Asianet Suvarna News Asianet Suvarna News

ಗಂಡ ಹೆಂಡತಿ ನಡುವೆ ಅಪ್ಪ- ಅಮ್ಮ ಬಂದಾಗ...?

ದಾಂಪತ್ಯದಲ್ಲಿ ತಂದೆತಾಯಿಯಷ್ಟೇ ಅಲ್ಲ, ಯಾರ ಹಸ್ತಕ್ಷೇಪವೂ ಒಳ್ಳೆಯದು ಮಾಡುವುದಕ್ಕಿಂತಾ ಕೆಟ್ಟದ್ದನ್ನು ಮಾಡುವುದೇ ಜಾಸ್ತಿ. ಆರೋಗ್ಯಕರ ದಾಂಪತ್ಯ ಜೀವನ ಬೇಕೆಂದರೆ ನಿಮ್ಮಿಬ್ಬರ ಸಮಸ್ಯೆಗಳನ್ನು ನೀವಿಬ್ಬರೇ ಪ್ರಯತ್ನ ಹಾಕಿ ಬಗೆಹರಿಸಿಕೊಳ್ಳಬೇಕು.

How to  stop parents  meddling in your relationship
Author
Bangalore, First Published Jul 18, 2019, 2:31 PM IST

ತಂದೆತಾಯಿ ಯಾವತ್ತೂ ನಿಮಗೆ ಒಳ್ಳೆಯದನ್ನೇ ಬಯಸುತ್ತಾರೆ. ಆದರೆ, ಕೆಲವೊಮ್ಮೆ ಅವರ ಒಳ್ಳೆಯ ಉದ್ದೇಶದ ಕೆಲಸಗಳಿಂದಲೇ ಕೆಡುಕಾಗುವ ಸಾಧ್ಯತೆಗಳಿವೆ. ಅದರಲ್ಲೂ ನಿಮ್ಮ ದಾಂಪತ್ಯದ ವಿಷಯದಲ್ಲಿ ಅವರ ಹಸ್ತಕ್ಷೇಪ ಬಿರುಕು ಮೂಡಿಸಬಹುದು ಅಥವಾ ಗಾಯ ಗುಣಪಡಿಸಲು ಬಂದವರೇ ಅಚಾತುರ್ಯದಿಂದ ಅದಕ್ಕೆ ಉಪ್ಪು ಸುರಿದಂತಾಗಬಹುದು. ಅವರು ನಿಮ್ಮ ಪೋಷಕರೇ ಹೌದಾದರೂ ನಿಮ್ಮ ಖಾಸಗಿ ಜೀವನದ ಗಡಿ ದಾಟಿ ಬರುವುದು ಉಚಿತವಲ್ಲ. ನಿಮ್ಮ ರೊಮ್ಯಾಂಟಿಕ್ ರಿಲೇಶನ್‌ಶಿಪ್‌ನಲ್ಲೂ ನುಗ್ಗಿ ಬರಲು ಪ್ರಯತ್ನಿಸುತ್ತಿದ್ದಾರಾದರೆ, ನಿಮ್ಮ ದಾಂಪತ್ಯದಲ್ಲಿ ಸಧ್ಯವೇ ಬಿರುಗಾಳಿಯೊಂದು ಬೀಸಬಹುದು. ಹಾಗಿದ್ದರೆ, ತಂದೆತಾಯಿಗೆ ನೋವಾಗದ ಹಾಗೆ ಅವರನ್ನು ನಿಮ್ಮ ಸಂಸಾರದೊಳಗೆ ಅತಿಯಾಗಿ ಮೂಗು ತೂರಿಸದಂತೆ ನೋಡಿಕೊಳ್ಳುವುದು ಹೇಗೆ?

