Asianet Suvarna News Asianet Suvarna News

ಹುಡುಗಿ ಸಿಗದಿದ್ರು ಓಕೆ ಮನೆ ಬೇಕು: ಬಾಡಿಗೆ ಮನೆ ಹುಡುಕಲು ಡೇಟಿಂಗ್ ಆಪ್ ಮೊರೆ ಹೋದ ಯುವಕ

ಮಹಾನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ಅದರಲ್ಲೂ ನಿಮಗೆ ಸ್ಥಳೀಯ ಭಾಷೆ ಬರದಿದ್ದರಂತೂ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಇನ್ನು ಒಂದು ವೇಳೆ ನೀವು ಬ್ಯಾಚುಲರ್‌ಗಳಾಗಿದ್ದಲ್ಲಿ ಕತೆ ಮುಗಿದೇ ಹೋಯಿತು.

man uses dating app to search rental houses in Mumbai akb
Author
Bangalore, First Published Jun 20, 2022, 10:36 AM IST

ಮುಂಬೈ: ಮಹಾನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ಅದರಲ್ಲೂ ನಿಮಗೆ ಸ್ಥಳೀಯ ಭಾಷೆ ಬರದಿದ್ದರಂತೂ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಇನ್ನು ಒಂದು ವೇಳೆ ನೀವು ಬ್ಯಾಚುಲರ್‌ಗಳಾಗಿದ್ದಲ್ಲಿ ಕತೆ ಮುಗಿದೇ ಹೋಯಿತು. ಬಾಡಿಗೆ ಮನೆಗಾಗಿ ಅಲೆದು ಅಲೆದು ಸುಸ್ತಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಬಹುಶಃ ಈ ಯುವಕನಿಗೂ ಅದೇ ಅನುಭವ ಆಗಿರಬೇಕು. ಇದೇ ಕಾರಣಕ್ಕೆ ಆತ ಸಂಗಾತಿಗಳನ್ನು ಹುಡುಕಲು ಯುವ ಸಮುದಾಯ ಬಳಸುವ ಡೇಟಿಂಗ್ ಆಪ್ ಅನ್ನು ಬಾಡಿಗೆ ಮನೆ ಹುಡುಕುವ ಸಲುವಾಗಿ ಬಳಕೆ ಮಾಡಿಕೊಂಡಿದ್ದಾನೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 

ಕೈಗೆಟುಕುವ ದರದಲ್ಲಿ (affordable rate) ಮುಂಬೈನಂತಹ (Mumbai) ಮಹಾನಗರಗಳಲ್ಲಿ ಬಾಡಿಗೆ ಮನೆ ಪಡೆಯುವುದು ಸುಲಭದಲ್ಲಿ ಇಲ್ಲ. ಬಾಡಿಗೆ ಮನೆಗಾಗಿ ಅಲೆದು ಅಲೆದು ಸುಸ್ತಾದ ಕೇರಳದ (Kerala) ಎರ್ನಾಕುಲಂನ (Ernakulam) ಮಲೆಯಾಳಿ ಯುವಕನೋರ್ವ ಹೊಸ ಉಪಾಯ ಮಾಡಿದ್ದಾನೆ. ಡೇಟಿಂಗ್ ಆಪ್‌ನಲ್ಲಿ ಆತ ಬಾಡಿಗೆ ಮನೆ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ. 

 

ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್ ವಾಸಿಸುವುದು ಮಾತ್ರ ಬಾಡಿಗೆ ಮನೆಯಲ್ಲಿ!

ಯುವಕನ ಈ ಗೋಳನ್ನು ಅನ ಡಿ ಅಮರಸ್‌ (Ana de Amaras) ಸ್ಕ್ರಿನ್‌ಶಾಟ್ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಗಾತಿಗಾಗಿ ಅಲ್ಲ, ಇಲ್ಲಿ ನಾನು ರೆಂಟೆಂಡ್ ಫ್ಲಾಟ್‌ಗಾಗಿ ಹುಡುಕುತ್ತಿದ್ದೇನೆ ಎಂದು ಆತ ಡೇಟಿಂಗ್ ಆಪ್‌ನಲ್ಲಿ ಬಯೋ ಬರೆದುಕೊಂಡಿದ್ದಾನೆ. ಮುಂಬೈನ ವೆಸ್ಟರ್ನ್ ಲೈನ್‌ನಲ್ಲಿ ಮನೆ ಹುಡುಕಿ ಕೊಡುವಂತೆ ಆತ ಮನವಿ ಮಾಡಿದ್ದಾನೆ. ಅಲ್ಲದೇ ತನಗೆ ಹಿಂದಿ (Hindi) ಭಾಷೆ ಬರುವುದಿಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ. ನೀವೇನಾದರೂ ಮುಂಬೈನಲ್ಲಿ ಇದ್ದರೆ ನನಗೆ ಸಹಾಯ ಮಾಡಲು ಬಯಸಿದರೆ ನನಗೆ ವೆಸ್ಟರ್ನ್‌ ಲೈನ್‌ನಲ್ಲಿ ಬಾಡಿಗೆ ಮನೆ ಬೇಕಿತ್ತು. ನನಗೆ ಹಿಂದಿ ಭಾಷೆ ಬರುವುದಿಲ್ಲ ಎಂದು ಯುವಕ ಬರೆದುಕೊಂಡಿದ್ದಾನೆ.

Uttara Kannada: ಕಾರವಾರದಲ್ಲಿ ಮುಸ್ಲಿಮರಿಗೆ ಸುಲಭದಲ್ಲಿ ದೊರೆಯಲ್ಲ ಬಾಡಿಗೆ ಮನೆ

ಆದರೆ ಸಂಗಾತಿ ಆಯ್ಕೆಗೆ ಸಹಾಯ ಮಾಡುವ ಈ ಡೇಟಿಂಗ್ ಆಪ್‌ನಲ್ಲಿ ಆತ ಮನೆ ಹುಡುಕಿ ಕೊಡುವಂತೆ ಮನವಿ ಮಾಡಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಈತನೇಕ ನೋ ಬ್ರೋಕರ್. ಕಾಮ್ ಆಪ್ ಬಳಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅನೇಕರು ಈ ಯುವಕನಿಗೆ ಬೆಂಬಲ ವ್ಯಕ್ತಪಡಿಸಿದ್ದು, ಮುಂಬೈನಲ್ಲಿ ಮನೆ ಹುಡುಕುವುದು ಭಾರಿ ಕಷ್ಟದ ಕೆಲಸ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಹುಡುಗ ತನ್ನ ಆದ್ಯತೆಯ ಬಗ್ಗೆ ಹೆಚ್ಚು ನಿಖರವಾಗಿದ್ದಾನೆ. ಮುಂಬೈನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಜೀವಿಸುತ್ತಿರುವ ನಾನು ಈ ಯುವಕನಿಗೆ ಶೇಕಡಾ ನೂರರಷ್ಟು ಬೆಂಬಲ ನೀಡುತ್ತೇನೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.  

Follow Us:
Download App:
  • android
  • ios