Asianet Suvarna News Asianet Suvarna News

ಭಾರತೀಯರು ಶೋ ಆಫ್‌ಗಾಗಿ ಪ್ರವಾಸ ಹೋಗುತ್ತಾರಂತೆ!

ಪ್ರವಾಸ ಹೋಗುವ ಬಹುತೇಕ ಭಾರತೀಯರಿಗೆ ಟೂರ್‌ ಅಂದ್ರೆ ಅಷ್ಟೇನೂ ಇಷ್ಟ ಇರಲ್ಲ, ಕೇವಲ ತೋರ್ಪಡಿಕೆಗಾಗಿ ರಜೆ ಸಿಕ್ಕಾಗೆಲ್ಲಾ ಪ್ರವಾಸ ಹೊರಡುತ್ತಾರೆ ಎನ್ನುತ್ತಿದೆ ಸಮೀಕ್ಷೆ.

According to Study Indian travel to show off instead of an really interesting
Author
Bengaluru, First Published Jan 19, 2020, 4:13 PM IST
  • Facebook
  • Twitter
  • Whatsapp

ಕೆಲವರಿಗೆ ಪ್ರವಾಸ, ಟ್ರೆಕ್ಕಿಂಗ್‌ ಎಂದರೆ ಪ್ರಾಣ. ಆರೋಗ್ಯ ಹೇಗಾದರೂ ಇರಲಿ, ಕೆಲಸಕ್ಕೆ ರಜೆ ಸಿಕ್ಕಿತೆಂದರೆ ಬೆನ್ನಿಗೆ ಬ್ಯಾಗು ಕಟ್ಟಿಕೊಂಡು ಹೊರಟೇ ಬಿಡುತ್ತಾರೆ. ಇವರಲ್ಲಿ ಕೆಲವರು ಕುಟುಂಬದೊಂದಿಗೆ ಕಾಲ ಕಳೆಯಲು, ಒತ್ತಡದ ಬದುಕಿನಿಂದ ಕೆಲ ಕಾಲ ಹೊರಗಿರಲು ಪ್ರವಾಸ ಹೋಗ್ತಾರೆ.

ಪ್ರವಾಸಿಗರ ಸ್ವರ್ಗ ಪಿಒಕೆ; ಹೋಗಿ ಬರಲು ತಡವೇಕೆ!? ಹೇಳಿ ಓಕೆ..ಓಕೆ!

ಹೀಗೆ ದೇಶ ವಿದೇಶ ಸುತ್ತುತ್ತಾ ಅಲ್ಲಿನ ಫೋಟೋಗಳನ್ನು ಕ್ಷಣಕ್ಷಣಕ್ಕೂ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ, ಬೇರೆಯವರ ಹೊಟ್ಟೆ ಉರಿಸುತ್ತಾರೆ! ಆದರೆ ಹೀಗೆ ಪ್ರವಾಸ ಹೋಗುವ ಭಾರತೀಯರಿಗೆ ಬಹುತೇಕರಿಗೆ ಟೂರ್‌ ಅಂದ್ರೆ ಅಷ್ಟೇನೂ ಇಷ್ಟಇರಲ್ಲ, ಕೇವಲ ತೋರ್ಪಡಿಕೆಗಾಗಿ ರಜೆ ಸಿಕ್ಕಾಗೆಲ್ಲಾ ಪ್ರವಾಸ ಹೊರಡುತ್ತಾರೆ ಎನ್ನುತ್ತಿದೆ ಸಮೀಕ್ಷೆ.

ಹೌದು ಬುಕ್ಕಿಂಗ್‌ ಡಾಟ್‌ ಕಾಮ್‌ ಇಂಥದ್ದೊಂದು ಸಮೀಕ್ಷೆ ಕೈಗೊಂಡಿತ್ತು. ಭಾರತೀಯರು ಸೋಷಿಯಲ್‌ ಮೀಡಿಯಾಗಳಲ್ಲಿ ಫೋಟೋ ಪೋಸ್ಟ್‌ ಮಾಡಿ ಲೈಕ್ಸ್‌ ಮತ್ತು ಕಾಮೆಂಟ್‌ ಪಡೆಯಲು ಮತ್ತು ಶೋ ಆಫ್‌ ಮಾಡಲು ಪ್ರವಾಸಕ್ಕೆ ಹೋಗುತ್ತಾರೆ ಎಂಬ ಅಂಶ ಸಮೀಕ್ಷೆ ವೇಳೆ ಬಯಲಾಗಿದೆ! ಇನ್ನೂ ಕೆಲವರು ಕುಟುಂಬದೊಂದಿಗೆ ಕಾಲ ಕಳೆಯಲು, ಕೆಲಸದ ಒತ್ತಡಕ್ಕೆ ಸ್ವಲ್ಪ ಕಾಲ ಬ್ರೇಕ್‌ ತೆಗೆದುಕೊಳ್ಳಲು ಟ್ರಿಪ್‌ ಹೋಗುತ್ತಾರೆ. ಆದರೆ ಒಟ್ಟಾರೆ ಭಾರತೀಯ ಪ್ರವಾಸಿಗರಲ್ಲಿ 38% ಪ್ರವಾಸಿಗರು ಬರೀ ಶೋ ಆಫ್‌ಗಾಗಿ ಟೂರ್‌ ಹೋಗ್ತಾರಂತೆ. ಇವರಲ್ಲಿ ಯಾರಿಗೆ ನಿಜಕ್ಕೂ ಸುತ್ತಾಡೋದು ಅಂದ್ರೆ ಇಷ್ಟ, ಯಾರು ಸುಮ್ನೆ ಶೋ ಆಫ್‌ ಮಾಡ್ತಿದ್ದಾರೆ ಅಂತ ಕಂಡು ಹಿಡಿಯೋದು ಕಷ್ಟಏನಲ್ಲ, ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ನೋಡಿದ್ರೆ ಗೊತ್ತಾಗುತ್ತೆ ಬಿಡಿ!

Follow Us:
Download App:
  • android
  • ios