ಬೆಂಗಳೂರಿನ ಬಾಡಿಗೆ ಮನೆ ಮಾಲೀಕರು ಕಿರಿಕ್ ಮಾಡೋದು ಮಾತ್ರವಲ್ಲ, ಹೀಗೂ ಹೆಲ್ಪ್ ಮಾಡ್ತಾರೆ!
ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಂದ್ರೆ ಸಾಕು ಎಲ್ರೂ ಕನಸಲ್ಲೂ ಬೆಚ್ಚಿಬೀಳುವಂತಾಗುತ್ತೆ. ಅದರಲ್ಲೂ ಇತ್ತೀಚಿನ ಘಟನೆಗಳಿಂದಂತೂ ಸಿಲಿಕಾನ್ ಸಿಟಿಗೆ ಬರುವವರ ಪಾಲಿಗೆ ಬೆಂಗಳೂರಿಗೆ ಮನೆ ಮಾಲೀಕರ ವಿಲನ್‌ಗಳೇ ಆಗಿದ್ದಾರೆ. ಬೇಕಾಬಿಟ್ಟಿ ದುಡ್ಡು ಕೇಳ್ತಾರೆ. ಏನೇನೋ ರೂಲ್ಸ್ ಹೇಳ್ತಾರೆ ಅನ್ನೋ ದೂರು ಹೆಚ್ಚಾಗಿದೆ. ಇವೆಲ್ಲದರ ಮಧ್ಯೆ ಬೆಂಗಳೂರಿನ ಮನೆ ಮಾಲೀಕರೊಬ್ಬರ ಮಾಡಿರುವ ಕೆಲಸವೊಂದಕ್ಕೆ ಎಲ್ಲರೂ ಹುಬ್ಬೇರಿಸಿದ್ದಾರೆ.

ಬೆಂಗಳೂರಿಗೆ ಹಲವು ರಾಜ್ಯಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಜನರು ಬಂದು ಸೇರುತ್ತಾರೆ. ಆದರೆ ಈ ಮಹಾನಗರದಲ್ಲಿ ಮನೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಜನರು ಎಲ್ಲೆಲ್ಲಿಂದಲೋ ಬರುವ ಕಾರಣ ಮನೆ ಮಾಲೀಕರು ಸಹ ಕಣ್ಣುಮುಚ್ಚಿ ಮನೆ ಬಾಡಿಗೆಗೆ ಕೊಡಲಾಗುವುದಿಲ್ಲ. ಅವರ ಕುರಿತಾಗಿ ವಿಚಾರಿಸಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಾದರೂ ದುಷ್ಕೃತ್ಯ ಎಸಗಿದರೆ ಅದಕ್ಕೆ ಮನೆ ಮಾಲೀಕರೇ ಹೊಣೆಯಾಗಬೇಕಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್ ಅಂದ್ರೆ ಮನೆ ಕೊಡೋಕೆ ಮಾಲೀಕರು ಹಿಂದೇಟು ಹಾಕ್ತಾರೆ. ಬಾಡಿಗೆದಾರರ ಧರ್ಮ, ಲಿಂಗ, ವೈವಾಹಿಕ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ತಾರೆ. ಮಾತ್ರವಲ್ಲ ಇದರ ಮೇಲೂ ಮತ್ತು ಹಲವು ನಿಯಮಗಳನ್ನು ಹೇರುತ್ತಾರೆ. ನಾನ್‌ವೆಜ್ ಮಾಡೋ ಹಾಗಿಲ್ಲ, ಮನೆಯಲ್ಲಿ ತುಂಬಾ ಮಂದಿ ಸ್ಟೇ ಮಾಡೋ ಹಾಗಿಲ್ಲ ಎಂಬೆಲ್ಲಾ ರೂಲ್ಸ್‌ಗಳ ಬಗ್ಗೆ ಹೇಳುತ್ತಾರೆ.
