37 ಆದರೂ ಮಕ್ಕಳೇಕ್ಕಿಲ್ಲ... ಜೀವನದ ಸತ್ಯ ಬಿಚ್ಚಿಟ್ಟ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್
ಆನ್‌ಲೈನ್ ಶೇರ್ ಮಾರ್ಕೆಟಿಂಗ್ ಆಪ್ ಜೆರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಕೂಡ ಮಕ್ಕಳ ಮಾಡಿಕೊಳ್ಳವ ಬಗ್ಗೆ ತಮ್ಮ ಚಿಂತನೆಯನ್ನು ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಾವೇಕೆ ಮಕ್ಕಳ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಲಿಲ್ಲ ಎಂಬ ಬಗ್ಗೆ ಹೇಳಿದ್ದಾರೆ. ಇದು ಯುವ ಸಮೂಹವನ್ನು ಕೂಡ ಚಿಂತನೆಗೆ ದೂಡಿದೆ.
ಬೆಂಗಳೂರು: ಮದುವೆಯಾದವರೆಲ್ಲಾ ಮಕ್ಕಳ ಮಾಡಿಕೊಳ್ಳಬೇಕು ಎಂಬುದು ಭಾರತೀಯ ಸಮಾಜದಲ್ಲಿರುವ ಅಲಿಖಿತ ನಿಯಮ. ಆದರೆ ಕಾಲ ಬದಲಾದಂತೆ ಜನರ ಚಿಂತನೆಯೂ ಬದಲಾಗಿದೆ. ಮದುವೆ ಬೇಕು ಮಕ್ಕಳು ಬೇಡ ಎಂಬ ಚಿಂತನೆ ಇಂದಿನ ಯುವ ಜೋಡಿಗಳಲ್ಲಿದೆ. ಅದೇ ರೀತಿ ಆನ್‌ಲೈನ್ ಶೇರ್ ಮಾರ್ಕೆಟಿಂಗ್ ಆಪ್ ಜೆರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಕೂಡ ಮಕ್ಕಳ ಮಾಡಿಕೊಳ್ಳುವ ಬಗ್ಗೆ ತಮ್ಮ ಚಿಂತನೆಯನ್ನು ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಾವೇಕೆ ಮಕ್ಕಳ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಲಿಲ್ಲ ಎಂಬ ಬಗ್ಗೆ ಹೇಳಿದ್ದಾರೆ.
ಇತ್ತೀಚೆಗೆ WTF ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜೆರೋಧಾ ಸಹ ಸಂಸ್ಥಾಪಕ ಪೋಷಕರಾಗುವುದರ ಬಗ್ಗೆ ತಮ್ಮ ಚಿಂತನೆಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ವಂಶ ಪರಂಪರೆಯನ್ನು ಮುಂದುವರಿಸಲು ಮಕ್ಕಳನ್ನು ಹೊಂದುವ ಸಾಂಪ್ರದಾಯಿಕ ಕಲ್ಪನೆ ತಮಗೆ ಹಿಡಿಸುವುದಿಲ್ಲ. ಪ್ರಸ್ತುತವಾದ ಸ್ಥಿತಿಗೆ ತಾನು ಆದ್ಯತೆ ನೀಡುತ್ತಿದ್ದು, ಮಗುವನ್ನು ಬೆಳೆಸುವುದರಲ್ಲಿಯೇ ತನ್ನ ಜೀವನದ ಬಹಳ ಮಹತ್ವದ ಭಾಗವನ್ನು ಕಳೆಯುವುದಕ್ಕೆ ಬಯಸುವುದಿಲ್ಲ, ತನಗೆ ಮಕ್ಕಳಿಲ್ಲದಿರುವುದಕ್ಕೆ ಇದು ಒಂದು ಕಾರಣವಾಗಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ಕರ್ಮ ಬೆನ್ನು ಬಿಡಲ್ಲ; ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ ಹೀಗ್ಯಾಕೆ ಹೇಳಿದ್ರು?
ನಾನು ನನ್ನ ಜೀವನದ 18 ರಿಂದ 20 ವರ್ಷಗಳನ್ನು ಮಗುವಿನ ಪಾಲನೆಯಲ್ಲಿ ಕಳೆಯಬೇಕಾಗುತ್ತದೆ. ಇದೇ ವೇಳೆ ಅದೃಷ್ಟವೂ ಸರಿಯಾಗಿದ್ದರೆ ಸರಿ, ಅದೃಷ್ಟ ಉಲ್ಟಾ ಹೊಡೆದರೆ ನಾನು ಬೆಳೆಸಿದ ಮಗನೇ ಆತನಿಗೆ 18 ತುಂಬುತ್ತಿದ್ದಂತೆ 'ನನಗೆ ಐ ವಿಲ್ ಸ್ಕ್ರಿವ್ ಯೂ ಎಂದು ಹೇಳಿ ಹೊರಟು ಹೋದರೆ ಹೇಗಿರುತ್ತದೆ? ಇಂತಹ ಒಂದು ಯೋಚನೆಯೇ ಮಕ್ಕಳನ್ನು ಮಾಡಿಕೊಳ್ಳದಿರಲು ಕಾರಣ ಎಂದು ಕಾಮತ್ ಹೇಳಿದ್ದಾರೆ.
