ಅಮೆರಿಕನ್ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ, ಅಮೆರಿಕನ್ನರಿಗೆ ಕಿರಿಕಿರಿ ಉಂಟುಮಾಡುವ ಭಾರತದ ಕೆಲವು ದಿನನಿತ್ಯದ ಅಭ್ಯಾಸಗಳ ಬಗ್ಗೆ ಹೇಳಿದ್ದಾರೆ.
ಅಮೆರಿಕನ್ನರಿಗೆ ಕಿರಿಕಿರಿ ಉಂಟುಮಾಡುವ ಭಾರತೀಯ ಸಂಸ್ಕೃತಿ: ದೆಹಲಿಯಲ್ಲಿ ವಾಸಿಸುತ್ತಿರುವ ಅಮೆರಿಕನ್ ಮಹಿಳೆಯೊಬ್ಬರು ಇತ್ತೀಚೆಗೆ ಭಾರತದ ಕೆಲವು ದಿನನಿತ್ಯದ ಅಭ್ಯಾಸಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳೆಯ ಹೆಸರು ಕ್ರಿಸ್ಟನ್ ಫಿಶರ್. ಅವರು ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದರು. ಅಮೆರಿಕದಲ್ಲಿ ಸಾಮಾನ್ಯವಾಗಿರದ ಅನೇಕ ಆಚರಣೆಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವುದನ್ನು ಅವರು ಗಮನಿಸಿದ್ದಾಗಿ ಬರೆದುಕೊಂಡಿದ್ದಾರೆ.
ಕೈಯಿಂದ ಊಟ ಮಾಡುವುದರಿಂದ ಹಿಡಿದು ಅನೇಕ ಮನೆಗಳಲ್ಲಿ ಟಾಯ್ಲೆಟ್ ಪೇಪರ್ ಕೊರತೆಯವರೆಗೆ, ಫಿಶರ್ ಅಮೆರಿಕದಲ್ಲಿ ಕಂಡು ಕೇಳರಿಯದ ಮತ್ತು ಯಾವುದೇ ಅಮೆರಿಕನ್ನರನ್ನು ಮುಜುಗರಕ್ಕೀಡು ಮಾಡುವ ಎಂಟು ಭಾರತೀಯ ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ. ಆ 8 ಅಭ್ಯಾಸಗಳು ಏನೆಂಬುದು ತಿಳಿಯೋಣ.
ಇದನ್ನೂ ಓದಿ: ತೂಕ ಇಳಿಸುತ್ತೆ, ಹಲವು ರೋಗಗಳಿಗೂ ಗುಡ್ ಬೈ ಹೇಳೋ ಶೇಂಗಾ
ಟಾಯ್ಲೆಟ್ ಪೇಪರ್: ಅಮೆರಿಕನ್ನರು ಟಾಯ್ಲೆಟ್ ಪೇಪರ್ ಅನ್ನು ತುಂಬಾ ಇಷ್ಟಪಡುತ್ತಾರೆ. ಎಷ್ಟೇಂದ್ರರೆ ಟಾಯ್ಲೆಟ್ ಪೇಪರ್‌ನಲ್ಲದೇ ಬೇರೆ ಯಾವುದನ್ನೂ ಬಳಸುವುದಿಲ್ಲ. ಹಾಗೆ ಬಳಸುವುದು ಅವರಿಗೆ ಅಸಹ್ಯ ಮತ್ತು ಕಿರಿಕಿರಿಯ ವಿಷಯ. ಜೆಟ್ ಸ್ಪ್ರೇ ಬಳಕೆಯಿಂದ ಅವರು ಅಸಹ್ಯಪಡುತ್ತಾರೆ.
ಚಪ್ಪಲಿ ಹಂಚಿಕೊಳ್ಳುವುದು: ಇನ್ನೊಂದು ವಿಷಯ ಅಮೆರಿಕದಲ್ಲಿ ಜನರು ಎಂದಿಗೂ ಚಪ್ಪಲಿ ಶೇರ್ ಮಾಡಿಕೊಳ್ಳುವುದಿಲ್ಲ. ಭಾರತೀಯ ಮನೆಗಳಲ್ಲಿ ಚಪ್ಪಲಿಗಳನ್ನು ಸಾಮಾನ್ಯವಾಗಿ ಹಂಚಿಕೊಳ್ಳಲಾಗುತ್ತದೆ, ಒಂದೇ ಚಪ್ಪಲಿಯಲ್ಲಿ ಮನೆ ಮಂದಿ ಬಳಸುತ್ತಿರ್ತಾರೆ. ಟಾಯ್ಲೆಟ್ ಹೋಗಲು ಇಡೀ ಮನೆ ಮಂದಿಯೆಲ್ಲ ಒಂದೇ ಚಪ್ಪಲಿ ಬಳಸ್ತಿರ್ತಾರೆ. ಇದು ಅಮೆರಿಕನ್ನರಿಗೆ ಆಗಿಬರುವುದಿಲ್ಲ. ಅವರು ಎಂದಿಗೂ ಚಪ್ಪಲಿ ಹಂಚಿಕೊಳ್ಳುವುದಿಲ್ಲ.
