ರೇಪ್‌ನಂಥ ಘಟನೆ ನಡೆದರೆ ಸಂಬಂಧಿ ಎಚ್ಚರಿಸೋ ರಿಸ್ಟ್ ಬ್ಯಾಂಡ್!
ಬಾಲ್ಯದಲ್ಲಿಯೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಸ್ಕಾಟ್‌ಲ್ಯಾಂಡ್‌ನ ಬಿಟ್ರೀಸ್ ಎಂಬಾಕೆ ಮಹಿಳೆಯರ ಸುರಕ್ಷತೆಗಾಗಿ ಒಂದು ರಿಸ್ಟ್ ಬ್ಯಾಂಡ್ ರಚಿಸಿದ್ದಾಳೆ. ಮಹಿಳೆಯರಿಗೆ ಎಂಥದ್ದೇ ಅಪಾಯ ಎದುರಾದರೂ ಈ ಬ್ಯಾಂಡ್ ಅವರನ್ನು ರಕ್ಷಿಸುತ್ತದೆ.
21 ವರ್ಷದ ವಿದ್ಯಾರ್ಥಿ ಬಿಟ್ರೀಸ್ ಕರ್ವಾಲ್ಹೋ ಮಹಿಳೆಯರಿಗಾಗಿ ಅತ್ಯಾಚಾರ ಮೊದಲಾದ ಸಂದರ್ಭಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದು ರಿಸ್ಟ್ ಬ್ಯಾಂಡ್ ತಯಾಸಿದ್ದಾರೆ. ಮಹಿಳೆಯರು ಒಂದು ವೇಳೆ ಅಹಿತಕರ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿ ಕೊಂಡರೆ, ಬ್ಯಾಂಡ್‌ನ ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು, ಸ್ನೇಹಿತರಿಗೆ ಮತ್ತು ಮನೆಯವರಿಗೆ ನೀವು ಕಷ್ಟದಲ್ಲಿದ್ದೀರಿ ಅನ್ನೋದು ತಿಳಿಯುತ್ತದೆ. ಈ ಬ್ಯಾಂಡ್‌ನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಜೋಡಿಸಲಾಗುತ್ತದೆ.
ಮೊಬೈಲ್ ಕಳ್ಳರ ಆಟಕ್ಕೆ ಬ್ರೇಕ್ ಹಾಕಲು ಕೇಂದ್ರದ ಹೊಸ ಪ್ಲ್ಯಾನ್
ಕಾಲೇಜ್ ಪ್ರಾಜೆಕ್ಟಿಗಾಗಿ ಈ ಸಾಧನವನ್ನು ತಯಾರಿಸಿದ್ದು, ಮಹಿಳೆಯರಿಗೆ ಸುರಕ್ಷೆ ನೀಡುವುದೇ ಇದರ ಪ್ರಮುಖ ಗುರಿ. ಬಾಲ್ಯದಲ್ಲಿಯೇ ಲೈಂಗಿಕ ಶೋಷಣೆಗೆ ಗುರಿಯಾದ ಬಿಟ್ರೀಸ್ ತನ್ನಂತೆ ಇನ್ನೊಬ್ಬರಿಗೆ ಆಗದಿರಲೆಂದು ಈ ಹೊಸ ಟೆಕ್ನಲಾಜಿ ಕಂಡು ಹಿಡಿದಿದ್ದಾರೆ.
ಬಿಟ್ರೀಸ್ ಹೇಳುವಂತೆ ರಾತ್ರಿಯವರೆಗೆ ಹೊರಗಡೆ ಕಾರ್ಯ ನಿರ್ವಹಿಸುವ ಮಹಿಳೆಯರಿಗಾಗಿ ಮುಖ್ಯವಾಗಿ ಈ ಬ್ಯಾಂಡ್ ಉಪಯೋಗಕ್ಕೆ ಬರಲಿದೆ. ಮನೆಯಿಂದ ಹೊರಗೆ ಹೋಗುವ ಮುನ್ನ ಇದಕ್ಕೆ ಸಂಬಂಧಿಸಿದ ಆ್ಯಪನ್ನು ಎಲ್ಲರ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಬೇಕು. ಎಮರ್ಜೆನ್ಸಿ ಸಮಯದಲ್ಲಿ ಬ್ಯಾಂಡ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಬೇಕು. ಹೀಗೆ ಮಾಡಿದರೆ ಬ್ಯಾಂಡ್ ಕಲರ್ ಬದಲಾಗುತ್ತದೆ. ಜೊತೆಗೆ ಸ್ನೇಹಿತರ ಮೊಬೈಲ್ ಗೆ ಅಲರ್ಟ್ ಮೆಸೇಜ್ ಹೋಗುತ್ತದೆ.
ಮಳೆಗಾಲದಲ್ಲಿ ನಿಮ್ಮ ಗ್ಯಾಜೆಟ್‌ಗಳ ಸುರಕ್ಷತೆಗೆ ಹೀಗ್ ಮಾಡಿ!
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ಜಾತ್ರೆ, ಸಮಾರಂಭ, ನೈಟ್ ಕ್ಲಬ್‌ಗಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಸಂದರ್ಭ ಯಾವುದೇ ಆಗಿರಲಿ ಆ ಸಂದರ್ಭದಲ್ಲಿ ಭಯದಿಂದ ಸುಮ್ಮನಿರುವುದನ್ನು ಬಿಟ್ಟು ಮಹಿಳೆಯರು ಈ ಬ್ಯಾಂಡ್ ಮೂಲಕ ಅಲರ್ಟ್ ಮಾಡಿದರೆ ಲೈಂಗಿಕ ಶೋಷಣೆಯಂಥ ಘಟನೆಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಬಿಟ್ರೀಸ್.