ನೀವು ಬೈಬೈ ಎನ್ನುವಾಗ, ಲೋ ಗೂಬಾಲ್ಡ್, ಒಮ್ಮೆ ಬಂದು ತಬ್ಕೊಳೋ ಅಂತ ಆಕೆ ಮನಸ್ಸಿನೊಳಗೇ ಅರಚುತ್ತಿರುತ್ತಾಳೆ. ನೀವು ಮಾತನಾಡಲು ತಡವರಿಸಿ ಸುಮ್ಮನಾದಾಗ, ಮನಸ್ಸಿನಲ್ಲೇನಿದೆ ಎಂದು ಹೇಳಬಾರದೇ ಎಂದು ಒಳಗೊಳಗೇ ನಿಮ್ಮ ಬಳಿ ಗೋಗರೆಯುತ್ತಿರುತ್ತಾಳೆ.

ಆದರೆ, ಇದಾವುದೂ ನಿಮಗೆ ಕೇಳಿಸೋಲ್ಲ. ಹಾಳಾದ್ದು, ಈ ಟೆಲಿಪತಿ ಕೂಡಾ ಯಾವಾಗಲೂ ಕೆಲಸ ಮಾಡೋಲ್ಲ. ಎಲ್ಲ ಹುಡುಗಿಗೂ ತನ್ನ ಇನಿಯನ ಗಮನ, ಸಮಯ ಹಾಗೂ ಪ್ರೀತಿ ಬೇಕೇ ಬೇಕು. ಆದರೆ, ಅವನ್ನೆಲ್ಲ ಪ್ರತಿ ಬಾರಿ  ಬಾಯಿ ಬಿಟ್ಟು ಕೇಳಲಾಗುವುದಿಲ್ಲ.

ಲೈಂಗಿಕ ಸಮಸ್ಯೆಗೆ ಇವರು ಕೊಡ್ತಾರೆ ಮದ್ದು

ನೀವು ಆಕೆಯನ್ನು ಖುಷಿಪಡಿಸೋಕೆ ಪರ್ವತದ ಮೇಲೇರಿ ಅಪರೂಪದ ಹೂವೊಂದನ್ನು ಕಿತ್ತು ತರಬೇಕಾಗಿಲ್ಲ. ಬದಲಿಗೆ ಸ್ವಲ್ಪವೇ ಸ್ವಲ್ಪ ಪ್ರಯತ್ನ ಹಾಕಿದರೂ ಸಾಕು. ಸಣ್ಣ ಸಣ್ಣ ಸಂಗತಿಗಳಲ್ಲಿ ಆಕೆಯ ಸಂತೋಷ ಅಡಗಿದೆ. ಇಷ್ಟಕ್ಕೂ ಆಕೆ ನಿಮ್ಮಿಂದ ಬಯಸುವುದೇನು ಗೊ‌ತ್ತಾ?

ಹಳೆ ಲವರ್ ನೆನಪುಗಳಿಂದ ಹೊರ ಬರಲು ಇಲ್ಲಿವೆ ಟಿಪ್ಸ್

1. ತೀರಾ ಮುಂದುವರಿಯದೆ ಸುಮ್ಮನೆ ಆಕೆಯನ್ನು ಮುದ್ದು ಮಾಡುವುದು

ಗೆಳೆಯನಿಂದ ಸುಮ್ಮನೆ ಮಗುವಿನಂತೆ ಮುದ್ದು ಮಾಡಿಸಿಕೊಳ್ಳೋಕೆ ಆಕೆಗಿಷ್ಟ. ಸುಮ್ಮನೆ ಆಕೆಯ ಕೂದಲಿನ ಮೇಲೆ ಕೈಯಾಡಿಸುವುದು, ಅವಳು ನಿದ್ದೆ ಮಾಡುವವರೆಗೆ ಕೈ ಹಿಡಿದುಕೊಳ್ಳುವುದು, ತಲೆ ನೇವರಿಸುವುದು, ಪ್ರೀತಿಯಿಂದ ಒಂದು ಮುತ್ತು ಕೊಡುವುದು, ಹೊರ ಹೋಗುವಾಗ ಆಕೆಯನ್ನೊಮ್ಮೆ ತಬ್ಬುವುದು, ಮುದ್ದು ಬಂದಾಗ ಕೆನ್ನೆ ಹಿಂಡುವುದು ಇಂಥವೆಲ್ಲ ಆಕೆಗೆ ಬಹಳ ಖುಷಿ ನೀಡುವ ಸಂಗತಿಗಳು.

