ಮೈಸೂರಿನ 54 ವರ್ಷದ ಹೇಮಾ (ಹೆಸರು ಬದಲಿಸಲಾಗಿದೆ) ಕಳೆದ 26 ವರ್ಷಗಳಿಂದ ಮಲಬದ್ಧತೆಯಿಂದ ನರಳುತ್ತಿದ್ದರು. ಆಕೆ ಮಗುವಿಗೆ ಜನ್ಮ ನೀಡಿದಾಗಿನಿಂದಲೂ ಈ ಸಮಸ್ಯೆ ಆರಂಭಗೊಂಡಿದ್ದು, ಹಲವು ವೈದ್ಯರನ್ನು ಭೇಟಿಯಾಗಿ ವಿವಿಧ ಚಿಕಿತ್ಸೆ ಪಡೆದಿದ್ದರು. ಇವರಿಗೆ ಅಬ್ಸ್ಟ್ರಕ್ಟೀವ್‍ ಡೆಫಕೇಷನ್ ಸಿಂಡ್ರೋಮ್‍ (ಒಡಿಎಸ್) ಎಂದು ವೈದ್ಯರೀಗ ಪತ್ತೆ ಹಚ್ಚಿದ್ದಾರೆ.

ಮಲಬದ್ಧತೆ ತಡೆಯಲು ಈ ಹಣ್ಣು ತಿನ್ನಿ

ಸಾಮಾನ್ಯವಾಗಿ ಮಲವಿಸರ್ಜನೆ ಸುಸೂತ್ರವಾಗಿ ಆಗದ ರೋಗಗಿಳು, ತಮ್ಮ ಕೈ ಬೆರಳ ಬಳಸಿ, ಮಲವಿಸರ್ಜಿಸಲು ಯತ್ನಿಸುತ್ತಾರೆ. ಇನ್ನು ಕೆಲವರು ಕೈಗಳಿಂದ ಪುಷ್ಠಗಳನ್ನು ಒತ್ತಿ ಹಿಡಿದು ಮಲ ವಿಸರ್ಜಿಸುತ್ತಾರೆ. ಒಂದರೆಡು ದಿನಕ್ಕೆ ಇದು ಸೀಮಿತವಾಗದರೆ ಓಕೆ, ಆದರೆ, ಅದೇ ಚಟವಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇಂಥ ಸಮಸ್ಯೆಗಳಿಗೆ stapled transanal rectal resection ಎಂಬ ಪ್ರಕ್ರಿಯೆ ಮೂಲಕ ಶಸ್ತ್ರಚಕಿತ್ಸೆ ಸೂಕ್ತ.

ಲೈಂಗಿಕ ಅತೃಪ್ತಿಗೆ ಮಲಬದ್ಧತೆಯೂ ಒಂದು ಕಾರಣ

ಒಡಿಎಸ್‍ ಲಕ್ಷಣಗಳು..
ಅಬ್‌ಸ್ಟ್ರಕ್ಟಿವ್‍ ಡೆಫಕೇಷನ್‍ ಸಿಂಡ್ರೋಮ್‍ (ಒಡಿಎಸ್‍) ಅನ್ನು ಐಸ್‍ಬರ್ಗ್ ಸಿಂಡ್ರೋಮ್‍ ಎಂದೂ ಕರೆಯುತ್ತಾರೆ. ಇದು ಮಲಬದ್ಧತೆಗಿರೋ ಇನ್ನೊಂದು ಹೆಸರು. ಮಲವಿಸರ್ಜನೆ ವೇಳೆ ಸಮಸ್ಯೆ, ತುರಿಕೆ, ಅನಿಮಸ್‍ ( ಮಲವಿಸರ್ಜಿಸುವಾಗ ಪೆಲ್ವಿಕ್‍ ಫ್ಲೋರ್‍ ಮೂಳೆಗೆ ವಿಶ್ರಾಂತಿ ದೊರೆಯದಿರುವುದು), ಸಂಪೂರ್ಣ ಮಲವಿಸರ್ಜನೆಯಾಗದಿರುವುದು, ಪೆಲ್ವಿಕ್‍ ಭಾರವೆನಿಸುವುದು ಮತ್ತಿತರ ಲಕ್ಷಣಗಳನ್ನು ಈ ಕಾಯಿಲೆ ಒಳಗೊಂಡಿದೆ.

