ಯಾವ ವಿಷಯವನ್ನು ಜನ ಮಾಡುತ್ತಾರೆ, ಆದರೆ ಮಾತನಾಡಲ್ಲ? ಹೌದು, ನೀವು ಅಂದುಕೊಂಡಿದ್ದು ಕರೆಕ್ಟ್. ಹಾಗಿದ್ದರೆ ನಾವದರ ಬಗ್ಗೆ ಮಾತನಾಡಿಯೂ ಬಿಡೋಣ. ಏಕೆಂದರೆ, ಗುಟ್ಟಾಗಿಟ್ಟ ಕಾರಣದಿಂದಲೇ ಸೆಕ್ಸ್ ಬಗ್ಗೆ ಹತ್ತು ಹಲವು ತಪ್ಪುಕಲ್ಪನೆಗಳು ಗಾಢವಾಗಿ ಹಬ್ಬಿವೆ. ಹತ್ತಿರದವರು ಹೇಳಿದ್ದು, ಇಂಟರ್ನೆಟ್‌ನಲ್ಲಿ ಓದಿದ್ದು, ಅದರಿಂದ ನೀವೇನೋ ಅರ್ಥೈಸಿಕೊಂಡಿದ್ದರ ಮಧ್ಯದಲ್ಲಿ ಕೆಲವೊಂದಿಷ್ಟು ಸುಳ್ಳುಗಳು ನಿಮ್ಮನ್ನು ವಂಚಿಸುತ್ತವೆ. ಅವೇನೆಂದು ನೋಡೋಣ.

1. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಗರ್ಭ ಧರಿಸುವುದು ಸಾಧ್ಯವಿಲ್ಲ
ಸುಳ್ಳು. ಪ್ರಗ್ನೆಂಟ್ ಆಗಲು ಇಷ್ಟವಿಲ್ಲದ ಹಲವು ಮಹಿಳೆಯರು ಹಾಗೂ ಅವರ ಸಂಗಾತಿಗಳು ಅನ್‌ಪ್ರೊಟೆಕ್ಟೆಡ್ ಸೆಕ್ಸ್‌ಗೆ ಪೀರಿಯಡ್ಸ್‌ನ್ನು ಫ್ರೀ ಪಾಸ್ ಆಗಿ ಬಳಸುತ್ತಾರೆ. ಏಕೆಂದರೆ, ಮುಟ್ಟಿನ ದಿನಗಳಲ್ಲಿ ಗರ್ಭ ಧರಿಸುವುದು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ. ಆದರೆ, ಮುಟ್ಟಿನ ದಿನಗಳಲ್ಲಿ ಗರ್ಭ ಧರಿಸುವ ಸಾಧ್ಯತೆ ಕ್ಷೀಣವಾದರೂ ಇದನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗುವುದಿಲ್ಲ. ಒಬ್ಬೊಬ್ಬರ ಪೀರಿಯಡ್ಸ್ ಸೈಕಲ್ ಒಂದೊಂದು ತರ ಇದ್ದು, ನಾವದನ್ನು ಸಾಮಾನ್ಯೀಕರಿಸಲಾಗುವುದಿಲ್ಲ. ವೀರ್ಯವು ಮಹಿಳೆಯ ಗರ್ಭದಲ್ಲಿ ಮೂರು ದಿನಗಳ ಕಾಲ ಜೀವಂತವಾಗಿರಬಲ್ಲದು. ಹೀಗಾಗಿ, ಪೀರಿಯಡ್ಸ್ ಸೈಕಲ್‌ ಹಾಗೂ ಪೀರಿಯಡ್ಸ್ ಬಳಿಕದ ಎಷ್ಟನೇ ದಿನದಿಂದ ಅಂಡವು ಉತ್ಪತ್ತಿಯಾಗುತ್ತದೆ ಎಂಬುದನ್ನು ಆಧರಿಸಿ ಇದು ಬದಲಾಗುತ್ತದೆ. ಒಂದು ವೇಳೆ ಪೀರಿಯಡ್ಸ್ ಬಳಿಕ ಬೇಗ ಅಂಡ ಬಿಡುಗಡೆಯಾಗಿ, ವೀರ್ಯವು ಇನ್ನೂ ಗರ್ಭದಲ್ಲೇ ಜೀವಂತವಾಗಿ ಇದ್ದರೆ, ಪ್ರಗ್ನೆಂಟ್ ಆಗಬಹುದು.

ಮೊದಲ ಭೇಟಿ: ಆಕೆ ಅವನಲ್ಲಿ ಗಮನಿಸುವುದೇನು?

2. ಪ್ರತಿದಿನ ಸೆಕ್ಸ್ ಮಾಡುವುದರಿಂದ ಗುಪ್ತಾಂಗ ಅಗಲವಾಗುತ್ತದೆ
ಇದೊಂದು ಬಹುತೇಕರು ನಂಬಿರುವ ಸುಳ್ಳಾಗಿದೆ. ವೆಜೈನಾವು ಎಲಾಸ್ಟಿಕ್ ಗುಣ ಹೊಂದಿದ್ದು, ಒಮ್ಮೆ ಅಗಲವಾದರೂ ಮತ್ತೆ ಮುಂಚಿನ ಸ್ಥಿತಿಗೆ ಬರುತ್ತದೆ. ಕನ್ಯೆಯಾಗಿದ್ದಾಗ ಬಿಗಿತ ಇದ್ದು, ನಂತರದಲ್ಲಿ ಬಿಗಿತ ಕಳೆದುಕೊಳ್ಳುವುದು ಸುಳ್ಳು. ಮಹಿಳೆಯು ಮೂಡ್‌ಗೆ ಹೋದಾಗ ವೆಜೈನಾದ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ. ನಂತರ ಮುಂಚಿನ ಸ್ಥಿತಿಗೆ ಮರಳುತ್ತವೆ. 