ವಂಶ ಪರಂಪರೆಯ ವಿಚಾರ ಬಂದಾಗ ತಾನು ತಮಗಾಗಿ ಒಬ್ಬ ವಂಶೋದ್ಧಾರಕನನ್ನು ಬೆಳೆಸುವ ಸಾಂಪ್ರದಾಯಿಕ ಕಲ್ಪನೆಯನ್ನು ಹೊಂದಿಲ್ಲ, ನಮಗಿಂತ, ನಾವು ಮುಖ್ಯ ಎಂದು ನಾವೆಲ್ಲರೂ ಭಾವಿಸುತ್ತೇವೆ ಎಂದು ನಾನು ಭಾವಿಸುತ್ತೇನೆ, ಭೂಮಿಯಲ್ಲಿರುವ ಇತರ ಪ್ರಾಣಿಗಳಂತೆ ನಾವು ಹುಟ್ಟುತ್ತೇವೆ ಹಾಗೂ ಸಾಯುತ್ತೇವೆ, ಹೊರಟು ಹೋಗುತ್ತೇವೆ. ಯಾರೂ ಯಾರನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಮಾತನಾಡಿದ್ದಾರೆ 37 ವರ್ಷದ ನಿಖಿಲ್ ಕಾಮತ್.
ತಮ್ಮನ್ನು ಸಾವಿನ ನಂತರ ನೆನಪಿಸಿಕೊಳ್ಳುವುದಕ್ಕಾಗಿ ಮಕ್ಕಳನ್ನು ಹೊಂದುವ ಕಲ್ಪನೆಯೂ ನನ್ನ ಚಿಂತನೆಗಳಿಗೆ ಹೊಂದಿಕೆಯಾಗುವುದಿಲ್ಲ. ಸಾವಿನ ನಂತರ ನೆನಪಾದರೆಷ್ಟು ಬಿಟ್ಟರೆಷ್ಟು? ಅದರಿಂದ ಏನು ಪ್ರಯೋಜನ? ನೀವು ಬರಬೇಕು ನೀವು ಚೆನ್ನಾಗಿ ಬದುಕಬೇಕು, ನಿಮ್ಮ ಜೀವನದಲ್ಲಿ ನೀವು ಭೇಟಿಯಾಗುವ ವ್ಯಕ್ತಿ ಜೊತೆ ಚೆನ್ನಾಗಿರಬೇಕು ಇಷ್ಟೇ ಎಂದು ಅವರು ಹೇಳಿದ್ದಾರೆ.
ಜೆರೋಧಾ ಸಹ ಸಂಸ್ಥಾಪಕರಾಗಿರುವ ನಿಖಿಲ್ ಕಾಮತ್ ಅವರು ದಿ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಮಾಡಿದ ಅತ್ಯಂತ ಕಿರಿಯ ಭಾರತೀಯರಾಗಿದ್ದು, ಈ ಮೂಲಕ ಸಮಾಜದ ಒಳಿತಿಗಾಗಿ
ತನ್ನ ಸಮರ್ಪಣೆಯನ್ನು ತೋರಿಸಿದ್ದಾರೆ. ದಿ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕುವವರು ತಮ್ಮ ಸಂಪತ್ತಿನ ಬಹುಪಾಲನ್ನು ದತ್ತಿ ಕಾರ್ಯಗಳಿಗೆ ವಿನಿಯೋಗಿಸುವ ಮಹತ್ವದ ಗುರಿ ಹೊಂದಿದ್ದಾರೆ. ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ತನಗೆ ಬೆಂಗಳೂರಿನ ಇತರ ಉದ್ಯಮಿಗಳಾದ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಬಯೋಕಾನ್ ಸಂಸ್ಥಾಪಕ ಕಿರಣ್ ಮಜುಂದಾರ್ ಶಾ ಮತ್ತು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಪ್ರೇರಣೆ ಎಂದು ನಿಖಿಲ್ ಕಾಮತ್ ಹೇಳಿಕೊಂಡಿದ್ದಾರೆ.
ವಿಶ್ವ ಬಿಲಿಯನೇರ್ ಪಟ್ಟಿ: ಕನ್ನಡಿಗರಿಗೂ ಸ್ಥಾನ, ಅಣ್ಣನ ಆಸ್ತಿ ತಮ್ಮನಿಗಿಂತ 160 ಕೋಟಿ ಹೆಚ್ಚು!
ಭಾರತದಲ್ಲಿ ಕೇವಲ ನಾಲ್ಕು ಜನರು ದಿ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕಿದ್ದಾರೆ. ಇದರಲ್ಲಿ ಉಳಿದ ಮೂವರು ಕೂಡ ಬೆಂಗಳೂರಿಗರಾಗಿದ್ದು ನನಗೆ ನಿಜವಾಗಿಯೂ avru ಒಳ್ಳೆಯ ಸ್ನೇಹಿತರು ಮತ್ತು ಬೆಂಗಳೂರಿಗರು ಇದನ್ನು ಪ್ರತಿಧ್ವನಿಸುತ್ತಾರೆ. ನಾವು ನಾಲ್ವರೂ ಸ್ನೇಹಿತರಾಗಿದ್ದೇವೆ, ನಾನು ಮತ್ತು ಕಿರಣ್ ಮಜುಂದಾರ್ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇವೆ ನಾವೆಲ್ಲರೂ ತಿಂಗಳಿಗೊಮ್ಮೆ ಊಟಕ್ಕೆ ಅಥವಾ ಇನ್ನಾವುದೋ ಕಾರ್ಯಕ್ಕೆ ಒಟ್ಟಿಗೆ ಭೇಟಿಯಾಗುತ್ತೇವೆ ಎಂದು ಕಾಮತ್ ಹೇಳಿದ್ದಾರೆ.