Asianet Suvarna News Asianet Suvarna News

ಬೆಂಗಳೂರಿನ ಬಾಡಿಗೆ ಮನೆ ಕಥೆ-ವ್ಯಥೆ; ಕಿಟಿಕೀನೆ ಇಲ್ಲದ ಇಕ್ಕಟ್ಟಾದ ರೂಮಿಗೆ ಭರ್ತಿ 12,000 ರೂ. ಬಾಡಿಗೆ!

ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಂದ್ರೆ ಸಾಕು ಎಲ್ರೂ ಕನಸಲ್ಲೂ ಬೆಚ್ಚಿಬೀಳುವಂತಾಗುತ್ತೆ. ಸಿಕ್ಕಾಪಟ್ಟೆ ಬಾಡಿಗೆ, ಅಡ್ವಾನ್ಸ್‌ ಕೇಳ್ತಾರೆ. ಮನೆಯೊಳಗೆ ನೋಡಿದ್ರೆ ಆ ಕಡೆ ಈ ಕಡೆ ಕೈ ಬೀಸಲಾಗದಷ್ಟೂ ಇಕ್ಕಟ್ಟು. ಹೀಗಿರುವಾಗ ಬೆಂಗಳೂರಿನಲ್ಲಿ ಬಾಡಿಗೆಗಿರೋ ಮನೆಯೊಂದರ ಫೋಟೋ ಮತ್ತು ಅದರ ಬಾಡಿಗೆಯ ಮಾಹಿತಿ ಎಲ್ಲೆಡೆ ವೈರಲ್ ಆಗ್ತಿದೆ.
 

Bengalurus Pics of 1 RK flat with single bed for Rs 12,000 rent go viral Vin
Author
First Published Oct 11, 2023, 3:57 PM IST

ಬೆಂಗಳೂರಿಗೆ ಹಲವು ರಾಜ್ಯಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಜನರು ಬಂದು ಸೇರುತ್ತಾರೆ. ಆದರೆ ಈ ಮಹಾನಗರದಲ್ಲಿ ಮನೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಕಡಿಮೆ ಬಜೆಟ್‌ಗೆ ಕಂಫರ್ಟ್‌ ಆಗಿರೋ ಮನೆ ಹುಡುಕ್ಬೇಕು ಅಂದ್ರೆ ಜೀವಾನೇ ಬಾಯಿಗೆ ಬರುತ್ತೆ. ಬಹುತೇಕರು ಮಹಾನಗರಕ್ಕೆ ಬರೋದು ದುಡಿದು ಸೇವಿಂಗ್ಸ್ ಮಾಡೋಣ ಅನ್ನೋ ಉದ್ದೇಶದಿಂದಲೇ. ಹೀಗಾಗಿ ಯಾರೋ ಹೆಚ್ಚು ರೆಂಟ್‌ನ ಮನೆಯಲ್ಲಿರಲು ಇಷ್ಟಪಡುವುದಿಲ್ಲ.1 RK ಮನೆಗೆ ಹೆಚ್ಚು ಆದ್ಯತೆ ನೀಡ್ತಾರೆ.  ಹೀಗಿರುವಾಗ ಬೆಂಗಳೂರಿನಲ್ಲಿ ಬಾಡಿಗೆಗಿರೋ ಮನೆಯೊಂದರ ಫೋಟೋ ಮತ್ತು ಅದರ ಬಾಡಿಗೆಯ ಮಾಹಿತಿ ಎಲ್ಲೆಡೆ ವೈರಲ್ ಆಗ್ತಿದೆ. 

12,000 ರೂ ಬಾಡಿಗೆಗೆ ಸಿಂಗಲ್ ಬೆಡ್‌ನೊಂದಿಗೆ 1 ಆರ್‌ಕೆ ಫ್ಲ್ಯಾಟ್‌ನ ಚಿತ್ರಗಳು ವೈರಲ್ ಆಗಿವೆ. ಮಹದೇವಪುರದಲ್ಲಿ ಈ ಮನೆ ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ. 50,000 ರೂಪಾಯಿಗಳ ಡೆಪಾಸಿಟ್‌ನೊಂದಿಗೆ 'ಒಂದು ಕೋಣೆಯ ಅಡುಗೆಮನೆ' ಎಂದು ವಿವರಿಸಿ ನೋ ಬ್ರೋಕರ್‌ ವೆಬ್‌ಸೈಟ್‌ನಲ್ಲಿ  ಫೋಟೋವನ್ನು ಹಂಚಿಕೊಳ್ಳಲಾಗಿದೆ. ತುಂಬಾನೇ ಇಕ್ಕಟ್ಟಾಗಿರುವ ಈ ರೂಮ್‌ನ್ನು ನೋಡಿ ಜನ್ರು ಬೆಚ್ಚಿಬಿದ್ದಿದ್ದಾರೆ. ರೂಮ್‌ನಲ್ಲಿ ಕೇವಲ ಒಂದು ಬೆಡ್‌ ನಿಲ್ಲುವಷ್ಟೇ ಜಾಗ ಇರುವುದನ್ನು ನೋಡಬಹುದು. ಸದ್ಯ ಇಂಟರ್‌ನೆಟ್‌ನಲ್ಲಿ ಈ ಪೋಟೋ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಿಂದ ಹೈದರಾಬಾದ್‌ ಜಾಬ್‌ಗೆ ಶಿಫ್ಟ್ ಆದ ಟೆಕ್ಕಿ, ಅಬ್ಬಬ್ಬಾ ತಿಂಗಳ ಸೇವಿಂಗ್ಸ್ ಇಷ್ಟೊಂದಾ?

