Asianet Suvarna News Asianet Suvarna News

New Year 2022: ಮನೆಯಲ್ಲಿ ಒಬ್ಬಂಟಿಯಾಗಿದ್ದೀರಾ, ಹೊಸ ವರ್ಷವನ್ನು ಹೀಗೆ ವೆಲ್‍ಕಂ ಮಾಡಿ

ಎಲ್ಲೆಡೆ ಹೊಸ ವರ್ಷ (NewYear)ದ ಸಂಭ್ರಮ ಮನೆ ಮಾಡಿದೆ. ಜನರು ಪಾರ್ಟಿ, ಡ್ಯಾನ್ಸ್ ಅಂತ ಎಂಜಾಯ್ ಮಾಡ್ತಿದ್ದಾರೆ. ಮನೆಯಲ್ಲಿ ಒಬ್ಳೇ ಇರೋರು, ಎಲ್ಲಾ ಕಡೆ ನ್ಯೂ ಇಯರ್ ಕೌಂಟ್‌ಡೌನ್ ಶುರುವಾಗ್ತಿದ್ರೆ ನಂಗೇನು ಸೆಲೆಬ್ರೇಶನ್ (Celebration) ಇಲ್ಲ ಅಂತ ವರಿ ಮಾಡ್ಕೋಬೇಕಾಗಿಲ್ಲ. ಮನೆಯಲ್ಲಿ ನೀವು ಒಬ್ರೇ ಇದ್ರೂ ಈ ರೀತಿ ಮಾಡೋ ಮೂಲಕ ಖುಷಿಯಿಂದ ನ್ಯೂ ಇಯರ್‌ನ್ನು ವೆಲ್ ಕಂ (Welcome) ಮಾಡ್ಬೋದು.

Amazing ways to Spend New Year Eve Alone at Home
Author
Bengaluru, First Published Dec 31, 2021, 6:05 PM IST

ಹೊಸ ವರ್ಷದ ಮುನ್ನಾದಿನವು ಏಕಾಂಗಿಯಾಗಿ ಉಳಿಯಲು ಕಷ್ಟಕರವಾದ ರಜಾದಿನವಾಗಿದೆ. ಎಲ್ಲರೂ ಡಿಸೆಂಬರ್ 31 ಮತ್ತು ಜನವರಿ 1ರಂದು ಹೊಸ ವರ್ಷದ ಆರಂಭವನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸುತ್ತಾರೆ. ಅದ್ದೂರಿ ಔತಣಕೂಟಗಳು ಮತ್ತು ಪಾರ್ಟಿಗಳನ್ನು ಆಯೋಜಿಸಿ ಎಂಜಾಯ್ ಮಾಡುತ್ತಾರೆ. ಹೊಸ ವರ್ಷವನ್ನು ಸಾಂಗ್ಸ್, ಡ್ಯಾನ್ಸ್ ಮೂಲಕ ಗ್ರ್ಯಾಂಡ್ ಆಗಿ ವೆಲ್ ಕಂ ಮಾಡಿಕೊಳ್ತಾರೆ. ಆದರೆ ನ್ಯೂ ಇಯರ್‍ ಗೆ ನಿಮಗ್ಯಾವ ಪ್ಲಾನ್ ಕೂಡಾ ಇಲ್ವಾ. ಪಾರ್ಟಿ, ಫ್ರೆಂಡ್ಸ್ ಅಂತ ಎಲ್ಲೂ ಸುತ್ತಾಡೋಕೆ ಹೋಗಲ್ವಾ. ಮನೆಯಲ್ಲಿ ಒಬ್ಬಂಟಿಯಾಗಿದ್ದೀರಾ..ಡೋಂಟ್ ವರಿ..ಹೀಗಿದ್ದೂ ನೀವು ಖುಷಿಯಿಂದ ಹೊಸ ವರ್ಷ ಆಚರಿಸಬಹುದು. ಈ ಕೆಳಗಿನ ಕೆಲವು ಚಟುವಟಿಕೆಗಳನ್ನು ಮಾಡುವ ಮೂಲಕ ಖುಷಿಯಿಂದ ನ್ಯೂ ಇಯರ್ ಅನ್ನು ವೆಲ್ ಕಂ ಮಾಡ್ಬೋದು.

