ಕಾಲಿಲ್ಲ, ವ್ಹೀಲ್‌ಚೇರ್ ಇಲ್ಲ, ಆದ್ರೂ ಜಗವನ್ನೇ ಸುತ್ತಿದ!
ಅಮೆರಿಕದ ಇಂಡಿಯಾನಾ ರಾಜ್ಯದ ಫೋರ್ಟ್ ವೇಯ್ನೆ ಎಂಬಲ್ಲಿನ ಕೆವನ್ ಶಾಂಡ್ಲರ್ ಎಂಬ ಯುವಕ ಕತೆ ವಿಚತ್ರ, ಸತ್ಯ, ಅಷ್ಟೇ ಸ್ಫೂರ್ತಿದಾಯಕ. ಸಣ್ಣ ಪುಟ್ಟ ತೊಂದರೆಗಳಿದ್ದರೂ ಕೆಲಸ ಮುಂದುವರಿಸಲು ಉದಾಸೀನ ಮಾಡಿ ಮನೆಯಲ್ಲೇ ಉಳಿಯುವ ಜಡರಿಗೆ, ಸೋಮಾರಿಗಳಿಗೆ ಈತನ ಕತೆ ಖಂಡಿತ ಸ್ಫೂರ್ತಿ ನೀಡಬಲ್ಲದು.
ಅಮೆರಿಕದ ಇಂಡಿಯಾನಾ ರಾಜ್ಯದ ಫೋರ್ಟ್ ವೇಯ್ನೆ ಎಂಬಲ್ಲಿನ ಕೆವನ್ ಶಾಂಡ್ಲರ್ ಎಂಬ ಯುವಕ ಕತೆ ವಿಚತ್ರ, ಸತ್ಯ, ಅಷ್ಟೇ ಸ್ಫೂರ್ತಿದಾಯಕ. ಸಣ್ಣ ಪುಟ್ಟ ತೊಂದರೆಗಳಿದ್ದರೂ ಕೆಲಸ ಮುಂದುವರಿಸಲು ಉದಾಸೀನ ಮಾಡಿ ಮನೆಯಲ್ಲೇ ಉಳಿಯುವ ಜಡರಿಗೆ, ಸೋಮಾರಿಗಳಿಗೆ ಈತನ ಕತೆ ಖಂಡಿತ ಸ್ಫೂರ್ತಿ ನೀಡಬಲ್ಲದು.
ಕೆವನ್‌ಗೆ ಈಗ 33 ವರ್ಷ. ಆತನಿಗೆ ಕಾಲಿನಿಂದ ನಡೆಯಲು ಸಾಧ್ಯವಿಲ್ಲ. ಯಾಕೆಂದರೆ, ಬಾಲ್ಯದಿಂದಲೇ ಆತನ ಬೆನ್ನು ಮೂಳೆ ಸ್ವಾಧೀನವಿಲ್ಲ. ಹುಟ್ಟುವಾಗಲೇ ಸ್ಪೈನಲ್ ಮಸ್ಕ್ಯುಲಾರ್ ಅಟ್ರೋಫಿ ಎಂಬ ತೊಂದರೆ ಇದ್ದುದರಿಂದ ಎದ್ದು ನಿಂತು ನಡೆದಾಡಲು ಇವನಿಗೆ ಸಾಧ್ಯವೇ ಆಗಲಿಲ್ಲ. ಈತ ಒಂದು ಹೆಜ್ಜೆಯನ್ನೂ ಇಡಲಾರ. ಮಾತ್ರವಲ್ಲ ಕೈಕಾಲುಗಳ ಯಾವ ಮೂಳೆಯನ್ನೂ ಅಲುಗಾಡಿಸಲಾರ. ಚಿಕ್ಕಂದಿನಿಂದಲೇ ಆತನ ತಂದೆ ತಾಯಿಗಳು ಬಹು ಕಷ್ಟದಿಂಧ, ಆದರೆ ಪ್ರೀತಿಯಿಂದ ಈತನನ್ನು ಸಾಕಿದರು. ಇವನು ಮಾತ್ರವಲ್ಲ, ಇವರ ಅಕ್ಕ ಕೋನ್ನೀ ಕೂಡ ಇದೇ ಕಷ್ಟದಿಂದ ಬಳಲುತ್ತಿದ್ದಾಳೆ. ಆದರೆ ಹೆತ್ತವರು ಕ್ರಿಯೇಟಿವ್ ಆಗಿ ಇವರನ್ನು ಬೆಳೆಸಿದರು, ಜೀವನವನ್ನು ಪ್ರೀತಿಸುವುದು ಹೇಳಿಕೊಟ್ಟರು.
