ಇದೆಂಥಾ ವಿಚಿತ್ರ! ಈ ಬಾವಿ ನೀರು ತಾಗಿದರೆ ಎಲ್ಲ ಕಲ್ಲಾಗುತ್ತಂತೆ!

A well in England turns objects into stones
Highlights

ವಿಶ್ವದಲ್ಲಿ ಅನೇಕ ಚಿತ್ರ ವಿಚಿತ್ರ ಸಂಗತಿಗಳು ನಡೆಯುತ್ತವೆ. ಕೆಲವೊಂದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಬಹುದಾದರೂ, ಮತ್ತೆ ಕೆಲವೊಂದು ತರ್ಕಕ್ಕೆ ನಿಲುಕದ್ದು. ಇಂಗ್ಲೆಂಡ್‌ನಲ್ಲಿರೋ ಈ ಬಾವಿ ನೀರು ತಾಗಿದ ವಸ್ತುಗಳೆಲ್ಲ ತಿಂಗಳೊಳಗೆ ಕಲ್ಲಾಗುತ್ತದಂತೆ. ಎಂಥ ವಿಚಿತ್ರವಿದು?

ವಿಶ್ವದಲ್ಲಿ ಹಲವು ವಿಚಿತ್ರಗಳಿಗೆ ಉತ್ತರವಿಲ್ಲ. ಆದರೆ, ಚಿತ್ರ ವಿಚಿತ್ರ ಸಂಗತಿಗಳು ನಡೆಯುತ್ತಿರುವುದಂತೂ ಸುಳ್ಳಲ್ಲ. ಅದರಲ್ಲಿ ಇದೊಂದು ಬಾವಿಯೂ ಹೌದು. ಈ ಬಾವಿ ನೀರು ತಾಗಿದರೆ ಎಲ್ಲವೂ ಕಲ್ಲಾಗುತ್ತಂತೆ!

ಜಗತ್ತಿನ ಕೆಲವು ವಿಚಿತ್ರಗಳು ನಮ್ಮ ಊಹೆಗೂ ನಿಲುಕುವುದಿಲ್ಲ.ಇದೂ ಅಂಥದ್ದೇ ಒಂದು ಚಿತ್ರ ವಿಚಿತ್ರಗಳಲ್ಲೊಂದು. ಇದನ್ನು ಅದ್ಭುತ ಎನ್ನಬಹುದು. ಈ ಬಾವಿ ನೀರು ತಾಕಿದರೆ ಸಾಕು ಎಲ್ಲಾ ವಸ್ತುಗಳೂ ಕಲ್ಲಾಗುತ್ತವೆ.
  
ಹೌದು ಇದು ಸುಳ್ಳಲ್ಲ. ಈ ಬಾವಿ ಇಂಗ್ಲೆಂಡ್‌ನಲ್ಲಿದೆ. ಕೆನರ್ಸ್ ಬರ್ಗ್‌ನ ಉತ್ತರ ಯಾರ್ಕ್ ಶೈರ್‌ನಲ್ಲಿದೆ. ಈ ಬಾವಿಯ ನೀರಿಗೆ ತಾಕಿದ ಎಲ್ಲಾ ವಸ್ತುಗಳೂ ಕಲ್ಲಾಗಿ ಮಾರ್ಪಾಡಾಗುತ್ತದೆ. ಎಲೆ, ಕೋಲು, ಸೈಕಲ್, ಗೊಂಬೆ ಎಲ್ಲವೂ ಕೆಲವೇ ತಿಂಗಳಲ್ಲಿ ಕಲ್ಲಾಗುತ್ತವೆ. 

ಹಲವಾರು ಸಮಯದಿಂದ ಜನರು ನಂಬಿಕೊಂಡು ಬಂದಂತೆ ದೆವ್ವದ ಶಾಪದಿಂದ ಈ ಬಾವಿ ನೀರು ವಸ್ತುಗಳನ್ನು ಕಲ್ಲಾಗಿಸುತ್ತದೆ. ಈ ಬಾವಿಯನ್ನು ಒಂದು ಸೈಡ್‌ನಿಂದ ನೋಡಿದರೆ ಬುರುಡೆಯಂತೆ ಕಾಣುತ್ತದೆ. ನಾವು ಅದನ್ನು ಮುಟ್ಟಿದರೆ ಕಲ್ಲಾಗುತ್ತೇವೆ ಎಂದು ಜನರು ಭಾವಿಸಿದ್ದರು. ಜನರು ವಸ್ತುಗಳು ಕಲ್ಲಾಗುವುದನ್ನು ಪರಿಕ್ಷೀಸಲು ತಮ್ಮ ವಸ್ತುಗಳನ್ನು ಬಿಡುತ್ತಿದ್ದರು. ವಸ್ತುಗಳು ಕಲ್ಲಾಗಿರುವುದು ಈಗಲೂ ಕಾಣಿಸುತ್ತದೆ. 

ಇನ್ನೂ ಒಂದು ವಿಚಿತ್ರವೆಂದರೆ ಈ ಬಾವಿ ನೀರಿನ ಬಗ್ಗೆ ಇಂಥದ್ದೊಂದು ನಂಬಿಕೆ, ಭಯ ಜನರಲ್ಲಿದ್ದರೂ, ಮತ್ತೊಂದು ಗುಂಪಿನ ಜನ ಈ ನೀರಿನಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂದೂ ನಂಬಿದ್ದಾರೆ. ಯಾಕೆಂದರೆ ಈ ನೀರನ್ನು ಪರೀಕ್ಷೆ ಮಾಡಿದ ವಿಜ್ಞಾನಿಗಳು ನೀರಿನಲ್ಲಿ ದೇಹದ ನೋವುಗಳನ್ನು ದೂರ ಮಾಡುವ ವಿಶೇಷ ಶಕ್ತಿ ಇದೆ ಎಂದು ತಿಳಿಸಿದ್ದಾರೆ. ಆಧಿನಿಕ ಜಗತ್ತಿನ ವಿಜ್ಞಾನಿಗಳು ನೀರನ್ನು ಪರೀಕ್ಷಿಸಿ, ನೀರಿನಲ್ಲಿ ಹೆಚ್ಚಿನ ಪ್ರಮಾಣದ  ಮಿನರಲ್ ಇರುವುದನ್ನು ಪತ್ತೆ ಮಾಡಿದ್ದಾರೆ. ಇದೆ ವಸ್ತುಗಳ ಸುತ್ತಲೂ ಶೇಖರಣೆಗೊಂಡು ಕಲ್ಲಾಗಿ ಕಾಣುವಂತೆ ಮಾಡುತ್ತದೆ.

ಸದ್ಯಕ್ಕೆ ಈ ತಾಣ ಇಂಗ್ಲೆಂಡ್ ನ ಅತ್ಯಂತ ಹಳೆಯ ಪ್ರವಾಸಿ ತಾಣವಾಗಿ ಮಾರ್ಪಾಡು ಹೊಂದಿದೆ. 

ಭೂ ಮಂಡಲದ ಏಕೈಕ ಭಯಂಕರ ಸಮುದ್ರದ ಬಗ್ಗೆ ನಿಮಗೇನು ಗೊತ್ತು?
ಭಾರತದ ಮೋಸ್ಟ್ ಹಾಂಟೆಂಡ್ ತಾಣಗಳಿವು
ಪ್ರವಾಸಕ್ಕೆ ಹೊರಟಿದ್ದರೆ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಬೆಂಗಳೂರಿನ ಇಲ್ಲೆಲ್ಲ ದೆವ್ವವಿದೆಯಂತೆ

 

loader