ಪತ್ನಿಯನ್ನು ಸುಸ್ತು ಬೀಳಿಸೋದ್ರಲ್ಲಿ ಮಕ್ಕಳಷ್ಟೇ ನಿಸ್ಸೀಮ ಈ ಗಂಡ ಎಂಬ ಪ್ರಾಣಿ; ಅಧ್ಯಯನ 

ಹಂಚಿಕೊಳ್ಳುವ ಮುನ್ನ ಯೋಚಿಸಿ

ಮದುವೆಗೂ ಮುನ್ನ ನಿಮ್ಮ ಜೀವನದ ಎಲ್ಲ ವಿಷಯಗಳನ್ನೂ ಪೋಷಕರೊಂದಿಗೆ ಹೇಳಿಕೊಳ್ಳುತ್ತಿದ್ದಿರಿ ಸರಿ, ಆದರೆ, ನಂತರದಲ್ಲಿ ನಿಮ್ಮ ಜೀವನದ ಪ್ರತಿ ಕ್ಷಣಗಳನ್ನೂ, ಪ್ರತಿ ಆಗುಹೋಗುಗಳನ್ನೂ ವಿವರವಾಗಿ ವರದಿಯೊಪ್ಪಿಸಬೇಕಾಗಿಲ್ಲ. ಅತಿಯಾಗಿ ವಿವರಗಳನ್ನು ಹಂಚಿಕೊಂಡಷ್ಟೂ ಅವರು ನಿಮ್ಮ ದಾಂಪತ್ಯದೊಳಗೆ ನುಗ್ಗಲು ಹೆಚ್ಚಿನ ಸ್ವಾತಂತ್ರ್ಯ ನೀಡಿದಂತಾಗುತ್ತದೆ. ಜೊತೆಗೆ, ನಿಮ್ಮೊಂದಿಗೆ ಅವರೂ ಚಿಂತೆ ಮಾಡಿ, ನೀವು ಪತಿಯೊಂದಿಗೆ ಜಗಳವಾಡಿದರೆ ಪಂಚಾಯಿತಿ ಮಾಡಲು ಅವರು ಬರುತ್ತಾರೆ. ಇದರಿಂದ ನಿಮ್ಮ ಪತಿಯನ್ನು ಬೆದರಿಸಿದಂತಾಗುತ್ತದೆ. ಅವರು ನಿಧಾನವಾಗಿ ನಿಮ್ಮಿಂದ ದೂರ ಹೋಗಬಹುದು, ಕನಿಷ್ಠಪಕ್ಷ ಮಾನಸಿಕವಾಗಿಯಾದರೂ ದೂರ ಹೋದಾರು. ಸಾಮಾನ್ಯ ಜಗಳ, ಲೈಂಗಿಕ ಜೀವನ ಇತ್ಯಾದಿ ವಿಷಯಗಳನ್ನು ಆದಷ್ಟು ಖಾಸಗಿಯಾಗಿಯೇ ಇಟ್ಟುಕೊಳ್ಳಿ.

ಸಮಯ ನಿರ್ವಹಣೆ

ಮದುವೆಯಾದ ತಕ್ಷಣ ಮಗ ಬದಲಾದ. ನಮ್ಮೊಂದಿಗೆ ಇರುವುದೇ ಇಲ್ಲ, ಸದಾ ಕಾಲ ಹೆಂಡತಿಯ ಸೆರಗು ಹಿಡಿದುಕೊಂಡು ತಿರುಗುತ್ತಾನೆಂದು ಪತಿಯ ಪೋಷಕರಿಗೆ ಅನಿಸಬಹುದು. ಇದರಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಮಗನನ್ನು ತಮ್ಮೆಡೆ ಎಳೆದುಕೊಳ್ಳಲು, ಗಮನ ಸೆಳೆಯಲು ಸಾಕಷ್ಟು ತಂತ್ರಗಳನ್ನು ಹೂಡಬಹುದು. ಈ ಪೊಸೆಸಿವ್‌ನೆಸ್ ನಿಮ್ಮ ಬದುಕಿಗೆ ಮುಳ್ಳಾಗಬಹುದು. ಹಂಗಿಸಿ ಮಾತನಾಡುವುದು, ಸೊಸೆಯ ಬಗ್ಗೆ ಇಲ್ಲಸಲ್ಲದ್ದನ್ನು ದೂರುವುದು, ಅತ್ತು ಕರೆದು ರಂಪ ಮಾಡುವುದು ಎಲ್ಲವೂ ಶುರುವಾಗಬಹುದು. ಇದರಿಂದ ನಿಮ್ಮ ಪತ್ನಿಗೂ ಕೆಡುಕೆನಿಸಿ ಆಕೆಯೂ ಅತ್ತೆ ಮಾವನ ವಿರುದ್ಧ ಸಮರ ಸಾರಿದರಂತೂ ನೀವು ಅತ್ತ ದರಿ, ಇತ್ತ ಪುಲಿ ಎಂದು ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುತ್ತೀರಿ. ಹೀಗಾಗಿ, ಇಬ್ಬರಿಗೂ ಪರಿಣಾಮಕಾರಿಯಾಗಿ ಸಮಯ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪೋಷಕರೊಂದಿಗೆ ಕ್ವಾಲಿಟಿ ಟೈಮ್ ಕಳೆಯಬೇಕು. ಹಾಗಂತ ಡಿನ್ನರ್ ಡೇಟ್ ಅಥವಾ ಪತ್ನಿಯೊಂದಿಗೆ ಸಿನಿಮಾಕ್ಕೆ ಹೋಗುವುದನ್ನು ಮಿಸ್ ಮಾಡಬಾರದು. ಎಮರ್ಜೆನ್ಸಿ ಎಂದಾಗ ಖಂಡಿತಾ ಪೋಷಕರಿಗೆ ಹೆಚ್ಚು ಸಮಯ ನೀಡಬೇಕು. ಇಬ್ಬರಿಗೂ ನಿಮ್ಮ ಕಂಪನಿ ಸಿಗುವಂತೆ ನೋಡಿಕೊಳ್ಳಿ. 

