ಮೆ ಹಣದಲ್ಲಿ ನೀವು ವಿಯೆಟ್ನಾಂನ ಹೋ ಚಿ ಮಿನ್ ತಲುಪಬಹುದು. ಫ್ಲೈಟ್ ನಲ್ಲಿ ಎಂಟೂವರೆ ಗಂಟೆಗಳ ಪ್ರಯಾಣ. ಫಾರಿನ್ ಟೂರ್ ಮಾಡಿದ ಅನುಭವ ಇಲ್ಲ. ಎಲ್ಲಾದರೂ ಸಮಸ್ಯೆ ಆದರೆ ಕಷ್ಟ ಆಗುತ್ತೆ ಅನ್ನೋ ಭಯ ಇದ್ದರೆ ಪ್ಯಾಕೇಜ್ ಟೂರ್ ನಲ್ಲಿ ಹೋಗಬಹುದು. ಒಂದಿಷ್ಟು ಗೂಗಲಿಸಿದರೆ ನಿಮ್ಮ ಬಜೆಟ್ ಗೆ ತಕ್ಕದಾದ ಪ್ಯಾಕೇಜ್ ಟೂರ್ ಡೀಟೈಲ್ ಸಿಗುತ್ತೆ.

ಹಾ ಲಾಂಗ್ ಬೇ ಇಲ್ಲಿನ ಅತ್ಯಂತ ಸುಂದರ ತಾಣ. ಇದು ರಮಣೀಯ ಸಮುದ್ರ, ದ್ವೀಪಗಳಿಂದ ಕೂಡಿರುವ ಜಾಗ. ನಿಮ್ಮ ಏರ್ ಪೋರ್ಟ್ ಗೆ ಸಮೀಪದಲ್ಲೇ ಇದೆ. ಸಾವಿರಾರು ಐಲ್ಯಾಂಡ್ ಗಳ ಜೊತೆಗೆ೦ ಚಿತ್ರ ವಿಚಿತ್ರ ನಮೂನೆಯ ಕಾಡುಗಳು ಇಲ್ಲಿವೆ. ಹಾನೊಯ್ ಗೆ ಹೋದರೆ ಸುಂದರವಾದ ಲೇಕ್ ಇದೆ. ಬೆರಗಾಗಿಸುವ ಪಗೋಡಾಗಳಿವೆ. ಹೊಯ್ ಆನ್‌ ಎಂಬ ಮೀನುಗಾರಿಕಾ ಪ್ರದೇಶಕ್ಕೆ ಭೇಟಿ ಕೊಡಬಹುದು.

ಎಷ್ಟು ಹಣ ಬೇಕು - 30 ಸಾವರಿದಿಂದ 40 ಸಾವಿರ ರೂ. 

 

ಭಾರತೀಯರು ಪ್ರವಾಸ ಹೋಗೋದು ಶೋ ಆಫ್‌ಗೆ

 

 

ಭೂತಾನ್ ನಲ್ಲಿ ಎದೆ ಝಲ್ಲೆನಿಸುವ ತಾಣಗಳು

ಹಿಮಾಲಯ ಶ್ರೇಣಿಗಳಿಂದ ಸುತ್ತವರಿದ, ನ್ಯಾಚ್ಯುರಲ್ ಬ್ಯೂಟಿಗೆ ಇನ್ನೊಂದು ಹೆಸರು ಭೂತಾನ್. ಬೆಂಗಳೂರಿನಿಂದ ಇಲ್ಲಿಗೆ ಡೈರೆಕ್ಟ್ ವಿಮಾನ ಸೇವೆ ಇದೆ. ನೀವು ಪ್ಯಾಕೇಜ್ ಟೂರ್ ನಲ್ಲಿ ಹೋದರೆ ಅತ್ಯಂತ ಕಡಿಮೆ ದರದಲ್ಲಿ ಕಡಿಮೆ ದಿನಗಳಲ್ಲಿ ಭೂತಾನ್ ದರ್ಶನ ಮಾಡಿ ಬರಬಹುದು. ಆದರೆ ನೀವು ಇನ್ನಷ್ಟು ಗಾಢವಾಗಿ ಭೂತಾನ್ ನೋಡಬೇಕು ಅಂದರೆ ನಿಮ್ಮಷ್ಟಕ್ಕೇ ನೀವೇ ಹೋಗಬೇಕು, ನಾಲ್ಕು ದಿನಗಳಲ್ಲಿ ಫ್ಲೈಟ್ ಟಿಕೆಟ್ಟೂ ಸೇರಿ ಇಪ್ಪತ್ತು ಸಾವಿರದಷ್ಟು ಕಡಿಮೆ ಬೆಲೆಗೆ ಭೂತಾನ್ ದರ್ಶನ ಮಾಡಿಸುವ ಪ್ಯಾಕೇಜ್ ಗಳಿವೆ. ಫ್ಲೈಟ್ ಟಿಕೆಟ್ ಹಣವನ್ನು ಇಎಂಐ ಮೂಲಕ ಪಾವತಿಸುವ ಅವಕಾಶವೂ ಇದೆ. ನಾಲ್ಕು ಸಾವಿರಕ್ಕೆಲ್ಲ ವಿಮಾನದಲ್ಲಿ ಬೆಂಗಳೂರಿನಿಂದ ಭೂತಾನ್ ತಲುಪಬಹುದು.

