ಲಾವಣಿ ಅನ್ನೋದು ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿರುವ ಜಾನಪದ ಹಾಡು-ನೃತ್ಯ ಪ್ರದರ್ಶನ. ಆದ್ರೆ ಲಾವಣಿ ಹೆಸರಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯೋಜಿಸಲಾಗ್ತಾ ಇರುವ ಡ್ಯಾನ್ಸ್‌ಗಳ ಸುತ್ತ ಈಗ ಕಾಂಟ್ರವರ್ಸಿ ಎದ್ದಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರಂತೂ ತಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಇದನ್ನು ಬ್ಯಾನ್ ಮಾಡಿದ್ದಾರೆ. ಯಾಕೆ ಈ ಇರಿಸುಮುರಿಸು?
ಲಾವಣಿ ಅನ್ನೋದು ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿರುವ ಜಾನಪದ ಹಾಡು-ನೃತ್ಯ ಪ್ರದರ್ಶನ. ಆದ್ರೆ ಲಾವಣಿ ಹೆಸರಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯೋಜಿಸಲಾಗ್ತಾ ಇರುವ ಡ್ಯಾನ್ಸ್ ಸುತ್ತ ಈಗ ಕಾಂಟ್ರವರ್ಸಿ ಎದ್ದಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರಂತೂ ತಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಇದನ್ನು ಬ್ಯಾನ್ ಮಾಡಿದ್ದಾರೆ. ಯಾಕೆ ಈ ಇರಿಸು ಮುರಿಸು?
ಇದಕ್ಕೆ ಕಾರಣವಿದೆ. ಲಾವಣಿ ಅನ್ನುವುದು ಒಂದು ಜಾನಪದ ಹಾಡು ಮತ್ತು ನೃತ್ಯ ಪ್ರಕಾರ. ಇತ್ತೀಚೆಗೆ ಗೌತಮಿ ಪಾಟೀಲ್ ಎಂಬ ಡ್ಯಾನ್ಸರ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಪಾಪ್ಯುಲರ್. ಈಕೆಯ ಡ್ಯಾನ್ಸ್ ನೋಡಲು ಯುವಜನತೆ ಕಿಕ್ಕಿರಿದು ಸೇರುತ್ತಾರೆ. ಇವಳ ಡ್ಯಾನ್ಸ್ ನೋಡಿ ಡ್ರಗ್ಸ್ ತೆಗೆದುಕೊಂಡವರಂತೆ ಅಮಲೇರಿ ಕುಣಿಯುತ್ತಾರೆ. ಈಕೆಗೆ 26 ವರ್ಷದ ಹರೆಯ.
ಸಮಸ್ಯೆ ಆದದ್ದು ಏನೆಂದರೆ ಈಕೆ ನೃತ್ಯದಲ್ಲಿ ಸಿಕ್ಕಾಪಟ್ಟೆ ಅಶ್ಲೀಲ ಕಂಟೆಂಟ್ ಇರುವುದರಲ್ಲಿ. ಕಳೆದ ವಾರ ಎನ್‌ಸಿಪಿಯ ಸಾಂಸ್ಕೃತಿಕ ಘಟಕದ (NCP Cultural Wing) ಸಭೆಯಲ್ಲಿ ಖ್ಯಾತ ಲಾವಣಿ ನೃತ್ಯಗಾರ್ತಿ ಮೇಘಾ ಘಾಡ್ಗೆ ಎಂಬಾಕೆ ಇದರ ಬಗ್ಗೆ ಸಿಡಿದುಬಿದ್ದಳು. ಆಕೆಯ ದೂರನ್ನು ಪವಾರ್ ಗಂಭೀರವಾಗಿ ಪರಿಗಣಿಸಿದರು. ಡಿಜೆಗಳನ್ನು ಬಳಸಿ ಮತ್ತು ಸಾರ್ವಜನಿಕರ ಮುಂದೆ ಹುಡುಗಿಯರು ಘಾಘ್ರ ಚೋಲಿ ಧರಿಸಿ ನೃತ್ಯ ಮಾಡುವ ಮೂಲಕ ಲಾವಣಿ ಸಂಸ್ಕೃತಿಯನ್ನು ಸಂಪೂರ್ಣ ಅವನತಿ ಮಾಡ್ತಿದ್ದಾರೆ ಎಂಬುದು ಘಾಡ್ಗೆ ಆರೋಪ.