ಗೋವಾಗೆ ಹೋದ್ರೆ ಈ ಜಾಗಗಳನ್ನು ನೋಡಲು ಮರೀಬೇಡಿ
ಇದೆಲ್ಲ ಸಂಕಷ್ಟದ ನಡುವೆ ಈತ ಶಾಲೆ- ಕಾಲೇಜಿಗೆ ಹೋದ. ಕೌನ್ಸೆಲಿಂಗ್‌ನಲ್ಲಿ ಡಿಗ್ರಿ ಮಾಡಿದ. ಇದೆಲ್ಲದರ ನಡುವೆ ಈತನ ಕೈ- ಕಾಲುಗಳು ಇರುವ ಸ್ವಲ್ಪ ಶಕ್ತಿಯನ್ನೂ ಕಳೆದುಕೊಳ್ಳುತ್ತಾ ಬಂದವು. ಈತ ಔಷಧವನ್ನೂ ನಿರಾಕರಿಸಿ ಬ್ಯುಸಿ ಜೀವನವನ್ನೇ ತನ್ನ ಮದ್ದಾಗಿಸಿಕೊಂಡ. ಸದಾ ಚಟುವಟಿಕೆಯಲ್ಲಿದ್ದ. ಮೂರು ವರ್ಷದ ಹಿಂದೆ ನಾನಾ ದೇಶಗಳನ್ನು ಸುತ್ತಾಡುವ ತೀರ್ಮಾನಕ್ಕೆ ಬಂದ, ಆದರೆ ವ್ಹೀಲ್‌ಚೇರ್‌ನಲ್ಲಿ ಹೋಗುವುದನ್ನೂ ಆತ ಇಷ್ಟಪಡಲಿಲ್ಲ . ಇದೇ ಸಮಯಕ್ಕೆ ಆತನ ಆರು ಮಂದಿ ಗೆಳೆಯರು ನೆರವಿಗೆ ಬಂದರು. ಕೆವನ್‌ಗಾಗಿಯೇ ಒಂದು ವಿಶೇಷ ಬ್ಯಾಕ್‌ಪ್ಯಾಕ್ ಸಿದ್ಧಪಡಿಸಿಕೊಂಡರು. ಒಬ್ಬರಾದ ನಂತರ ಒಬ್ಬರಂತೆ ನಾಲ್ಕು ಮಂದಿ ಆತನನ್ನು ಅದರಲ್ಲಿ ಕೂರಿಸಿ ಬೆನ್ನ ಮೇಲೆ ಹೊತ್ತರು. ಇನ್ನಿಬ್ಬರು ಆತನ ಲಗ್ಗೇಜ್ ಹೊತ್ತು, ಇಡೀ ಪ್ರವಾಸ ಚಿತ್ರೀಕರಿಸಿಕೊಂಡರು.
ಯುರೋಪ್‌ನ ಹಲವು ದೇಶಗಳನ್ನು ಹೀಗೆ ಸುತ್ತಾಡಿದರು. ಇದನ್ನು ನೋಡಿದ ಜನ ಕುತೂಹಲದಿಂದ ಪ್ರಶ್ನಿಸುತ್ತಿದ್ದರು. ಅಂಥವರಿಗೆ ಉತ್ತರ ನೀಡೋದಕ್ಕೆ, ಪ್ರವಾಸಕ್ಕೆ ಅಗತ್ಯಬಿದ್ದರೆ ಫಂಡ್ ಪಡೆಯೋದಕ್ಕೆ 'ವಿ ಕ್ಯಾರಿ ಕೆವನ್'ಎಂಬ ನಾನ್ ಪ್ರಾಫಿಟ್ ಸಂಸ್ಥೆಯನ್ನು ಸೃಷ್ಟಿಸಿಕೊಂಡರು. ಅದಕ್ಕೊಂದು ವೆಬ್‌ಸೈಟ್, ಒಂದು ಫೇಸ್‌ಬುಕ್ ಪೇಜ್ ಎಲ್ಲ ಆಯಿತು. ಇದಾದ ಬಳಿಕ ಗೆಳೆಯರು ಚೀನಾದ ಪ್ರವಾಸ ಯೋಜನೆಯನ್ನೂ ಸಿದ್ಧಪಡಿಸಿದರು. ಚೀನಾದ ಮಹಾ ಗೋಡೆಯನ್ನೂ ಹತ್ತಿ ಇಳಿದರು!
