ಜೋಡಿಯ ನಡುವೆ ಜಗಳಗಳೆದ್ದಾಗ ಅವರು ಪ್ರೀತಿಯ ಕೊರತೆ, ಸಮಯ ನೀಡಲಾಗದ್ದು, ನಂಬಿಕೆದ್ರೋಹ ಅಥವಾ ಸೆಕ್ಸ್ ಕೊರತೆ ಮುಂತಾದ ಕಾರಣಗಳನ್ನು ನೀಡಬಹುದು. ಇದಕ್ಕಾಗಿ ತಜ್ಞರು ದಾಂಪತ್ಯದಲ್ಲಿ ಸೆಕ್ಸ್ ಎಂಬುದು ದೂರವಾದಾಗ ಸಂಬಂಧ ಹದಗೆಡುತ್ತದೆ. ದೈಹಿಕ ಸುಖ ಮರಳಿದರೆ, ದಾಂಪತ್ಯ ಸುಖವೂ ಮರಳುತ್ತದೆ ಎಂದು ಬಹಳ ಕಾಲದಿಂದ ನಂಬಿಕೊಂಡು ಬಂದಿದ್ದರು.

ಹಳೆ ಲವರ್ ನೆನಪುಗಳಿಂದ ಹೊರಬರೋಕೆ ಇಲ್ಲಿದೆ ಸುಲಭ ಟ್ರಿಕ್ಸ್!

ಅದನ್ನೇ ಜೋಡಿಗಳಿಗೆ ಹೇಳುತ್ತಿದ್ದರು ಕೂಡಾ. ಆದರೆ, ಹೊಸ ಸಂಶೋಧನೆಯು ಈ ವಿಷಯ ಸತ್ಯಕ್ಕೆ ದೂರವಾದುದು ಎಂದಿದೆ. ಅದರ ಪ್ರಕಾರ, ಜೋಡಿಯು ಎಷ್ಟು ಬಾರಿ ಲಾಂಗಿಕ ಸಂಪರ್ಕ ನಡೆಸುತ್ತಾರೆ ಎಂಬುದಕ್ಕಿಂತ ಎಷ್ಟು ಬಾರಿ ಮುದ್ದಾಡಿಕೊಳ್ಳುತ್ತಾರೆ ಎಂಬುದು ಇಬ್ಬರ ನಡುವಿನ ಸಂಬಂಧ ಆರೋಗ್ಯಯುತವಾಗಿಯೂ, ಸಂತೋಷಕರವಾಗಿದೆಯೂ ಎಂಬುದನ್ನು ತಿಳಿಸುತ್ತದೆ. ಅಂದರೆ, ನೀವು ಜಾಸ್ತಿ ಮುದ್ದು ಮಾಡಿಕೊಂಡಷ್ಟೂ ನಿಮ್ಮ ಸಂಬಂಧ ಗಟ್ಟಿಯಾಗುತ್ತಾ ಸಾಗುತ್ತದೆ. ಇದಕ್ಕೆ ಕಾರಣಗಳೇನು ನೋಡೋಣ.
ತಜ್ಞರೇನು ನಂಬಿದ್ದಾರೆ?

ಲೈಂಗಿಕ ಸಂಬಂಧದ ಯೋಚನೆ ಇಲ್ಲದೆ ಮುದ್ದಾಡುವುದರಿಂದ ಜೋಡಿಯು ಭಾವನಾತ್ಮಕ ಭದ್ರತೆಯನ್ನು ಅನುಭವಿಸುತ್ತದೆ. ಇಂಥ ನಾನ್ ಸೆಕ್ಷುಯಲ್ ಇಂಟಿಮೆಸಿಯ ಮತ್ತೊಂದು ಲಾಭವೆಂದರೆ, ಮುದ್ದು ಮಾಡಿಕೊಳ್ಳುವುದರಿಂದ ಜೋಡಿಯು ತಮಮ್ಮ ಭಾವನೆಗಳನ್ನು ಒಬ್ಬರಿಗೊಬ್ಬರು ಚೆನ್ನಾಗಿ ವ್ಯಕ್ತಪಡಿಸಿಕೊಳ್ಳಬಲ್ಲರು. ಭಾವನಾತ್ಮಕ ಸಾಂಗತ್ಯ ಹಾಗೂ ಭದ್ರತೆ ಇಲ್ಲದ ಯಾವ ಸಂಬಂಧ ಕೂಡಾ ಯಶಸ್ವಿಯಾಗಲು ಸಾಧ್ಯವಿಲ್ಲ.