ಒಬ್ಬ ಬಳಕೆದಾರರು, 'ಇದು ಜೈಲಿಗಿಂತ ಕೆಟ್ಟದಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಈ ಕೋಣೆಗೇ ಕಿಟಿಯೇ ಇಲ್ವಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, ' ಇಂಥಾ ಕಾಸ್ಟ್ಲೀ ಬಜೆಟ್‌ಗೆ ಇಂಥಾ ಐಷಾರಾಮಿ ಮನೆಯನ್ನು ಬೆಂಗಳೂರಿನಲ್ಲಿ ಮಾತ್ರ ನೋಡಲು ಸಾಧ್ಯ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಸುದೀರ್ಘ ದಿನದ ಕೆಲಸದ ನಂತರ ವಿಶ್ರಾಂತಿ ಪಡೆಯಲು ಅತ್ಯಾಧುನಿಕ ಏರ್ ವೆಂಟ್ ಹೊಂದಿರುವ ಐಷಾರಾಮಿ 1RK'ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಇದು ಶೌಚಾಲಯವನ್ನು ಮಲಗುವ ಕೋಣೆಯಾಗಿ ಪರಿವರ್ತಿಸಿದಂತಿದೆ' ಎಂದು ತಮಾಷೆಯಾಗಿ ನುಡಿದಿದ್ದಾರೆ. 

ಈ ಹಿಂದೆಯೂ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ತಮಗೆ ಸಿಕ್ಕ ಇಕ್ಕಟ್ಟಾದ ರೂಮಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಟ್ವಿಟ್ಟರ್ ಬಳಕೆದಾರರಾದ ಮಂಥನ್ ಗುಪ್ತಾ ಅವರು ಹಾಸಿಗೆ, ಸಣ್ಣ ಬೀರು ಮತ್ತು ಟೇಬಲ್ ಹೊಂದಿರುವ ಪುಟ್ಟ ರೂಮಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಬಳಕೆದಾರರು ಇಕ್ಕಟ್ಟಾದ ಫ್ಲಾಟ್‌ನ ಚಿತ್ರವನ್ನು ಟ್ವೀಟ್ ಮಾಡಿದ್ದರು. 'ಅಂತಿಮವಾಗಿ ಬೆಂಗಳೂರಿನಲ್ಲಿ ಸಂಪೂರ್ಣ ಸುಸಜ್ಜಿತ ಮನೆ ಸಿಕ್ಕಿದೆ. ಗೇಟೆಡ್ ಸೊಸೈಟಿ ಮತ್ತು 24x7 ಭದ್ರತೆಯಿದೆ' ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದರು. 

ಬೆಂಗಳೂರಿನ ಬಾಡಿಗೆ ಮನೆ ಮಾಲೀಕರು ಕಿರಿಕ್ ಮಾಡೋದು ಮಾತ್ರವಲ್ಲ, ಹೀಗೂ ಹೆಲ್ಪ್ ಮಾಡ್ತಾರೆ!

ಅತಿ ಕಿರಿದಾಗಿರುವ ರೂಮ್‌ ನಿಜವಾದ ಜೈಲು ಸೆಲ್‌ನಂತೆ ಕಾಣುತ್ತಿತ್ತು. ರೀತಿಯಲ್ಲಿ ಕಾಮೆಂಟ್ ಮಾಡಿ ಕಾಲೆಳೆದಿದ್ದರು.. ಬಳಕೆದಾರರೊಬ್ಬರು 'ಇಂಥಾ ಫ್ಲಾಟ್ ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ' ಎಂದಿದ್ದರು. ಮತ್ತೊಬ್ಬರು 'ಅಪಾರ್ಟ್‌ಮೆಂಟ್‌ ಮಾಲೀಕರಿಗೆ ರೂಮ್‌ಮೇಟ್ ಅಗತ್ಯವಿದೆಯೇ ' ಎಂದು ಪ್ರಶ್ನಿಸಿದ್ದರು. ಮತ್ತೊಬ್ಬ ವ್ಯಕ್ತಿ 'ಇದು ಪರಿಪೂರ್ಣ ಜೈಲಿನಂತಿದೆ' ಎಂದು ಹಾಸ್ಯ ಮಾಡಿದರು. ಈಗ ಅಂಥಹದ್ದೇ ಮತ್ತೊಂದು ಫೋಟೋ ವೈರಲ್ ಆಗೋ ಮೂಲಕ ಬೆಂಗಳೂರಿನಲ್ಲಿ ಮನೆ ಹುಡುಕೋ ಕಷ್ಟ ಯಾವತ್ತಿಗೂ ಮುಗಿಯಲ್ಲ ಅನ್ನೋದು ಸಾಬೀತಾಗಿದೆ.

Bengalurus Pics of 1 RK flat with single bed for Rs 12,000 rent go viral Vin

Follow Us:
Download App:
  • android
  • ios