ದಿನವಿಡೀ ದಣಿದ ಹೆಣ್ಣಿಗೆ ಲೈಂಗಿಕ ಸುಖ ಸಿಗುವುದು ಅಷ್ಟು ಸುಲಭವಲ್ಲ. ಕೇವಲ ಶೇ.10ರಷ್ಟು ಮಂದಿ ಮಾತ್ರ ಲೈಂಗಿಕ ಪರಾಕಾಷ್ಠೆ ತಲುಪುತ್ತಾರಂತೆ. ಉಳಿದವರು ಒಲ್ಲದ ಮನಸ್ಸಿನಿಂದಲೇ ಆ ಕ್ರಿಯೆಗೆ ದೇಹವನ್ನು ಒಡ್ಡುತ್ತಾರೆಂಬುವುದನ್ನು ಅಧ್ಯಯನವೊಂದು ದೃಢಪಡಿಸಿದೆ.

ದಣಿದ ದೇಹಕ್ಕೆ ನೆಮ್ಮದಿಯ ನಿದ್ರೆಯನ್ನು ಹೊರತು ಪಡಿಸಿ ಬೇರೇನೂ ಬೇಡವಾಗಿರುತ್ತೆ. ಇದಲ್ಲದೇ ಬೇರೆ ಕಾರಣಗಳೂ ಲೈಂಗಿಕ ಅತೃಪ್ತಿಗೆ ಕಾರಣವಾಗಬಲ್ಲದು. ಯಾವವು ಅವು?

  • ಗಂಟೆಗಟ್ಟಲೆ ಒಂದೆಡೆ ಕೂತು ಕೆಲಸ ಮಾಡುವುದರಿಂದ ನಿಮ್ಮ ಬಾಸ್‌ ಅನ್ನು ಖುಷಿ ಪಡಿಸಬಹುದು. ಆದರೆ, ಸಾಂಸರಿಕ ಬದುಕನ್ನು ಹಾಳು ಮಾಡುತ್ತದೆ ಎಂಬ ವಿಷಯ ಗೊತ್ತಾ? ಕುಳಿತೇ ಕೆಲಸ ಮಾಡುವುದರಿಂದ ಕಿಬ್ಬೊಟ್ಟೆ ಮೇಲೆ ಒತ್ತಡ ಹೆಚ್ಚಾಗಿ, ಬೊಜ್ಜು ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ ಇದು ಲೈಂಗಿಕ ಪರಾಕಾಷ್ಠೆ ತಲುಪಲೂ ಅಡ್ಡಿಯಾಗಬಹುದು. ದೈಹಿಕ, ಮಾನಸಿಕ ಹಾಗೂ ಲೈಂಗಿಕ ಆರೋಗ್ಯ ಸುಧಾರಣೆಗೆ ಪ್ರತೀ ಅರ್ಧ ಗಂಟೆಗೊಮ್ಮೆಯಾದರೂ ಕೂತಲ್ಲಿಂದ ಎದ್ದು ಹೋಗಿ ಫ್ರೆಶ್ ಆಗಿ ಬರುವುದು ಒಳ್ಳೆ ಅಭ್ಯಾಸವೆನ್ನುತ್ತಾರೆ ತಜ್ಞರು. ಸ್ವಲ್ಪ ನಡಿಗೆ, ಹಾಗೂ ಯೋಗ-ವ್ಯಾಯಾಮವೂ ನಿಮ್ಮನ್ನು ಲವಲವಿಕೆಯಿಂದ ಇರಲು ಸಹಕರಿಸುತ್ತದೆ.
  •  ಶೋಕಿಗೆಂದು ಧರಿಸುವ ಹೈ ಹೀಲ್ಸ್ ಸೊಂಟ ನೋವು ತರಿಸಬಲ್ಲದು. ಇದು ಜನನಾಂಗದ ಮೇಲೂ ಒತ್ತಡ ಹೆಚ್ಚಿಸುತ್ತದೆ. ಇದು ಲೈಂಗಿಕ ಜೀವನಕ್ಕೂ ಕುತ್ತು ತಲುಪಬಲ್ಲದು. ಯಾವುದೇ ಸುಖ ಸಿಗದೇ ಸುಮ್ಮನೆ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಂತಾಗುತ್ತದೆ.