ನಿಮ್ಮ ಗರ್ಲ್‌ಫ್ರೆಂಡ್ ನಿಮ್ಮಿಂದ ಬಯಸುವುದೇನು ಗೊತ್ತಾ ?

ಲೈಂಗಿಕ ಸಂಬಂಧ ಕೂಡಾ ದೈಹಿಕ ಅಗತ್ಯಗಳನ್ನು ಪೂರೈಸುತ್ತದೆ ಹಾಗೂ ಇದು ಭಾವನಾತ್ಮಕ ಸಾಂಗತ್ಯದಷ್ಟೇ ಅಗತ್ಯ ಕೂಡಾ. ಆದರೆ, ಅದು ಹೆಚ್ಚಾಗಿ ದೈಹಿಕ ಸುಖದ ನಿರೀಕ್ಷೆಯಲ್ಲೇ ಮುಳುಗಿರುತ್ತದೆ. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಭಾವನಾತ್ಮಕ ಸಂಬಂಧ ಹದಗೆಟ್ಟಿದ್ದು ಬಹುತೇಕರಿಗೆ ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ ಎನ್ನುತ್ತಾರೆ ಸೀನಿಯರ್ ಸೈಕಾಲಜಿಸ್ಟ್‌ಗಳು. 
ಮಧ್ಯವಯಸ್ಕ ಪುರುಷರಿಗೆ ಈ ಅಗತ್ಯ ಹೆಚ್ಚು

ಕಿನ್ಸಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ನಡೆಸಿದ ಸಂಶೋಧನೆ ಪ್ರಕಾರ, ವಿವಾಹಿತ ಮಧ್ಯವಯಸ್ಕ ಜೋಡಿಗಳಲ್ಲಿ ಈ ಭಾವನಾತ್ಮಕ ಸಾಂಗತ್ಯ, ಮುದ್ದು ಮಾಡಿಸಿಕೊಳ್ಳುವ ಬಯಕೆ ಹೆಚ್ಚು. ಅದರಲ್ಲೂ ಮಹಿಳೆಯರಿಗಿಂತ ಪುರುಷರು ಪ್ರತಿದಿನ ಪತ್ನಿ ನೀಡುವ ಮುತ್ತುಗಳು, ಅಪ್ಪುಗೆಯಿಂದ ಹೆಚ್ಚು ತೃಪ್ತರಾಗಿರುತ್ತಾರೆ ಎಂದು ತಿಳಿದುಬಂದಿದೆ. 

ಫೀಲ್ ಗುಡ್ ಹಾರ್ಮೋನ್ ಬಿಡುಗಡೆ

ಜೋಡಿಯು ಭಾವನಾತ್ಮಕ ಭದ್ರತೆ ಅನುಭವಿಸುವ ಜೊತೆಗೆ ಮುದ್ದಿನಿಂದ ಮತ್ತಷ್ಟು ಪ್ರಯೋಜನಗಳಿವೆ. ಸಂಗಾತಿಯನ್ನು ಅಪ್ಪುವಾಗ ಅಥವಾ ಪ್ರೀತಿಯಿಂದ ಮುತ್ತನ್ನಿತ್ತಾಗ, ಆಕೆಯ ದೇಹದ ಬೆಚ್ಚನೆ ಅನುಭವ, ಆಕೆಯ ದೇಹಗಂಧ ಎಲ್ಲವೂ ಅರಿವಿಗೆ ನಿಲುಕುತ್ತವೆ. ಈ ವಾಸನೆ ಗ್ರಹಿಕೆ ಹಾಗೂ ಸ್ಪರ್ಶಜ್ಞಾನದಿಂದ ಫೀಲ್ ಗುಡ್ ಹಾರ್ಮೋನ್ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದರಿಂದ ಇಬ್ಬರೂ ಸಂತೋಷ ಅನುಭವಿಸುತ್ತಾರೆ. ಇನ್ನೇನು ತಾನೇ ಬೇಕು?

ಮಹಿಳೆಯರಿಗೆ ಬೀಳೋ ಸೆಕ್ಸೀ ಕನಸಿಗೆ ಇದ್ಯಾ ಅರ್ಥ?