ಹೀಗಾಗಿಯೇ ಇತ್ತೀಚಿನ ಕೆಲ ತಿಂಗಳಿಂದ ಬೆಂಗಳೂರಿನ ಮನೆ ಮಾಲೀಕರು ಎಲ್ಲರ ಪಾಲಿಗೆ ವಿಲನ್‌ಗಳಂತೆ ಆಗಿಬಿಟ್ಟಿದ್ದಾರೆ. ಅದರಲ್ಲೂ ಇತ್ತೀಚಿಗೆ ಕೆಲವು ಮನೆ ಮಾಲೀಕರು ಬಾಡಿಗೆ ಮನೆ ಕೇಳಿದ್ದ ವ್ಯಕ್ತಿಯ ಲಿಂಕ್ಡ್‌ಇನ್ ಪ್ರೊಫೈಲ್ ಕೇಳಿದ್ದು ಭಾರೀ ಸುದ್ದಿಯಾಗಿತ್ತು. ಮತ್ತೊಮ್ಮೆ ಪಿಯುಸಿ ಪಾಸ್ ಆಗಿಲ್ಲ ಅನ್ನೋ ಕಾರಣಕ್ಕೆ ಯುವಕನೊಬ್ಬನಿಗೆ ಮನೆ ಮಾಲೀಕರು (House owner), ಬಾಡಿಗೆಗೆ ಮನೆ ಕೊಡೋಕೆ ನಿರಾಕರಿಸಿದ್ದರು. ಇದಲ್ಲದೆ ಉಳಿದಂತೆ ಯಾವಾಗ್ಲೂ ಓನರ್‌ಗಳ ಕಿರಿಕಿರಿ ಇದ್ದಿದ್ದೇ ಅನ್ನೋ ಕಾರಣಕ್ಕೆ ಹೆಚ್ಚಿನ ಬಾಡಿಗೆದಾರರು ಮನೆ ಮಾಲೀಕರ ಜೊತೆ ಎಷ್ಟು ಬೇಕೋ ಅಷ್ಟೇ ಸಂಬಂಧ ಇಟ್ಟುಕೊಳ್ಳುತ್ತಾರೆ.
ಕೊನೆಗೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಪೋಸ್ಟ್ ಮಾಡಿದ ವ್ಯಕ್ತಿ, ರೂಮಾ, ಜೈಲಾ ಎಂದ ನೆಟ್ಟಿಗರು!
ಸ್ಟಾರ್ಟ್‌ಅಪ್ ಆರಂಭಿಸಲು 8 ಲಕ್ಷ ಹೂಡಿಕೆ ಮಾಡಿದ ಮನೆ ಮಾಲೀಕರು
ಸಿಲಿಕಾನ್ ಸಿಟಿಗೆ ಬರುವವರ ಪಾಲಿಗೆ ಬೆಂಗಳೂರಿಗೆ ಮನೆ ಮಾಲೀಕರ ವಿಲನ್‌ಗಳೇ ಆಗಿದ್ದಾರೆ. ಬೇಕಾಬಿಟ್ಟಿ ದುಡ್ಡು ಕೇಳ್ತಾರೆ. ಏನೇನೋ ರೂಲ್ಸ್ ಹೇಳ್ತಾರೆ ಅನ್ನೋ ದೂರು ಹೆಚ್ಚಾಗಿದೆ. ಇವೆಲ್ಲದರ ಮಧ್ಯೆ ಬೆಂಗಳೂರಿನ ಮನೆ ಮಾಲೀಕರೊಬ್ಬರ ಮಾಡಿರುವ ಕೆಲಸವೊಂದಕ್ಕೆ ಎಲ್ಲರೂ ಹುಬ್ಬೇರಿಸಿದ್ದಾರೆ. ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಬೆಂಗಳೂರಿನ ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ (Tenants) ಸ್ಟಾರ್ಟ್‌ಅಪ್ ಆರಂಭಿಸಲು 8 ಲಕ್ಷ ಹೂಡಿಕೆ (Investment) ಮಾಡುತ್ತಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Betterhalf.aiನ ಸಹ-ಸಂಸ್ಥಾಪಕ ಮತ್ತು CEO ಪವನ್ ಗುಪ್ತಾ, ತಮ್ಮ ಮನೆ ಮಾಲೀಕರು ತಾವು ನಡೆಸುತ್ತಿರುವ AI ಚಾಲಿತ ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್‌ನಲ್ಲಿಅಂದಾಜು