ಮಕ್ಕಳಿಗೆ ಅನ್ನ ಕೊಡಲು ಕೂದಲು ಮಾರಿದ ವಿಧವೆ!
ಇದನ್ನೆಲ್ಲ ಸಾಧ್ಯವಾಗಿಸಿದ ತನ್ನ ಗೆಳೆಯರ ಬಗ್ಗೆ ಕೆವನ್‌ಗೆ ಎಲ್ಲಿಲ್ಲದ ಅಕ್ಕರೆ, ಅಭಿಮಾನ. ಅವರಿಲ್ಲದೆ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಹಾಗಂತ ಇದು ತನಗೆ ಮಾಡುತ್ತಿರುವ ಸೇವೆ ಎಂಬ ಅಹಂಕಾರವೂ ಅವರಲ್ಲಿ ತನಗೆ ಕಾಣಿಸಿಲ್ಲ. ನನ್ನ ಬಗ್ಗೆ ತುಂಬ ಪ್ರೀತಿಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಅವನು ಹೇಳುತ್ತಾನೆ. ನಾನು ಎಂದೆಂದಿಗೂ ಹೋಗಲು ಸಾಧ್ಯವಾಗದಂಥ ಸ್ಥಳಗಳಿಗೆ ಅವರಿಂದಾಗಿ ಹೋಗಲು ಸಾಧ್ಯವಾಗಿದೆ. ಇದು ನನ್ನ ಭಾಗ್ಯವೇ ಎನ್ನುತ್ತಾನೆ.
ವಿ ಕ್ಯಾರಿ ಕೆವನ್ ಅಭಿಯಾನದ ಯಶಸ್ಸಿನಿಂದ ಸ್ಫೂರ್ತಿ ಪಡೆದ ಇನ್ನೂ ಹಲವರು ಇಂಥದೇ ಕೆಲಸಗಳಲ್ಲಿ ತೊಡಗಲು ಆರಂಭಿಸಿದ್ದಾರೆ. ಅಂಗವಿಕಲರು, ಪ್ರವಾಸ ಹೋಗಲು ಸಾದ್ಯವಾಗದವರಿಗೆ ನೆರವಾಗುವುದು, ಅವರನ್ನು ಹೊತ್ತೊಯ್ಯುವುದು ಮಾಡುತ್ತಿದ್ದಾರೆ. ವಿ ಕ್ಯಾರಿ ಕೆವನ್ ಸಂಸ್ಥೆಯಿಂದಲೂ ಅಂಥ ಪ್ರಯತ್ನಗಳಿಗೆ ಬೆಂಬಲ ನೀಡಲು ಕೆವನ್ ಮತ್ತು ಗೆಳೆಯರು ಮುಂದಾಗಿದ್ದಾರೆ. ಈ ಪ್ರವಾಸ ಸಾಹಸದ ಬಗ್ಗೆ "ವಿ ಕ್ಯಾರಿ ಕೆವನ್'ಎಂಬ ಪುಸ್ತಕವನ್ನೂ ಸ್ವತಃ ಕೆವನ್ ಬರೆದಿದ್ದಾನೆ. ಇದು ಬೆಸ್ಟ್‌ಸೆಲ್ಲರ್ ಆಗಿದೆ. ಈಗ ಇವನ ಕತೆ ಟೆಲಿಫಿಲಂ ಕೂಡ ಆಗುತ್ತಿದೆ.
ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!