ಮನೆಗೊಂದು ಬೊಚ್ಚು ಬಾಯಿಯ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿರುವ ಯಾರಿಗಾದ್ರೂ ಅಬಾರ್ಶನ್ ಅನ್ನೋದು ದುಃಸ್ವಪ್ನ. ಈ ಕಾಲದಲ್ಲಂತೂ ಜೀವನಶೖಲಿಯೇ ಬದಲಾಗಿ ಗರ್ಭ ನಿಲ್ಲೋದೇ ಸವಾಲಾಗ್ತಿದೆ. ಸಾಮಾನ್ಯರಿಂತ ತುಸು ಹೆಚ್ಚೇ ಸ್ಟ್ರೆಸ್‌ನಲ್ಲಿರುವ ಸೆಲೆಬ್ರಿಟಿಗಳು ಅಬಾರ್ಶನ್‌ನಂಥಾ ಆಘಾತಗಳನ್ನು ಹೇಗೆ ಫೇಸ್ ಮಾಡಿದ್ರು, ಆ ಟೈಮ್‌ನಲ್ಲಿ ಅವರು ಉಂಡ ನೋವು ಹೇಗಿತ್ತು ಅನ್ನೋ ಡೀಟೈಲ್ ಇಲ್ಲಿದೆ.  

ಕಾಜೋಲ್
ಕಾಜೋಲ್ ಆ್ಯಕ್ಟಿಂಗ್ ನೋಡಿದ ಮಕ್ಕಳಲ್ಲಿ  ಅಮ್ಮ ಅಂದ್ರೆ ಕಾಜೋಲ್ ಥರ ಇರಬೇಕು ಅನ್ನೋ ಫೀಲ್ ಇದ್ದೇ ಇರುತ್ತೆ. ಒಂಚೂರು ಮುದ್ದು, ಸ್ವಲ್ಪ ಹೆಚ್ಚೇ ತುಂಟತನ ಇರುವ ಅಪರೂಪದ ಹೆಣ್ಮಗಳು ಕಾಜೋಲ್. 20 ವರ್ಷಗಳ ಹಿಂದೆ ತಾರಾ ಬದುಕಿನ ತುತ್ತ ತುದಿಯಲ್ಲಿದ್ದಾಗಲೇ ಅಜಯ್ ದೇವಗನ್ ಅನ್ನೋ ಕೃಷ್ಣ ಸುಂದರನ ತೆಕ್ಕೆಗೆ ಬಿದ್ದವರು. ಈಗ ನಲವತ್ತೈದರ ಹರೆಯದ ಈ ನಟಿ ನ್ಯಾಸ, ಯುಗ್ ಎಂಬ ಮಕ್ಕಳ ಮುದ್ದಿನ ಅಮ್ಮ.  ಸದಾ ನಗೆಯರಳಿಸುವ ಈ ನಟಿಯೂ ಒಮ್ಮೆ ಯಲ್ಲ ಎರಡು ಬಾರಿ ಅಬಾರ್ಶನ್ ಆಘಾತಕ್ಕೆ ಗುರಿಯಾದ್ದರು. 

ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಗಿಸೋ ಗರ್ಭಪಾತ

‘ಅದು ಕಭೀ ಖುಷಿ ಕಭೀ ಗಮ್’ ಸಿನಿಮಾ ಬಂದ ಸಮಯ. ಆ ಸಮಯದಲ್ಲಿ ನಾವಿಬ್ಬರೂ ಮಕ್ಕಳಿಗಾಗಿ ಹಂಬಲಿಸುತ್ತಿದ್ದೆವು. ಆದರೆ ನನಗೆ ಮಿಸ್ ಕ್ಯಾರೇಜ್ ಆಗಿತ್ತು. ಆಸ್ಪತ್ರೆಯಿಂದ ಬಂದ ನನಗೆ ಸಿನಿಮಾ ಸಕ್ಸಸ್ ಆದ ಸುದ್ದಿಯೂ ಖುಷಿ ಕೊಡಲಿಲ್ಲ. ಅದಾದ ಮೇಲೆ ಇನ್ನೊಮ್ಮೆ ಅಬಾರ್ಶನ್ ಆಯ್ತು. ಬಹಳ ಕಷ್ಟದ ದಿನಗಳವು. ಆಮೇಲೆ ನ್ಯಾಸ ಹುಟ್ಟಿದಳು. ಇದಾಗಿ ಆರು ವರ್ಷಕ್ಕೆ ಯುಗ್ ಹುಟ್ಟಿದ. ನಮ್ಮ ಬದುಕು ಸಂಪೂರ್ಣ ಆಯ್ತು.’ ಅಂತಾರೆ ಕಾಜೋಲ್. 

