ಮಹಿಳೆಯರಿಗೆ ಬೀಳೋ ಸೆಕ್ಸೀ ಕನಸಿಗೆ ಇದ್ಯಾ ಅರ್ಥ?

ಸಾಮಾನ್ಯವಾಗಿ 'ಆ ರೀತಿಯ' ಕನಸು ಬಿದ್ದು ನಿದ್ದೆಯಲ್ಲಿ ಒದ್ದೆ ಆಗುವುದು ಪುರುಷರಿಗೆ  ಮಾತ್ರ ಎಂಬುದು ಹಲವರ ನಂಬಿಕೆ. ಆದರೆ, ವಿಷಯವೆಂದರೆ ಮಹಿಳೆಯರಿಗೂ ಬೀಳುತ್ತೆ ವೆಟ್ ಡ್ರೀಮ್ಸ್! 

Do women have wet dreams

ಆಳವಾದ ನಿದ್ದೆಯಿಂದ ಸಡನ್ ಆಗಿ ಎಚ್ಚರಾಗಿ ನೋಡುವಾಗ ಅಲ್ಲಿ, ಕೆಳಗೆ ಒದ್ದೆ ಒದ್ದೆ. ಅರೆ! ಏನಿದು, ಎಂಥ ಕನಸದು? ನಾನಿಂಥ ಕಲ್ಪನೆ ಕೂಡಾ ಮಾಡಿರಲಿಲ್ಲವಲ್ಲ, ಮತ್ತೇಕೆ ಆ ಕನಸು ಬಿತ್ತು? ಇದೇಕೆ ಹೀಗಾಯ್ತು ಎಂದು ಬಹುತೇಕರು ಆಶ್ಚರ್ಯಗೊಳ್ಳುವುದುಂಟು.

ಗಂಡ ಹೆಂಡತಿ ಹತ್ತಿರಾಗಿಸೋ ಮ್ಯಾಜಿಕ್‌!

ಇನ್ನು ಕೆಲವರಿಗೆ ಕನಸು ಏನೆಂದರೂ ನೆನಪಾಗುವುದಿಲ್ಲ. ಆದರೆ, ಇದೇಕೆ ಹೀಗಾಯ್ತು ಎಂಬ ಗೊಂದಲ ಕಾಡುವುದೂ ಉಂಟು. ಇಲ್ಲಿ ಕೇವಲ ಪುರುಷರ ವಿಷಯ ಮಾತಾಡ್ತಿಲ್ಲ ಸ್ವಾಮಿ, ಮಹಿಳೆಯರಿಗೂ ಅಪರೂಪಕ್ಕೆ ಹೀಗಾಗುತ್ತೆ. ಹೌದು, ಬಹುತೇಕರು ವೆಟ್ ಡ್ರೀಮ್ಸ್ ಎಂಬುದು ಕೇವಲ ಗಂಡುಪ್ರಾಣಿಗಳಿಗಷ್ಟೇ ಸಂಬಂಧಿಸಿದ ವಿಷಯ ಎಂದುಕೊಳ್ತಾರೆ, ಏಕೆಂದರೆ ಮಹಿಳೆಯರಿಗೂ ಹಾಗಾಗುವ ಬಗ್ಗೆ ಯಾರೂ ಬಾಯಿ ಬಿಚ್ಚುವುದಿಲ್ಲವಲ್ಲ...

ಮದುವೆಯಾದ ಕೂಡಲೇ ನೀವು ಎದುರಿಸುವ ಸಮಸ್ಯೆಗಳಿವು!

ಎಚ್ಚರವಿರುವಾಗ ಉದ್ರೇಕಗೊಳ್ಳಲು ಸ್ವಲ್ಪ ಪ್ರಯತ್ನ ಹಾಕಬೇಕು, ಆದರೆ, ನಿದ್ರೆಯಲ್ಲಿ ತಾನಾಗಿಯೇ ಆಗುತ್ತದೆ ಎಂಬುದು ಸ್ವಲ್ಪ ಆಶ್ಚರ್ಯ ಎನಿಸಬಹುದು. ಆದರೆ, ನಮ್ಮ ದೇಹವು ಎಚ್ಚರ ಹಾಗೂ ನಿದ್ರಾ ಸ್ಥಿತಿಯನ್ನು ಗುರುತಿಸುವುದಿಲ್ಲ. ಬದಲಿಗೆ ಮೆದುಳು ಹೇಳಿದಂತೆ ಅದು ಪ್ರತಿಕ್ರಿಯಿಸುತ್ತದೆ. ಕೆಲವೊಮ್ಮೆ ಕನಸಿನಲ್ಲಿ ಭಯಗೊಂಡಾಗ, ಓಡುವಾಗ ಎಚ್ಚರಾದರೆ ನಮ್ಮ ಹೃದಯ ನಿಜಕ್ಕೂ ಜೋರಾಗಿ ಬಡಿದುಕೊಳ್ಳುತ್ತಿರುವುದಿಲ್ಲವೇ? ಹಾಗೆಯೇ ಸೆಕ್ಸೀ ಕನಸುಗಳು ಬಿದ್ದಾಗ ಉದ್ರೇಕಗೊಳ್ಳುವುದು ಕೂಡಾ ಸಹಜ.

