ಮದುವೆಯಾದ ಕೂಡಲೇ ನೀವು ಎದುರಿಸುವ ಸಮಸ್ಯೆಗಳಿವು!

ಸಾಮಾನ್ಯವಾಗಿ ಎಲ್ಲ ಚಿತ್ರಗಳೂ ವಿವಾಹವಾಗುತ್ತಿದ್ದಂತೆ ಕೊನೆಯಾಗುತ್ತವೆ. ಹ್ಯಾಪಿ ಎಂಡಿಂಗ್ ಅಂಥ ನಾವೂ ಖುಷಿಯಾಗುತ್ತೇವೆ. ಅದೇ ಕಾರಣಕ್ಕೋ ಏನೋ, ವಿವಾಹವಾದ ಮೇಲೆ ಎಲ್ಲವೂ ಸಿಹಿಸಿಹಿ ಎಂದೇ ನಮ್ಮ ಕಲ್ಪನೆ. ಆದರೆ, ದಾಂಪತ್ಯದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಕಿರಿಕ್ ಆರಂಭವಾಗಬಹುದು. ಅಂಥವು ಯಾವುವು ನೋಡೋಣ. 

5 issues you will face when you first move in marriage phase

ಮದುವೆ ಎಂದರೆ ಜೀವನಪೂರ್ತಿ ಜೊತೆಯಾಗಿ ಸಂಗಾತಿ ಇರುವ ಖುಷಿ, ಸ್ವಾತಂತ್ರ್ಯ ದೊರೆತ ಖುಷಿ, ಯಾವುದೇ ಅಡ್ಡಿ, ಮೂಗು ತೂರಿಸುವಿಕೆ ಇಲ್ಲದೆ ಆರಾಮಾಗಿ ಬದುಕುವ ಕನಸು, ಇನ್ನು ಬದುಕು ಪೂರ್ತಿ ಪ್ರೀತಿ ಪ್ರೀತಿ ಪ್ರೀತಿಯಷ್ಟೇ ಎಂಬ ಯೋಚನೆ, ಒಟ್ಟಿನಲ್ಲಿ ಮದುವೆ ಎಂದರೆ ಅದೇನೋ ಎಲ್ಲರಿಗೂ ಖುಷಿ.  ಆದರೆ ವಾಸ್ತವದ  ಅರಿವಾಗುವುದು ವಿವಾಹದ ಬಳಿಕವೇ. ಎಲ್ಲದರಂತೆ ಅಲ್ಲೂ ಒಂದಿಷ್ಟು ಪ್ಲಸ್ಸು, ಮೈನಸ್ಸುಗಳಿರುತ್ತವೆ. ಎಲ್ಲವೂ ಚೆನ್ನಾಗಿದ್ದಾಗ ಯಾವುದೋ ಸಣ್ಣ ವಿಷಯ ಧುತ್ತೆಂದು ಸಮಸ್ಯೆಯಾಗಿ ಬದಲಾಗಬಹುದು. ಮೊದಲು ನೀವು ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದ ಮೇಲೆ ಕಂಡುಬರಬಹುದಾದ ತಿಕ್ಕಾಟಗಳಿವು.