ಮಕ್ಕಳಲ್ಲಿ ಮಲಬದ್ಧತೆ ನಿವಾರಿಸಲು ಇಲ್ಲಿದೆ ಬೆಸ್ಟ್ ಮದ್ದು

ಒಡಿಸಿ ಸಾಮಾನ್ಯವಾಗಿ 45ರಿಂದ 60 ವರ್ಷ ವಯಸ್ಸಿನ ಮಹಿಳೆಯರನ್ನು ಕಾಡುವುದು ಹೆಚ್ಚು. ಇದನ್ನು ತೀವ್ರ ಮಲಬದ್ಧತೆ ಅಥವಾ ರೆಕ್ಟಲ್‍  ಔಟ್‍ಲೆಟ್‍ ಅಬ್‍ಸ್ಟ್ರಕ್ಷನ್‍ ಎಂದು ಪರಿಗಣಿಸುತ್ತಾರೆ. ಇದರಿಂದ ಗುದನಾಳದ ನರ ಬಲಹೀನತೆಗೊಳ್ಳುವುದರಿಂದ ಅದು ಸುಲಭ ಮಲವಿಸರ್ಜನೆಗೆ ಅಡ್ಡಿ ಮಾಡುತ್ತದೆ. ಅದರೆ, ರೋಗಿಗಳು ಈ ಸಮಸ್ಯೆಯ ಗಂಭೀರತೆ ಅರಿಯದೇ, ಮನೆ ಮದ್ದಿನ ಮೊರೆ ಹೋಗುತ್ತಾರೆಯೇ ಹೊರತು ವೈದ್ಯರನ್ನು ಭೇಟಿಯಾಗುವುದಿಲ್ಲ.

ತರಕಾರಿ ಜ್ಯೂಸ್ ಆರೋಗ್ಯಕ್ಕೆ ಏಕೆ ಬೇಕು?

ರೋಗಕ್ಕೆ ಕಾರಣ...
ಮಲ ವಿಸರ್ಜಿಸುವಾಗ ಗುದನಾಳ ಹಾಗೂ ಗುದದ್ವಾರದ ನರಗಳಿಗೆ ವಿಶ್ರಾಂತಿ ದೊರೆಯದಿರುವುದು ಒಡಿಎಸ್‍ಗೆ ಮುಖ್ಯ ಕಾರಣ. ಪಾಶ್ಚಿಮಾತ್ಯ ಜಗತ್ತಿನ ಶೇ.2ರಿಂದ ಶೇ. 30ರಷ್ಟು ಜನರು ತೀವ್ರ ಮಲಬದ್ಧತೆಯಿಂದ ಬಳಲುತ್ತಿದ್ದು, ಅವರಲ್ಲಿ ಶೇ.30ರಿಂದ 50ರಷ್ಟು ಜನರು ODCಗೆ ತುತ್ತಾಗಿರುತ್ತಾರೆ. ಈ ರೋಗದಿಂದ ಬಳಲುತ್ತಿರುವವರ ಮಲ ಗುದನಾಳ ತಲುಪಿದರೂ, ಖಾಲಿ ಮಾಡಿಸುವುದು ಕಷ್ಟ. ಅಲ್ಲಿಯೇ ಮಲ ಕೂತು, ಸೋಂಕಾಗುವ ಸಾಧ್ಯತೆಯೂ ಇರುತ್ತದೆ. ಅಲ್ಲದೇ ದುರ್ವಾಸನೆ, ವಿಪರೀತ ನವೆ, ನೋವು....ಕಾಡಲು ಆರಂಭಿಸುತ್ತದೆ.
 
ODS ಪತ್ತೆ ಹಚ್ಚುವುದು ಹೇಗೆ?

