Beware : ಮನೆಯಲ್ಲಿ ಬೆಕ್ಕು ಸಾಕಿದ್ದೀರಾ? ಅನಾಹುತಕ್ಕಿಂತ ಮೊದಲು ಎಚ್ಚೆತ್ತುಕೊಳ್ಳಿ

ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದ್ರ ಸಂತೋಷವೇ ಬೇರೆ. ನೋವು,ಒತ್ತಡ ಕಡಿಮೆ ಮಾಡುವ ಶಕ್ತಿ ಸಾಕು ಪ್ರಾಣಿಗಳಿಗಿದೆ. ನಾವು ನೀಡಿದ ಪ್ರೀತಿಯ ಡಬಲ್ ಪ್ರೀತಿಯನ್ನು ಅವು ನಮಗೆ ನೀಡುತ್ವೆ.ಇದೆಲ್ಲವೂ ಎಷ್ಟು ಸತ್ಯವೋ ಹಾಗೆ ಮನೆಯಲ್ಲಿ ಪ್ರಾಣಿಯಿದ್ದಾಗ ಜವಾಬ್ದಾರಿಯೂ ಹೆಚ್ಚಿರುತ್ತದೆ ಎಂಬುದೂ ನಿಜ. 
 

House Fire Caused By Cats In South Korea

ಪ್ರಪಂಚದಾದ್ಯಂತ ನಡೆಯುವ ಕೆಲ ಘಟನೆ (Incident)ಗಳು ನಮಗೆ ಎಚ್ಚರಿಕೆ( Warning)ಯನ್ನು ನೀಡುತ್ತವೆ. ಸುದ್ದಿಯನ್ನು ಓದಿ ಬಿಡುವುದಲ್ಲ.  ಮುನ್ನೆಚ್ಚರಿಕೆ ನೀಡುವ ಸುದ್ದಿಗಳನ್ನು ಓದಿ ಪಾಲಿಸಬೇಕಾಗುತ್ತದೆ. ಇವತ್ತು ನಾವು ಸಾಕು ಪ್ರಾಣಿ (pet)ಗಳು ಮಾಡುವ ಸಮಸ್ಯೆ ಬಗ್ಗೆ ಹೇಳ್ತೆವೆ.  ಮನೆ (Home)ಯಲ್ಲಿ ಪ್ರಾಣಿಗಳನ್ನು ಸಾಕುವುದು ಮಾಮೂಲಿ. ಅನೇಕರಿಗೆ ನಾಯಿ ಮತ್ತೆ ಕೆಲವರಿಗೆ ಬೆಕ್ಕು (cat) ಇಷ್ಟವಾಗುತ್ತದೆ. ಹಾವು,ಮೊಸಳೆ ಸಾಕುವವರೂ ಇದ್ದಾರೆ. ಈ ಸಾಕು ಪ್ರಾಣಿಗಳು ಎಷ್ಟು ಮುದ್ದೋ ಅಷ್ಟೇ ಅಪಾಯಕಾರಿ. ಅವು ಮನೆಯಲ್ಲಿರುವಾಗ ಮೈಯೆಲ್ಲ ಕಣ್ಣಾಗಿರಬೇಕು. ಕಳೆದ 3 ವರ್ಷಗಳಲ್ಲಿ ದಕ್ಷಿಣ ಕೊರಿಯಾ (South Korea)ದಲ್ಲಿ 107ಕ್ಕೂ ಹೆಚ್ಚು ಮನೆಗಳಿಗೆ ನಿಗೂಢವಾಗಿ ಬೆಂಕಿ ಬಿದ್ದಿತ್ತು. ಈ ಬೆಂಕಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಪೊಲೀಸರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಕೊನೆಗೂ ಪೊಲೀಸರು ಕಾರಣ ಪತ್ತೆ ಮಾಡಿದ್ದಾರೆ. ಮನೆಗೆ ಬೆಂಕಿ ಬೀಳಲು ಕಾರಣವಾದ ವಿಷ್ಯ ಅಚ್ಚರಿ ಮೂಡಿಸುತ್ತದೆ.

