ಬೆಂಗಳೂರಿನಿಂದ ಹೈದರಾಬಾದ್‌ ಜಾಬ್‌ಗೆ ಶಿಫ್ಟ್ ಆದ ಟೆಕ್ಕಿ, ಅಬ್ಬಬ್ಬಾ ತಿಂಗಳ ಸೇವಿಂಗ್ಸ್ ಇಷ್ಟೊಂದಾ?

ಬೆಂಗಳೂರು ಅಂದ್ರೆ ಸಾಕು ಕಾಸ್ಟ್ಲೀ ಸಿಟಿ ಅನ್ನೋ ಹಣೆಪಟ್ಟಿ ಈಗಾಗ್ಲೇ ಅಂಟಿಕೊಂಡು ಬಿಟ್ಟಿದೆ. ಬಾಡಿಗೆ ಮನೆ, ಟ್ಯಾಕ್ಸಿ, ಹೊಟೇಲ್‌-ರೆಸ್ಟೋರೆಂಟ್‌ ಎಲ್ಲದರ ಬೆಲೆಯೂ ಹೆಚ್ಚೇ. ಹೀಗಿರುವಾಗ ಹೈದರಾಬಾದ್‌ಗೆ ಶಿಫ್ಟ್‌ ಆದ ನಂತರ, ಬೆಂಗಳೂರಿನ ಟೆಕ್ಕಿಯೊಬ್ಬರು ತಾವು ಮಾಡ್ತಿರೋ ಸೇವಿಂಗ್ಸ್ ಎಷ್ಟೆಂದು ಹೇಳಿಕೊಂಡಿದ್ದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.

After Shifting To Hyderabad, One Bengaluru Techie Claims He Now Saves Rs 40,000 A Month Vin

ಬೆಂಗಳೂರು ಅಂದ್ರೆ ಸಾಕು, ಏನ್ ಸಿಟಿನಪ್ಪಾ ದುಡಿದಿದ್ದೆಲ್ಲಾ ಅಲ್ಲೇ ಸುರೀಯೋದಕ್ಕೆ ಆಯ್ತು ಅಂತ ಹೀಯಾಳಿಸೋರೆ ಹೆಚ್ಚು. ಹೈಫೈ ಸಿಟಿ, ಥಳುಕು ಬಳುಕಿನ ಲೈಫ್ ಅನ್ನೋ ಕಾರಣಕ್ಕೆ ಬೆಂಗಳೂರು ಕಾಸ್ಟ್ಲೀ ಸಿಟಿ ಅಂತಾನೂ ಅನಿಸಿಕೊಂಡಿದೆ. ಲಕ್ಷ ಲಕ್ಷ ಸಂಬಳ ಇರೋರಷ್ಟೆ ಸಿಲಿಕಾನ್ ಸಿಟಿಯಲ್ಲಿ ಜೀವನ ಮಾಡ್ಬೋದಪ್ಪಾ ಅಂತ ಕೆಲವೊಬ್ಬರು ಹೇಳ್ತಾರೆ. ಬಾಡಿಗೆ ಮನೆ, ಟ್ಯಾಕ್ಸಿ, ಹೊಟೇಲ್‌-ರೆಸ್ಟೋರೆಂಟ್‌ ಎಲ್ಲದರ ಬೆಲೆಯೂ ಹೆಚ್ಚೇ. ಹೀಗಿದ್ರೂ ಪ್ರತಿದಿನ ಇಲ್ಲಿ ಎಜುಕೇಶನ್, ಜಾಬ್, ಬಿಸಿನೆಸ್ ಅಂತ ಬಂದು ಸೇರೋರ ಸಂಖ್ಯೆಯೇನೂ ಕಡಿಮೆಯಿಲ್ಲ. ಅವರಿಗಾದ್ರೆ ಇಲ್ಲಿನ ಪರಿಸ್ಥಿತಿ ಗೊತ್ತಿಲ್ಲ ಅನ್ನೋಣ.

ಹಲವಾರು ವರ್ಷಗಳಿಂದ ಬೆಂಗಳೂರಲ್ಲಿ ಇರೋ ಪಾಡು ಹೇಳೋದೆ ಬೇಡ. ರೂಮು ಬಾಡಿಗೆ (Rent)ಯಿಂದ ಹಿಡಿದು ಟ್ಯಾಕ್ಸಿ, ಹೊಟೇಲ್ ಎಲ್ಲವೂ ಇಲ್ಲಿ ಕಾಸ್ಟ್ಲೀ. ಸ್ಯಾಲರಿ ಕ್ರೆಡಿಟ್‌ ಆದ ತಕ್ಷಣ ರೆಂಟ್‌, ವಾಟರ್ ಬಿಲ್‌, ಕರೆಂಟ್ ಬಿಲ್, ಇಎಂಐ ಅಂತ ದುಡ್ಡೆಲ್ಲಾ ಖಾಲಿ. ಮಂತ್ ಸ್ಟಾರ್ಟಿಂಗ್‌ನಲ್ಲಿ ಮಂತ್ ಎಂಡ್ ಆಗಿಬಿಡುತ್ತದೆ. ಮತ್ತೆ ಪೆಟ್ರೋಲ್‌ಗೂ ದುಡ್ಡಿಲ್ಲದ ಪರಿಸ್ಥಿತಿ. ಊರು (Village) ಬಿಟ್ಟು ಬಂದು ಸರಿಯಾಗಿ ತಿನ್ದೆ ದುಡಿಯೋದು. ಅತ್ತ ಆರೋಗ್ಯನೂ (Health) ಇಲ್ಲ, ಇತ್ತ ಕೈಯಲ್ಲಿ ಹಣಾನೂ ಇಲ್ಲ, ಊರವರ ಜೊತೆ ಖುಷಿನೂ ಇಲ್ಲ ಅನ್ನೋ ಪರಿಸ್ಥಿತಿ. ಬೆಂಗಳೂರಲ್ಲಿ ದುಡ್ಡು ಉಳಿಸೋದು ಹೇಗೆ ಅಂದ್ರೆ ಬೆಂಗಳೂರನ್ನು ಬಿಟ್ಟು ಹೋಗಿ ಇನ್‌ಸ್ಟಾಗ್ರಾಂ ರೀಲ್ಸ್‌ವೊಂದು ಇತ್ತೀಚಿಗೆ ವೈರಲ್ ಆಗಿತ್ತು. ಬೆಂಗಳೂರಲ್ಲಿ ಸೇವಿಂಗ್ಸ್ ಮಾಡೋದು ಎಷ್ಟು ಕಷ್ಟ ಅನ್ನೋದನ್ನು ಇದ್ರಿಂದಾನೇ ಸ್ಪಷ್ಟವಾಗಿ ತಿಳ್ಕೋಬೋದು.

