ತರಕಾರಿ ಜ್ಯೂಸ್ ಯಾಕೆ ಕುಡಿಯಬೇಕು?

Vegitable Juice good for Health
Highlights

ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯೋದು, ಐದು ಕ್ಯಾರೆಟ್ ಸಿಪ್ಪೆ  ತೆಗೆದು ತಿನ್ನೋದಕ್ಕೆ ಸಮ. ಈ ಜ್ಯೂಸ್‌ನಿಂದ ದೇಹಕ್ಕೆ ಖನಿಜಾಂಶಗಳು, ಜೀವಸತ್ವಗಳು ಸಮೃದ್ಧವಾಗಿ ದೊರೆಯುತ್ತವೆ. 

ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯೋದು, ಐದು ಕ್ಯಾರೆಟ್ ಸಿಪ್ಪೆ  ತೆಗೆದು ತಿನ್ನೋದಕ್ಕೆ ಸಮ. ಈ ಜ್ಯೂಸ್‌ನಿಂದ ದೇಹಕ್ಕೆ ಖನಿಜಾಂಶಗಳು, ಜೀವಸತ್ವಗಳು ಸಮೃದ್ಧವಾಗಿ ದೊರೆಯುತ್ತವೆ. ಮಲಬದ್ಧತೆ, ತೂಕ ಹೆಚ್ಚಾಗೋದು, ಡಯಾಬಿಟೀಸ್, ಬೊಜ್ಜಿನಂಥ ಸಮಸ್ಯೆಗಳು ಕಡಿಮೆಯಾಗುತ್ತವೆ.

ಹಾಗಂತ ತರಕಾರಿಯನ್ನು ಹಾಗೇ ತಿನ್ನೋದೂ  ಒಳ್ಳೆಯದೇ. ಯಾಕೆಂದರೆ ಜ್ಯೂಸ್ ಮಾಡುವಾಗ ತರಕಾರಿ ತಿರುಳು, ಸಿಪ್ಪೆ ತೆಗೆಯಬೇಕಾಗಬಹುದು. ಇದರಿಂದ ಫೈಬರ್‌ನ ಅಂಶ ಕಡಿಮೆಯಾಗಬಹುದು. ತರಕಾರಿಯನ್ನು ಹಾಗೇ ತಿನ್ನುವುದರಿಂದ ಫೈಬರ್‌ನ ಅಂಶ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸೇರಿಸಿ ಹಲವಾರು ದೈಹಿಕ ಸಮಸ್ಯೆಯನ್ನು ನಿವಾರಿಸುತ್ತದೆ.  

loader