ಪುರುಷರಲ್ಲಿ ಸಾಮಾನ್ಯವಾಗಿ ಟೀನೇಜ್‌ನಲ್ಲಿ ಈ ಅನುಭವ ಜಾಸ್ತಿಯಾದರೆ, ಮಹಿಳೆಯರು ಸ್ವಲ್ಪ ವಯಸ್ಸಾದಂತೆಲ್ಲ ಇದು ಅನುಭವಕ್ಕೆ ಬರಬಹುದು. ಸಾಮಾನ್ಯವಾಗಿ ಎರಡು ಪೀರಿಯಡ್ಸ್‌ಗಳ ನಡುವಣ ಹಾರ್ಮೋನ್‌ಗಳು ಲಿಬಿಡೋ ಹೆಚ್ಚಿಸಿದ ಸಮಯದಲ್ಲಿ ಹೀಗಾಗಬಹುದು. 

ಏನಿದು ವೆಟ್ ಡ್ರೀಮ್ಸ್?

ರಾತ್ರಿಯ ನಿದ್ರೆಯಲ್ಲಿ ಸೆಕ್ಷುಯಲ್ ಡಿಸ್ಚಾರ್ಜ್ ಆಗುವುದನ್ನೇ ವೆಟ್ ಡ್ರೀಮ್ಸ್ ಎನ್ನುವುದು. ಪುರುಷರಿಗೆ ಇದು ಸರಿಯಾಗಿ ಅನುಭವಕ್ಕೆ ಬರುತ್ತದೆ. ಆದರೆ, ಮಹಿಳೆಯರಿಗೆ ಎಚ್ಚರವಾದಾಗ ಅವರಿಗೆ ನಿದ್ರೆಯಲ್ಲಿ ಇಂಥದೊಂದು ಅನುಭವ ಆಗಿದ್ದು ನಿಜವೋ ಸುಳ್ಳೋ ಎಂಬ ಗೊಂದಲ ಕಾಡುತ್ತದೆ. ಆದರೆ, ಹೀಗನಿಸುವುದು ಸಂಪೂರ್ಣ ನಾರ್ಮಲ್. ಸಾಮಾನ್ಯವಾಗಿ ಇದು ನಿದ್ರೆಯ ಆರ್‌ಇಎಂ ಹಂತ, ಅಂದರೆ ಆಳವಾದ ನಿದ್ದೆಯ ಸಂದರ್ಭದಲ್ಲಿ ಆಗುತ್ತದೆ. ರಕ್ತವು ಪೆಲ್ವಿಕ್ ಭಾಗಕ್ಕೆ ರಭಸವಾಗಿ ಹರಿಯುತ್ತಲೇ, ಹಸ್ತಮೈಥುನ ಮಾಡಿಕೊಂಡಂತೆ ಅಥವಾ ನೀಲಿಚಿತ್ರ ನೋಡಿದಂತೆಯೇ ಕೆಳಗೆ ಒದ್ದೆ ಆಗುತ್ತದೆ. ನಂತರ ಎಚ್ಚರಾಗುತ್ತದೆ. 

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಮಹಿಳೆಯರ ವೆಟ್ ಡ್ರೀಮ್ಸ್ ಅಧ್ಯಯನ ಕಷ್ಟ