ಸೆಕ್ಸ್ ತನಕ ಮುಂದುವರಿಯದೆ ಹಾಗೆಯೇ ಆಕೆಯನ್ನು ಮುದ್ದು ಮಾಡುವುದರಿಂದ ನೀವು ಆಕೆಯನ್ನು ಕೇವಲ ದೈಹಿಕ ಕಾರಣಗಳಿಗಾಗಿಯಲ್ಲ, ಅದಕ್ಕಿಂತ ಹೆಚ್ಚಿಗೆ ಪ್ರೀತಿಸುತ್ತೀರಿ, ಕಾಳಜಿ ವಹಿಸುತ್ತೀರಿ ಎಂಬುದು ಆಕೆಗೆ ಅರಿವಾಗುತ್ತದೆ. ಆದರೆ, ಇದಾವುದನ್ನೂ ಆಕೆ ಬಾಯಿ ಬಿಟ್ಟು ಕೇಳಲಾರಳು. ನೀವಾಗಿಯೇ ಅರಿತು ಮಾಡಿದರೆ ಮತ್ತೆ ಆಕೆ ಮನಸೋಇಚ್ಛೆ ನಿಮ್ಮನ್ನು ಹಚ್ಚಿಕೊಳ್ಳುವುದರಲ್ಲಿ ಡೌಟೇ ಇಲ್ಲ.

2. ಸರ್ಪ್ರೈಸ್ ನೀಡುವುದು

ಪ್ರತಿ ದಿನ ಆಕೆಯನ್ನು ಫ್ಯಾನ್ಸಿ ಡೇಟ್‌ಗೆ ಕರೆದುಕೊಂಡು ಹೋಗಲಿ, ಪ್ರತಿ ದಿನ ಒಂದೊಂದು ಕಾಸ್ಟ್ಲಿ ಉಡುಗೊರೆ ಕೊಡಲಿ ಎಂಬ ನಿರೀಕ್ಷೆ, ಆಸೆ ಯಾವ ಹುಡುಗಿಗೂ ಇರುವುದಿಲ್ಲ. ಪ್ರತಿ ಎರಡು ದಿನಗಳಿಗೊಮ್ಮೆ ಸರ್ಪ್ರೈಸ್ ಆಗಿ ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಕರೆದುಕೊಂಡು ಹೋಗಲಿ, ಬಬಲ್ ಬಾತ್ ಮಾಡಿಸಲಿ ಎಂದೆಲ್ಲ ಯಾವ ಹುಡುಗಿಯೂ ಕನಸು ಕಾಣುವುದಿಲ್ಲ. ರೊಮ್ಯಾಂಟಿಕ್ ಮೂವಿಯಿಂದ ನೀವು ಕದಿಯುವ ಅಂಥ ಗ್ರ್ಯಾಂಡ್ ಆರೇಂಜ್‌ಮೆಂಟ್ಸ್, ಗಿಫ್ಟ್ಸ್‌ಗಳನ್ನು ಆಕೆ ಬಯಸುವುದಿಲ್ಲ.

