ಹತ್ತಾರು ಗರ್ಭಪಾತ, ನೂರಾರು ಇಂಜೆಕ್ಷನ್ : ಕೊನೆಗೂ ಆಕೆ ಅಮ್ಮನಾದಳು
ಅಹಮದಬಾದಲ್ಲಿ ಮಹಿಳೆಯೋರ್ವರು ಅನೇಕ ಐವಿಎಫ್ ಚಿಕಿತ್ಸೆ ಹಾಗೂ 10 ಗರ್ಭಪಾತದ ಬಳಿಕ ಕೊನೆಗೂ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.
ಅಹಮದಾಬಾದ್ : ಮಹಿಳೆಯೋರ್ವರು ಹಲವು ಪ್ರಯತ್ನಗಳ ಮೂಲಕ ಕೊನೆಗೂ ತಾಯಿಯಾಗಿದ್ದಾರೆ. ಜಮ್ನಾಗರ್ ಪ್ರದೇಶದ ಶೀತಲ್ ಠಾಕೂರ್ ಎನ್ನುವ 36 ವರ್ಷದ ಈ ಮಹಿಳೆ ಒಟ್ಟು 22 ಬಾರಿ ಐವಿಎಫ್ ಚಿಕಿತ್ಸೆಗೆ ಒಳಪಟ್ಟಿದ್ದರು.
ಅಲ್ಲದೇ 10 ಬಾರಿ ಗರ್ಭಪಾತವಾಗಿತ್ತು. ಆದರೆ ಕೊನೆಯ ಪ್ರಯತ್ನದಲ್ಲಿ ಆಕೆ ತಾಯಿಯಾಗಿದ್ದಾರೆ. ಒಟ್ಟು 6 ವರ್ಷಗಳ ಕಾಲ ಸಾವಿರಾರು ನೋವಿನ ಇಂಜೆಕ್ಷನ್ ಗಳನ್ನು ಪಡೆದುಕೊಂಡು ಇದೀಗ ಹೆಣ್ಣು ಮಗುವಿನ ಅಮ್ಮನಾಗಿ ಖುಷಿ ಪಡುತ್ತಿದ್ದಾರೆ.
ತಜ್ಞರು ಹೇಳೊ ಪ್ರಕಾರ ಇಂದಿನ ಫಾಸ್ಟ್ ಜಗತ್ತಿನಲ್ಲಿ ದಂಪತಿ ಹೆಚ್ಚು ಒತ್ತಡದಿಂದ ಕಳೆಯುತ್ತಾರೆ. ಮಗು ಪಡೆಯೋದು ಕಷ್ಟ ಆಗುತ್ತದೆ. ಇನ್ನು ಮಗು ಪಡೆಯಲು 3 ರಿಂದ 4 ಬಾರಿ ಐವಿಎಫ್ ಚಿಕಿತ್ಸೆ ಮೊರೆ ಹೋಗಿ ಫಲಕಾರಿಯಾಗದಿದ್ದಲ್ಲಿ ಕೈ ಬಿಡುತ್ತಾರೆ. ಆದರೆ ತಾವು ತಾಯಿ ಯಾಗಲೇಬೇಕು ಎನ್ನುವ ಪಣತೊಟ್ಟು ಇದೀಗ ಹೆಣ್ಣು ಮಗುವಿನ ಅಮ್ಮನಾಗಿದ್ದಾಗಿ ಭಾವನಾತ್ಮಕವಾಗಿ ಹೇಳುತ್ತಾರೆ.
ಗರ್ಭಪಾತ ಹಾಗೂ ಇಂಜೆಕ್ಷನ್ ಅತ್ಯಂತ ನೋವು ನೀಡುತ್ತಿದ್ದವು. ಆದರೆ ಭರವಸೆ ಕಳೆದುಕೊಳ್ಳದೇ ಸತತ ಪ್ರಯತ್ನದ ಫಲವಾಗಿ ಇದೀಗ ತಮಗೆ ಮಗಳು ಜನಿಸಿದ್ದಾಳೆ. ತಮ್ಮ ಮಗಳಿಗೆ ಪಂಕ್ತಿ ಎಂದು ಹೆಸರನ್ನು ಇರಿಸಿದ್ದಾಗಿಯೂ ಕೂಡ ಈ ವೇಳೆ ಠಾಕೂರ್ ಹೇಳಿದ್ದಾರೆ. ಅಲ್ಲದೇ ತಮ್ಮ ಪತಿಯೂ ಕೂಡ ಇಂತಹ ಸಂದರ್ಭದಲ್ಲಿ ತಮ್ಮ ನೆರವಿಗೆ ನಿಂತಿದ್ದರು.