1. ಸ್ಥಳ ಹಂಚಿಕೊಳ್ಳುವುದು

ಮದುವೆಯಾದ ಮೇಲೆ ಹಿಂಗಿಂಗೆ ಪ್ರೀತಿಯ ಗೂಡು ಕಟ್ಟಿಕೊಳ್ಳಬೇಕೆಂದು ನೀವು ಎಷ್ಟೇ ಕನಸು ಕಂಡಿರಿ, ಆದರೆ ರಿಯಾಲಿಟಿಗೆ ಬಂದ ಮೇಲೇ ತಿಳಿಯುವುದು ಸ್ಥಳವನ್ನು ಶೇರ್ ಮಾಡಿಕೊಳ್ಳುವುದು ಸುಲಭದ ವಿಷಯವಲ್ಲ ಎಂದು. ಅದರಲ್ಲೂ ನೀವು ಒಬ್ಬರೇ ರೂಂ ಮಾಡಿಕೊಂಡು ಅಭ್ಯಾಸವಾಗಿದ್ದರಂತೂ ನಿಮ್ಮದೇ ಆದ ದಿನಚರಿ, ಕೋಣೆ ಹೀಗೇ ಇರಬೇಕೆಂಬ ಆಸೆಗಳೆಲ್ಲ ಇರುತ್ತವೆ. ಆದರೆ, ಮದುವೆಯಾದ ಮೇಲೆ ಇಬ್ಬರ ನಿದ್ರಾ ಸಮಯ ಬೇರೆ ಬೇರೆ, ಊಟದ ಇಷ್ಟಕಷ್ಟಗಳು ಬೇರೆ ಬೇರೆ ಎಂಬ ಸಣ್ಣ ಸಣ್ಣ ವಿಷಯಗಳೇ ಸಾಕು, ಕಿರಿಕಿರಿ ಎನಿಸಲು.

ಮುಲಾಜಿಗೆ ಬಿದ್ದು ಮದುವೆ ಆಗಬೇಡಿ! ಮನಸ್ಸಿಟ್ಟು ಆಗಿ...

ಇನ್ನು ಸ್ವಚ್ಛತೆಯ ಕುರಿತ ಇಬ್ಬರ ವ್ಯಾಖ್ಯಾನ ಹಾಗೂ ಅಭ್ಯಾಸಗಳು ಬೇರೆ ಬೇರೆಯಾಗಿದ್ದರಂತೂ ಅಡ್ಜಸ್ಟ್ ಆಗುವುದು ಕಷ್ಟ ಕಷ್ಟ. ಉದಾಹರಣೆಗೆ ನಿೀವು ಸಿಕ್ಕಾಪಟ್ಟೆ ಕ್ಲೀನ್ ಎಂದುಕೊಳ್ಳಿ. ನಿಮ್ಮ ಸಂಗಾತಿ ಮಂಚದ ಮೇಲೆ ಒದ್ದೆ ಟವೆಲ್ ಎಸೆಯುವುದು, ಟಾಯ್ಲೆಟ್ ಪೇಪರ್ ಬೇಕೆಂದಂತೆ ಎಳೆದಿಟ್ಟು ಬರುವುದು, ಮುದ್ದೆ ಮುದ್ದೆಯಾದ ಬಟ್ಟೆ ಧರಿಸುವುದು, ಮನೆಗೆಲಸಗಳಲ್ಲಿ ಸಹಾಯ ಮಾಡದಿರುವುದು- ಇಂಥ ಸಂಗತಿಗಳು ಅವರ ಮೈ ಪರಚುವಷ್ಟು, ಸಾಧ್ಯವಾಗದಿದ್ದರೆ ನಮ್ಮದೇ ಮೈ ಪರಚಿಕೊಳ್ಳುವಷ್ಟು ಕೋಪ ತರಿಸುತ್ತವೆ. 