ಮಳೆಯಲೀ, ಜೊತೆಯಲೀ... ರೊಮ್ಯಾನ್ಸ್‌ಗೆ ಎಳೆವ ಮಳೆ

ಶಾಂತಿಧೂತರಾಗಿ

ನಿಮ್ಮ ಪೋಷಕರು ಹಾಗೂ ನಿಮ್ಮ ಸಂಗಾತಿ ನಡುವೆ ಎಲ್ಲವೂ ಸರಿ ಬರುತ್ತಿಲ್ಲ ಎಂದುಕೊಳ್ಳಿ. ತಕ್ಷಣ ಎಲ್ಲವನ್ನೂ ಸರಿ ಮಾಡಿಕೊಳ್ಳಲು ಅವರನ್ನು ಒತ್ತಾಯಿಸಬೇಡಿ. ತಾಳ್ಮೆ ತೆಗೆದುಕೊಳ್ಳಿ. ಪೋಷಕರಿಗೆ ನಿಮ್ಮ ಬದುಕಿನಲ್ಲಿ ಸಂಗಾತಿಯೂ ನಿಮ್ಮ ಕುಟುಂಬವೇ ಆಗಿದ್ದು, ಪ್ರಮುಖ ಸ್ಥಾನದಲ್ಲಿರುವುದನ್ನು ಸ್ಪಷ್ಟವಾಗಿ ಹೇಳಿ. ಸಂಗಾತಿಗೂ ಪೋಷಕರು ಏನೇ ಮಾಡಿದರೂ ನಿಮ್ಮ ಒಳ್ಳೆಯದಕ್ಕಾಗಿಯೇ ಎಂದುಕೊಂಡು ಮಾಡುತ್ತಾರೆ, ಅದರಲ್ಲಿ ಎಡವಟ್ಟಾದರೆ ದೊಡ್ಡದು ಮಾಡಬಾರದೆಂದು ಹೇಳಿ. ಪೋಷಕರ ಮಾತಿನಿಂದ ನಿಮ್ಮ ಪತಿ/ಪತ್ನಿಗೆ ಬೇಜಾರಾದರೆ, ಅದನ್ನು ಮಾತಿನಲ್ಲೇ ಬಗೆಹರಿಸುವಂತೆ ನೋಡಿಕೊಳ್ಳಿ. ಮಾತಿನಿಂದ ಸಾಧ್ಯವಾಗದ್ದು ಯಾವುದೂ ಇಲ್ಲ. 

ಕೇಳಿ, ಕಡೆಗಣಿಸಿ, ಮರೆತುಬಿಡಿ

ದೇವರು ನಿಮಗೆ ಎರಡು ಕಿವಿ ಕೊಟ್ಟಿರುವುದಕ್ಕೆ ಒಂದು ಉದ್ದೇಶವಿದೆ. ಹೇಗೇ ಪ್ಲ್ಯಾನ್ ಮಾಡಿದರೂ ಹಿರಿಯರು ನಿಮ್ಮ ದಾಂಪತ್ಯದಲ್ಲಿ ಮೂಗು ತೂರಿಸುತ್ತಿದ್ದಾರೆಂದರೆ, ಅವರು ಹೇಳುವುದನ್ನೆಲ್ಲವನ್ನೂ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಹೊರ ಬಿಡುವ ಅಭ್ಯಾಸ ಮಾಡಿಕೊಳ್ಳಿ. ನೋವಾಗಿದ್ದರೆ ಏನೋ ಹಿರಿಯರು ಎಂದು ಕ್ಷಮಿಸಿಬಿಡಿ. ಹಿರಿಯರಿಗೆ ಕೂಗಾಡಲೂ ಬೇಡಿ. ನಿಮ್ಮ ನಿಲುವುಗಳನ್ನು ಕರಗಿಸಿಕೊಳ್ಳಲೂಬೇಡಿ. ಹೀಗೆ ಅವರು ಹೇಳುವುದನ್ನು ಕೇಳುತ್ತೀರಿ ಆದರೆ, ಪಾಲಿಸುವುದಿಲ್ಲ ಎಂಬುದು ನಿಧಾನವಾಗಿ ಅವರಿಗೆ ಅರಿವಾಗುತ್ತಲೇ ಅವರೇ ಮಧ್ಯಸ್ಥಿಕೆ ವಹಿಸುವುದರಿಂದ ದೂರ ನಿಲ್ಲುತ್ತಾರೆ. 
 

Follow Us:
Download App:
  • android
  • ios