ಬೆಂಗ್ಳೂರಲ್ಲಿ ಲೂಟಿಗಿಳಿದ ಮನೆ ಮಾಲೀಕರು, ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಅಂತಿದಾರೆ ಬಾಡಿಗೆದಾರರು!

ಬೆಂಗಳೂರಿನಿಂದ ಹೈದರಾಬಾದ್‌ಗೆ ಶಿಪ್ಟ್ ಆದ ಟೆಕ್ಕಿ, ಭರ್ಜರಿ ಸೇವಿಂಗ್ಸ್‌
ಬೆಂಗಳೂರು ಕಾಸ್ಟ್ಲೀ ನಿಜ. ಆದರೆ ಭಾರತದ ಎಲ್ಲಾ ಸಿಟಿಗಳು ಹಾಗೇನಿಲ್ಲ. ಇತ್ತೀಚಿಗೆ ಹೈದರಾಬಾದ್‌ಗೆ ಸ್ಥಳಾಂತರಗೊಂಡ ನಂತರ, ಬೆಂಗಳೂರಿನ ಟೆಕ್ಕಿಯೊಬ್ಬರು ತಾವು ಈಗ ತಿಂಗಳಿಗೆ ಸೇವಿಂಗ್ಸ್ ಮಾಡುತ್ತಿರುವ ಮೊತ್ತವನ್ನು ಬಹಿರಂಗಪಡಿಸಿದ್ದು, ಎಲ್ಲರನ್ನೂ ಅಚ್ಚರಿ ಪಡುವಂತೆ ಮಾಡಿದೆ. ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬೆಂಗಳೂರಿನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡ ಅನುಭವದ ಬಗ್ಗೆ ಮಾಡಿದ ಟ್ವೀಟ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಈಗಾಗಲೇ 61,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ವೈರಲ್ ಟ್ವೀಟ್‌ನಲ್ಲಿ, ಬೆಂಗಳೂರಿನ ಟೆಕ್ಕಿ ಪೃಧ್ವಿ ರೆಡ್ಡಿ ಅವರು ಹೈದರಾಬಾದ್‌ಗೆ ಸ್ಥಳಾಂತರಗೊಂಡ ನಂತರ ತಿಂಗಳಿಗೆ 40,000 ರೂಪಾಯಿಗಳನ್ನು ಉಳಿಸುತ್ತಿರುವುದಾಗಿ (Savings) ಹೇಳಿಕೊಂಡಿದ್ದಾರೆ. ಆ ಹಣದಿಂದ ಕುಟುಂಬ (Family) ನೆಮ್ಮದಿಯಿಂದ ಬದುಕಬಹುದು ಎಂದು ತಿಳಿಸಿದ್ದಾರೆ. ಅವರ ಪೋಸ್ಟ್ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದೆ. ಎಲ್ಲೆಡೆ ವೈರಲ್ ಆಗುತ್ತಿದೆ.

ಬೆಂಗಳೂರು ಟ್ರಾಫಿಕ್‌ ಕಥೆ-ವ್ಯಥೆ; ಆಟೋಗಾಗಿ 71 ನಿಮಿಷ ಕಾಯುವ ಪೋಸ್ಟ್‌ ವೈರಲ್‌

ಬೆಂಗಳೂರು V/S ಹೈದರಾಬಾದ್ ಬೇಡ ಎಂದ ಟೆಕ್ಕಿ
ಅದರ ಜೊತೆಯಲ್ಲೇ ಈ ಪೋಸ್ಟ್ ಹೈದರಾಬಾದ್ ವರ್ಸಸ್‌ ಬೆಂಗಳೂರಿನ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  'ಈ ಪೋಸ್ಟ್ ಊರು ಮತ್ತು ದೂರದ ಕೆಲಸ ಎಂಬುದರ ಬಗ್ಗೆಯಾಗಿದೆ. ನಾನು ಎಲ್ಲಾ ವಿಷಯಗಳಲ್ಲೂ ಬೆಂಗಳೂರನ್ನು ಬೆಂಬಲಿಸಿದ್ದೇನೆ. ಹೀಗಾಗಿ ಇಲ್ಲಿ ಬೆಂಗಳೂರು ಅಥವಾ ಹೈದರಾಬಾದ್ ಅನ್ನೋ ಚರ್ಚೆ ಬೇಡ' ಎಂದು ಪೃಧ್ವಿ ರೆಡ್ಡಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿ ಕಮೆಂಟಿಸಿದ್ದಾರೆ.

Latest Videos
Follow Us:
Download App:
  • android
  • ios