ಆಕೆಗೆ ಆತನಲ್ಲಿ ಮೊದಲ ಡೇಟ್‌ನಲ್ಲೇ ಪ್ರೀತಿಯಾಗಬೇಕೆಂದಿಲ್ಲ. ಆದರೆ, ಮೊದಲ ಭೇಟಿಯಲ್ಲಿ ಅವಳು ಆತನನ್ನು ಹೆಚ್ಚು ಗಮನಿಸುತ್ತಾಳೆಂಬುದಂತೂ ನಿಜ. ಇಲ್ಲ, ನೀವಂದುಕೊಂಡಂತೆ ಆಕೆ ನಿಮ್ಮ ಕಾಸ್ಟ್ಲಿ ಫೋನ್, ದುಬಾರಿ ಕಾರು ಅಥವಾ ಬ್ರ್ಯಾಂಡೆಡ್ ಶರ್ಟ್ ಯಾವುದನ್ನೂ ನೋಡುವುದಿಲ್ಲ. ಆದರೆ, ನಿಮ್ಮ ಬಗೆಗಿನ ಸಣ್ಣ ಸಣ್ಣ ಸಂಗತಿಗಳು ಆಕೆಯನ್ನು ಇಂಪ್ರೆಸ್ ಮಾಡಬಲ್ಲವು. 

ಡ್ರೆಸಿಂಗ್

ನೀವು ತೊಡುವ ಬಟ್ಟೆಯ ಬ್ರ್ಯಾಂಡನ್ನು ಆಕೆ ಹುಡುಕುವುದಿಲ್ಲ. ಆದರೆ, ನೀವು ಏನನ್ನು ತೊಟ್ಟರೂ ಎಷ್ಟು ಆತ್ಮವಿಶ್ವಾಸದಿಂದ ನಡೆದುಕೊಳ್ಳುತ್ತೀರೆಂಬುದು ಆಕೆಗೆ ಮುಖ್ಯವಾಗುತ್ತದೆ. ನೀವು ಏನು ಧರಿಸಿದ್ದೀರೆಂಬುದು ನೀವು ಹಾಸ್ಯಪ್ರಜ್ಞೆ ಇರುವವರೋ, ಅಥವಾ ಜೆಂಟಲ್‌ಮನ್ ರೀತಿಯೋ, ಗೂಬಾಳೋ, ಬುದ್ದಿವಂತರೋ ಅಥವಾ ಹೇಡಿಯೊ ಎಂಬುದನ್ನು ಹೇಳಬಲ್ಲವು. 

ಬ್ರೇಕಪ್‌ ನಂತರ ಮಾಡಲೇಬಾರದ ಸೋಷಿಯಲ್‌ ಮೀಡಿಯಾ ತಪ್ಪುಗಳು

ಸ್ವಚ್ಛತೆ

ಕೊಳಕಾದ ಉಗುರು, ಬ್ಲೇಡು ಕಾಣದ ಗಡ್ಡ, ಕೆಟ್ಟ ವಾಸನೆಯ ಬೆವರು, ಬಾಚಣಿಗೆ ಮುಟ್ಟದ ಕೂದಲು - ಇಂಥ ಹುಡುಗನನ್ನು ಯಾವ ಹುಡುಗಿ ತಾನೇ ಇಷ್ಟಪಡಬಲ್ಲಳು? ಇಂಥ ಪರ್ಸನಲ್ ಹೈಜಿನ್‌ಗೆ ನೀವು ಗಮನ ಹರಿಸುವುದಿಲ್ಲವೆಂದಾದರೆ, ಎರಡನೇ ಬಾರಿ ಡೇಟ್ ಹೋಗುವ ಆಲೋಚನೆಯನ್ನೇ ಮರೆತುಬಿಡಿ.

ನೋಟ

ಯುವತಿಯೊಂದಿಗೆ ಮಾತನಾಡುವಾಗ ನಿಮ್ಮ ನೋಟ ಎಲ್ಲಿರುತ್ತದೆ ಹಾಗೂ ಹೇಗಿರುತ್ತದೆ ಎಂಬುದು ನಿಮ್ಮೊಂದಿಗಿನ ಸಂಬಂಧಕ್ಕೆ ಬುನಾದಿ ಹಾಕಬೇಕೋ ಅಥವಾ ಸಮಾಧಿ ಕಟ್ಟಬೇಕೋ ಎಂದು ಆಕೆ ಯೋಚಿಸುವಾಗ ನೆರವಾಗುತ್ತದೆ. ಆಗಾಗ ಫೋನ್ ನೋಡುವುದು, ದಾರಿಯಲ್ಲಿ ಹೋಗುವ ಹುಡುಗಿಯರತ್ತ ಗಮನ ಹರಿಸುವುದು, ಅಥವಾ ಆಕೆಯ ಕಣ್ಣನ್ನು ಬಿಟ್ಟು ಎಲ್ಲೋ ನೋಡುತ್ತಾ ಮಾತನಾಡುವುದು ಖಂಡಿತಾ ಕೆಟ್ಟ ಇಂಪ್ರೆಶನ್ ನೀಡುತ್ತವೆ.

ಪಾರ್ಟ್ನರ್‌ಗೆ ಪಾಸ್‌ವರ್ಡ್ ಹೇಳ್ಬೇಕಾ?

ಚಪ್ಪಲಿ

ಬಹಳಷ್ಟು ಹುಡುಗಿಯರು ನಿಮ್ಮ ಬಟ್ಟೆಗಿಂತಾ ಶೂ ಗಮನಿಸುವುದೇ ಹೆಚ್ಚು. ಕೊಳಕಾದ ಸ್ಪೋರ್ಟ್ಸ್ ಶೂ, ಫೇಡ್ ಆದ ಚಪ್ಪಲಿ, ಹರಿದ ಸ್ಯಾಂಡಲ್ಸ್ ನಿಮ್ಮ ಉದಾಸೀನತೆ ಹಾಗೂ  ನಿಮ್ಮ ಬಗ್ಗೆ ನಿಮಗೇ ಗಮನ ಇಲ್ಲದಿರುವುದನ್ನು ಸೂಚಿಸುತ್ತವೆ.

ಇನ್ನೊಬ್ಬರೊಂದಿಗಿನ ನಡೆ

ಜನರನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದನ್ನು ಆಕೆ ಹೆಚ್ಚು ಕಿರಿದಾಗಿ ಗಮನಿಸುತ್ತಿರುತ್ತಾಳೆ. ಹೊಟೇಲ್ ಮಾಣಿಯನ್ನು ಕರೆವಾಗ ನಿಮ್ಮ ಧ್ವನಿಯಲ್ಲಿದ್ದ ಅಧಿಕಾರ, ಕ್ಯಾಬ್ ಚಾಲಕನೊಂದಿಗೆ ತೋರುವ ಸಿಟ್ಟು, ನಿಮಗೆ ಡಿಕ್ಕಿ ಹೊಡೆದವರಿಗೆ ಕೈ ತೋರಿಸುತ್ತೀರೋ, ನೋ ಪ್ರಾಬ್ಲಂ ಎನ್ನುತ್ತೀರೋ ಎಂಬುದೆಲ್ಲವೂ ನಿಮ್ಮ ವ್ಯಕ್ತಿತ್ವವನ್ನು ಒರೆಗೆ ಹಚ್ಚಲು ಅವಕಾಶ ಮಾಡಿಕೊಡುತ್ತಿರುತ್ತವೆ.