ಬೆಂಕಿಗೆ ಕಾರಣವಾಯ್ತು ಬೆಕ್ಕು : ಯಸ್, ಮನೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಬೆಕ್ಕು ಕಾರಣವಾಗಿದೆ. ಬೆಂಕಿ ಬಿದ್ದ ಮನೆಗಳಲ್ಲಿ ಬೆಕ್ಕನ್ನು ಸಾಕಿದ್ದರು. ಇಲ್ಲವೆ ಬೆಕ್ಕು ಮನೆಗಳಿಗೆ ಬಂದು ಹೋಗಿ ಮಾಡ್ತಿತ್ತು ಎನ್ನಲಾಗಿದೆ. ಮನೆಯಲ್ಲಿ ಉರಿಯುತ್ತಿದ್ದ ಮೇಣದಬತ್ತಿಗಳನ್ನು ಬೆಕ್ಕು ಬಟ್ಟೆ ಮತ್ತು ಕಾಗದದ ಮೇಲೆ ಬೀಳಿಸಿದ್ದರಿಂದ ಮತ್ತು ಗ್ಯಾಸ್ ಸ್ಟೌವ್ ಬಳಿ ಕಾಗದ ಅಥವಾ ಬಟ್ಟೆ ಹಾಕಿದ್ದರಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಜನವರಿ 2019ರಿಂದ ನವೆಂಬರ್ 2021 ರ ನಡುವೆ ದೇಶದಲ್ಲಿ 107 ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಎಲ್ಲಾ ಘಟನೆಗಳು ನಡೆದಿದ್ದು ಬೆಕ್ಕಿನಿಂದ ಎಂದು ಪೊಲೀಸರು ಹೇಳಿದ್ದಾರೆ.ಮನೆಯಿಂದ ಮಾಲಿಕರು ಹೊರಗಿದ್ದ ಸಂದರ್ಭದಲ್ಲಿಯೇ ಅರ್ಧಕ್ಕರ್ಧ ಘಟನೆಗಳು ನಡೆದಿವೆ. ಬೆಕ್ಕಿನ ಮಾಲೀಕರು ಮನೆಯಿಂದ ಹೊರಗೆ ಹೋಗುವಾಗ ಜಾಗರೂಕರಾಗಿರಿ ಮತ್ತು ಬೆಕ್ಕುಗಳನ್ನು ಒಂಟಿಯಾಗಿ ಬಿಡಬೇಡಿ ಎಂದು ಅಗ್ನಿಶಾಮಕ ಇಲಾಖೆ,ಪೊಲೀಸ್ ಇಲಾಖೆ ಜನರಿಗೆ ಎಚ್ಚರಿಕೆ ನೀಡ್ತಿದೆ.  

ಅಮೆರಿಕದಲ್ಲಿ ಹೆಚ್ಚುತ್ತಿರುವ ಘಟನೆಗಳು : ವರದಿಯ ಪ್ರಕಾರ, ಪ್ರತಿ ವರ್ಷ ಅಮೆರಿಕದಲ್ಲಿಯೂ ಇಂಥ ಘಟನೆಗಳು ನಡೆಯುತ್ತಿವೆ. ಸುಮಾರು 1000 ಮನೆಗಳ ಬೆಂಕಿಗೆ ಸಾಕುಪ್ರಾಣಿ ಕಾರಣವಾಗಿದೆ.

ಬೆಕ್ಕು ಸಾಕಿದವರು ಏನು ಮಾಡ್ಬೇಕು : ಮನೆಯಲ್ಲಿ ಬೆಕ್ಕುಗಳನ್ನು ಸಾಕಿರುವವರು ಮನೆಯಿಂದ ಹೊರಗೆ ಹೋದಾಗ, ಗ್ಯಾಸ್ ಸ್ಟೌವ್‌ ಬಂದ್ ಮಾಡಿ ಹೋಗಿ. ಯಾವುದೇ ಬೆಂಕಿ ತಗಲುವ ವಸ್ತುಗಳನ್ನು ಬೆಕ್ಕುಗಳಿಗೆ ಸಿಗದಂತೆ ಇಡಬೇಕೆಂದು ದಕ್ಷಿಣ ಕೊರಿಯಾ ಸರ್ಕಾರ ಜನರಿಗೆ ಮನವಿ ಮಾಡಿದೆ. 