ಆಕೆಗೆ ಸಿನಿಮಾಕ್ಕೂ, ವಾಸ್ತವಕ್ಕೂ ವ್ಯತ್ಯಾಸ ಗೊತ್ತಿದೆ. ಆದರೆ, ಎಲ್ಲ ಹುಡುಗಿಯರಿಗೂ ಅಪರೂಪಕ್ಕೊಮ್ಮೆ ಕೇವಲ ನಿಮ್ಮಿಬ್ಬರಿಗೆ ಸಂಬಂಧಿಸಿದಂಥ ಸರ್ಪ್ರೈಸ್ ಇಷ್ಟವಾಗೇ ಆಗುತ್ತದೆ. ಎಂದೋ ಆಕೆ ಇಷ್ಟವೆಂದ ಕಾದಂಬರಿಕಾರರ ಪುಸ್ತಕ ತಂದುಕೊಡುವುದು, ನೀನು ಕೂದಲು ಕಟ್ಟಿಕೊಂಡಿದ್ದನ್ನು ನೋಡೋಕೆ ನಂಗಿಷ್ಟ ಎಂದು ನಾಲ್ಕು ಚೆಂದದ ರಿಬ್ಬನ್‌ಗಳನ್ನು ತಂದು ಕೊಟ್ಟರೂ ಸಾಕು,ಬರ್ತ್‌ಡೇ ಅಥವಾ ಆ್ಯನಿವರ್ಸರಿ ಇಲ್ಲದೆಯೂ ನೀವಾಕೆಯ ಬಗ್ಗೆ ಯೋಚಿಸುತ್ತೀರಿ ಎಂದು ಅವಳು ಖುಷಿಯಾಗುತ್ತಾಳೆ. ಆಕೆ ಎಂದೋ ಇಷ್ಟವೆಂದಿದ್ದ ಸಂಗತಿಗೆ ನೀವು ಗಮನ ಹರಿಸಿದ್ದೀರಿ ಎಂಬುದು ಖುಷಿ ನೀಡುತ್ತದೆ. ನಿಮ್ಮ ಪ್ರಯತ್ನ ಹಾಗೂ ಸಮಯ ಆಕೆಗೆ ಖುಷಿ ನೀಡುವುದೇ ಹೊರತು, ನೀವು ಎಷ್ಟು ಖರ್ಚು ಮಾಡಿದಿರಿ ಎಂಬುದಲ್ಲ.

3. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು

ಯುವತಿಯರು ಯುವಕರಿಗಿಂತ ಹೆಚ್ಚಾಗಿ ಮತ್ತು ಚೆನ್ನಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಹಾಗಂಥ ಅವರಿಗೆ ನೀವು ಕೇಳಿಸಿಕೊಂಡರಷ್ಟೇ ಸಾಲದು. ನಿಮ್ಮ ಮನಸ್ಸಿನಲ್ಲೇನಾಗುತ್ತಿದೆ ಎಂದು ಹೇಳಿಕೊಂಡರೆ ಕೇಳಲು ಅವರು ಸದಾ ಸಿದ್ಧ. ನೀವು ಆಕೆಯೆದುರು ದುಃಖ ಹೇಳಿಕೊಂಡು ಅತ್ತೊಡನೆ ನಿಮ್ಮನ್ನು ಅಳುಮುಂಜಿ ಎಂದು ಆಕೆ ಕರೆಯುವುದಿಲ್ಲ. ಬದಲಿಗೆ ನಿಮಗೆ ಒಳಗಿನ ಫೀಲಿಂಗ್ಸನ್ನು ಆಕೆಯೆದುರು ವ್ಯಕ್ತಪಡಿಸಲು ಸಾಧ್ಯವಾಯಿತೆಂದು ಆಕೆಗೆ ಸಂತಸವಾಗುತ್ತದೆ.