2. ಸ್ವಾತಂತ್ರ್ಯದ ಕೊರತೆ
ನಿಮಗೆ ಇಷ್ಟವಿರಲಿ, ಇಲ್ಲದಿರಲಿ, ಮದುವೆ ಎಂಬುದು ನಿಮ್ಮಿಬ್ಬರ ಸ್ವಾತಂತ್ರ್ಯವನ್ನೂ ಹರಣ ಮಾಡುತ್ತದೆ. ನೀವಿನ್ನು ಫ್ರೀ ಬರ್ಡ್ ಆಗಿರುವುದು ಸಾಧ್ಯವೇ ಇಲ್ಲ. ಅಮ್ಮನ ಮನೆಗೆ ಹೋಗಬೇಕೆನಿಸಿದರೂ ಹೇಳಬೇಕು, ಕೆಲಸದ ಬಳಿಕ ಗೆಳತಿಯರನ್ನು ಮೀಟ್ ಮಾಡಿ ಬರುವುದಾದರೂ ಹೇಳಬೇಕು ಎಂಬ ವಿಷಯ ಹಿಂಸೆ ಎನಿಸತೊಡಗುತ್ತದೆ. ಒಬ್ಬರೇ ಹೈಕ್ ಹೋಗಬೇಕು, ಕಚೇರಿಯ ಗೆಳತಿಯರೊಡನೆ ಟ್ರಿಪ್ ಪ್ಲ್ಯಾನ್ ಮಾಡಿದಿರೆಂದರೂ ಮುಂದಿನ ಬಾರಿ ನಿನ್ನೊಂದಿಗೆ ಹೋಗುತ್ತೇನೆ ಎಂಬ ಮಾತುಗಳನ್ನು ಸೇರಿಸಿ ಅವನನ್ನು ಒಪ್ಪಿಸಬೇಕು. ಇದರಿಂದ ಜೋಡಿಯಾಗುವ ಭರದಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳುತ್ತಿರುವ ಭೀತಿ ಆವರಿಸತೊಡಗುತ್ತದೆ. ಇದಕ್ಕಾಗಿ ಕಡೆಗೆ ನೀವು ಪತಿ ಹಾಗೂ ಮದುವೆಯನ್ನು ಹಳಿಯಲು ಆರಂಭಿಸುತ್ತೀರಿ.

ಯಶಸ್ವೀ ವಿವಾಹ; ಅಜ್ಜಿ ಹೇಳಿದ ಅನುಭವ ಪಾಠಗಳು!

3. ಫೈನಾನ್ಸ್

ಒಬ್ಬೊಬ್ಬರ ಖರ್ಚಿನ ರೂಲ್ಸ್ ಬೇರೆಯೇ ಆಗಿರುತ್ತದೆ. ಆತ ನೀವಂದುಕೊಂಡದ್ದಕ್ಕಿಂತ ಜುಗ್ಗ ಆಗಿದ್ದರೆ, ನೀವು ಬೇಕಾಬಿಟ್ಟಿ ಖರ್ಚು ಮಾಡುವ ಅಭ್ಯಾಸವಿಟ್ಟುಕೊಂಡಿದ್ದರೆ, ವಿವಾಹದ ಬಳಿಕ ಆತನ ಜುಗ್ಗತನ ನೋಡಿ ನಿಮಗೆ, ನಿಮ್ಮ ಅಶಿಸ್ತಿನ ಖರ್ಚನ್ನು ನೋಡಿ ಆತನಿಗೆ ಕೋಪ ಬರಬಹುದು. ಮನೆಯ ಖರ್ಚು ಶೇರ್ ಮಾಡುವುದಾದರೆ, ಅದರಿಂದ ನೀವು ಮುಂಚಿನಂತೆ ಬೇಕೆಂದಿದ್ದೆಲ್ಲ ಕೊಳ್ಳಲಾಗುತ್ತಿಲ್ಲ ಎಂಬ ಸಿಟ್ಟು ನಿಮಗೆ, ಶೇರ್ ಮಾಡದಿದ್ದರೆ ಮನೆಯ ಖರ್ಚೆಲ್ಲ ನಾನು ನೋಡಿಕೊಳ್ಳುತ್ತಿಲ್ಲವೇ ಎಂಬ ಮಾತು ಕೋಪ ಬಂದಾಗ ಆತನಿಂದ ಬರಬಹುದು. ಒಟ್ಟಿನಲ್ಲಿ ಹಣದ ವಿಷಯ ಜಗಳ ತಂದಿಡುವ ಸಾಧ್ಯತೆಗಳು ಹೆಚ್ಚು.