ಮಕ್ಕಳ ಆಹಾರದಲ್ಲಿ ನಿಷೇಧಿತ ಡ್ರಗ್‌... ಪ್ಯಾಕ್‌ ತೆರೆದ ಅಮ್ಮನಿಗೆ ಶಾಕ್‌

ಇದು ದಕ್ಷಿಣ ಕೊರಿಯಾ ಜನರಿಗೆ ಮಾತ್ರ ಅನ್ವಯಿಸುವುದಿಲ್ಲ. ಪ್ರಾಣಿಗಳನ್ನು ಮನೆಯಲ್ಲಿ ಸಾಕಿರುವ ಪ್ರತಿಯೊಬ್ಬರೂ ಪಾಲಿಸಬೇಕು. ಸಾಮಾನ್ಯವಾಗಿ ಮನೆಯಿಂದ ಹೊರ ಹೋಗುವಾಗ ಜನರು,ಸಾಕು ಪ್ರಾಣಿಗಳನ್ನು ಮನೆಯಲ್ಲಿ ಕೂಡಿಹಾಕಿ ಹೋಗ್ತಾರೆ. ಬೆಕ್ಕನ್ನು ಕಟ್ಟಿ ಹೋಗಲು ಸಾಧ್ಯವಿಲ್ಲ. ಹಾಗಾಗಿ ಬೆಕ್ಕು ಇಡೀ ಮನೆ ಸುತ್ತುತ್ತದೆ. ಅಡಿಗೆ ಮನೆಯಲ್ಲಿ ಬೆಕ್ಕಿನ ಹಾವಳಿಯನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 
ಬೆಕ್ಕನ್ನು ಮನೆಯಲ್ಲಿ ಸಾಕಿರುವವರು ಹಾಲಿನ ಪಾತ್ರೆಯನ್ನು ಜೋಪಾನ ಮಾಡುವುದು ಮಾತ್ರವಲ್ಲ ಗ್ಯಾಸ್ ಒಲೆಗಳನ್ನೂ ಜೋಪಾನ ಮಾಡಬೇಕಿದೆ. ಬೆಕ್ಕನ್ನು ಮನೆಯಲ್ಲಿ ಬಿಟ್ಟು ಹೋಗುವ ವೇಳೆ ದೇವರ ಮುಂದೆ ಬೆಳಗುವ ದೀಪದಿಂದ ಹಿಡಿದು ಅನಾಹುತಕ್ಕೆ ಕಾರಣವಾಗುವ ಯಾವುದನ್ನೂ ಇಡಬೇಡಿ. 

ಸಂತೋಷ ಬೇಕಂದ್ರೆ ಮನೆ ಹೀಗಿಟ್ಟುಕೊಳ್ಳಿ

ಉರಿಯುತ್ತಿರುವ ಮೇಣದಬತ್ತಿ ಬಗ್ಗೆ ಬೆಕ್ಕುಗಳಿಗೆ ಕುತೂಹಲವಿರುತ್ತದೆ. ಅವುಗಳನ್ನು ಅವು ಕೆಳಗೆ ಬೀಳಿಸುತ್ತವೆ. ಸುತ್ತಮುತ್ತ ಇರುವ ಕಾಗದ,ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತ್ತದೆ. ಇದು ಮಾತ್ರವಲ್ಲ ವಿದ್ಯುತ್ ತಂತಿಗಳನ್ನು ಬೆಕ್ಕು ಬಿಡುವುದಿಲ್ಲ. ವಿದ್ಯುತ್ ತಂತಿಗಳನ್ನು ಅಗಿಯುತ್ತವೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯಿದೆ. ಹಾಗಾಗಿ ನಿಮ್ಮ ಮನೆಯಲ್ಲಿಯೂ ಬೆಕ್ಕಿದ್ದರೆ ಎಚ್ಚರಿಕೆವಹಿಸಿ.

Latest Videos
Follow Us:
Download App:
  • android
  • ios