ತಿರುಗಾಟ ನಿಮ್ಮ ಚಟವಾಗಿದ್ದರೆ ಈ ಆ್ಯಪ್‌ಗಳು ಫೋನ್‌ನಲ್ಲಿರಲಿ!
ಟ್ರಾವೆಲ್‌ಗೆ ಸಂಬಂಧಿಸಿದ ನೂರಾರು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಸಿಗುತ್ತವೆ. ಅವುಗಳಲ್ಲಿ ಕೆಲವು ನಿಜಕ್ಕೂ ಬಹಳ ಪ್ರಯೋಜನಕಾರಿ. ನೀವು ಟ್ರಾವೆಲ್‌ಫ್ರೀಕ್ ಆಗಿದ್ದರೆ ಈ ಆ್ಯಪ್‌ಗಳು ನಿಮ್ಮ ಮೊಬೈಲ್ ಫೋನ್ ಎಂಬ ಬತ್ತಳಿಕೆಯಲ್ಲಿರಲಿ.
ಕಾಲಿಗೆ ಚಕ್ರ ಕಟ್ಟಿಕೊಂಡು ಸದಾ ಟ್ರಿಪ್, ಟ್ರೆಕ್ಕಿಂಗ್ ಎಂದು ತಿರುಗಾಟ ಮಾಡುವವರು ನೀವಾದರೆ, ನಿಮ್ಮ ಸೇವೆಗೆಂದೇ ನೂರಾರು ಆ್ಯಪ್‌ಗಳು ಸಿದ್ಧವಾಗಿವೆ. ಅವುಗಳು ನಿಮಗೆ ಕಡಿಮೆ ವೆಚ್ಚದಲ್ಲಿ ಟ್ರಾವೆಲ್ ಮಾಡುವುದು ಹೇಗೆ, ಹತ್ತಿರದಲ್ಲಿ ಬೇರೆ ಯಾವ ಪ್ರವಾಸೀ ಸ್ಥಳಗಳಿವೆ, ಹೋಟೆಲ್ ಬುಕಿಂಗ್, ಫ್ಲೈಟ್ ಬುಕಿಂಗ್, ಕಡಿಮೆ ಸಮಯದಲ್ಲಿ ಹೆಚ್ಚು ತಿರುಗಾಟ ಮಾಡುವುದು ಹೇಗೆ ಮುಂತಾದ ವಿಷಯಗಳೆಲ್ಲ ಈ ಆ್ಯಪ್‌ಗಳಿಗೆ ಕರಗತ. ಅವಕ್ಕೆ ಗೊತ್ತಿದೆ ಎಂದ ಮೇಲೆ ನಿಮಗೂ ಗೊತ್ತಿದ್ದಂತೆಯೇ. ಈ ಫ್ರೀ ಟ್ರಾವೆಲ್ ಆ್ಯಪ್‌ಗಳನ್ನು ಟ್ರೈ ಮಾಡಿ ನೋಡಿ.
ಫ್ಲಿಯೋ
ಇದೊಂದು ಅತ್ಯುತ್ತಮ ಏರ್‌ಪೋರ್ಟ್ ಆ್ಯಪ್ ಆಗಿದ್ದು, ನೀವಿರುವ ಏರ್‌ಪೋರ್ಟ್‌ನಲ್ಲಿರುವ ಸಂಪೂರ್ಣ ವ್ಯವಸ್ಥೆ ಹಾಗೂ ಸಂಪನ್ಮೂಲಗಳ ಕುರಿತ ಮಾಹಿತಿ ನೀಡುತ್ತದೆ. ಅಷ್ಟೇ ಅಲ್ಲ, ವಿಮಾನ ಬರುವ, ಹೋಗುವ ಸಮಯವನ್ನೂ ತೋರಿಸುತ್ತದೆ. ಒಂದಿಷ್ಟು ಊಟದ ಆಯ್ಕೆಗಳು, ಡಿಸ್ಕೌಂಟ್ ಕೂಪನ್‌ಗಳು, ಸ್ಥಳೀಯ ಹವಾಮಾನ, ಟ್ರಾನ್ಸ್‌ಪೋರ್ಟೇಶನ್ ಆಯ್ಕೆಗಳು ಸೇರಿದಂತೆ ಬಹಳಷ್ಟು ವಿಷಯಗಳನ್ನು ಈ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.
ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್?