ಗೌರಿ 
ಶಾರುಕ್‌ಖಾನ್ ಬಾಲಿವುಡ್‌ಗೆ ಕಾಲಿಡೋದಕ್ಕಿಂತಲೂ ಮೊದಲೇ ಸಿಕ್ಕವರು ಗೌರಿ. ಅವರಿಬ್ಬರು ಮೊದಲು ಮೀಟ್ ಆಗಿದ್ದು 1984ರಲ್ಲಿ. ಆಗ ಗೌರಿಗೆ ಹದಿನಾಲ್ಕು ವರ್ಷ. ಸಾಂಪ್ರದಾಯಿಕ ಪಂಜಾಬಿ ಫ್ಯಾಮಿಲಿ ಹುಡುಗಿ ಬಾಲಿವುಡ್ ಮೆಚ್ಚುವ ಮೊದಲೇ ಶಾರುಕ್‌ಗೆ ಮನಸೋತಿದ್ದಳು. ಇದಾಗಿ ಏಳು ವರ್ಷದ ಬಳಿಕ ಈ ಜೋಡಿ ವಿವಾಹದ ಮೂಲಕ ಒಂದಾದ್ರು. ಮದುವೆಯಾಗಿ ಮಕ್ಕಳಿಗಾಗಿ ಹಂಬಲಿಸಿದಾಗ ಗೌರಿ ಗರ್ಭ ಧರಿಸೋದೇ ಕಷ್ಟವಾಯ್ತು. ಅನೇಕ ಸಲ ಮಿಸ್ ಕ್ಯಾರೇಜ್ ಆಯ್ತು. ಈ ದಂಪತಿಗಳಿಗೆ ಒಂದು ಕನಸಿತ್ತು. ತಮಗೊಬ್ಬ ಮುದ್ದಾದ ಮಗಳು ಬೇಕು, ಮೊದಲ ಮಗು ಹೆಣ್ಣೇ ಆಗಬೇಕು ಅಂತ. ಆದ್ರೆ ದೈವೇಚ್ಛೆ, ಮೊದಲು ಹುಟ್ಟಿದ್ದು ಆರ್ಯನ್. ಈತನಿಗೀಗ 22 ವರ್ಷ. ಹುಟ್ಟಿದ ಕೆಲವು ತಿಂಗಳು ಈತನನ್ನು ಉಳಿಸಿಕೊಳ್ಳಲು ಗೌರಿ ಶಾರುಖ್ ಬಹಳ ಒದ್ದಾಡಿದರು. ಇದಾಗಿ ನಾಲ್ಕು ವರ್ಷಕ್ಕೆ ಇವರ ಬಯಕೆಯಂತೇ ಸುಹಾನ ಎಂಬ ಹೆಣ್ಣು ಮಗು ಮಡಿಲು ತುಂಬಿತು. ಇತ್ತೀಚೆಗೆ ಬಾಡಿಗೆ ಗರ್ಭದ ಮೂಲಕ ಅಬ್ ರಾಮ್ ಜೊತೆಯಾಗಿದ್ದಾನೆ. ಮಗುವಿಗಾಗಿ ಆಸೆ ಪಡುವತ್ತಿದ್ದೆವು . ಪದೇ ಪದೇ ಮಿಸ್ ಕ್ಯಾರೇಜ್ ಆದಾಗ ನಿರಾಸೆ, ನೋವು. ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಸಂಕಟವಾಗುತ್ತದೆ.’ ಅಂತ ಶಾರೂಕ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. 

ಹತ್ತಾರು ಗರ್ಭಪಾತ, ನೂರೆಂಟ್ ಇಂಜೆಕ್ಷನ್, ಅಂತೂ ಅಮ್ಮನಾದಳು

ಕಿರಣ್
ಬಾಲಿವುಡ್‌ನ ಪರ್ಫೆಕ್ಟ್ ಮ್ಯಾನ್ ಅಂತಲೇ ಫೇಮಸ್ ಅಮೀರ್‌ಖಾನ್. 2005ರಲ್ಲಿ ಈಕೆ ಅಮೀರ್ ಖಾನ್ ಸಂಗಾತಿಯಾಗಿ ಬಂದರು. ಇದಕ್ಕೂ ಮೊದಲು ರೀನಾ ದತ್ತ ಜೊತೆಗೆ ವಿವಾಹವಾಗಿ ಬೇರ್ಪಟ್ಟಿದ್ದರು ಅಮೀರ್. ಕಿರಣ್ ಬದುಕಿನಲ್ಲಿ ಬರುವ ಮೊದಲೇ ಅಮೀರ್‌ಗೆ ಇಬ್ಬರು ಮಕ್ಕಳಿದ್ದರು. ಕಿರಣ್ ಅಮೀರ್ ದಂಪತಿಗೆ ಮಗುವಿನ ವಿಷಯದಲ್ಲಿ ಆರಂಭದಲ್ಲೇ ನಿರಾಸೆಯಾಯ್ತು. ಕಿರಣ್‌ಗೆ ನಾರ್ಮಲ್ ರೀತಿ ಗರ್ಭ ಧರಿಸುವುದು ಕಷ್ಟ ಎಂದು ಗೊತ್ತಾದಾಗ ಆಕೆ ಐವಿಎ-್ ಮೊರೆ ಹೋದರು. ಒಂದು ಹಂತದವರೆಗೆ ಚೆನ್ನಾಗಿಯೇ ಇದ್ದ ಮಗು, ಆಕಸ್ಮಿಕವಾಗಿ ಹೊಟ್ಟೆಯಲ್ಲೇ ಸಾವನ್ನಪ್ಪಿತು. ಈ ಆಘಾತ ನೋವಿನಿಂದ  ಚೇತರಿಸಿಕೊಳ್ಳಲು ಕಿರಣ್‌ಗೆ ಸ್ವಲ್ಪ ಕಾಲ ಬೇಕಾಯ್ತು. ಆ ಬಳಿಕ ಬಾಡಿಗೆ ಗರ್ಭದ ಮೂಲಕ ಈ ದಂಪತಿ ಮಗು ಪಡೆಯಬೇಕಾಯ್ತು. ಇವರ ಮಗ ಆಜಾದ್ ರಾವ್ ಖಾನ್‌ಗೆ ಈಗ 8 ವರ್ಷ.