ರೂ 8.2 ಲಕ್ಷ ಹೂಡಿಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಪವನ್ ಗುಪ್ತಾ ಟ್ವಿಟರ್‌ನಲ್ಲಿ ಸುಶೀಲ್ ಎಂಬ ಹೆಸರಿನ ತನ್ನ ಮನೆ ಮಾಲೀಕರ ಜೊತೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. 'ನಾನು ನಿಮ್ಮಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಶುಭಾಶಯಗಳು. ನೀವು ಜೀವನದಲ್ಲಿ ಅತ್ಯಂತ ಯಶಸ್ವೀಯಾಗುತ್ತೀರಿ ಎಂದು ನಾನು ಭಾವಿಸುತ್ತೇವೆ' ಎಂದು ಮನೆ ಮಾಲೀಕರು ಮೆಸೇಜ್ ಮಾಡಿದ್ದಾರೆ.
ರಾತ್ರಿ 10 ಗಂಟೆ ನಂತ್ರ ಬಾಲ್ಕನಿ ಬಳಸಂಗಿಲ್ಲ, ಗೆಸ್ಟ್‌ಗೆ ನೋ ಎಂಟ್ರಿ; ಬೆಂಗಳೂರು ಬ್ಯಾಚುಲರ್ಸ್‌ಗೆ ಹೊಸ ರೂಲ್ಸ್!
ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್
'ಬೆಂಗಳೂರಿನಲ್ಲಿ ಉದ್ಯಮ (Business) ನಡೆಸಲು ಜನರು ತೀವ್ರ ಪೈಪೋಟಿ ನಡೆಸುತ್ತಿರುವ ಈ ದಿನಗಳಲ್ಲಿ ನಾನು ಒಬ್ಬ ಅನಿರೀಕ್ಷಿತ ಹೂಡಿಕೆದಾರರನ್ನು ಕಂಡುಕೊಂಡೆ. ನನ್ನ ಮನೆ ಮಾಲೀಕರೇ ನನ್ನ ಬಿಸಿನೆಸ್‌ಗೆ ಹೂಡಿಕೆ ಮಾಡಿದರು. ಇತ್ತೀಚಿಗೆ ಅವರು ನನ್ನ ಸ್ಟಾರ್ಟಪ್ Betterhalf.aiಗೆ 8.2 ಲಕ್ಷ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಪ್ರತಿಯೊಬ್ಬರೂ ತೋರಿಸುವ ಉದ್ಯಮಶೀಲತೆಯ ಮನೋಭಾವದಿಂದ ನಿಜವಾಗಿಯೂ ಆಶ್ಚರ್ಯಚಕಿತನಾಗಿದ್ದೇನೆ. ಬೆಂಗಳೂರು ನಿಜವಾಗಿಯೂ ಭಾರತದ ಸಿಲಿಕಾನ್ ವ್ಯಾಲಿಯಾಗಿದೆ' ಎಂದು ಪವನ್ ಗುಪ್ತಾ ಟ್ವಿಟರ್‌ನಲ್ಲಿ ಮಾಡಿರುವ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ವೈರಲ್ ಆಗಿರುವ ಪೋಸ್ಟ್‌ಗೆ ಜನರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ, ಹೂಡಿಕೆಗಾಗಿ ಜನರು ಗುಪ್ತಾ ಅವರನ್ನು ಅಭಿನಂದಿಸಿದ್ದಾರೆ ಮತ್ತು ಇದು 'ಪೀಕ್ ಬೆಂಗಳೂರು' ಕ್ಷಣದ ಉದಾಹರಣೆ ಎಂದು ಕರೆದಿದ್ದಾರೆ.