ಪ್ಯಾಕ್ ಪಾಯಿಂಟ್
ಇದೊಂದು ಅದ್ಭುತ ಆ್ಯಪ್ ಆಗಿದ್ದು, ನಿಮ್ಮ ಲಿಂಗ, ವಯಸ್ಸು, ಹೋಗುತ್ತಿರುವ ಸ್ಥಳ, ಉಳಿದುಕೊಳ್ಳಲಿರುವ ದಿನಗಳು, ಅಲ್ಲಿ ನೀವು ತೊಡಗಿಕೊಳ್ಳಲಿರುವ ಚಟುವಟಿಕೆಗಳು ಎಲ್ಲದರ ಆಧಾರದ ಮೇಲೆ ಏನೇನು ಪ್ಯಾಕಿಂಗ್ ಮಾಡಿಕೊಳ್ಳಬೇಕೆಂದು ಸಲಹೆ ನೀಡುತ್ತದೆ. ಅಷ್ಟೇ ಅಲ್ಲ, ನೀವು ಹೋದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಹವಾಮಾನ ಹೇಗಿರುತ್ತದೆ ಎಂಬುದರ ಮುನ್ಸೂಚನೆಯನ್ನೂ ನೀಡುತ್ತದೆ.
ಗೂಗಲ್ ಮ್ಯಾಪ್ಸ್
ಎಲ್ಲೇ ಹೋದರೂ ನೀವು ಬಹಳಷ್ಟು ಬಳಸಿಕೊಳ್ಳುವ ಆ್ಯಪ್ ಇದು. ಸುತ್ತಮುತ್ತ ಏನೇನಿದೆ, ಅಲ್ಲಿ ತಲುಪಲು ಎಷ್ಟು ಸಮಯವಾಗಬಹುದು, ಆಫ್‌ಲೈನ್ ರೋಡ್ ಮ್ಯಾಪ್ ಜೊತೆಗೆ, ಪಟ್ಟಿಯಲ್ಲಿ ಪ್ಲೇಸ್‌ಗಳನ್ನು ಸೇವ್ ಮಾಡುವ ಅವಕಾಶ, ಆಫ್‌ಲೈನ್‌ನಲ್ಲಿ ಬಳಸಲು ಮ್ಯಾಪ್ ಡೌನ್‌ಲೋಡ್ ಮಾಡುವುದು ಮುಂತಾದ ಫೀಚರ್ಸ್ ಹೊಂದಿದೆ.
ಶ್ ಏರ್
ಇದು ಉತ್ತಮ ಹವಾಮಾನ ಮುನ್ಸೂಚನಾ ಆ್ಯಪ್ ಆಗಿದ್ದು, ಯಾವುದೇ ಸ್ಥಳದ ಸಧ್ಯದ ಹಾಗೂ ಮುಂದಿನ ಹವಾಮಾನ ಕುರಿತ ಮಾಹಿತಿ ನೀಡುತ್ತದೆ. ಗ್ರಾಫ್ ಮೇಲೆ ಕೈಯಾಡಿಸಿದರೆ ಸಾಕು, ಗಾಳಿಯ ವೇಗ, ತಾಪಮಾನ, ಹ್ಯುಮಿಡಿಟಿ ಹೀಗೆ ದಿನದ ಪ್ರತಿ ನಿಮಿಷದ ಹವಾಮಾನ ವರದಿ ನೀಡುತ್ತಲೇ ಇರುತ್ತದೆ. ಈ ಆ್ಯಪನ್ನು ನಿಮ್ಮ ಕ್ಯಾಲೆಂಡರ್‌ಗೆ ಸಿಂಕ್ ಮಾಡಿದರೆ ನಿಮ್ಮ ಚಟುವಟಿಕೆಗಳಿಗೆ ಅನುಕೂಲವಾಗುವ ಹವಾಮಾನವಿರುತ್ತದೆಯೇ ಎಂದು ಚೆಕ್ ಮಾಡಿಕೊಂಡು ಮುಂದುವರಿಯಬಹುದು.
ರೇಪ್‌ನಂಥ ಘಟನೆ ನಡೆದರೆ ಸಂಬಂಧಿ ಎಚ್ಚರಿಸೋ ರಿಸ್ಟ್ ಬ್ಯಾಂಡ್!
