Asianet Suvarna News Asianet Suvarna News

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ!

ಬೇಸಿಗೆಯ ಧಗೆಗೆ ಯಾವ ಆಹಾರವೂ ಸೇರುತ್ತಿರಲಿಲ್ಲ. ಈಗ ಮಳೆಗಾಲದಲ್ಲಿ ಬಿಸಿ ಬಿಸಿ ರುಚಿರುಚಿಯಾದ ತಿಂಡಿಗಳು ಕೈ ಬೀಸಿ ಕರೆಯುತ್ತವೆ. ಆದರೆ, ಇನ್ಫೆಕ್ಷನ್ ಹಾಗೂ ಇತರೆ ಕಾಯಿಲೆಗಳ ಭಯ ಎಲ್ಲವನ್ನೂ ತಿನ್ನಲು ಬಿಡುವುದಿಲ್ಲ. 

8 Foods to Avoid during monsoon
Author
Bangalore, First Published Jul 9, 2019, 1:48 PM IST

ಮಳೆಗಾಲವೇ ಹಾಗೆ, ಖಾರ ಖಾರ, ಬಿಸಿ ಬಿಸಿಯಾದ ಆಹಾರಗಳು ನನ್ನ ತಿನ್ನು ನನ್ನ ರುಚಿ ನೋಡು ಎಂದು ಬಾಯ್ತುಂಬಾ ಆಹ್ವಾನಿಸುತ್ತವೆ. ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಬೀದಿ ಬದಿಯ ಗಾಡಿಗಳಿಂದ ಪರಿಮಳ ಮೂಗಿಗೆ ರಾಚಿ ನಾಲಿಗೆಯಲ್ಲಿ ನೀರು ತರಿಸುತ್ತದೆ. ಹಾಗಂತ ಎಲ್ಲವನ್ನೂ ಹೊಟ್ಟೆಗಿಳಿಸಬೇಡಿ. ಮಳೆಗಾಲದಲ್ಲಿ ಇನ್ಫೆಕ್ಷನ್ ಹಾಗೂ ಕಾಯಿಲೆಗಳು ಹರಡುವುದು ಬೇಗ. ಜೊತೆಗೆ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಕೂಡಾ ವೀಕ್ ಆಗಿ ಸೂಕ್ಷ್ಮವಾಗುತ್ತದೆ. ಹೀಗಾಗಿ ನಾಲಿಕೆ ಕಟ್ಟಲೇಬೇಕಾಗುತ್ತದೆ. ಕೆಲವೊಂದು ಆಹಾರಗಳನ್ನು ಮಲೆಗಾಲದಲ್ಲಿ ದೂರವಿಟ್ಟರೆ ಆರೋಗ್ಯ ಕಾಪಾಡಿಕೊಳ್ಳಬಹುದು.

ಖಿನ್ನತೆ ತಗ್ಗಿಸುವ ಮ್ಯೂಸಿಕ್ ಎಂಬ ಮ್ಯಾಜಿಕ್!

ಚಾಟ್ಸ್

8 Foods to Avoid during monsoon

ಗೋಲ್‌ಗೊಪ್ಪಾ, ಬೇಲ್ ಪುರಿ, ದಹಿ ಪುರಿ, ಪಾನಿಪುರಿ, ಮಸಾಲಾಪುರಿಗಳ ಬಾಯ್ಚಪಲಕ್ಕೆ ಸ್ವಲ್ಪ ಬ್ರೇಕ್ ಕೊಡಿ. ಬೀದಿಬದಿಯ ಗಾಡಿಗಳಲ್ಲಿ ಮೊದಲೇ ಸ್ವಚ್ಛತೆ ಕಡಿಮೆ, ಇನ್ನು ಮಳೆಗಾಲದ ಲ್ಲಿ ಮಲಿನ ನೀರನ್ನು ಬಳಸಿದರೆ ಈ ಆಹಾರಗಳು ಸ್ಟೊಮಕ್ ಇನ್ಫೆಕ್ಷನ್‌ಗೆ ಕಾರಣವಾಗುತ್ತವೆ. ಇದು ಅತಿಸಾರ ಹಾಗೂ ಜಾಂಡೀಸ್ ತರಬಹುದು.

ಸೀಫುಡ್

8 Foods to Avoid during monsoon

ಮಳೆಗಾಲ ಮೀನುಗಳು ಹಾಗೂ ಏಡಿಗಳ ಬ್ರೀಡಿಂಗ್ ಟೈಂ. ಅಲ್ಲದೆ, ಮಳೆನೀರು ಹೊಳೆ, ಸಮುದ್ರಗಳಿಗೆ ಸೇರಿ ಅದೆಷ್ಟೋ ಸೋಂಕುಗಳೂ ಇವಕ್ಕೆ ತಗುಲಿರಬಹುದು. ಈ ಸಮಯದಲ್ಲಿ ಜಲಚರಗಳನ್ನು ಆಹಾರದಲ್ಲಿ ಸೇವಿಸುವುದನ್ನು ಆದಷ್ಟು ತಪ್ಪಿಸಿ. ಬಾಯಿಯ ಚಪಲಕ್ಕೆ ಚಿಕನ್, ಮಟನ್ ಬಳಕೆ ಮಾಡಬಹುದು.