- ಎಷ್ಟೇ ಪಥ್ಯದ ಆಹಾರ ತಿಂದಲೂ, ಮಲ ವಿಸರ್ಜನೆಗೆ ತಿಣುಗಾಡಿದರೆ, ಈ ಸಮಸ್ಯೆ ಇದೆ ಎಂದರ್ಥ.
- ರೋಗಿ ಆರೋಗ್ಯದ ಇತಿಹಾಸವನ್ನು ಪರಿಶೀಲಿಸುವುದೊಳಿತು. ವಂಶಪಾರಂಪರ್ಯವೂ ಹೌದು.
- ವಾರವಾದರೂ ತೀವ್ರ ಮಲಬದ್ಧತೆ, ಮಲವಿಸರ್ಜನೆಗೆ ಕಷ್ಟವಾದರೆ ಇದು ಆ ರೋಗದ ಲಕ್ಷಣ.
- 15 ನಿಮಿಷಕ್ಕೂ ಹೆಚ್ಚು ಕಾಲ ಒತ್ತಡ ಹಾಕುತ್ತಿದ್ದರೆ...
-ಸಂಪೂರ್ಣ ಮಲ ವಿಸರ್ಜನೆಯಾಗದಿರುವುದು. ಆರು ತಿಂಗಳ ನಂತರವೂ ಈ ಸಮಸ್ಯೆ ಇದ್ದರೆ...
- ಪದೇ ಪದೇ ಹೊರ ಹೋಗಬೇಕೆಂದು ಎನಿಸುವುದು. ಆದರೂ, ಕ್ಲಿಯರ್ ಆಗದಿರುವುದು. 
- ಸಾಕಷ್ಟು ಯತ್ನಿಸದರೂ ಮಲವಿಸರ್ಜನೆಗೆ ಅಡ್ಡಿ. 
- ಮಲವಿಸರ್ಜನೆ ನಂತರವೂ ಗದುದ್ವಾರ ಸ್ವಚ್ಛಗೊಳಿಸುವಾಗ ತೊಂದರೆಯಾಗುವುದು. 
- ಮಲವಿಸರ್ಜನೆಗೆ ನೆರವಾಗುವ ಎನಿಮಾ ಮತ್ತಿತರರ ಔಷಧಗಳ ಬಳಕೆ ಹೆಚ್ಚಾದರೆ...

ಯಾರಿಗೆ ಹೆಚ್ಚು ತೊಂದರೆ?
- ಗಾಯ, ವಯಸ್ಸು, ಪಚನನಾಳದ ಸಮಸ್ಯೆ ಇಲ್ಲವೇ ಅನುವಂಶಿಕ ಅಥವಾ ಕೆಲವು ನರದ ಸಮಸ್ಯೆಯಿಂದ ಗುದದ್ವಾರ ವಿರೂಪಗೊಳ್ಳುವುದು.
- ಪ್ರಸವದ ನಂತರ ಮಹಿಳೆಯರಿಗೆ ಈ ಸಮಸ್ಯೆ ಕಾಡುವುದು ಹೆಚ್ಚು. ಪ್ರಸವ ವೇಳೆ ಗುದದ್ವಾರದ ಆಂತರಿಕ  ಅಂಗಾಂಶಗಳಿಗೆ ಹಾನಿ ಮಾಡಿದ್ದಲ್ಲಿ ಈ ಸಮಸ್ಯೆ ಗ್ಯಾರಂಟಿ.
- ಕೆಳಹೊಟ್ಟೆ ಅದರಲ್ಲೂ ಗುದ ನಾಳದ ಅಂಗಗಳ ಶಸ್ತ್ರ ಚಿಕಿತ್ಸೆಗೊಳಗಾದ ಮಧ‍್ಯವಯಸ್ಕ ಮಹಿಳೆಗೆ ಈ ಸಮಸ್ಯೆ ಬಿಡೋಲ್ಲ.
- ಗರ್ಭಿಣಿಯರಿಗೆ ಇದು ಕಾಡೋ ಕಾಮನ್ ಪ್ರಾಬ್ಲಂ. ತುಂಬಾ ಚಿಂತಿತರಾಗೋ ಅಗತ್ಯವಿಲ್ಲ. 
- ಹೊಟ್ಟೆ ಮೇಲೆ ಒತ್ತಡ ಹೆಚ್ಚಾದರೂ ಇದು ಕಾಡುತ್ತೆ.


ಯಾವ ವೈದ್ಯರನ್ನು ಭೇಟಿಯಾಗಬೇಕು?

ಈ ಸಮಸ್ಯೆ ಇದ್ದರೆ ಗುದನಾಳದ ತಜ್ಞರು, ರೇಡಿಯಾಲಜಿಸ್ಟ್, ಗರ್ಭಕೋಶ ಹಾಗೂ ಪ್ರಸೂತಿ ತಜ್ಞರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಬಹುದು.


