರತದ ರಸಂಗೆ ಅಮೆರಿಕನ್ನರು ಫಿದಾ..! ವೈರಲ್ ಆಯ್ತು ಸಿಂಪಲ್ ಅಡುಗೆ

ಅಲ್ಲಿಂದ ಶುರುವಾಯ್ತು ನೋಡಿ ಇವರ ಬೀಚ್ ಕ್ಲೀನಿಂಗ್ ಕನಸು. ನವ ವಧೂ ವರರು ಕೈಯಲ್ಲಿನ ಮೆಹಂದಿ ರಂಗು ಮಾಸುವ ಮುನ್ನ ಕಡಲ ತೀರದ ಕಸ ಹೆಕ್ಕಲು ಶುರು ಮಾಡಿದ್ರು. ನವೆಂಬರ್ 18ಕ್ಕೆ ವಿವಾಹಿತರಾದ ಈ ಜೋಡಿ ಮುಂದಿನ 2 ವಾರ ಸತತವಾಗಿ ಸೋಮೇಶ್ವರ ಬೀಚ್ ಸ್ವಚ್ಛ ಮಾಡಿದ್ರು. ಗ್ಲೌಸ್ ಹಾಕಿ ಗಾರ್ಬೇಜ್ ಬ್ಯಾಗ್ ಎತ್ಕೊಂಡು ಕಸ ರಾಶಿ ಮಾಡಿದ್ರು. ಈ ರೀತಿ ಇಬ್ಬರೇ ಸೇರಿ ಉಡುಪಿಯ ಬೈಂದೂರಿನಲ್ಲಿ ಗುಡ್ಡೆ ಮಾಡಿದ್ದು ಬರೋಬ್ಬರಿ 800 ಕೆಜಿ ಕಸ.

ಡಿಸೆಂಬರ್ 1ರಂದು ಅನುದೀಪ್ ಹೆಗ್ಡೆ ವಿಡಿಯೋ ಶೇರ್ ಮಾಡಿದ್ದಾರೆ.  ತಾವು 40% ಬೀಚ್ ಕ್ಲೀನ್ ಮಾಡಿದ್ದಾಗಿ ಹೇಳಿದ್ದಾರೆ. ನಾವಿಬ್ಬರೇ ಬದಲಾವಣೆ ಮಾಡಬಹುದಾ..? 2 ವಾರದ ಹಿಂದೆ ಮದುವೆಯಾದೆ. ನಾನು ನನ್ನ ಪತ್ನಿ ಬೀಚ್ ಕ್ಲೀನ್ ಮಾಡಿ ಹನಿಮೂನ್ ಆಚರಿಸೋಕೆ ನಿರ್ಧರಿಸಿದ್ವಿ. 40% ಕ್ಲೀನ್ ಆಯ್ತು. ಇನ್ನೂ ಕೆಲವು ದಿನಗಳಿವೆ.. ಇದೊಂದು ಅತ್ಯಂತ ತೃಪ್ತಿದಾಯಕ ಅನುಭವ ಎಂದಿದ್ದಾರೆ.

ಮನೆ ನಿರ್ವಹಣೆಗೊಂದು ಜಾಣ ಬಜೆಟ್‌..! ಈ ಟ್ರಿಕ್ಸ್ ಟ್ರೈ ಮಾಡಿ

ನಾವು ಸಮಯದ ವಿರುದ್ಧ ಓಡುತ್ತಿರುವಾಗ ನಮ್ಮ ಪ್ರಯಾಣದ ಉತ್ಸಾಹ ಹೆಚ್ಚುತ್ತಿದೆ. ಭಾನುವಾರ ಕ್ಲೀನ್ ಅಪ್ ಕುಂದಾಪುರದ ಜೊತೆ ಮಾಸ್ ಕ್ಲೀನ್ ಅಪ್ ಡ್ರೈವ್ ಬಗ್ಗೆ ಉತ್ಸುಕನಾಗಿದ್ದಾನೆ. ಅದು ಸರಿಯಾಗಿ ನಡೆದರೆ, ನಾವು ಸೋಮವಾರದಿಂದ ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ ಎಂದಿದ್ದಾರೆ.