ಭೂತಾನ್ ನಲ್ಲಿ ಟೈಗರ್ ನೆಸ್ಟ್ ಅನ್ನೋ ಜಾಗವನ್ನು ನೀವು ಮಿಸ್ ಮಾಡೋ ಹಾಗೇ ಇಲ್ಲ. ಬೌದ್ಧ ಗುರು ರಿಂಪೋಚೆಯ ಮೊನಾಸ್ಟಿಯ ಇಲ್ಲಿಯ ಪರ್ವತರಾಜಿಗಳ ಮಧ್ಯದಲ್ಲಿದೆ. ಪೋಬ್ಜಿಕಾ ವ್ಯಾಲಿ ಸುಂದರ ಬಯಲು, ಸುಂದರ ವ್ಯೂ ಪಾಯಿಂಟ್ ಗಳಿರುವ ಜಾಗ, ಟ್ರೆಕ್ಕಿಂಗ್ ಇಷ್ಟ ಪಡುವವರಿಗೆ ಚೊಮೊ ಲಹ್ರಿಯಂಥಾ ಅದ್ಭುತ ಟ್ರೆಕ್ಕಿಂಗ್ ತಾಣಗಳಿವೆ.

ಎಷ್ಟು ಹಣ ಬೇಕು - 20 ಸಾವರದಿಂದ 30 ಸಾವಿರ ರೂ. 

 

ಲಿಮಿಟೆಡ್ ಬಜೆಟ್‌ನಲ್ಲಿ ಲೋಕ ಪರ್ಯಟನೆ

 

ಇಂಡೋನೇಷ್ಯಾ ಎಂಬ ವಿಸ್ಮಯ ದೇಶ

ನೀವು ಜನ, ಕಲ್ಚರ್ ಗಳನ್ನು ಇಷ್ಟ ಪಡುವವರಾದರೆ ನಿಮ್ಮಬಕೆಟ್ ಲೀಸ್ಟ್ ನಲ್ಲಿ ಇರಲೇಬೇಕಾದ ಜಾಗ ಇಂಡೋನೇಷ್ಯಾ. ಇಲ್ಲಿ ಪ್ರಕೃತಿ ನಿರ್ಮಿತ ಅದ್ಭುತಗಳಿವೆ. ಮನುಷ್ಯ ನಿರ್ಮಿಸಿದ ಪುರಾತನ ಪಳೆಯುಳಿಕೆಗಳಿವೆ. ಸಂಸ್ಕೃತಿಯನ್ನು ಸಾರುವ ಸುಂದರವಾದ ತಾಣಗಳಿವೆ. ಬೆಂಗಳೂರಿನಿಂದ ಜಕಾರ್ತಾಕ್ಕೆ ಫ್ಲೈಟ್ ಗಳಿವೆ. ಎಂಟು ಸಾವಿರದಿಂದ ಬೆಲೆ ಶುರುವಾಗುತ್ತದೆ. ಇಲ್ಲಿಂದ ನೀವು ಬಾಲಿಗೆ ಹೋದರೆ ಅನೇಕ ಬೀಚ್ ಗಳನ್ನು ಆ ಜನರ ಸಂಸ್ಕೃತಿಯನ್ನು ಕಣ್ಣು ತುಂಬಿಸಿಕೊಳ್ಳಬಹುದು. ಲಂಬಕ್ ನಲ್ಲಿರುವ ಗಿಲಿ ಐಲ್ಯಾಂಡ್ ಮಿಸ್ ಮಾಡಿಕೊಳ್ಳಲೇ ಬಾರದಂಥಾ ಜಾಗ. ಜ್ವಾಲಾಮುಖಿಯಿಂದ ನಿರ್ಮಾಣವಾದ ಕೆಲಿಮುಟು ಲೇಕ್ ಮತ್ತೊಂದು ಅಚ್ಚರಿಗೆ ಕೆಡವುವ ತಾಣ. ಟ್ರೆಕ್ಕಿಂಗ್ ಮೂಲಕ ಇಲ್ಲಿನ ಲ್ಯಾಂಡ್ ಸ್ಕೇಪ್ ಗಳನ್ನು ಎಕ್ಸ್ ಪ್ಲೋರ್ ಮಾಡಬಹುದು.

ಎಷ್ಟು ಹಣ ಬೇಕು : 40 ಸಾವಿರ ರೂಪಾಯಿ

 

 

ಇವುಗಳಲ್ಲದೇ ಸಿಂಗಾಪುರ, ಶ್ರೀಲಂಕಾದಂಥಾ ದೇಶಗಳಿಗೂ ಬಜೆಟ್ ಟ್ರಾವೆಲ್ ಮಾಡಬಹುದು. ಯಾವುದಕ್ಕೂ ಪಾಸ್ ಪೋರ್ಟ್ ಮಾಡಿಸಿಕೊಂಡಿಟ್ಟಿರಿ. ಇವತ್ತಿಂದಲೇ ಸೇವಿಂಗ್ಸ್ ಶುರುಮಾಡಿ. ನಿಮ್ಮ ಕನಸಿನ ಹಾದಿಗೆ ನಮ್ ಕಡೆಯಿಂದಲೂ ಬೆಸ್ಟ್ ವಿಶಸ್.