Koppal news: ದೌರ್ಜನ್ಯ ಖಂಡಿಸಿ ದಯಾಮರಣಕ್ಕೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಮಹಿಳೆ
ಲಾವಣಿ ಎಂಬ ಪದ ʻಲಾವಣ್ಯ' ಅಥವಾ ಸೌಂದರ್ಯದಿಂದ ಬಂದಿದೆ. ಲಾವಣಿ ಅನ್ನೋದು ಒಂದು ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರ. ಇದರಲ್ಲಿ ಒಂಬತ್ತು ಗಜದ ಉದ್ದದ ಸೀರೆಗಳನ್ನು ಧರಿಸಿರುವ ನೃತ್ಯಗಾರ್ತಿಯರು ಪ್ರೇಕ್ಷಕರ ಮುಂದೆ ವೇದಿಕೆಯ ಮೇಲೆ ಢೋಲಕ್ ಬೀಟ್‌ಗಳನ್ನು ಪ್ರದರ್ಶಿಸುತ್ತಾರೆ. ಲಾವಣಿ ಸ್ಥಳೀಯ ಕಲಾ ಪ್ರಕಾರವಾಗಿ ಹಲವಾರು ಶತಮಾನಗಳ ಇತಿಹಾಸ ಹೊಂದಿದೆ. ಇದು 18ನೇ ಶತಮಾನದಲ್ಲಿ ಪೇಶ್ವೆ ಯುಗದಲ್ಲಿ ಜನಪ್ರಿಯತೆ ಗಳಿಸಿತು. ಸಾಂಪ್ರದಾಯಿಕವಾಗಿ ರಾಜರ ಮುಂದೆ ಪ್ರದರ್ಶನ ನಡೆಯುತ್ತಿತ್ತು. ಯುದ್ಧಗಳ ಕಾಲದಲ್ಲಿ ವಿಶ್ರಾಂತಿ ಪಡೆಯುವ ದಣಿದ ಸೈನಿಕರ ಮನರಂಜನೆಗಾಗಿ ಇದನ್ನು ತೋರಿಸಲಾಗ್ತಿತ್ತು.
ಲಾವಣಿಯಲ್ಲಿ ಹಲವಾರು ಉಪಪ್ರಕಾರಗಳಿವೆ. ಇವುಗಳಲ್ಲಿ ಕಾಮಪ್ರಚೋದಕ ಪ್ರಕಾರವೇ ಹೆಚ್ಚು ಜನಪ್ರಿಯ. ಇದರ ಹಾಡುಗಳ ಸಾಹಿತ್ಯ ಹೆಚ್ಚಾಗಿ ಅಶ್ಲೀಲವಾಗಿರುತ್ತೆ. ಕಾಮುಖ ಭಂಗಿಯಲ್ಲಿ ಮೈಕೈ ಕುಣಿಸಲಾಗುತ್ತದೆ. ಕಾಮಪ್ರಚೋದಕ ಅರ್ಥ ಹೊಮ್ಮಿಸುವ ಸೂಕ್ಷ್ಮವಾದ ಸನ್ನೆಗಳಿರುತ್ತವೆ.
ಇತ್ತೀಚೆಗೆ ಲಾವಣಿ ಯುವಜನರಲ್ಲಿ ಹೆಚ್ಚು ಜನಪ್ರಿಯವಾಗ್ತಿದೆ. ಅದರ ಮೇಲೆ ಸಾಂಪ್ರದಾಯಿಕವಾಗಿ ಕೆಲವು ನಿಷೇಧಗಳಿವೆ. ಸಾಮಾನ್ಯವಾಗಿ ಇದರ ಪ್ರೇಕ್ಷಕರೆಲ್ಲಾ ಪುರುಷರು. ಮಹಿಳೆಯರು ಹೋಗುವುದೇ ಇಲ್ಲ. ಆದರೆ ನೃತ್ಯಗಾರರೆಲ್ಲಾ ಸ್ತ್ರೀಯರೇ. ಮಹಾರಾಷ್ಟ್ರದ ಹೊರಗೆ- ಭಾರತದಾದ್ಯಂತ ಮತ್ತು ದೇಶದ ಹೊರಗೂ ಲಾವಣಿ ಜನಪ್ರಿಯವಾದದ್ದು ಸಿನಿಮಾಗಳಲ್ಲಿ ಬಳಕೆಯಾಗತೊಡಗಿದ ಮೇಲೆ. ಕಳೆದ ಕೆಲವು ವರ್ಷಗಳಿಂದ ಸೋಶಿಯಲ್ ಮೀಡಿಗಾಳಲ್ಲಿ ವೈರಲ್ ಆಗುತ್ತಿರುವ ಲಾವಣಿ ಕ್ಲಿಪ್‌ಗಳು ಬಹಳ ಜನಪ್ರಿಯವಾಗಿವೆ.
