ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ನಿವಾರಿಸಲು ಇಲ್ಲಿದೆ ಬೆಸ್ಟ್ ವಿಧಾನ

Tips to avoid piles in children
Highlights

ಮಕ್ಕಳಲ್ಲಿ ಮಲಬದ್ಧತೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಇದರಿಂದ ಹೊಟ್ಟೆ ಗಟ್ಟಿಯಾಗಿ ಮಗುವಿಗೆ ಹೊಟ್ಟೆ ನೋವು ಸಹ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಮಲವಿಸರ್ಜನೆ ಆಗದಿದ್ರೆ ಎಷ್ಟೊಂದು ಸಮಸ್ಯೆಗಳು ಆರಂಭವಾಗುತ್ತವೆ. ಇನ್ನು ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದರೆ, ಅವುಗಳ ಪಾಡು ಅಷ್ಟಿಷ್ಟಲ್ಲ. 

ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಮಲ ಬದ್ಧತೆಯೂ ಒಂದು. ಇದಕ್ಕೆ ಕಾರಣ ಮಾತ್ರ ಗೊತ್ತಾಗೋಲ್ಲ. ಆದರೆ, ಎರಡು-ಮೂರು ದಿನವಾದರೂ ಮಲ ವಿಸರ್ಜಸದೇ ಹೋದಲ್ಲಿ, ಮಗುವಿಗೆ ಹೊಟ್ಟೆನೋವು ಇರಬಹುದೆಂದು ತಾಯಿ ಆತಂಕಗೊಳ್ಳುತ್ತಾಳೆ. ಮಕ್ಕಳನ್ನು ಕಾಡೋ ಈ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮದ್ದು.

ಮಗುವಿಗೆ ಈ ಸಮಸ್ಯೆ ಕಂಡು ಬಂದರೆ ಮನೆ ಮದ್ದಿನ ಮೂಲಕ ಗುಣಪಡಿಸಬಹುದು, ಇಲ್ಲಿವೆ ಸಿಂಪಲ್ ಟಿಪ್ಸ್..

ನೀರು: ಮಗು ದಿನವಿಡೀ ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ. ಇಲ್ಲವಾದ್ದರೆ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ನೀರಿನ ಅಂಶ ಕಡಿಮೆಯಾಗೋದರಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಪ್ರತಿದಿನ ಮಲವಿಸರ್ಜನೆ ಸರಾಗವಾಗಿ ಆಗಬೇಕೆಂದಿದ್ದರೆ ಸಾಧ್ಯವಾದಷ್ಟು ನೀರನ್ನು ಮಗುವಿಗೆ ನೀಡಬೇಕು. 

ಫೈಬರ್ ಅಂಶ ಆಹಾರ : ಹೌದು ಮಕ್ಕಳಿಗೆ ನಾರಿನಂಶ ಇರುವಂತಹ ಆಹಾರ ನೀಡಿದರೆ ಮಲಬದ್ಧತೆಯ ಸಮಸ್ಯೆಗೆ ಫುಲ್‌ಸ್ಟಾಪ್ ಇಡಬಹುದು. ಅದಕ್ಕಾಗಿ ಬಾಳೆಹಣ್ಣು, ಸೇಬು ಹಣ್ಣು, ಸೀಬೆ ಹಣ್ಣು, ಕಿತ್ತಲೆ ಹಣ್ಣುಗಳನ್ನು ಹೆಚ್ಚು ಹೆಚ್ಚು ನೀಡಿದರೆ ಉತ್ತಮ. ಇದಲ್ಲದೆ ಫೈಬರ್ ಅಂಶ ಇರುವಂತಹ ದವಸ ಧಾನ್ಯಗಳು, ಬೀನ್ಸ್ ಮೊದಲಾದವುಗಳನ್ನು ಪ್ರತಿನಿತ್ಯ ಮಗುವಿಗೆ ನೀಡಿದರೆ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. 

ಆಲಿವ್ ಆಯಿಲ್: ಖಾಲಿ ಹೊಟ್ಟೆಗೆ ಒಂದು ಚಮಚ ಆಲಿವ್ ಆಯಿಲ್ ಜತೆ, ಒಂದು ಚಮಚ ನಿಂಬೆರಸ ಬೆರೆಸಿ, ಸೇವಿಸಿದರೆ ಹೊಟ್ಟೆ ಹಗುರವಾಗುತ್ತದೆ. ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. 

ಅಲೋವೆರಾ: ಅಲೋವೆರಾವನ್ನು ಸೌಂದರ್ಯ ಹೆಚ್ಚಿಸುವಲ್ಲಿ ಉಪಯೋಗಿಸುತ್ತಾರೆ. ಇದರಿಂದ ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸಬಹುದು. ಎರಡು ಚಮಚ ಅಲೋವೆರಾ ಜೆಲ್ ಅನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿಯಲು ನೀಡಿದರೆ ಹೊಟ್ಟೆ ಹಗುರವಾಗುತ್ತದೆ.

ಮೊಸರು: ಮಕ್ಕಳಲ್ಲಿ ಮಲವಿಸರ್ಜನೆ ಸರಾಗವಾಗಿ ನಡೆಯಬೇಕೆಂದರೆ ಮೊಸರು ಉತ್ತಮ ಔಷಧಿ. ಇದನ್ನು ಮಕ್ಕಳಿಗೆ ಸೇವಿಸಲು ನೀಡಿದರೆ ಅದರಲ್ಲಿರುವ ಉತ್ತಮ ಬ್ಯಾಕ್ಟಿರಿಯಾದಿಂದ ಹೊಟ್ಟೆ ಕ್ಲೀನ್ ಆಗುತ್ತದೆ. 

loader