ಜೀವನ ಶೈಲಿ ಬದಲಾಗಲಿ...
- ಒಡಿಎಸ್‍ ನಿರ್ವಹಣೆ ವ್ಯಕ್ತಿಯ ಆಹಾರ ಕ್ರಮ, ಔಷಧಗಳೂ, ಮಾನಸಿಕ ತರಬೇತಿ, ಯೋಗ, ಗುದನಾಳ ತೊಂದರೆಗೆ ಚಿಕಿತ್ಸೆ ಪಡೆಯಬಹುದು. - ಕೆಲವೊಮ್ಮೆ ಶಸ್ತ್ರಚಿಕಿತ್ಸೆಯೂ ಬೇಕಾಗುತ್ತದೆ.
- ಹಸಿರು ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಬೇಕು.
- ಬೇಕರಿ ತಿನಿಸು ಹಾಗೂ ಹೆಚ್ಚು ಖಾರ ಇರೋ ಪದಾರ್ಥಗಳಿಂದ ದೂರವಿರಿ.
- ದಿನಕ್ಕೆ ಕನಿಷ್ಠ 2 ಲೀಟರ್‍ ನೀರು ಕುಡಿಯಬೇಕು. 
- ಮಲ ವಿಸರ್ಜನೆಗೆ ಕುಳಿತುಕೊಳ್ಳುವ ಭಂಗಿಯೆಡೆಗೆ ಇರಲಿ ಗಮನ.
- ಉಸಿರುಗಟ್ಟಿ ಒತ್ತಡ ಹಾಕುವುದನ್ನು ತಡೆಯಿರಿ.
- ಗುದನಾಳದ ನರಗಳಿಗೆ ವಿಶ್ರಾಂತಿ ನೀಡುವುದು.
- ಆಗಾಗ ಟಬ್ಬಿಗೆ ಉಗುರು ಬೆಚ್ಚಗಿನ ನೀರು ಹಾಕಿಕೊಂಡು, ಕುಳಿತುಕೊಳ್ಳಿ.

ಚಿಕತ್ಸೆ, ಪರೀಕ್ಷಗಳೇನು?
ರೋಗದ ತೀವ್ರತೆ, ಗುಣಲಕ್ಷಣಗಳನ್ನು ಆಧರಿಸಿ, ಪ್ರೋಕ್ಟೋಗ್ರಫಿ, ಎಂಆರ್‍ಐ, ಅನೋರೆಕ್ಟಲ್‍ ಇಮೇಜಿಂಗ್‍, ಮಾನೋಮೆಟ್ರಿ, ಎಎಂಜಿ, ಎಲೆಕ್ಟ್ರೋಮೈಗ್ರಫಿ, ಸಿಗ್ಮೋಸ್ಕೋಪಿ, ಕೊಲೊನೋಸ್ಕೋಪಿ ಮತ್ತಿತರರ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

ಇದು ಗಂಭೀರ ಕಾಯಿಲೆಯಾಗಿದ್ದು, ಕಳೆದೊಂದು ದಶಕದಿಂದೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿದೆ. ಕೆಲವು ಬಾರಿ ರೋಗಿಗಳು ಈ ರೋಗಕ್ಕೆ ಸಂಪೂರ್ಣ ತಪ್ಪಾಗಿಯೇ ಚಿಕಿತ್ಸೆ ಪಡೆಯುತ್ತಾರೆ. ಆದ್ದರಿಂದ ಸೂಕ್ತ ವೈದ್ಯರ ಭೇಟಿ ಹಾಗೂ ತಪಾಸಣೆ ಅತ್ಯಗತ್ಯ.
 


ಇಂಥ ಸಮಸ್ಯೆಗಳಿಗೆ stapled transanal rectal resection ಎಂಬ ಪ್ರಕ್ರಿಯೆ ಮೂಲಕ ಶಸ್ತ್ರಚಕಿತ್ಸೆ ಸೂಕ್ತ. 15-20 ನಿಮಿಗಳಲ್ಲಿ ಮುಗಿಸಬಹುದಾದ ಈ ಶಸ್ತ್ರ ಚಿಕಿತ್ಸೆಯಿಂದ ಬಹುಬೇಕ ಸುಧಾರಿಸಿಕೊಳ್ಳಬಹುದು.
- ಡಾ. ಪರಮೇಶ್ವರ್ ಸಿ.ಎಂ, ಕರುಳು ಕ್ಯಾನ್ಸರ್ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯ ತಜ್ಞ