ನಿಮಗಾಗಿ ಆಕೆಯ ಮನಸ್ಸು ಮಿಡಿಯುತ್ತದೆ. ಪ್ರೀತಿಯನ್ನಾಗಲೀ, ಕೋಪವನ್ನಾಗಲೀ ಹೇಳಿಕೊಂಡಾಗ ಅದನ್ನು ಕೇಳಲು ಆಕೆಗಿಷ್ಟ. ಹಾಗಂಥ ಪ್ರತೀ ದಿನ ಆಕೆಯನ್ನು ನೀವೆಷ್ಟು ಪ್ರೀತಿಸುತ್ತೀರಿ ಎಂದು ವಿವರಿಸುತ್ತಾ ಕೂರಬೇಕಿಲ್ಲ, ಬದಲಿಗೆ ಯಾವುದೇ ವಿಷಯವಾಗಲಿ ಆಕೆಯ ಬಳಿ ಹಂಚಿಕೊಂಡರೆ ಅಷ್ಟೇ ಸಾಕು.

4. ನಿಮ್ಮ ಹತ್ತಿರದವರನ್ನು ಪರಿಚಯಿಸಿ

ನಿಮಗೆ ನಿಮ್ಮ ಸ್ಪೇಸ್ ಬೇಕೆಂಬುದು ನಿಮ್ಮ ಹುಡುಗಿಗೆ ಗೊತ್ತು. ಆಕೆಗಿಂತ ಮುಂಚೆಯೂ ನಿಮ್ಮದೆಂಬ ಒಂದು ಬದುಕಿತ್ತು ಎಂಬುದೂ ಗೊತ್ತು. ಫ್ರೀ ಇರುವಾಗೆಲ್ಲ ಅವಳೊಂದಿಗೇ ಇರಬೇಕೆಂದು ಆಕೆ ಬಯಸುವುದಿಲ್ಲ. ಆದರೆ, ನೀವು ಆಕೆಯನ್ನು ನಿಮ್ಮ ಬದುಕಿನಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳುತ್ತಿದ್ದೀರೆಂದು ತಿಳಿದಾಗ ಅವಳಿಗೆ ಖಂಡಿತಾ ಖುಷಿಯಾಗುತ್ತದೆ. ನಿಮ್ಮ ಕುಟುಂಬಸ್ಥರನ್ನು, ಗೆಳೆಯರನ್ನು ಆಕೆಗೆ ಪರಿಚಯ ಮಾಡಿಕೊಡಬೇಕೆಂಬ ನಿಮ್ಮ ಆಸೆ ಅವಳಲ್ಲಿ ಸಂತಸ ತರುತ್ತದೆ. ಗೆಳೆಯರೊಂದಿಗೆ ಸುತ್ತುವಾಗ ಅಪರೂಪಕ್ಕೊಮ್ಮೆ ಆಕೆಯನ್ನೂ ಕರೆದುಕೊಂಡು ಹೋದರೆ ಅವಳಿಗೆ ಸಾಕು. ನಿಮ್ಮದೊಂದು ಭಾಗವಾಗಿ ಕಾಣಿಸಿಕೊಳ್ಳಲು ಆಕೆ ಬಯಸುತ್ತಾಳೆ.

ಮದುವೆ: ಮಗನಿಗೆ ಅಪ್ಪನ ಕಿವಿಮಾತಿದು...

ಖಂಡಿತಾ ಇದ್ಯಾವುದನ್ನೂ ಆಕೆ ಬಾಯಿ ಬಿಟ್ಟು ಹೇಳಲಾರಳು. ಅದರಿಂದ ನಿಮ್ಮನ್ನು ಉಸಿರುಗಟ್ಟಿಸಿದಂತಾಗುತ್ತದೆ ಎಂಬುದು ಅವಳ ಯೋಚನೆ. ಆದರೆ, ಇದ್ಯಾವುದೂ ಇಲ್ಲದಿದ್ದರೆ ಆಕೆಯನ್ನು ನೀವು ನೆಗ್ಲೆಕ್ಟ್ ಮಾಡಿದಂತೆನಿಸುವುದರಲ್ಲಿ ಆಕೆಯ ತಪ್ಪಿಲ್ಲ.