ಹಸಿ ಆಹಾರ

8 Foods to Avoid during monsoon

ಆಹಾರ ತಜ್ಞರು ಯಾವಾಗಲು ಹಸಿ ಆಹಾರಗಳನ್ನು ಆರೋಗ್ಯಕ್ಕಾಗಿ ಸಲಹೆ ಮಾಡುವುದು ಕೇಳಿರುತ್ತೀರಿ. ಸಲಾಡ್‌ಗಳು, ಮೊಳಕೆಕಾಳುಗಳು ಆರೋಗ್ಯಕ್ಕೆ ಬಹಳಷ್ಟು ಲಾಭ ತರುವುದು ನಿಮಗೆ ಗೊತ್ತೇ ಇದೆ. ಆದರೆ, ಮಳೆಗಾಲದಲ್ಲಿ ಹಸಿ ಆಹಾರವು ಬ್ಯಾಕ್ಟೀರಿಯಾ ಹಾಗೂ ಇತರೆ ಸೋಂಕು ಹರಡುವ ಸೂಕ್ಷ್ಮಜೀವಿಗಳನ್ನು ದೇಹಕ್ಕೆ ವರ್ಗಾಯಿಸಿ ಕಾಯಿಲೆ ತರಬಹುದು. ನೀವು ಹಸಿ ಆಹಾರವನ್ನು ತಿನ್ನುವ ಡಯಟ್ ಸ್ಟ್ರಿಕ್ಟ್ ಆಗಿ ಫಾಲೋ ಮಾಡುತ್ತಿದ್ದರೆ, ತರಕಾರಿಗಳನ್ನು ಸ್ಟೀಮ್ ಮಾಡಿ ಅಥವಾ ಬೇಯಿಸಿ ಸೇವಿಸಿ. 

ಬಿ ಹ್ಯಾಪಿ, ನಿಯಂತ್ರಣದಲ್ಲಿಡಬಹುದು ಹೈ ಬಿಪಿ!

ಅಣಬೆಗಳು

8 Foods to Avoid during monsoon

ಅಣಬೆಗಳು ಮಣ್ಣಿಗೆ ತಾಕಿಕೊಂಡೇ ಇರುತ್ತವೆ. ಮಳೆಗಾಲದಲ್ಲಿ ಕೊಳಕು, ಕೆಸರಿನಲ್ಲೇ ಅದ್ದಿ ಹೋಗಿರುತ್ತವೆ. ಇದರಿಂದ ಈ ಕಾಲದಲ್ಲಿ ಅಣಬೆಗಳ ಸೇವನೆ ಬೇಗ ಸೋಂಕು ಹರಡಬಹುದು.

ಮಾವಿನ ಹಣ್ಣುಗಳು

8 Foods to Avoid during monsoon

ಮಾವಿನಹಣ್ಣು ಅದೆಷ್ಟೇ ಪ್ರಿಯವಾಗಿರಬಹುದು. ಆದರೆ, ಮಳೆಗಾಲದಲ್ಲಿ ಅವುಗಳ ಸೇವನೆಯು ವಾತಾ ಹಾಗೂ ಕಫ ತರುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು ಹಾಗೂ ಇತರೆ ಕಲೆಗಳಾಗಬಹುದು. ಇತರೆ ಸಾಮಾನ್ಯ ಕಾಯಿಲೆಗಳೂ ಬಹರಬಹುದು ಎನ್ನುತ್ತದೆ ಆಯುರ್ವೇದ.

ರಸ್ತೆಬದಿಯ ಜ್ಯೂಸ್‌ಗಳು

8 Foods to Avoid during monsoon

ಹಣ್ಣುಗಳನ್ನು ಓಪನ್ ಆಗಿ ಇಡುವುದರಿಂದ ಹಿಡಿದು ಸರಿಯಾಗಿ ತೊಳೆಯದ ಗ್ಲಾಸ್‌ಗಳು, ಕೊಳಕು ನೀರನ್ನು ಬಳಸುವವರೆಗೆ ಎಲ್ಲ ಅಪಾಯಗಳೂ ರಸ್ತೆ ಬದಿಯ ಜ್ಯೂಸ್ ಅಂಗಡಿಗಳದು. ಹೀಗಾಗಿ, ತೇವಾಂಶ ವಾತಾವರಣದಲ್ಲಿ ಈ ಜ್ಯೂಸ್‌ಗಳ ಸೇವನೆ ಎಲ್ಲ ರೀತಿಯ ಕಾಯಿಲೆಗಳನ್ನೂ ಹೊತ್ತು ತರಬಹುದು. ಮನೆಯಲ್ಲೇ ತಾಜಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌ಗಳನ್ನು ಮಾಡಿದ ತಕ್ಷಣವೇ ಸೇವಿಸುವುದೊಳಿತು.

ಮುಟ್ಟಿದರೆ ಮಣಿಯುವ, ಮುತ್ತಿಟ್ಟರೆ ಮುನಿಯದ ಮೃದು ತ್ವಚೆಯ 10 ರಹಸ್ಯಗಳು!

ಫ್ರೈಡ್ ಫುಡ್ಸ್

8 Foods to Avoid during monsoon

ಕರಿದ ಪದಾರ್ಥಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ.  ಸಮೋಸಾ, ಜಿಲೇಬಿ, ಬೋಂಡಾ, ಕಚೋರಿ, ಅತಿಯಾದ ಉಪ್ಪನ್ನು ಹೊಂದಿದ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ತಗ್ಗಿರುತ್ತದೆ. ಹೀಗಾಗಿ, ಇವನ್ನು ಆದಷ್ಟು ದೂರವಿಡಿ.

ಮೊಸರು

8 Foods to Avoid during monsoon

ಅಸ್ತಮಾ ಹಾಗೂ ಸೈನಸೈಟಿಸ್ ಇರುವವರು ಶತಾಯಗತಾಯ ಮಳೆಗಾಲದಲ್ಲಿ ಮೊಸರಿನಿಂದ ದೂರವಿರಿ. ಆಯುರ್ವೇದದ ಪ್ರಕಾರ, ಇದು ದೇಹದಲಲ್ಲಿ ಕಫ ಹೆಚ್ಚಿಸುತ್ತದೆ. 

Follow Us:
Download App:
  • android
  • ios