ಟೀ ಶರ್ಟ್ ಚೀ...ಶರ್ಟ್ ಆಗದಿರಲಿ...
ತುಂಬಾ ಕಂಫರ್ಟ್ ಎನಿಸೋ ಉಡುಗೆ ಎಂದರೆ ಟಿ ಶರ್ಟ್. ಪುರುಷರಾಗಲಿ, ಮಹಿಳೆಯರಾಗಲಿ ಟಿ ಶರ್ಟ್ ಧರಿಸುವಾಗ ಹಾಗೂ ಕೊಳ್ಳುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ಮೇಲಿನ ಸ್ಲೋಗನ್ ಕಡೆಯೂ ಎಚ್ಚರದಿಂದ ಇರುವುದು ಮುಖ್ಯ. ಇನ್ನೇನು ಗಮನಿಸಬೇಕು?
ಪ್ರತಿಯೊಬ್ಬ ಪುರುಷರಿಗೂ ಟೀ ಶರ್ಟ್ ಧರಿಸೋದು ಎಂದರೆ ಇಷ್ಟ. ಆದರಿದನ್ನು ಧರಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸೋದು ಮುಖ್ಯ. ಶರ್ಟ್‌ನ ಫಿಟ್ಟಿಂಗ್, ಕಲರ್, ಫ್ಯಾಬ್ರಿಕ್, ಸ್ಟೈಲ್ ಮತ್ತು ಕಾರ್ಯವನ್ನು ಗಮನಿಸಬೇಕು. ಇಲ್ಲಿದೆ ಕೆಲವೊಂದು ಟಿಪ್ಸ್....
ಡೀಪ್ ನೆಕ್ ಟೀ ಶರ್ಟ್: ವಿ ನೆಕ್ ಟೀ ಶರ್ಟ್ ಗ್ಲಾಮರ್ ಜಗತ್ತಿನಲ್ಲಿರುವವರಿಗೆ ಉತ್ತಮ ಆಯ್ಕೆ. ಆದರೆ ಪ್ರತಿದಿನ ಧರಿಸಲು ಇದು ಯೋಗ್ಯವಲ್ಲ. ಇದನ್ನು ಧರಿಸುವ ಮುನ್ನ ಫಿಗರ್, ಬಾಡಿ ಹೇಗಿದೆ ಅನ್ನೋದನ್ನು ತಿಳಿಯಿರಿ. ಸಾರ್ವಜನಿಕ ಸ್ಥಳದಲ್ಲಿ ಇದನ್ನು ಧರಿಸದಿದ್ದರೆ ಬೆಸ್ಟ್.
ಸ್ಲೋಗನ್ ಟೀ ಶರ್ಟ್: ಈ ಟೀ ಶರ್ಟ್ ಧರಿಸುವ ಮುನ್ನ ನೀವು ಅದರಲ್ಲಿ ಬರೆದಿರುವ ವಾಕ್ಯಗಳನ್ನು ನೋಡಿದರೆ ಉತ್ತಮ. ಆ ಸ್ಲೋಗನ್ ಇರುವ ಟಿ ಶರ್ಟ್ ಧರಿಸೋದು ಸರಿಯೇ? ಯಾವ ಸಂದರ್ಭದಲ್ಲಿ ಧರಿಸಬಹುದು ಎಂಬ ಅರಿವು ನಿಮಗಿರಲಿ. ಕೆಲವೊಮ್ಮೆ ಫ್ಯಾಷನ್ ಹೆಸರಲ್ಲಿ ಧರಿಸಿದ ಟೀ ಶರ್ಟ್‌ನಿಂದಲೇ ನಿಮಗೆ ಅವಮಾನವಾಗುವ ಚಾನ್ಸಸ್ ಇದೆ.
ಫಿಟ್ಟಿಂಗ್: ತುಂಬಾ ಫಿಟ್ ಆಗಿರುವ ಟೀ ಶರ್ಟ್ ಧರಿಸಲೇಬಾರದು. ಅದರಲ್ಲೂ ಜಿಮ್ ಬಾಡಿ ಹೊಂದಿದ ವ್ಯಕ್ತಿ ಫಿಗರ್ ಫಿಟ್ ಟೀ ಶರ್ಟ್ ನಿಂದ ದೂರ ಇರಿ. ಸಣ್ಣ ಶರೀರ ಹೊಂದಿರುವವರು ಸಹ ಟೈಟ್ ಅದ ಟೀ ಶರ್ಟ್ ಧರಿಸಬಾರದು. ಇದರಿಂದ ಸಣ್ಣ ಶರೀರದ ವ್ಯಕ್ತಿ ಕಾರ್ಟೂನ್‌ನಂತೆ ಕಾಣಿಸುತ್ತಾನೆ.
ಸಂದರ್ಭ: ಯಾವ ಸಂದರ್ಭದಲ್ಲಿ ಯಾವ ಟೀ ಶರ್ಟ್ ಧರಿಸಬೇಕು ಎಂಬುವುದು ನೆನಪಿರಲಿ ಫಾರ್ಮಲ್ ಅಕೇಷನ್‌ನಲ್ಲಿ ಕ್ಯಾಶುಯಲ್ ಟೀ ಶರ್ಟ್ ಧರಿಸಬೇಡಿ. ಟೀ ಶರ್ಟ್ ಜತೆ, ಫಾರ್ಮಲ್ ಪ್ಯಾಂಟ್ ತೊಡಬೇಡಿ. ಬದಲಾಗಿ ಜೀನ್ಸ್ ತೊಟ್ಟರೆ ಬೆಸ್ಟ್.
ಫ್ಯಾಷನ್ ಸಂಬಂಧೀ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆರಳ ಅಂದ ಹೆಚ್ಚಿಸೋ ತರಹೇವಾರಿ ರಿಂಗ್‌ಗಳು