ಪೊಲ್ಯುಷನ್, ತಲೆ ಬಿಸಿ, ಕೆಲಸದ ಒತ್ತಡ...ಇವುಗಳಿಂದ ನೂರಾರು ಕಾಯಿಲೆಗಳು. ಬಿಡದೇ ಕಾಡುವ ಚಿಂತೆಯಿಂದ ತಲೆ ಬೋಳಾಗೋದು ಈಗೀಗ ಕಾಮನ್. ಇನ್ನು ದಾಂಪತ್ಯದ ಬಂಧನಕ್ಕೆ ಒಳಗಾಗೋ ಮುನ್ನವೇ ಬೊಕ್ಕ ತಲೆ ಕಾಣಿಸಲಾರಂಭಿಸಿದರೆ ತಲೆ ಕೆಡಿಸಿಕೊಳ್ಳುತ್ತಾರೆ ಹುಡುಗರು.

ಕಾಲ ಯಾವುದೇ ಇರಲಿ ಮಹಿಳೆಯರಂತೆ ಪುರುಷರೂ ತಮ್ಮ ಕೂದಲಿನೆಡೆಗೆ ಗಮನ ಹರಿಸಬೇಕು. ಸ್ವಲ್ಪ ಕಡೆಗಣಿಸಿದರೆ ಬೊಕ್ಕ ತಲೆ ಸಮಸ್ಯೆ ನಿಮ್ಮದಾಗುತ್ತದೆ. ಇಂಥ ಸಮಸ್ಯೆ ಕಾಡಬಾರದು ಎಂದಾದರೆ ಪ್ರತಿದಿನ ಕೂದಲಿನ ಕೇರ್ ತೆಗೆದುಕೊಳ್ಳಬೇಕು. ಅದಕ್ಕಾಗಿ ನೀವು ಏನೇನು ಮಾಡಬೇಕು ನೋಡೋಣ...

ಕಪ್ಪು ಕೂದಲಿಗೂ ಉಂಟು ಯೋಗ..

- ತುಂಬಾ ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡಬೇಡಿ. ಅದು ಚಳಿಗಾಲವೇ ಇರಬಹುದು ಅಥವಾ ಮಳೆಗಾಲವೇ ಇರಬಹುದು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ.

- ಸ್ನಾನದ ನಂತರ ತಲೆಯನ್ನು ಜೋರಾಗಿ ಒರೆಸದೆ, ಗಾಳಿಯಲ್ಲಿ ಒಣಗಲು  ಬಿಡಿ. ಇಲ್ಲಾಂದ್ರೆ ಕೂದಲು ಡ್ಯಾಮೇಜ್ ಆಗುತ್ತದೆ.

- ಮಲಗುವ ಮುನ್ನ ತಲೆಗೆ ಸ್ನಾನ ಮಾಡಿದರೆ ತಲೆಯಲ್ಲಿ ಬೆವರು ಉಳಿಯುವುದಿಲ್ಲ ಹಾಗೂ ಕೂದಲು ಉದುರುವ ಸಮಸ್ಯೆ ತಪ್ಪುತ್ತದೆ.

- ಬೈಕ್‌ನಲ್ಲಿ ಓಡಾಡುವಾಗ ಹೆಲ್ಮೆಟ್‌ ಧರಿಸುವ ಮೊದಲು ತಲೆಗೆ ಕರ್ಚೀಫ್‌ ಕಟ್ಟಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಬ್ಯೂಟಿಯ ಸಮಸ್ಯೆಗಳು ಮತ್ತು ಸ್ವೀಟಿಯ ಪರಿಹಾರ!

- ತಲೆಗೆ ಸ್ನಾನ ಮಾಡಿದ ನಂತರ ಸ್ವಲ್ಪ ಎಣ್ಣೆ ಹಚ್ಚಿ ಮಸಾಜ್‌ ಮಾಡೋದರಿಂದ ಕೂದಲಿನಲ್ಲಿ ಮಾಯಿಶ್ಚರೈಸರ್‌ ಹಾಗೇ ಉಳಿಯುತ್ತದೆ.

- ಬೊಕ್ಕ ತಲೆ ಸಮಸ್ಯೆ ಕಾಣಿಸಿಕೊಂಡರೆ ಕೂದಲಿಗೆ ಈರುಳ್ಳಿ ರಸ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡಿದರೆ ಕೂದಲು ಉದುರುವ ಸಮಸ್ಯೆಯೂ ನಿಂತು ಕೂದಲು ಸೊಂಪಾಗಿ ಬೆಳೆಯಲು ಆರಂಭವಾಗುತ್ತದೆ.

- ಜೆಲ್‌ ಹಚ್ಚುವುದು ಸ್ಟೈಲ್‌ ಎಂದು ನೀವು ನಂಬಿರಬಹುದು. ಆದರೆ ಇದರಿಂದ ಬೊಕ್ಕ ತಲೆ ಸಮಸ್ಯೆ ಉಂಟಾಗುತ್ತದೆ.

ಸೌಂದರ್ಯಕ್ಕೆ ಅಂಟುವಾಳ ಕಾಯಿ ಎಂಬ ನೈಸರ್ಗಿಕ ಶ್ಯಾಂಪೂ...

- ಪ್ರತಿ ದಿನ ಎಣ್ಣೆ ಹಚ್ಚಿ ಶ್ಯಾಂಪೂ ಹಚ್ಚಿ ಉಗುರು ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡಿ.