ಬೇಡದ ಗರ್ಭ ಧರಿಸಿದರೆ ಟೆನ್ಷನ್ ಆಗಿ ಬಿಡುತ್ತದೆ. ಅದರಲ್ಲಿಯೂ ಇನ್ನೂ ದಾಂಪತ್ಯಕ್ಕೆ ಕಾಲಿಡದ ಹದಿಹರೆಯದ ಯುವತಿಯರು ತಪ್ಪು ಹೆಜ್ಜೆ ಇಟ್ಟು, ಗರ್ಭ ಧರಿಸೋದು ಈಗೀಗ ಕಾಮನ್ ಆಗ್ತಾ ಇದೆ.  ಮೆಡಿಕಲ್ ಸ್ಟೋರ್ಸ್‌ನಲ್ಲಿ ಸುಲಭವಾಗಿ ಗರ್ಭಪಾತಕ್ಕೆ ಮಾತ್ರೆಗಳು ಸಿಗುತ್ತಿದ್ದು, ಸುಲಭವಾಗಿ ನುಂಗುತ್ತಾರೆ. ಆದರೆ, ಒಮ್ಮೆ ಅಬಾರ್ಷನ್ ಮಾಡಿಸಿಕೊಳ್ಳುವುದರಿಂದ ಹೆಣ್ಣು ಜೀವನ ಪರ್ಯಂತ ಅನುಭವಿಸುವುದು ಅನಿವಾರ್ಯ.   ಮಾನಸಿಕವಾಗಿ ಹೆಣ್ಣನ್ನು ಜರ್ಜರಿತವಾಗಿಸುವ ಈ ಪ್ರಕ್ರಿಯೆ ದೈಹಿಕ ಆರೋಗ್ಯದ ಮೇಲೂ ಬೀರೋ ಪರಿಣಾಮ ಒಂದೆರಡಲ್ಲ. ಮುಂದೆ ಗರ್ಭ ಧರಿಸುವ ಸಾಧ್ಯತೆಯನ್ನೇ ಇದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. 

ಅಧಿಕ ರಕ್ತಸ್ತ್ರಾವ 

ಔಷಧ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಗರ್ಭ ತೆಗೆಸಿದರೆ ಅತಿಯಾದ ಬ್ಲೀಡಿ೦ಗ್ ಆಗಿಯೇ ಆಗುತ್ತದೆ. ಕೆಲವು ಬಾರಿ ಬೆಡ್‌ನಿ೦ದ ಏಳಲಾರದಷ್ಟು ನೋವು ನೀಡಲಿದ್ದು, ನಿಶ್ಯಕ್ತಿ ಕಾಡೋದು ಕಾಮನ್.

ಗರ್ಭಿಣಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದಾ?

ಡಿಪ್ರೆಷನ್ 

ಮಗುವನ್ನು ತೆಗೆಸಬೇಕೆ೦ದು ನಿರ್ಧಾರ ಮಾಡಿದ್ದೀರಿ. ಆದರೆ ಈ ನಿರ್ಧಾರವನ್ನು ನಿಮ್ಮ ಮನಸ್ಸು ಒಪ್ಪಿದರೂ ದೇಹ ಒಪ್ಪುವುದಿಲ್ಲ. ಬೇಡದ ಗರ್ಭವನ್ನು ತೆಗೆಸಿದ್ದಕ್ಕೆ ನಿಮ್ಮ ದೇಹ ಅದಕ್ಕೆ ಹೊ೦ದಿಕೊ೦ಡು ಹೋಗಬೇಕು.ಇಲ್ಲವಾದರೆ ಹಾರ್ಮೋನು ಬದಲಾವಣೆಯಾಗಿ ಖಿನ್ನತೆ ಕಾಡುತ್ತದೆ. 

ಇನ್‌ಫೆಕ್ಷನ್‌  

ಬೇಡದ ಗರ್ಭವನ್ನು ತೆಗೆಸುವಾಗ ಬಳಸುವ ಕೆಲವು ವೈದ್ಯಕೀಯ ಉಪಕರಣಗಳು ಗರ್ಭಕೋಶವ್ನೇ ಡ್ಯಾಮೇಜ್ ಮಾಡಬಹುದು. ಕೆಲವೊಮ್ಮೆ ಇನ್ಫೆಕ್ಷನ್ ಉ೦ಟಾಗಿ ಅಸಹಜ ಯೋನಿ ವಿಸರ್ಜನೆಯಂಥ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ. 

ತಾಯ್ತನ ಫೀಲ್ ಮಾಡಿಕೊಳ್ಳಬೇಕಾ? 2ನೇ ಮಗುವಿನ ಬಗ್ಗೆ ಯೋಚಿಸಿ...!

ಸ್ತನದ ಸಮಸ್ಯೆ

ಗರ್ಭಿಣಿಯಾದಾಗ ಇಡೀ ದೇಹ ಹಾಗೂ ಮನಸ್ಸು ಹೊಸ ನೈಸರ್ಗಿಕ ಪ್ರಕ್ರಿಯೆಗೆ ಹೊಂದಿಕೊಳ್ಳಲು ಆರಂಭಿಸುತ್ತದೆ. ಅಗತ್ಯ ಹಾರ್ಮೋನ್‌ಗಳು ಬಿಡುಗಡೆಯಾಗಿ, ಸ್ತನಗಳು ಹಾಲು ಉತ್ಪಾದಿಸಲೂ ಆರಂಭಿಸುತ್ತದೆ. ಆದರೆ, ಗರ್ಭವನ್ನು ತೆಗೆಸುವುದರಿಂದ ಆ ಶಕ್ತಿಯೇ ಕುಂಠಿತವಾಗಬಹುದು. 

ಗರ್ಭ ಧರಿಸಿದರೆ ತೆಗೆಯಿಸಿಕೊಳ್ಳುವ ಯೋಚನೆ ಬಿಟ್ಟು, ಬೇಡದ ಗರ್ಭ ಧರಿಸದಂತೆ ಮುಂಜಾಗ್ರತಾ ಕ್ರಮ ವಹಿಸಿದರೆ ಹೆಣ್ಣಿನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.