ಗಂಡ ಹೆಂಡತಿ ಹತ್ತಿರಾಗಿಸೋ ಮ್ಯಾಜಿಕ್‌!

ಈ ಕೇಳಗಿನ ಮೂರು ಘಟನೆಗಳು ದಾಂಪತ್ಯದ ವಿಭಿನ್ನ ಮುಖಗಳು. ದಾಂಪತ್ಯ ಹೇಗೆ ವಿಫಲವಾಗುತ್ತೆ, ಹೇಗೆ ಸಫಲವಾಗುತ್ತೆ, ವಿಫಲವಾದ ಹಾಗೆ ಕಂಡರೂ ಒಳಗೊಳಗೇ ಹೇಗೆ ಚಿಗುರುತ್ತೆ ಅನ್ನೋದಕ್ಕೆ ಉದಾಹರಣೆಗಳು.

Tips to build understand between couples

ಮಿಲಿಂದ್‌ ಸೋಮನ್‌ ಮತ್ತು ಅಂಕಿತಾ. ಇವರಿಬ್ಬರ ನಡುವಿನ ವಯಸ್ಸಿನ ಅಂತರ, ಹರಿದಾಡುತ್ತಿರುವ ಟ್ರೋಲ್‌ಗಳು ಇತ್ಯಾದಿ ವಿಚಾರಗಳನ್ನೆಲ್ಲ ಅತ್ಲಾಗಿ ಇಡೋಣ. ನೇರ ವಿಷಯಕ್ಕೆ ಬಂದರೆ ಇವರಿಬ್ಬರೂ ಇತ್ತೀಚೆಗೆ ಐದು ದಿನಗಳ ಟ್ರೆಕ್ಕಿಂಗ್‌ ಮಾಡಿ ಬಂದರು. ಕಿಲಿಮಂಜಾರೋ ಪರ್ವತ ಶ್ರೇಣಿಗಳಲ್ಲೇ ಅತೀ ಎತ್ತರದ ಉರು ಎಂಬ ಬೆಟ್ಟದ ತುದಿ ಮುಟ್ಟಿಮುತ್ತಿಕ್ಕಿಕೊಂಡರು.

Tips to build understand between couples

ಮುಖದಲ್ಲಿ ದಣಿವಿತ್ತು, ಕೈ ಕಾಲುಗಳು ಸಣ್ಣಗೆ ನಡುಗುತ್ತಿದ್ದವು. ಚಳಿ, ಬಿಸಿಲು ಎನ್ನದ ನಿರಂತರ ನಡಿಗೆಗೆ ಮುಖ ಸುಟ್ಟಿತ್ತು. ಆದರೆ ಮಾತಲ್ಲಿ ವ್ಯಕ್ತಪಡಿಸಲಾಗದ ಯಾವುದೋ ಆನಂದ ಅವರಿಬ್ಬರ ಮುಖದಲ್ಲಿ ಎದ್ದು ಕಾಣುತ್ತಿತ್ತು. ವಯಸ್ಸಿನ ಅಂತರ, ಸಣ್ಣಪುಟ್ಟಜಗಳ, ವೈಮನಸ್ಸು ಎಲ್ಲವನ್ನೂ ಮರೆತು 53ರ ಹರೆಯದ ಮಿಲಿಂದ್‌ ಹಾಗೂ 28ರ ಅಂಕಿತಾ ಹಾಯಾಗಿ ನಗುತ್ತಿದ್ದರು.

*

ಕೌಟುಂಬಿಕ ನ್ಯಾಯಾಲಯದಲ್ಲಿ ಆಪ್ತ ಸಹಾಯಕರಾಗಿದ್ದ ಆ ವ್ಯಕ್ತಿಗೆ ಒಂದು ವಿಲಕ್ಷಣ ಕೇಸ್‌ ಬಂತು. ಮದುವೆಯಾಗಿ ಎರಡೇ ತಿಂಗಳಲ್ಲಿ ದಂಪತಿ ಡಿವೋರ್ಸ್‌ಗೆ ಅರ್ಜಿ ಹಾಕಿದ್ದರು. ಕಾರಣ ಗಂಡನ ಒಂದು ಹಠ. ಮತ್ತೇನಲ್ಲ, ತನ್ನ ರೂಮ್‌ನ (ಅದೀಗ ಅವರಿಬ್ಬರ ರೂಮ್‌ ಆಗಿತ್ತು) ಬಾತ್‌ರೂಂ ಅನ್ನು ತಾನು ಯಾರ ಜೊತೆಗೂ ಶೇರ್‌ ಮಾಡಿಲ್ಲ. ಹೆಂಡತಿಯೂ ಅದನ್ನು ಬಳಸುವಂತಿಲ್ಲ. ಅವಳು ಕೆಳಗಿರುವ ಎಲ್ಲರೂ ಬಳಸುವ ಶೌಚಾಲಯವನ್ನೇ ಬಳಸಬೇಕು.