ಟ್ಯಾಪ್
ಇದು ನೀವು ನೀರು ಕುಡಿಯುತ್ತಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಎಲ್ಲೇ ಹೋದರೂ ಅಲ್ಲಿ ಹತ್ತಿರದಲ್ಲಿ ಕುಡಿಯುವ ನೀರು ತುಂಬಿಸಿಕೊಳ್ಳಲು ವ್ಯವಸ್ಥೆ ಎಲ್ಲಿದೆ ಎಂಬುದನ್ನು ತೋರಿಸುವ ಮೂಲಕ ಅನಗತ್ಯ ಪ್ಲ್ಯಾಸ್ಟಿಕ್ ಬಾಟಲ್‌ಗಳನ್ನು ಕೊಳ್ಳುವುದನ್ನು ತಪ್ಪಿಸುತ್ತದೆ. ಫ್ರೀ ಪಬ್ಲಿಕ್ ಫೌಂಟೇನ್‌ನಿಂದ ಹಿಡಿದು ಪೇಯ್ಡ್ ವಾಟರ್ ಎಟಿಎಂಗಳನ್ನು ಕೂಡಾ ಇದು ತೋರಿಸುತ್ತದೆ. ಜಗತ್ತಿನ ಬಹುತೇಕ ಎಲ್ಲ ನಗರಗಳ ನೀರಿನ ಮಾಹಿತಿ ಇದರಲ್ಲಿದೆ.
ವೈಫೈ ಮ್ಯಾಪ್
ಸಾವಿರಾರು ವೈಫೈ ಫೈಂಡರ್ ಆ್ಯಪ್ಸ್ ಇರಬಹುದು. ಅವುಗಳಲ್ಲಿ ವೈಫೈ ಮ್ಯಾಪ್ ಹೆಚ್ಚು ಪ್ರಯೋಜನಕಾರಿ. ಎಲ್ಲೇ ಹೋದರೂ ಹತ್ತಿರದಲ್ಲಿ ಫ್ರೀ ಹಾಟ್‌ಸ್ಪಾಟ್ ಇದ್ದರೆ ಅದನ್ನು ಗುರುತಿಸಿ ತಿಳಿಸುತ್ತದೆ. ಹತ್ತಿಪದ ವೈಫೈ ಹಾಟ್‌ಸ್ಪಾಟ್‌ಗಳ ಮ್ಯಾಪ್ ನೀಡುವುದರೊಂದಿಗೆ ಕಮರ್ಷಿಯಲ್ ಪಾಸ್‌ವರ್ಡ್ ಪ್ರೊಟೆಕ್ಟೆಡ್ ನೆಟ್‌ವರ್ಕ್‌ಗಳ ಪಾಸ್‌ವರ್ಡನ್ನು ಕೂಡಾ ಇದು ನೀಡುತ್ತದೆ. ನೀವು ಯಾವುದಾದರೂ ನಗರದ ಮ್ಯಾಪ್ ಡೌನ್ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲಿ ಬಳಕೆ ಮಾಡಲು ಕೂಡಾ ಇದರಲ್ಲಿ ಅವಕಾಶವಿದೆ.
ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಯಾರನ್ನೂ ಸೆಳೆಯುತ್ತಿಲ್ಲವೇ? ಈ ಕಾರಣಗಳಿರಬಹುದು...
ಸಿಟ್ ಆರ್ ಸ್ಕ್ವಾಟ್
ಪ್ರವಾಸ ಹೋದಾಗ ಟಾಯ್ಲೆಟ್ ಎಂಬುದು ಎಮರ್ಜೆನ್ಸಿ. ಹೀಗಾಗಿ, ಅಗತ್ಯ ಬಿದ್ದಾಗ ಹತ್ತಿರದಲ್ಲಿ ಎಲ್ಲಿ ಟಾಯ್ಲೆಟ್ ಫೆಸಲಿಟಿ ಎಂದು ಯಾರಾದರೂ ಹೇಳಿದರೆ ಅವರೇ ಪುಣ್ಯಾತ್ಮರೆನಿಸುತ್ತದೆ. ಈ ಆ್ಯಪ್ ಅಂಥ ಪುಣ್ಯಾತ್ಮ ಕೆಲಸ ಮಾಡುತ್ತದೆ. ಹೆಸರಿಗೆ ತಕ್ಕಂತೆ ಹತ್ತಿರದಲ್ಲಿ ಎಲ್ಲಿ ಶೌಚಾಲಯ ಇದೆ ಎಂದು ತಿಳಿಸುವುದರ ಜೊತೆಗೆ ಅವು ಬಳಕೆ ಯೋಗ್ಯವೇ ಎಂಬುದನ್ನೂ ಹೇಳುತ್ತದೆ. ಸಿಟ್ ಎಂದರೆ ಚೆನ್ನಾಗಿದೆ ಎಂದೂ, ಸ್ವ್ಕಾಟ್ ಎಂದರೆ ಸ್ವಚ್ಛತೆ ಕಾಪಾಡಿಲ್ಲ ಎಂದೂ ಬಳಕೆದಾರರ ರೇಟಿಂಗ್ ಆಧಾರದ ಮೇಲೆ ತಿಳಿಸುತ್ತದೆ.