3. ಹಸ್ತಮೈಥುನ ಒಳ್ಳೆಯದಲ್ಲ
ಸಂಗಾತಿಗೆ ವಂಚಿಸುವಷ್ಟು ಕೆಟ್ಟದ್ದೇನೆಲ್ಲ ಹಸ್ತಮೈಥುನ. ನಿಜವೆಂದರೆ, ಸೆಕ್ಷುಯಲ್ ಹೆಲ್ತ್ ಎಕ್ಸ್‌ಪರ್ಟ್‌ಗಳನ್ನು ಕೇಳಿದರೆ ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದೆಂದೇ ಹೇಳುತ್ತಾರೆ. ಪ್ರತಿದಿನ ಮಾಡಿದರೂ ತೊಂದರೆಯಿಲ್ಲ, ಇದು ಮನಸ್ಸನ್ನು ರಿಲ್ಯಾಕ್ಸ್ ಮಾಡಿ, ಸ್ಟ್ರೆಸ್ ಹೋಗಲಾಡಿಸುತ್ತದೆ ಎನ್ನುತ್ತಾರೆ ಅವರು. ಆದರೆ, ಅದೇ ಗೀಳಾಗಬಾರದು ಅಷ್ಟೇ.

ಸೆಕ್ಸ್‌ ಬಳಿಕ ಇದ್ದಕ್ಕಿದ್ದಂತೆ ಕೆಲವೊಮ್ಮೆ ಅಳು ಬರೋದೇಕೆ?

4. ಸೆಕ್ಸ್ ಅಥ್ಲೆಟಿಕ್ ಪರ್ಫಾರ್ಮೆನ್ಸ್ ಕುಗ್ಗಿಸುತ್ತದೆ
ಅಥ್ಲೀಟ್‌ಗಳಿಗೆ ಕ್ರೀಡೆಗೂ ಮುನ್ನ ಸೆಕ್ಸ್ ಅನ್ನು ಯಾವ ಕೋಚ್ ಕೂಡಾ ಒಪ್ಪುವುದಿಲ್ಲ. ಇದು ಅವರ ಕ್ರೀಡಾ ಪರ್ಫಾರ್ಮೆನ್ಸ್ ಕುಗ್ಗಿಸುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಇದು ನೂರಕ್ಕೆ ನೂರು ಸುಳ್ಳು. ಯಾವುದಾದರೂ ದೊಡ್ಡ ಸ್ಪರ್ಧೆಗೂ ಮುನ್ನಾ ರಾತ್ರಿ ಅಥ್ಲೀಟ್ ಅತಿಯಾಗಿ ಆತಂಕಗೊಂಡಿದ್ದಲ್ಲಿ, ಸೆಕ್ಸ್ ಅವರು ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ಒಂದು ವೇಳೆ ಅವರು ರಿಲ್ಯಾಕ್ಸ್ ಆಗಿ ಫೋಕಸ್ ಆಗಿಯೇ ಇದ್ದಲ್ಲಿ, ಉತ್ತಮ ನಿದ್ರೆಯಷ್ಟೇ ಅವರಿಗೆ ಸಾಕಾಗುತ್ತದೆ ಎನ್ನುತ್ತಾರೆ ತಜ್ಞರು. 

5. ಯುವತಿ ಕನ್ಯೆಯಾಗಿದ್ದಲ್ಲಿ ಸೆಕ್ಸ್ ಬಳಿಕ ಬ್ಲೀಡ್ ಆಗುತ್ತದೆ
ಇದೊಂದು ಸಾಮಾನ್ಯ ಸುಳ್ಳು ನಂಬಿಕೆ. ಕನ್ಯಾಪೊರೆಯು ಒಡೆದಾಗ ರಕ್ತ ಬರುವುದು ಹೌದಾದರೂ, ಸೆಕ್ಸ್‌ನಿಂದ ಇದಕ್ಕೆ ಹಾನಿಯಾಗಲೇ ಬೇಕೆಂದಿಲ್ಲ. ಈ ತೆಳುವಾದ ಪೊರೆಯು ವೆಜೈನಾದುದ್ದಕ್ಕೂ ಹರಡಿರುವುದಿಲ್ಲ. ಇದಕ್ಕೆ ಸಣ್ಣ ಓಪನಿಂಗ್ ಇರುತ್ತದೆ. ಇಲ್ಲದಿದ್ದಲ್ಲಿ ಮುಟ್ಟಿನಲ್ಲಿ ಕೂಡಾ ಬ್ಲೀಡಿಂಗ್ ಆಗಲು ಸ್ಥಳವೇ ಇರುತ್ತಿರಲಿಲ್ಲ. ಕೆಲವರಿಗೇ ಈ ಪೊರೆಯೇ ಇರುವುದಿಲ್ಲ, ಇನ್ನು ಕೆಲವರಿಗೆ ಅಗಲವಾಗಿರುತ್ತದೆ, ಮತ್ತೆ ಕೆಲವರು ಕ್ರೀಡೆ, ಜಿಮ್ ಎಂದು ದೈಹಿಕ ಚಟುವಟಿಕೆಗಳನ್ನು ನಡೆಸುವವರಿಗೆ ತಿಳಿಯದೆ ಯಾವಾಗಲೋ ಪೊರೆ ಒಡೆದಿರಬಹುದು. ಹೀಗಾಗಿ, ಕನ್ಯತ್ವ ಪರೀಕ್ಷೆ ನಡೆಸುವ ನಿಮ್ಮ ಸಣ್ಣ ಬುದ್ಧಿ ಬಿಡುವುದೊಳಿತು.