Tips to build understand between couples

ಇದೊಂದು ವಿಚಾರದಲ್ಲಿ ನೋ ಕಾಂಪ್ರಮೈಸ್‌. ಅರೇ, ದೇಹ, ಮನಸನ್ನೇ ಹಂಚಿಕೊಂಡಾಗಿದೆ, ಆದರೂ ಒಂದು ಬಾತ್‌ರೂಮ್‌ ಶೇರ್‌ ಮಾಡಲ್ಲ ಅಂತಾನಲ್ಲ, ಇವನೆಂಥ ಮನುಷ್ಯ. ಇವನ ಜೊತೆಗೆ ಜೀವನವಿಡೀ ಬದುಕೋದು ಹೇಗೆ.. ಅನ್ನುವ ಅಸ್ಥಿರತೆ, ನೋವು ಆ ನವ ವಿವಾಹಿತೆಯದು. ಇಬ್ಬರೂ ಕಾಂಪ್ರಮೈಸ್‌ ಆಗಲು ರೆಡಿಯಿಲ್ಲ. ಸ್ವಲ್ಪ ಕಾಲ ಈ ವಿಚಾರದಲ್ಲಿ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತಿತ್ತೋ ಏನೋ, ಆ ವ್ಯವಧಾನ ಇಬ್ಬರಿಗೂ ಇರಲಿಲ್ಲ. ಒನ್‌ಫೈನ್‌ ಡೇ ದಾಂಪತ್ಯದಿಂದ ಇಬ್ಬರೂ ಹೊರಬಂದರು.

*

ಹೃತಿಕ್‌ ರೋಶನ್‌ ಮತ್ತು ಸೂಸನ್‌ ತಮ್ಮ ರಿಲೇಶನ್‌ಶಿಪ್‌ನಿಂದ ಹೊರಬಂದು ಕೆಲ ಕಾಲವಾಯ್ತು. ಒಂದಿಷ್ಟುದಿನ ದೂರ ಇದ್ದಿದ್ದಾಯ್ತು. ಆಮೇಲೆ ಅವರಿಬ್ಬರೂ ಹತ್ತಿರಾದರು. ಮಕ್ಕಳ ಜೊತೆಗೆ ಟೂರ್‌ ಹೋಗೋದು, ಒಟ್ಟಿಗೇ ಊಟ ಮಾಡೋದು ಸಾಮಾನ್ಯವಾಯಿತು.

Tips to build understand between couples

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೃತಿಕ್‌ ಖಲೀಲ್‌ ಗಿಬ್ರಾನ್‌ನ ಕೋಟ್‌ ಉದ್ಧರಿಸಿದರು, ‘ನಿಜವಾದ ಪ್ರೀತಿ ಎಂದೂ ದ್ವೇಷವಾಗಿ ಬದಲಾಗಲ್ಲ. ಒಂದು ವೇಳೆ ದ್ವೇಷದತ್ತ ತಿರುಗಿದರೆ ಅದು ಪ್ರೀತಿಯೇ ಅಲ್ಲ’

ಇಬ್ಬರನ್ನು ಬೆಸೆಯುವ ಆ ಜಾದೂ ಏನು?

ಅವರಿಬ್ಬರೂ ಬೇರೆ ಪರಿಸರದಲ್ಲಿ ಬೆಳೆದು ಬಂದ ವಿಭಿನ್ನ ಮನಸ್ಥಿತಿಯವರಾದ ಕಾರಣ ಅಷ್ಟುಬೇಗ ಖುಷಿಯಾಗಿ ಬದುಕೋದು ಕಷ್ಟ. ಅವನ ಯಾವುದೋ ಸ್ವಭಾವ ಅವಳಿಗೆ ಇಷ್ಟಆಗಲ್ಲ. ಅವಳು ಇನ್ನೂ ಮಗು ಥರ ಬಿಹೇವ್‌ ಮಾಡೋದು ಅವನಿಗಿಷ್ಟಇಲ್ಲ. ಅಥವಾ ಅವಳ ಬಗ್ಗೆ ಅವನಿಗೆ ಹುಚ್ಚು ಪೊಸೆಸಿವ್‌ನೆಸ್‌, ಅವನ ಜೊತೆಗಿದ್ದರೆ ಅವಳಿಗೆ ಉಸಿರುಗಟ್ಟಿದಂಥಾ ಅನುಭವ. ಹೀಗೆ ಒಬ್ಬೊಬ್ಬ ದಂಪತಿ ನಡುವೆ ಹಲವು ಸಮಸ್ಯೆಗಳಿರುತ್ತವೆ. ಎಷ್ಟೋ ಸಲ ಇವುಗಳಿಗೆ ಕಮ್ಯೂನಿಕೇಶನ್‌ ಗ್ಯಾಪ್‌ ಮುಖ್ಯ ಕಾರಣ. ಈ ಗ್ಯಾಪ್‌ ಆಗೋದು ಇಬ್ಬರೂ ಜೊತೆಗೆ ಕೂತು ಮಾತಾಡದೇ ಇರೋದರಿಂದ ಅಂತ ಆಪ್ತ ಸಮಾಲೋಚಕರೊಬ್ಬರು ಹೇಳುತ್ತಾರೆ. ಹಾಗೆ ಕೂತು ಮಾತಾಡುವ ಅನುಕೂಲವನ್ನು ಹಿಂದಿನ ವ್ಯವಸ್ಥೆಯೂ ನೀಡುತ್ತಿರಲಿಲ್ಲ. ಇಂದಿನ ಮಾಡರ್ನ್‌ ಲೈಫ್‌ನಲ್ಲಂತೂ ಅದು ಅಸಾಧ್ಯ. ಹೀಗಿರುವಾಗ ಇಬ್ಬರೂ ಖುಷಿಯಾಗಿ, ನೆಮ್ಮದಿಯಿಂದಿರುವುದು ಹೇಗೆ?