  • ದಂಪತಿಯಲ್ಲಿ ಒಬ್ಬರಂತೆ ಮತ್ತೊಬ್ಬರ ಅಭಿರುಚಿ ಇರುವುದಿಲ್ಲ. ಆದ್ದರಿಂದ ಸಂಗಾತಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡು, ಭಾವನೆಗಳನ್ನು ಹಂಚಿಕೊಳ್ಳುವ ಜತೆಗೆ, ಯಾವ ಲೈಂಗಿಕ ಭಂಗಿ ಹೆಚ್ಚು ಸುಖ ನೀಡಬಲ್ಲದು ಎಂಬುದನ್ನು ಮಾತನಾಡಿ, ಮುಂದುವರಿಯುವುದು ಒಳಿತು. 
  • ಮಲಬದ್ಧತೆಯಂಥ ಸಮಸ್ಯೆಯೂ ಹಲವು ಸಮಸ್ಯೆಗಳಿಗೆ ಕಾರಣವಾಗಬಲ್ಲದು. ದಿನಕ್ಕೆ 2-3 ಲೀ. ನೀರು ಕುಡಿಯುವುದರಿಂದ ಸಣ್ಣ ಪುಟ್ಟ ದೈಹಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಲ್ಲದೇ, ಲೈಂಗಿಕ ಸಮಸ್ಯೆಗೂ ಮದ್ದಾಗುತ್ತದೆ.
  • ಗೊರಕೆ, ವಿಚಿತ್ರ ಅಭ್ಯಾಸಗಳು, ಸ್ವಚ್ಛತೆಯ ಕೊರತೆ ದಂಪತಿಯಲ್ಲಿ ಒಬ್ಬರಿಗಿದ್ದರೂ ಲೈಂಗಿಕ ಅತೃಪ್ತಿ ಗ್ಯಾರಂಟಿ. ಇವೆಲ್ಲವನ್ನೂ ಇಬ್ಬರೂ ಗಮನಿಸುವುದೊಳಿತು. 
  • ಯಾವುದ್ಯಾವುದೋ ಔಷಧಿ, ಮಾತ್ರೆಗಳ ಸೇವನೆ ಲೈಂಗಿಕ ಜೀವನಕ್ಕೆ ಅಡ್ಡಿಯಾಗಬಲ್ಲದು. ಇದು ಲಿಬಿಡೋ ಕಡಿಮೆಯಾಗುವಂತೆ ಮಾಡುತ್ತದೆ. ಕೆಲವು ಔಷಧಿಗಳಂತೂ ಲೈಂಗಿಕ ಆಸಕ್ತಿಯನ್ನೇ ಕುಂದಿಸಬಲ್ಲದು. ತೆಗೆದುಕೊಳ್ಳುವ ಮಾತ್ರೆ ಇಂಥ ಸಮಸ್ಯೆಗಳು ತಾರದಂತೆ ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದೊಳಿತು. ಪ್ರಾಮಾಯಾಮದಂಥ ಕೆಲವು ಅಭ್ಯಾಸಗಳು ಹಲವು ಸಮಸ್ಯೆಗಳಿಗೆ ಮದ್ದಾಗುವಂತೆ, ಸುಖ ಲೈಂಗಿಕ ಜೀವನಕ್ಕೂ ದಾರಿ ಮಾಡಿಕೊಡಬಲ್ಲದು.
  • ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ನಂತರ ಮೂತ್ರ ವಿಸರ್ಜನೆ ಮಾಡುವುದರಿಂದ ಮುತ್ರ ನಾಳದ ತೊಂದರೆ ತಡೆಯಬಹುದು. ಆದರೆ, ಬ್ಲಾಡರ್ ಫುಲ್ ಆಗಿದ್ದರೆ ಸುಖ ಅನಿಭವಿಸುವುದು ಕಷ್ಟ. ಕಿಬ್ಬೊಟ್ಟೆ ನೋವಿನಂಥ ಸಣ್ಣ ಪುಟ್ಟ ಸಮಸ್ಯೆಗಳು ಎಲ್ಲ ಸುಖವನ್ನೂ ಕಸಿದುಕೊಂಡು, ಹಿಂಸೆ ಅನುಭವಿಸುವಂತೆ ಮಾಡುತ್ತದೆ. ಅದಕ್ಕೆ ಸೆಕ್ಸ್‌ಗೂ ಮುನ್ನ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆ ಅಭ್ಯಾಸ.