ಪುರುಷರಂತೆ ಮಹಿಳೆಯರಲ್ಲಿ ಉದ್ರೇಕಗೊಂಡಿದ್ದಕ್ಕೆ ಯಾವ ಸಾಕ್ಷಿಯೂ ಸಿಗುವುದಿಲ್ಲ. ಏಕೆಂದರೆ ಅವರ  ಈ ಲೈಂಗಿಕ ಕ್ರಿಯೆ ನಡೆಸುವ ಅಂಗಗಳು ದೇಹದ ಒಳಗಿರುತ್ತವೆ. ಇದರಿಂದ ಮಹಿಳೆಯರ ವೆಟ್ ಡ್ರೀಮ್ಸ್ ಅಧ್ಯಯನ ಮಾಡುವುದು ಕಷ್ಟ ಎನ್ನುತ್ತವೆ ಸಂಶೋಧನೆಗಳು. ಆದರೂ, ಸೆಕ್ಸ್ ರಿಸರ್ಚ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಶೇ.85ರಷ್ಟು ಮಹಿಳೆಯರು ತಮ್ಮ ಯೌವನಾವಧಿ ಮುಗಿವ ಒಳಗೆ ಒಮ್ಮೆಯಾದರೂ ಈ ಅನುಭವ ಪಡೆದಿರುತ್ತಾರೆ. ವೆಟ್ ಡ್ರೀಮ್ ಎಂಬುದು ಯಾವಾಗಲೂ ಸೆಕ್ಸ್ ಡ್ರೀಮ್ ಆಗಿರಬೇಕಿಲ್ಲ. ಆದರೆ, ಬಹುತೇಕ ಸಮಯ ಅವು ಲೈಂಗಿಕ ವಿಷಯಗಳಿಗೆ ಹತ್ತಿರದಿಂದಲೋ, ದೂರದಿಂದಲೋ ಸಂಬಂಧಿಸಿದವಾಗಿರುತ್ತವೆ. ಕೆಲವೊಮ್ಮೆ ನಿಜದಲ್ಲಿ ಆಗುವುದಕ್ಕಿಂತ ಸ್ಟ್ರಾಂಗ್ ಆದ ಉದ್ರೇಕ ಸ್ಥಿತಿಯನ್ನು ನಿದ್ರೆಯಲ್ಲಿ ಅನುಭವಿಸಬಹುದು. ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲಿ ಇಂಥ ಕನಸು ಹಾಗೂ ಅನುಭವಗಳು ಬಹಳ ಕಡಿಮೆಯೇ. 

ಕೆಲವೊಮ್ಮೆ ಸೆಕ್ಸೀ ಕನಸುಗಳು ಬಿದ್ದಾಗ ಅದರಲ್ಲಿ ಯಾರೋ ಅಪರಿಚಿತ ಅಥವಾ ಪರಿಚಯಸ್ಥ ಬರಬಹುದು. ಇದರಿಂದ ನೀವು ಎಚ್ಚರಾದಾಗ ಸಂಗಾತಿಗೆ ಮೋಸ ಮಾಡಿದೆ ಎಂದು ಪಶ್ಚಾತ್ತಾಪದಲ್ಲಿ ನರಳುವ ಅಗತ್ಯವಿಲ್ಲ. ಏಕೆಂದರೆ, ಕನಸುಗಳು ನಮ್ಮ ಮೆದುಳು ಯೋಚನೆಗಳನ್ನೆಲ್ಲ ಜೋಡಿಸುವ ಪ್ರಕ್ರಿಯೆಯಲ್ಲಿ ಬೀಳುವಂಥವು. ಅದಕ್ಕೆ ಇದೇ ಅರ್ಥ, ಇದೇ ಕಾರಣ ಎಂದೇನಿಲ್ಲ. ಅದು ಮನುಷ್ಯರ ನಿಯಂತ್ರಣದಲ್ಲೂ ಇಲ್ಲ. 

ಯಶಸ್ವೀ ವಿವಾಹ; ಅಜ್ಜಿ ಹೇಳಿದ ಅನುಭವ ಪಾಠಗಳು!

ಆರೋಗ್ಯದ ಲಕ್ಷಣ

ವೆಟ್ ಡ್ರೀಮ್ಸ್ ಬಿದ್ದಿತೆಂದು ಚಿಂತಿಸುತ್ತಾ ಕೂರುವ ಅಗತ್ಯವಿಲ್ಲ. ಇದಕ್ಕಾಗಿ ಪಸ್ಚಾತ್ತಾಪ ಪಡಬೇಕಿಲ್ಲ. ಏಕೆಂದರೆ ಅವು ನಿಮ್ಮ ದೇಹ ಆರೋಗ್ಯಕರವಾಗಿ ಉತ್ತಮವಾಗಿರುವುದನ್ನೇ ಸೂಚಿಸುತ್ತವೆ. ದೇಹವು ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸುತ್ತಿದೆ ಎಂದು ತೋರಿಸುತ್ತದೆ.

Latest Videos
Follow Us:
Download App:
  • android
  • ios