ಹೃದಯಕೂ ಮನಸಿಗೂ ಸಂಬಂಧ ಉಂಟೇ?

ಗಂಡ ಹೆಂಡತಿ ಇಬ್ಬರೂ ಕನಿಷ್ಟಎರಡು ತಿಂಗಳಿಗೊಮ್ಮೆ ಇಬ್ಬರೇ ಎಲ್ಲಾದರೂ ಹೋಗಿಬನ್ನಿ. ಒಮ್ಮೆ ಅವನಿಷ್ಟವಾದ ಕಡೆಯಾದರೆ, ಮತ್ತೊಮ್ಮೆ ಅವಳಿಗಿಷ್ಟವಾದೆಡೆ. ಟ್ರೆಕ್ಕಿಂಗ್‌ನಂಥ ಹವ್ಯಾಸಗಳನ್ನು ರೂಢಿಸಿಕೊಂಡರೆ ಇನ್ನೂ ಒಳ್ಳೆಯದು. ಪ್ರಕೃತಿ ಯಾವತ್ತೂ ಚಾಲೆಂಜೇ. ಬೆಟ್ಟವೇರುವ ಉದ್ದಕ್ಕೂ ಒಂದಿಲ್ಲೊಂದು ಸವಾಲು ಬಂದೇ ಬರುತ್ತದೆ. ಅದನ್ನು ಜೊತೆಯಾಗಿ ಫೇಸ್‌ ಮಾಡ್ತಾ ಮಾಡ್ತಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮರೆತು ವಿಚಿತ್ರ ಅಫೆಕ್ಷನ್‌ ಶುರುವಾಗುತ್ತದೆ. ಒಮ್ಮೆ ಬಿಸಿಲಿಗೆ ಬೆವರಿಳಿದರೆ ಕ್ಷಣ ಮಾತ್ರದಲ್ಲಿ ಮಳೆ ಸುರಿದು ದಣಿವು ನಿವಾರಿಸುತ್ತದೆ. ಮೈಯೆಲ್ಲ ಹಗುರಾಗಿಸಿ ಮನಸ್ಸನ್ನು ಹೂವಾಗಿಸುತ್ತದೆ. ಎಲ್ಲಿಂದಲೋ ಬಂದ ಚಿಟ್ಟೆಒಂದು ಕ್ಷಣ ಚಿತ್ತ ಅಪಹರಿಸುತ್ತದೆ. ದೈತ್ಯ ಬಂಡೆಯೇರಲು ಅವಳಿಗೆ ಅವನ ನೆರವು ಬೇಕಾಗುತ್ತೆ. ನಿಸರ್ಗದ ಆ ಶಾಂತತೆ ಎಲ್ಲ ಉದ್ವೇಗಗಳನ್ನೂ ಕಳೆದುಹಾಕುತ್ತೆ.

ಇದೆಲ್ಲ ಸಾಧ್ಯವಾ ಅಂತ ಸುಮ್ಮನೆ ತೆಗೆದುಹಾಕಬೇಡಿ. ಒಮ್ಮೆ ಪ್ರಯತ್ನಿಸಿ. ಪ್ರಕೃತಿ ಮಾಡುವ ಆ ಮ್ಯಾಜಿಕ್‌ ಖಂಡಿತಾ ಮತ್ಯಾರೂ ಮಾಡಲು ಸಾಧ್ಯವಿಲ್ಲ. ಆಧುನಿಕ ಮಾಲ್‌ಗಳು ನಿಮ್ಮ ಕೀಳರಿಮೆಯನ್ನು, ಗ್ಯಾಪ್‌ಅನ್ನು ಇನ್ನಷ್ಟುಹೆಚ್ಚಿಸಬಹುದು. ಆದರೆ ನಿಸರ್ಗ ನಿರುಮ್ಮಳವಾಗಿಸೋದು ಹೆಚ್ಚು.

 

Latest Videos
Follow Us:
Download App:
  • android
  • ios