ಅಜ್ಜಿ ಅಜ್ಜ 50 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಬಾಳಿದವರು. ಇಂಥ ಅಜ್ಜಿ ನಾನು ಮದುವೆಯಾಗುವಾಗ ಯಶಸ್ವೀ ದಾಂಪತ್ಯದ ಕೆಲ ಸೀಕ್ರೆಟ್‌ಗಳನ್ನು ತಿಳಿಸಿಕೊಟ್ಟಿದ್ದಾಳೆ. ನಿಮ್ಮ ಮನೆಯಲ್ಲೂ ಇಂಥ ಅಜ್ಜನೋ ಅಜ್ಜಿಯೋ ಇರಬಹುದು. ಅವರುೂ ಹಲವಾರು ದಾಂಪತ್ಯದ ಮಂತ್ರಗಳನ್ನು ಹೇಳಿಕೊಟ್ಟಿರಬಹುದು. ಅವುಗಳ ಅನುಭವ ಸಾರ ಅದೆಷ್ಟು ಪಕ್ವವಾಗಿದೆ ಎಂಬುದು ನಾವು ಆ ಮಂತ್ರಗಳನ್ನು ಪಠಿಸಿದಾಗಲೇ ಅನುಭವಕ್ಕೆ ಬರುವುದು. ಅಜ್ಜಿ ಹೇಳಿದ ಇಂಥ ಕೆಲವು ಸುಖಸಂಸಾರದ ಗುಟ್ಟುಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳುತ್ತೇನೆ. ನೀವೂ ಅಳವಡಿಸಿಕೊಂಡು ನೋಡಿ.

ಕನಸಲ್ಲಿ ಬಾಯ್‌ಫ್ರೆಂಡ್ ಜತೆ ಹಾಟ್ ರೊಮ್ಯಾನ್ಸ್ ಕನಸು: ಇದಕ್ಕೇನರ್ಥ?

1. ಏನು ಹೇಳುತ್ತಿ ಎಂಬುದಲ್ಲ, ಹೇಗೆ ಹೇಳುತ್ತಿ ಎಂಬುದೇ ಮುಖ್ಯ

ಅಜ್ಜಿ ಯಾವಾಗಲೂ ಹೇಳುತ್ತಾಳೆ, ಸಕ್ಕರೆಯಿಂದ ಹೆಚ್ಚು ಹುಳುಗಳನ್ನು ಆಕರ್ಷಿಸಬಹುದೇ ಹೊರತು ವಿನೆಗರ್‌ನಿಂದಲ್ಲ ಎಂದು. ವಿಷಯ ಯಾವುದೇ ಆಗಿರಲಿ, ಸಿಹಿಯಾದ ಮಾತುಗಳಿಂದ ಅದನ್ನು ಹೇಳಬೇಕೇ ಹೊರತು ಹುಳಿಯಾದ, ಖಾರದ ಮಾತುಗಳಿಂದಲ್ಲ. ಎಂಥ ಸಂದರ್ಭದಲ್ಲೂ ಶಾಂತವಾಗಿ ಮಾತನಾಡುವುದು ಅಗತ್ಯ. ಒಳ್ಳೆಯ ಮಾತುಗಳು ಜೋಡಿಯ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವಂತೆ ನೋಡಿಕೊಳ್ಳುತ್ತವೆ. 