4. ಅತ್ತೆ ಮಾವ

ನಮ್ಮ ದೇಶದಲ್ಲಿ ಮದುವೆಯಾದ ಮೇಲೆ ಗಂಡನ ತಂದೆತಾಯಿಯೊಂದಿಗಿರಬೇಕೆಂಬುದು, ಅವರು ಹೇಳಿದಂತೆ ಕೇಳಿಕೊಂಡು ಅವರ ಸೇವೆ ಮಾಡಿಕೊಂಡು ಇರಬೇಕೆಂಬುದು ಶತಮಾನಗಳಿಂದ ಹರಿದುಬಂದ ನಿಯಮ. 
ಹೊಸ ಕುಟುಂಬದ ನಿಯಮಗಳು, ದಿನಚರಿಗೆ ಅಡ್ಜಸ್ಟ್ ಆಗುವ ಜೊತೆಗೆ, ಇದುವರೆಗೂ ಅಭ್ಯಾಸವೇ ಇಲ್ಲದಂಥ ಅವರ ಮಾತು ಕೇಳುವುದು, ಅವರ ಕಷ್ಟನಷ್ಟಗಳಿಗಾಗಿ ಬದಲಾಗುವುದು ಇವೆಲ್ಲವೂ ವಧುವಿಗೆ ಸುಲಭದ ವಿಷಯವೇನಲ್ಲ. ಇದರ ಮಧ್ಯೆ, ತಾನು ಇಷ್ಟೆಲ್ಲ ಮಾಡಿದರೂ ತನ್ನ ಪೋಷಕರನ್ನು ಮಾತ್ರ ಪತಿ ಗಮನಿಸಿಕೊಳ್ಳುವುದಿಲ್ಲವೆಂಬ ಸಿಟ್ಟು ಆಗಾಗ ಇಣುಕುತ್ತಿರುತ್ತದೆ. ಕಡೆಗೆ ಇದೇ ವಿಷಯಗಳು ಮನೆಯಲ್ಲಿ ಜಗಳಗಳಿಗೆ ಕಾರಣವಾಗಬಹುದು. 

ಕನಸಲ್ಲಿ ಬಾಯ್‌ಫ್ರೆಂಡ್ ಜತೆ ಹಾಟ್ ರೊಮ್ಯಾನ್ಸ್ ಕನಸು: ಇದಕ್ಕೇನರ್ಥ?

5. ಲೈಂಗಿಕ ವಿಷಯಗಳು

ಡೇಟಿಂಗ್ ಸಂದರ್ಭದಲ್ಲಿ ಸೆಕ್ಸ್ ಎಂಬುದು ಸಿಕ್ಕಾಪಟ್ಟೆ ಎಕ್ಸೈಟಿಂಗ್. ಏಕೆಂದರೆ ಆಗ ನಿಮಗೆ ಸಾಕಷ್ಟು ಏನೂ ಸಿಕ್ಕುತ್ತಿರುವುದಿಲ್ಲ. ಸಣ್ಣ ಪುಟ್ಟ ಸ್ಪರ್ಶಕ್ಕೂ ಪುಳಕಗೊಳ್ಳುತ್ತಿರುತ್ತೀರಿ. ಆದರೆ, ಮದುವೆಯಾದ ಮೇಲೆ 
ಅದು ಆಕರ್ಷಣೆ ಕಳೆದುಕೊಳ್ಳಬಹುದು. ಬೋರಿಂಗ್ ಎನಿಸಬಹುದು. ಅಥವಾ ನೀವು ನಿರೀಕ್ಷಿಸಿದಷ್ಟು ನಿಮಗೆ ಸಿಗುತ್ತಿಲ್ಲ ಎನಿಸಬಹುದು. ಆತನ ನಿರೀಕ್ಷೆ ನಿಮಗೆ ಹಿಂಸೆಯಾಗಬಹುದು...ಒಟ್ಟಿನಲ್ಲಿ ಲೈಂಗಿಕ ವಿಷಯಗಳು ಕೂಡಾ ಜಗಳ, ಸಮಸ್ಯೆಯನ್ನು ಎಳೆತರುತ್ತವೆ. 

Latest Videos
Follow Us:
Download App:
  • android
  • ios