ನಿಮ್ಮ ರೂಮನ್ನು ಅಲಂಕರಿಸಿ
ನೀವು ಏಕಾಂಗಿಯಾಗಿ ವಾಸಿಸುತ್ತಿದ್ದೀರಿ ಎಂದ ಮಾತ್ರಕ್ಕೆ, ನಿಮ್ಮ ವಾಸದ ಸ್ಥಳವನ್ನು ನೀವು ಅಲಂಕರಿಸಬಾರದು ಎಂದು ಅರ್ಥವಲ್ಲ. ನಿಮ್ಮ ಮನೆಗೆ ಹೊಸ ವರ್ಷದಂದು ಡೆಕೊರೇಷನ್ ಮಾಡಲು ಮನೆಗೆ ಯವುದೇ ಸ್ಪೆಷಲ್ ಫ್ರೆಂಡ್ಸ್ ಅಥವಾ ಗೆಸ್ಟ್ ಬರಲೇಬೇಕೆಂದೇನಿಲ್ಲ. ನೀವು ನಿಮಗೋಸ್ಕರ ಮಾತ್ರ ರೂಮನ್ನು ಸುಂದರವಾಗಿ ಸಿದ್ಧಪಡಿಸಬಹುದು. ನಿಮ್ಮ ಕೋಣೆಯ ಸುತ್ತಲೂ ಕಲಾತ್ಮಕವಾಗಿ ಕಾಣುವಂತೆ ಮಾಡಲು ಹೊಸ ಪೀಠೋಪಕರಣಗಳು, ಮಿನುಗುವ ದೀಪಗಳು ಅಥವಾ ಹೆಚ್ಚಿನ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ರೂಮನ್ನು ಸುಂದರವಾಗಿಸಿ. ಹೊಸ ಲುಕ್‌ನಲ್ಲಿ ಕಂಗೊಳಿಸುವ ರೂಮ್ ನಿಮ್ಮಲ್ಲೂ ಹೊಸ ಚೈತನ್ಯವನ್ನು ತರದಿದ್ದರೆ ಮತ್ತೆ ಹೇಳಿ.

New Year 2022: ನ್ಯೂ ಇಯರ್ ರೆಸಲ್ಯೂಷನ್ಸ್ ಫೇಲ್ ಆಗೋದು ಯಾಕೆ..?

ಒಳ್ಳೆಯ ಪುಸ್ತಕವನ್ನು ಓದಲು ಪ್ರಾರಂಭಿಸಿ
ಹೊಸವರ್ಷದಂದು ಮನೆಯಲ್ಲೊ ಒಬ್ಬರೇ ಇದ್ದರೆ, ಹೊಸತೊಂದು ಪುಸ್ತಕ (Book)ವನ್ನು ಓದಲು ಆರಂಭಿಸಿ. ಇದು ನಿಮಗೆ ಮನಸ್ಸಿಗೆ ಶಾಂತತೆ, ಖುಷಿಯನ್ನು ತಂದು ಕೊಡುತ್ತದೆ. ಹೆಚ್ಚಿನ ಪುಸ್ತಕಗಳನ್ನು ಓದುವುದು ನಿಮ್ಮ ರೆಸಲ್ಯೂಶನ್ (Resolution) ಪಟ್ಟಿಯಲ್ಲಿದ್ದರೆ, ಇದು ಹೊಸ ವರ್ಷದ ಉತ್ತಮ ಆರಂಭವಾಗಿದೆ. ಹೆಚ್ಚುವರಿಯಾಗಿ, ಹೊಸ ವರ್ಷದಲ್ಲಿ ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಪುಸ್ತಕಗಳನ್ನು ಸಹ ನೀವು ಆಯ್ಕೆ ಮಾಡಬಹುದು. 

ಹೊಸ ಅಡುಗೆಯನ್ನು ತಯಾರಿಸಿ
ರುಚಿಕರವಾದ ಆಹಾರ (Food)ವನ್ನು ಸೇವಿಸಿದಾಗ ಮನಸ್ಸು ಯಾವಾಗಲೂ ಖುಷಿಯಾಗಿರುತ್ತದೆ. ಹೀಗಾಗಿ ಹೊಸವರ್ಷದಂದು ಯಾವತ್ತಿನ ದಿನಗಳಂತೆ ಬಿಟ್ಟು ಹೊಸದಾಗಿ ಯಾವುದಾದರೂ ರೆಸಿಪಿಯನ್ನು ಟ್ರೈ ಮಾಡಿ. ಸ್ವಾದಿಷ್ಟಕರವಾದ ಡಿನ್ನರ್ (Dinner) ಅನ್ನು ಸಿದ್ಧಪಡಿಸಿ, ಎಲ್ಲವನ್ನೂ ಆಸ್ವಾದಿಸಿಕೊಂಡು ತಿನ್ನಿ. ರುಚಿಕರವಾದ ಆಹಾರದ ಸೇವನೆ ಹೊಸ ವರ್ಷಕ್ಕೆ ನಿಮ್ಮನ್ನು ಉಲ್ಲಾಸದಾಯಕವಾಗಿಸಿ ಸಿದ್ಧಗೊಳಿಸುವುದರಲ್ಲಿ ಎರಡು ಮಾತಿಲ್ಲ. ನಿಮಗೆ ಅಡುಗೆ (Cooking) ಮಾಡಲು ಬರುತ್ತಿಲ್ಲವೆಂದಾದರೆ ನಿಮ್ಮ ಫೇವರಿಟ್ ಫುಡ್ ಅನ್ನು ಆರ್ಡರ್ ಮಾಡಿ.

ಪ್ಯಾಂಪರಿಂಗ್ ಸೆಷನ್  
ಬಿಡುವಿಲ್ಲದ ವೇಳಾಪಟ್ಟಿಗಳು ಅಥವಾ ಕೆಲಸದ ಹೊರೆಯಿಂದಾಗಿ ನೀವು ವಿಳಂಬ ಮಾಡುತ್ತಿರುವ ಪ್ಯಾಂಪರಿಂಗ್ ಸೆಷನ್‌ನನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ. ಹೊಸ ವರ್ಷದ ಈ ಸಂಭ್ರಮದಲ್ಲಿ ನಿಮಗಾಗಿ ಸಮಯ ನೀಡಿ. ಕೈ, ಕಾಲಿನ ತ್ವಚೆಯನ್ನು ಅಂದವಾಗಿಸುವ ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಳ್ಳಿ.

Weight Loss Tips 2022: ಹೊಸ ವರ್ಷದಲ್ಲಿ ತೂಕ ಇಳಿಸಿಕೊಳ್ಳಬೇಕೆಂದರೆ ಈ ಆಹಾರ ತಿನ್ನಲೇಬೇಡಿ

ನಕಾರಾತ್ಮಕ ಆಲೋಚನೆ ಬಿಟ್ಟು ಒಳ್ಳೆಯದನ್ನೇ ಯೋಚಿಸಿ
ನಾವು ಒಬ್ಬರೇ ಇದ್ದೇವೆ ಅನ್ನೋದು ನಮಗೆ ನಾವು ಗಿಫ್ಟ್  (Gift)ಮಾಡುವ ಅಮೂಲ್ಯವಾದ ಸಮಯ. ಒಬ್ಬಂಟಿಯಾಗಿದ್ದಾಗ ನಮ್ಮನ್ನು ನಾವು ಅರಿತುಕೊಳ್ಳಲು ಹೆಚ್ಚು ಸಮಯ ಸಿಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ನಿಮ್ಮ ಜೀವನದ ಬಗ್ಗೆ ಮತ್ತೆ ಪರಾಮರ್ಶೆ ಮಾಡಿಕೊಳ್ಳಿ. ಮಾಡಿರುವ ಸರಿ, ತಪ್ಪುಗಳನ್ನು ವಿಮರ್ಶಿಸಿಕೊಳ್ಳಿ. ಹೊಸ ವರ್ಷದಲ್ಲಿ ಆ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಹೊಸ ವರ್ಷದಂದು ಒಬ್ಬಂಟಿಯಾಗಿರುವ ಈ ಸಮಯದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಜೀವನದೆಡೆಗೆ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಿ

Follow Us:
Download App:
  • android
  • ios