2. ಅವನ(ಳ)ನ್ನು ಗೆಲ್ಲಲು ಬಿಡು

ಅಜ್ಜಿಯ ಈ ಮಾತುಗಳಿಗೆ ನಿಮ್ಮ ವಿರೋಧವಿರಬಹುದು. ಯಾಕೆ ಯಾವಾಗಲೂ ಅವನೇ ಗೆಲ್ಲಲು ಬಿಡಬೇಕು ಎಂದು. ಆದರೆ, ವರ್ಷಗಳು ಉರುಳಿದಂತೆಲ್ಲ ಅಜ್ಜಿಯ ಈ ಮಾತುಗಳ ಪಾಲನೆಯಿಂದ ನೀವು ಸೋತು ಅದೆಷ್ಟೊಂದನ್ನು ಗೆದ್ದಿರೆಂಬುದು ಅರ್ಥವಾಗುತ್ತಾ ಹೋಗುತ್ತದೆ. ಅವನನ್ನು ಯಾವಾಗಲೂ ಗೆಲ್ಲಲು ಬಿಡಬೇಕೆಂಬುದು ನಮ್ಮ ಅಡ್ವಾಂಟೇಜ್ ತೆಗೆದುಕೊಳ್ಳಲು ಬಿಡಬೇಕೆಂಬುದಾಗಲೀ, ನಮ್ಮ ಮೇಲೆ ದೌರ್ಜನ್ಯವೆಸಗಲು ಬಿಡಬೇಕೆಂಬುದಾಗಲೀ ಅಲ್ಲ. ಆದರೆ, ನೆಮ್ಮದಿಯ ಮದುವೆಗಾಗಿ ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಏನೂ ತೊಂದರೆಯಿಲ್ಲ. ಇಬ್ಬರೂ ಸೋಲದಿದ್ದರೆ ವಿವಾಹವೆನ್ನುವುದು ನಿರಂತರ ಜಗಳದ ಝಡಿಮಳೆಯೇ ಆಗಿಬಿಡುತ್ತದೆ. ಸಣ್ಣ ಸಣ್ಣ ಗೆಲುವಿನ ಖುಷಿಯನ್ನು ಬಿಟ್ಟುಕೊಟ್ಟು ಹೆಚ್ಚಿನ ಪ್ರೀತಿಯನ್ನು ಗಳಿಸುವುದರಿಂದ ಲಾಭ ನಮಗೇ ಅಲ್ಲವೇ? 

ಗಂಡನ್ನು ಆಕರ್ಷಿಸಲು ಹೆಣ್ಣು ಮಾಡುತ್ತಿದ್ದದ್ದು ಹೀಗೆ...

3. ಅವನಿ(ಳಿ)ಷ್ಟದ ಅಡುಗೆ ಮಾಡು

ಅಜ್ಜಿ ಯಾವಾಗಲೂ ರುಚಿರುಚಿಯಾದ ಅಡುಗೆ ಮಾಡಿ ಅಜ್ಜನಿಗಾಗಿ ಕಾಯುತ್ತಿದ್ದಳು. ಆದರೆ, ಅಜ್ಜಿಯ ಈ ಮಾತಂತೂ ಈ ಕಾಲಕ್ಕಲ್ಲ ಎಂದು ಅನಿಸಿದರೆ ತಪ್ಪಿಲ್ಲ. ಹುಡುಗ ನಾನೇನೋ ಅದಕ್ಕಾಗಿ ನನ್ನ ಪ್ರೀತಿಸುತ್ತಾನೆಯೇ ಹೊರತು ನನ್ನ ಪಾಕಕೌಶಲ್ಯಕ್ಕಲ್ಲ ಎಂದುಕೊಳ್ಳುತ್ತಿದ್ದೀರಿ ತಾನೇ? ನೀವು ಕೆಟ್ಟದಾಗಿ ಅಡುಗೆ ಮಾಡಿದಿರೆಂದ ಮಾತ್ರಕ್ಕೆ ಆತ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ನಿಜವೇ. ಆದರೆ, ನಿಮಗೆ ಗೊತ್ತಾ? ನಾವು ಪ್ರೀತಿಸುವವರಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಾಗಿ ರುಚಿಯಾದ ಬಿಸಿಯಾದ ಅಡುಗೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ನಮ್ಮ ಸೃಜನಶೀಲತೆಗೂ ಅದು ಕೆಲಸ ಕೊಡುತ್ತದೆ. ಅಡುಗೆ ಕೂಡಾ ಪ್ರೀತಿಯ ಒಂದು ಭಾಷೆ. ಶಬ್ದಗಳಿಲ್ಲದೆಯೇ ನೀವವರಿಗಾಗಿ ಇದ್ದೀರಿ ಎಂದು ಹೇಳುವ ವಿಧಾನ.