1948ರಲ್ಲಿ ಆಗಿನ ಬಾಂಬೆ ಮುಖ್ಯಮಂತ್ರಿ ಬಾಳಾಸಾಹೇಬ್ ಖೇರ್ ಅವರು ಲಾವಣಿ ಪ್ರದರ್ಶನಗಳನ್ನು ಅಶ್ಲೀಲತೆಯ ಆಧಾರದಲ್ಲಿ ನಿಷೇಧಿಸಿದರು. ಆದರೆ ಹಳ್ಳಿಗಾಡುಗಳಲ್ಲಿ ಇದು ಮುಂದುವರಿಯಿತು. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಲೈವ್ ಪ್ರದರ್ಶನಗಳು ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ಪಡೆಯುತ್ತಲೇ ಇರುತ್ತವೆ. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಲಾವಣಿ ನೃತ್ಯಗಾರರನ್ನು ಆಹ್ವಾನಿಸುತ್ತಾರೆ. ಮಹಿಳಾ ನರ್ತಕರು ಹಿಂದಿ ಮತ್ತು ಮರಾಠಿ ಚಲನಚಿತ್ರ ಗೀತೆಗಳ ಪ್ರದರ್ಶನ ನೀಡುವುದರಿಂದ ಹೆಚ್ಚಾಗಿ ಯುವಕರು ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ.
Gautam Adani: ಗೌತಮ್ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್ ಮಾಡ್ತಿದ್ರು?
ಈಗ ಕಿರಿಕಿರಿಗೆ ಕಾರಣವಾಗಿರುವ ಗೌತಮಿ ಪಾಟೀಲ್ ಯಾರು?
ನವೆಂಬರ್ 2022ರಲ್ಲಿ ಈ ವಿವಾದ ಪ್ರಾರಂಭವಾಯಿತು. ಲೈವ್ ಪ್ರದರ್ಶನದ ವೇಳೆ ಡ್ಯಾನ್ಸರ್ ಗೌತಮಿ ಲೈಂಗಿಕ (Sex) ಸೂಚನೆಯಿರುವ ಭಂಗಿಯನ್ನು ತೋರಿಸಿದಳು. ಈ ವೀಡಿಯೊ ವೈರಲ್ (Viral) ಆಯಿತು. ಇದು ಆಕೆಯನ್ನು ರಾತ್ರೋರಾತ್ರಿ ಸ್ಟಾರ್ ಮಾಡಿಬಿಟ್ಟಿತು. ರಾಜ್ಯಾದ್ಯಂತ ಪ್ರದರ್ಶನಗಳಿಗೆ ಈಕೆಯನ್ನು ಆಹ್ವಾನಿಸಲಾಯಿತು. ಈಕೆಯ ಕಾರ್ಯಕ್ರಮಗಳು ಭಾರೀ ಹಿಟ್ ಆದವು. ಅಭಿಮಾನಿಗಳು ಹುಟ್ಟಿಕೊಂಡರು.
ಪಾಟೀಲ್ ಉತ್ತರ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸಿಂಧಖೇಡಾದವಳು. ಕುಟುಂಬದೊಂದಿಗೆ ಪುಣೆಗೆ ಬಂದ ಈಕೆ ತರಬೇತಿ ಅಕಾಡೆಮಿಯಲ್ಲಿ ನೃತ್ಯ ಕಲಿತಳು. ತನ್ನ ತಾಯಿಗೆ ಸಹಾಯವಾಗಿ ಲಾವಣಿ ಕಾರ್ಯಕ್ರಮಗಳಲ್ಲಿ ಬ್ಯಾಕ್ ಡ್ಯಾನ್ಸರ್ (Dancer) ಆಗಿ ನೃತ್ಯ ಪ್ರದರ್ಶನ ನೀಡಲು ಆರಂಭಿಸಿ ಕ್ರಮೇಣ ತಮ್ಮದೇ ಅಭಿಮಾನಿಗಳನ್ನು ಗಳಿಸಿದಳು.
ವಿವಾದಕ್ಕೆ ತುತ್ತಾದ ಬಳಿಕ ಈಕೆ ತನ್ನ ಟೈಮಿಂಗ್‌ಗಾಗಿ ಕ್ಷಮೆ ಯಾಚಿಸಿದ್ದಳು. 'ನಾನು ತಪ್ಪು ಮಾಡಿದೆ. ಕ್ಷಮೆ ಯಾಚಿಸಿದ್ದೇನೆ ಮತ್ತು ನಾನು ಬದಲಾಗಿದ್ದೇನೆ. ಮತ್ತೆಂದೂ ಹಾಗೆ ಮಾಡಿಲ್ಲ' ಎಂದು ಆಕೆ ಹೇಳಿದ್ದಾಳೆ.
