ಒಂದೋ ಗೋಧಿ, ಇಲ್ಲ ಅನ್ನ, ಎರಡೂ ಒಟ್ಟಿಗೆ ಒಳ್ಳೇದಲ್ಲನೆನಪಿಡಿ...

ಶುಗರ್‌ಗೆ ಅನ್ನಕ್ಕಿಂತಲೂ ಚಪಾತಿ ಬೆಸ್ಟ್ ಎನ್ನುವ ನಂಬಿಕೆಯಿಂದ ಎಲ್ಲರೂ ಚಪಾತಿ ತಿನ್ನಲು ಆರಂಭಿಸುತ್ತಾರೆ. ಆದರೆ, ಸದಾ ಅನ್ನ ತಿಂದೇ ಜೀವನ ಸವೆಸಿದವರಿಗೆ ಚಪಾತಿ ಒಗ್ಗುವುದಿಲ್ಲ. ಅದಕ್ಕೆ ಅನ್ನವನ್ನೂ ಜತೆಗೆ ಸೇವಿಸುತ್ತಾರೆ. ಈ ರೀತಿ ಮಾಡಬಹುದಾ?

can you eat chapati and rice together

ತೆಳ್ಳಗೆ ಆಗಬೇಕೆಂಬ ಬಯಕೆಯೋ, ಶುಗರ್‌ಗೆ ಬೆಸ್ಟ್ ಮದ್ದು ಎಂಬ ಅಪ ನಂಬಿಕೆಯೋ, ಮಂದಿ ಚಪಾತಿ ತಿನ್ನೋದು ಕಾಮನ್ ಆಗುತ್ತಿದೆ. ಸದಾ ಅನ್ನವೇ ತಿಂದು ಅಭ್ಯಾಸವಾಗಿರೋ ಜನರಿಗೆ ಚಪಾತಿ ತಿಂದು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅದಕ್ಕೆ ಒಂದೆರಡು ಚಪಾತಿಯನ್ನೂ ತಿಂದು, ಅನ್ನು ತಿನ್ನುವುದನ್ನೂ ರೂಢಿಸಿಕೊಳ್ಳುತ್ತಾರೆ. ಆದರಿದು ಒಳ್ಳೆ ಅಭ್ಯಾಸವಲ್ಲ ಎನ್ನುವುದು ತಜ್ಞರ ಅಭಿಮತ. 

ಆಹಾ! ಆಹ್ಲಾದಕರ ಈ ಏಳು ದೇಶಗಳ ಚಹಾ

ಡಯಟ್ ತಜ್ಞರು ಹೇಳುವಂತೆ ಚಪಾತಿ ಮತ್ತು ಅನ್ನವನ್ನು ಜೊತೆಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆರಡನ್ನೂ ಜೊತೆಯಾಗಿ ಸೇವಿಸಿದರೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ದೇಹವನ್ನು ಸೇರುತ್ತದೆ. ಒಂದೇ ಸಲ ಹೆಚ್ಚು ಕ್ಯಾಲರಿ ದೇಹವನ್ನು ಸೇರಿದರೆ ಜೀರ್ಣಕ್ರಿಯೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆಯೂ ಕಾಡಬಹುದು. ಬೊಜ್ಜು ಹೆಚ್ಚಾದರೆ ಒಂದಲ್ಲ ಒಂದು ಸಮಸ್ಯೆ ಫಾಲೋ ಮಾಡಿಯೋ ಮಾಡುತ್ತೆ. 

ಚಪಾತಿ ಅಥವಾ ಅನ್ನ ಎರಡರಲ್ಲಿ ಒಂದೇ ನಿಮ್ಮ ಆಯ್ಕೆಯಾಗಬೇಕು. ಬೇಗ ಜೀರ್ಣವಾಗುವ ಆಹಾರ ಯಾವುದೋ ಅದನ್ನು ರಾತ್ರಿ ಸೇವಿಸುವುದು ಉತ್ತಮ. ಏಕೆಂದರೆ ರಾತ್ರಿ ಹೊತ್ತು ದೇಹಕ್ಕೆ ಹೆಚ್ಚು ಕೆಲಸ ಇರುವುದಿಲ್ಲ. ಆದುದರಿಂದ ಅಂಥ ಲೈಟ್ ಆಹಾರಗಳನ್ನೇ ಸೇವಿಸಿ. ಚಪಾತಿ ತಿಂದರೆ ಉತ್ತಮ. ಇದರಲ್ಲಿ ಕಡಿಮೆ ಕ್ಯಾಲರಿ ಇದೆ. ಇದನ್ನು ಸೇವಿಸಿದರೆ ನಿದ್ರೆಯ ಸಮಸ್ಯೆ ಕೂಡ ಇರೋದಿಲ್ಲ. ಜೊತೆಗೆ ಬೊಜ್ಜಿನ ಸಮಸ್ಯೆಯೂ ಇರೋಲ್ಲ.

ನಿಮ್ಮ ಫ್ರಿಡ್ಜೊಳಗೆ ಏನೇನಿರಬೇಕು!

ರಾತ್ರಿ ಹೆಚ್ಚು ಊಟ ಮಾಡಿದರೆ ಹೊಟ್ಟೆ ಉಬ್ಬರಿಸಿದಂತಾಗುತ್ತದೆ.  ಅಸ್ತಮಾ ಇರುವವರು ರಾತ್ರಿ ಊಟವನ್ನು ಸಾಧ್ಯವಾದಷ್ಟು ಅವೈಯ್ಡ್ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಉಸಿರಾಟದ ಸಮಸ್ಯೆ ಕಾಡಬಹುದು.

Latest Videos
Follow Us:
Download App:
  • android
  • ios