ರೆಸ್ಟೋರೆಂಟ್‌ನಲ್ಲಿ ಆಹಾರವನ್ನು ಹಂಚಿಕೊಳ್ಳುವುದು:
ಭಾರತದಲ್ಲಿ ರೆಸ್ಟೋರೆಂಟ್ ಗಳಲ್ಲಿ ಆಹಾರ ಸೇವಿಸುವಾಗ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇಡೀ ಟೇಬಲ್‌ಗೆ ಆಹಾರವನ್ನು ಆರ್ಡರ್ ಮಾಡುತ್ತಾರೆ ಮತ್ತು ಎಲ್ಲರೂ ಅದನ್ನು ಹಂಚಿಕೊಳ್ಳುತ್ತಾರೆ. ಆದರೆ ಅಮೆರಿಕಾದಲ್ಲಿ, ಜನರು ತಮ್ಮದೇ ಆದ ಆಹಾರವನ್ನು ಆರ್ಡರ್ ಮಾಡಲು ಬಯಸುತ್ತಾರೆ ಮತ್ತು ಅವರು ತಮ್ಮ ಆಹಾರವನ್ನು ಇತತರೊಂದಿಗೆ ಶೇರ್ ಮಾಡಿಕೊಳ್ಳುವುದಿಲ್ಲ.
ಇದನ್ನೂ ಓದಿ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಸಾಮೂಹಿಕ ಬಲತ್ಕಾರ: ಬೆಚ್ಚಿಬಿದ್ದ ಪ್ರವಾಸಿಗರು! 'ಮಹಿಳಾ ದಿನ' ಹೊತ್ತಲ್ಲಿ ಇದೆಂಥ ಕ್ರೌರ್ಯ?
ಕೈಗಳಿಂದ ಊಟ ಮಾಡುವುದು: ಭಾರತೀಯರು ಕೈಗಳಿಂದ ಊಟ ಮಾಡಲು ಇಷ್ಟಪಡುತ್ತಾರೆ, ಆದರೆ ಅಮೆರಿಕನ್ನರು ಕೈಗಳಿಂದ ಊಟ ಮಾಡಲು ಇಷ್ಟಪಡುವುದಿಲ್ಲ. ಅವರು ತಮ್ಮ ಕೈಗಳನ್ನು ಕೊಳಕು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಆಹಾರ ಸೇವಿಸುವಾಗ ಚಮಚ ಸ್ಟಿಕ್ ಬಳಸಿಯೇ ಉಟ ಮಾಡ್ತಾರೆ.
ಮಕ್ಕಳನ್ನು ಕಾರ್ ಸೀಟುಗಳಲ್ಲಿ ಕೂರಿಸದಿರುವುದು: ಅಮೆರಿಕದಲ್ಲಿ ಮಕ್ಕಳನ್ನು ಯಾವಾಗಲೂ ಕಾರ್ ಸೀಟಿನಲ್ಲಿ ಸುರಕ್ಷಿತವಾಗಿ ಕೂರಿಸುವ ಅಗತ್ಯವಿದೆ, ಆದರೆ ಭಾರತೀಯರ ಹಾಗೆ ಮಾಡದಿರುವುದು ಅಮೆರಿಕನ್ನರಿಗೆ ವಿಚಿತ್ರವಾಗಿ ಕಾಣಿಸುತ್ತದೆ.
ನೀರಿನ ಬಾಟಲಿ ಶೇರಿಂಗ್: ಅಮೆರಿಕನ್ನರು ತಮ್ಮ ನೀರಿನ ಬಾಟಲಿಗಳನ್ನು ಇಷ್ಟಪಡ್ತಾರೆ ಅವರು ಇತರರೊಂದಿಗೆ ತಮ್ಮ ವಾಟರ್ ಬಾಟಲಿ ಹಂಚಿಕೊಳ್ಳುವುದನ್ನು ದ್ವೇಷಿಸುತ್ತಾರೆ.ಆದರೆ ನೀರಿನ ಬಾಟಲಿ ಹಂಚಿಕೊಳ್ಳುವುದು ಭಾರತದಲ್ಲಿ ಸಾಮಾನ್ಯವಾಗಿದೆ, ಆದರೆ ಇದು ಅಮೆರಿಕನ್ನರಿಗೆ ಆಗಿಬರುವುದಿಲ್ಲ.
ಮಕ್ಕಳನ್ನ ಅವರದೇ ಹಾಸಿಗೆಯಲ್ಲಿ ಮಲಗಿಸುವುದು: ಭಾರತದಲ್ಲಿ ಮಕ್ಕಳು ತಮ್ಮ ಹೆತ್ತವರು ಮಲಗಿರುವ ಹಾಸಿಗೆಯಲ್ಲಿ ಮಲಗುವುದು ಸಾಮಾನ್ಯ, ಆದರೆ ಅಮೆರಿಕನ್ನರಿಗೆ ಇದು ತುಂಬಾ ಕಿರಿಕಿರಿ. ಅವರು ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸ್ತಾರೆ. ಇಡೀ ಕುಟುಂಬ ಒಂದೇ ಹಾಸಿಗೆಯ ಮೇಲೆ ಒಟ್ಟಿಗೆ ಮಲಗುವುದನ್ನು ಅವರು ಊಹಿಸಿಕೊಳ್ಳಲು ಆಗುವುದಿಲ್ಲ.
ಸಾಮಾಜಿಕ ಜಾಲತಾಣ ಲೈಕ್ಸ್
ಮಿಸ್ ಫಿಶರ್ ಅವರ ಈ ವೀಡಿಯೊ 80 ಸಾವಿರ ವೀಕ್ಷಣೆಗಳು ಮತ್ತು 20 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಈ ವೀಡಿಯೊದಲ್ಲಿ, ಕೆಲವರು ಭಾರತೀಯ ಸಂಪ್ರದಾಯಗಳನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಈ ಅಂತರರಾಷ್ಟ್ರೀಯ ಆಚರಣೆಗಳಲ್ಲಿನ ವ್ಯತ್ಯಾಸಗಳನ್ನ ಗೇಲಿ ಮಾಡಿದ್ದಾರೆ.