4. ಡಬ್ಬದ ಮುಚ್ಚಳ ತೆಗೆಯಲು ಬರುತ್ತಿಲ್ಲವೆಂದು ನಾಟಕವಾಡು

ಅಜ್ಜಿ ಹೇಳ್ತಾಳೆ, ಕೆಲವೊಮ್ಮೆ ಕೆಲವೊಂದು ನಿನಗೆ ಬರುತ್ತಿದ್ದರೂ ಬರದಂತೆ, ಗೊತ್ತಿದ್ದರೂ ಗೊತ್ತಿಲ್ಲದಂತೆ ನಾಟಕವಾಡು ಎಂದು. ಉದಾಹರಣೆಗೆ ಪ್ರಯತ್ನ ಪಟ್ಟರೆ ಉಪ್ಪಿನ ಡಬ್ಬದ ಮುಚ್ಚಳ ನೀವೇ ತೆಗೆಯಬಹುದು. ಆದರೆ, ಬರುತ್ತಿಲ್ಲ ಎಂದು ಹೇಳಿ ನಿಮ್ಮ ಸಂಗಾತಿಯ ಬಳಿ ತೆಗೆಸುವುದರಿಂದ, ಅವರು ನಿಮಗೆ ಅಗತ್ಯ ಎಂಬ ಭಾವನೆಯನ್ನು ತಿಳಿಸಿದಂತಾಗುತ್ತದೆ. ಫಾರ್ಮ್ ಫಿಲ್ ಮಾಡುವುದು, ಟೈರ್ ಚೇಂಜ್ ಮಾಡುವುದು ಇಂಥ ಚಿಕ್ಕ ಚಿಕ್ಕ ಕೆಲಸಗಳನ್ನು ನಿಮಗೆ ಬರುತ್ತಿಲ್ಲವೆಂದು ಹೇಳಿ ಅವರ ಸಹಾಯ ಪಡೆಯಿರಿ.  ಅವರ ಖುಷಿಯನ್ನು ನೋಡಿ ಸವಿಯಿರಿ.

ಹಸ್ತಮೈಥುನ: ಸತ್ಯ, ಮಿಥ್ಯಗಳೇನು?

5. ಗೌರವ ಕೊಡು

ಬಹುಕಾಲದ ಸಂಬಂಧದ ಗುಟ್ಟಿನಲ್ಲಿ ಗೌರವಕ್ಕೆ ಮೊದಲ ಸ್ಥಾನ ಎನ್ನುತ್ತಾಳೆ ಅಜ್ಜಿ. ಸಿಟ್ಟು ಬಂದಾಗ, ಬೇಜಾರಾದಾಗ ಕೂಡಾ ಸಂಗಾತಿಯನ್ನು ಗೌರವದಿಂದ ನಡೆಸಿಕೊಳ್ಳುವುದರಿಂದ ಹೆಚ್ಚಾಗುವುದು ನಿಮ್ಮದೇ ವ್ಯಕ್ತಿತ್ವದ ಗೌರವ. ಅವರು ನಿಮ್ಮ ಮಾತಿಗೆ ವಿರೋಧ ತೋರಿದಾಗಲೂ ಗೌರವದಿಂದಲೇ ಮಾತನಾಡುವುದು, ಗೌರವದಿಂದಲೇ ಅವರ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. 

6. ಸ್ಪರ್ಶಕ್ಕೆ ಸಿಗೋ ಅವಕಾಶ ಮಿಸ್ ಮಾಡಿಕೋಬೇಡ

ಇಡೀ ದಿನ ಇಬ್ಬರ ನಡುವಿನ ಸಣ್ಣ ಪುಟ್ಟ ಸಿಗುವ ಯಾವ ಅವಕಾಶವನ್ನೂ ಮಿಸ್ ಮಾಡಿಕೋಬೇಡ. ಸ್ಪರ್ಶಕ್ಕೆ ಬಹಳ ಶಕ್ತಿಯಿದೆ ಎಂದು ಅಜ್ಜಿ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿದೆ. ಬೆನ್ನಿನ ಮೇಲೊಂದು ತಟ್ಟು, ಅಲ್ಲಲ್ಲಿ ಒಂದು ಕಿಸ್, ಅವಕಾಶ ಸಿಕ್ಕಿದರೆ ಅಪ್ಪುಗೆ, ವಾಕಿಂಗ್ ಹೋಗುವಾಗ ಕೈ ಹಿಡಿದು ನಡೆವುದು ಮುಂತಾದವು ಬಾಂದವ್ಯ ಗಟ್ಟಿಗೊಳಿಸುವ ರೀತಿ ಅಚ್ಚರಿಯದ್ದು ಎಂದು ಅಜ್ಜಿ ಹೇಳುವಾಗ ಆಕೆ ಹಾಗೂ ಅಜ್ಜ ಕೊನೆಗಾಲದಲ್ಲೂ ಕೈ ಹಿಡಿದೇ ನಡೆಯುತ್ತಿದ್ದುದು ನೆನಪಾಗುತ್ತದೆ.