ಮಹಿಳಾ ದಿನಾಚರಣೆ, ಹಂಪಿ ಉತ್ಸವ ಆಚರಿಸುತ್ತಿರುವ ಹೊತ್ತಲ್ಲಿ ಕರ್ನಾಟಕದ ಐತಿಹಾಸಿಕ ಸ್ಥಳ ಹಂಪಿಯಲ್ಲಿ ನಾಗರೀಕರ ಸಮಾಜ ತಲೆತಗ್ಗಿಸುವಂಥ ದೃಷ್ಕೃತ್ಯ ನಡೆದುಹೋಗಿದೆ.

ಕರ್ನಾಟಕ, ಗಂಗಾವತಿ (ಮಾ.8): ಮಹಿಳಾ ದಿನಾಚರಣೆ, ಹಂಪಿ ಉತ್ಸವ ಆಚರಿಸುತ್ತಿರುವ ಹೊತ್ತಲ್ಲಿ ಕರ್ನಾಟಕದ ಐತಿಹಾಸಿಕ ಸ್ಥಳ ಹಂಪಿಯಲ್ಲಿ ನಾಗರೀಕರ ಸಮಾಜ ತಲೆತಗ್ಗಿಸುವಂಥ ದೃಷ್ಕೃತ್ಯ ನಡೆದುಹೋಗಿದೆ.

 ಹಂಪಿ ಪ್ರವಾಸಕ್ಕೆ ಬಂದಿರುವ ಇಸ್ರೇಲ್ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಘಟನೆ ಗಂಗಾವತಿ ತಾಲೂಕಿನ ಪ್ರಸಿದ್ಧ ಸಣಾಪುರ ಸರೋವರದ ಬಳಿ ಗುರುವಾರ ರಾತ್ರಿ ಈ ದೃಷ್ಕೃತ್ಯ ನಡೆದಿದೆ. ಘಟನೆಯಿಂದಾಗಿ ದೇಶ ವಿದೇಶದಿಂದ ಕರ್ನಾಟಕ ಹಂಪಿ ಪ್ರವಾಸಕ್ಕೆ ಬರುವ ಪ್ರವಾಸಿಗರು ಮಾತ್ರವಲ್ಲದೇ ಸ್ಥಳೀಯರನ್ನು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: Pocso case: ಉತ್ತರ ಕನ್ನಡ: ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ ವಿದ್ಯಾರ್ಥಿನಿ, ಆರೋಪಿ ಬಂಧನ

ಘಟನೆ ಹಿನ್ನೆಲೆ

ಗುರುವಾರ ರಾತ್ರಿ ಸುಮಾರು 11 ರಿಂದ 11:30 ರ ನಡುವೆ, ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಇಸ್ರೇಲ್‌, ಅಮೆರಿಕ, ಒಡಿಶಾ, ಮಹಾರಾಷ್ಟ್ರ ಮತ್ತು ಸ್ಥಳೀಯ ಹೋಂ ಸ್ಟೇನ ಒಡತಿಯೊಬ್ಬರು ಗಿಟಾರ್‌ ಬಾರಿಸುತ್ತ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಕೆಲವು ಜನರು ಸ್ಥಳಕ್ಕೆ ನುಗ್ಗಿ ಬಂದಿದ್ದಾರೆ. ಮೊದಲಿಗೆ ಪೆಟ್ರೋಲ್ ಪಂಪ್‌ಗೆ ಹೋಗುವ ದಾರಿ ಕೇಳಿ ನಂತರ ಪ್ರವಾಸಿಗರ ಬಳಿ ಹಣಕ್ಕಾಗಿ ಬೇಡಿಕೆ ಇಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಪ್ರವಾಸಿಗರು ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ದುಷ್ಕರ್ಮಿಗಳು ಕೋಪದಲ್ಲಿ ಕ್ರೌರ್ಯ ಮೆರೆದಿದ್ದಾರೆ. ಆರೋಪಿಗಳು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾತನಾಡುತ್ತಾ ಪ್ರವಾಸಿಗರ ಮೇಲೆ ದೌರ್ಜನ್ಯ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಮೂವರು ಪುರುಷರನ್ನ ಕಾಲುವೆ ತಳ್ಳಿ ಮಹಿಳಾ ಪ್ರವಾಸಿಗರ ಮೇಲೆ ಅತ್ಯಾಚಾರ:

ಸಾಮೂಹಿಕ ಅತ್ಯಾಚಾರ ನಡೆಸುವ ಮುನ್ನ ಆರೋಪಿಗಳು ಮೂವರನ್ನು ಕಾಲುವೆಗೆ ತಳ್ಳಿದ್ದರು. ಅವರಲ್ಲಿ ಇಬ್ಬರು ಹೇಗೋ ತಮ್ಮ ಪ್ರಾಣವನ್ನು ಉಳಿಸಿಕೊಂಡು ಕಾಲುವೆಯಿಂದ ಈಜಿಕೊಂಡು ಹೊರಬಂದರು. ಆದರೆ ಬಿಬಾಷ್ ಎಂಬುವ ಪ್ರವಾಸಿಗ ಕಾಲುವೆಯಿಂದ ಹೊರಬರಲಾಗದೆ ಸ್ಥಳದಲ್ಲೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ಊಟದ ನಂತರ ತುಂಗಾಭದ್ರಾ ಎಡದಂಡೆಯ ಉದ್ದಕ್ಕೂ ನಕ್ಷತ್ರಗಳನ್ನು ವೀಕ್ಷಿಸಲು ತನ್ನ ನಾಲ್ವರು ಅತಿಥಿಗಳೊಂದಿಗೆ ಹೋಗಿದ್ದೆ ಹೋಗಿದ್ದೆ. ಈ ವೇಳೆ ಕೆಲವು ದುಷ್ಕರ್ಮಿಗಳು ಅಲ್ಲಿಗೆ ಬಂದು ಸಾಮೂಹಿಕ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಘಟನೆ ಬಗ್ಗೆ ಪೊಲೀಸರಿಗೆ ಹೋಂ ಸ್ಟೇ ನಿರ್ವಾಹಕಿ ಮಾಹಿತಿ ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ..