ಗರ್ಭಿಣಿಯರ ಕಾಡೋ ಹೊಟ್ಟೆ ನೋವು, ಮಗುವಿನ ಮೇಲಾಗೋ ಎಫೆಕ್ಟ್...
ಪ್ರೆಗ್ನೆನ್ಸಿಯಲ್ಲಿ ಮಹಿಳೆ ಹೊಟ್ಟೆಯಲ್ಲಿ ಕೆಲವೊಮ್ಮೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಅವು ಯಾವುವು ಅನ್ನೋದನ್ನು ನೀವು ತಿಳಿದುಕೊಂಡರೆ ಉತ್ತಮ..
ಗರ್ಭಿಣಿಯರಲ್ಲಿ ಕೆಲವೊಮ್ಮೆ ಅಸಹಜ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚಾಗಿ ಮಹಿಳೆ ಭಯಗೊಳ್ಳುವುದು ಸಹಜ. ಆದರೆ ಈ ನೋವಿನ ಸರಿಯಾದ ಲಕ್ಷಣಗಳನ್ನೂ ತಿಳಿದುಕೊಳ್ಳಲೂ ಕಷ್ಟ. ಅದರಲ್ಲೂ ಮೊದಲ ಮಗುವಿನ ತಾಯಿಯಾಗುವವರಿಗೆ ಭಯ ಹೆಚ್ಚು. ಇದನ್ನು ಸರಿಯಾಗಿ ಪತ್ತೆ ಹಚ್ಚದಿದ್ದರೆ, ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಈ ನೋವಿಗೇನು ಕಾರಣ?
ಲಿಗಾಮೆಂಟ್ ಸ್ಟ್ರೆಚಿಂಗ್
ಗರ್ಭಿಣಿಯಾದ ಎರಡನೇ ತ್ರೈಮಾಸಿಕದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡರೆ ಅದಕ್ಕೆ ಮುಖ್ಯ ಕಾರಣ ಲಿಗಾಮೆಂಟ್ ಸ್ಟ್ರೆಚಿಂಗ್. ಇದರಿಂದ ಕಿಬ್ಬೊಟ್ಟೆ ನೋವು ಕಾಡುತ್ತೆ. ಗರ್ಭಕೋಶ ದೊಡ್ಡದಾಗುವುದರಿಂದ ಗರ್ಭಕೋಶದ ಗೋಡೆಯಲ್ಲಿ ಸೆಳೆತ ಕಾಣಿಸಿಕೊಳ್ಳುವ ಪರಿಣಾಮ ಈ ನೋವಿರುತ್ತದೆ.
ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!
ಹಾರ್ಟ್ ಬರ್ನ್
ಪ್ರೆಗ್ನೆನ್ಸಿಯಲ್ಲಿ ಎದೆ ಉರಿ ಸಾಮಾನ್ಯ ಲಕ್ಷಣ. ಇದರಿಂದಲೂ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಆ್ಯಸಿಡ್ ಹಿಮ್ಮುಖವಾಗಿ ಹರಿಯುವುದರಿಂದ ಎದೆ ಉರಿ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.
ಎಕ್ಟೋಪಿಕ್ ಪ್ರೆಗ್ನೆನ್ಸಿ
ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೆ ಗರ್ಭಕೋಶದ ಹೊರ ವಲಯದಲ್ಲಿ ಮೊಟ್ಟೆ ಫಲಿತವಾಗುವುದು. ಇದರಿಂದಾಗಿಯೂ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೀಗಾದರೆ ಶಾರೀರಿಕ ಪ್ರಕ್ರಿಯೆಯೂ ಬದಲಾಗುವುದರಿಂದ ನೋವು ಅಧಿಕವಾಗಿರುತ್ತದೆ.
ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು
ಪ್ರಿಟರ್ಮ್ ಲೇಬರ್
ಅವಧಿಗೆ ಮುನ್ನವೇ ಪ್ರಸವದ ಸೂಚನೆ ಇದ್ದರೆ, ವಜೈನಲ್ ಡಿಸ್ಚಾರ್ಜ್ ಆಗುವುದರೊಂದಿಗೆ, ಹೊಟ್ಟೆ ನೋವೂ ಕಾಣಿಸಿಕೊಳ್ಳುತ್ತದೆ. ಜೊತೆಗೆ ಬ್ಲೀಡಿಂಗ್ ಕೂಡ ಆಗುತ್ತದೆ.