ಮುದ್ದು ಮಾಡಲು ಪ್ಲ್ಯಾನ್ ಮಾಡುವ ಅಗತ್ಯವಿಲ್ಲ

ಲೈಂಗಿಕ ಸಂಪರ್ಕಕ್ಕೆ ಒಂದಿಷ್ಟು ಪ್ಲ್ಯಾನ್ ಮಾಡಬೇಕಾಗುತ್ತದೆ. ಆದರೆ, ಮುದ್ದು ಮಾಡಲು ಯಾವ ಪ್ಲ್ಯಾನಿನ ಅಗತ್ಯವೂ ಇಲ್ಲ. ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಮುದ್ದಾಡಬಹುದು. ಮಕ್ಕಳಾದ ಮೇಲೆ ಜೋಡಿಗೆ ಲೈಂಗಿಕ ಸಂಪರ್ಕಕ್ಕೆ ಸಮಯವೂ ಸಿಗದೆ ಹೋಗಬಹುದು. ಆದರೆ, ಮುದ್ದಾಡಲು ಸಮಯದ ಕೊರತೆ ಖಂಡಿತಾ ಆಗುವುದಿಲ್ಲ. 

ಮುದ್ದಾಡೋ ತಂತ್ರ

ಇಷ್ಟಕ್ಕೂ ಮುದ್ದೆಂದರೆ ಒಂದು ಕಿಸ್, ಹಗ್, ತಲೆ ನೇವರಿಸುವುದು, ಕೆನ್ನೆ ತಟ್ಟುವುದು, ಕೈ ಹಿಡಿದು ನಡೆಯುವುದು, ಫ್ಲೈಯಿಂಗ್ ಕಿಸ್ ಕೊಡುವುದು- ಹೇಗೆ ಬೇಕಾದರೂ ಭಾವನೆಗೆ ತಕ್ಕಂತೆ ಪ್ರತಿಕ್ರಿಯಿಸಬಹುದು. ಆದರೆ, ಮಲಗಿ ಮುದ್ದಾಡುತ್ತೀರಾದರೆ ನಿಮ್ಮ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗೆ ಸ್ವಲ್ಪ ವಿರಾಮ ನೀಡಿ. ಆದಷ್ಟು ಈ ಜಗತ್ತನ್ನು ಮರೆತು ಇಬ್ಬರದೇ ಒಂದು ಜಗತ್ತೆಂಬಂತೆ ಭಾವಿಸಿಕೊಳ್ಳಲು ಯತ್ನಿಸಿ. ಅಸಂಬದ್ದ ಪ್ರೀತಿಯ ಭಾಷೆಗಳಲ್ಲಿ ಮಾತನಾಡಿಕೊಳ್ಳುವುದು ಕೂಡಾ ಚೆನ್ನಾಗೆನಿಸುತ್ತದೆ. ಮುದ್ದಾಡುವಾಗ ಕೆಲಸದ ವಿಷಯ ಸೇರಿದಂತೆ ಯಾವುದೇ ಗಂಭೀರ ಚರ್ಚೆಗಳಿಗೆ ಆಸ್ಪದ ಕೊಡಬೇಡಿ. 

ಫಸ್ಟ್ ಡೇಟ್ ನಲ್ಲೇ ಹೆಸರಿಡಿದು ಕರೆದ್ರೆ ಎರಡನೇ ಬಾರಿ ಡೇಟಿಂಗ್ ಮಿಸ್ಸಾಗೋದೇ ಇಲ್ಲ!

ಮತ್ತಷ್ಟು ಆರೋಗ್ಯ ಭಾಗ್ಯಗಳು

ಇನ್ನೂ ಕೂಡಾ ನೀವು ಮುದ್ದೇ ಸಂಬಂಧಕ್ಕೆ ಮದ್ದು ಎಂದು ಒಪ್ಪಿಕೊಳ್ಳಲಾರಿರಾದರೆ, ಇದರ ಆರೋಗ್ಯ ಲಾಭಗಳನ್ನಂತೂ ನೀವು ಅಲ್ಲಗೆಳೆಯಲಾರಿರಿ. ಮಾನಸಿಕ ನೆಮ್ಮದಿ ಹೇಗೂ ದೊರೆಯುತ್ತದೆ. ಅದಲ್ಲದೆ, ಮುದ್ದಿನಿಂದ ಸ್ಟ್ರೆಸ್ ಆರ್ಮೋನ್ ಕಾರ್ಟಿಸೋಲ್ ಉತ್ಪತ್ತಿ ಕಡಿಮೆಯಾಗುತ್ತದೆ. ಅಂದರೆ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಮುಂಚೆಯೇ ಹೇಳಿದಂತೆ ಆಕ್ಸಿಟೋಸಿನ್ ಬಿಡುಗಡೆಯಾಗಿ ಸಂತೋಷ ನೀಡುವುದರಿಂದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ.