ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್?

ಸಾಮಾನ್ಯವಾಗಿ ನಮ್ಮ ಏಕಾಗ್ರತೆಗೆ ಭಂಗ ತರುವ ಮೊಬೈಲ್ ಫೋನ್, ಸರಿಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆಂದರೆ ಅದು ಗುಡ್ ನ್ಯೂಸ್ ಅಲ್ಲದೆ ಬೇರೇನು? ಹೌದು, ಈ ಕೆಲ ಅಪ್ಲಿಕೇಶನ್‌ಗಳು ನಿಮ್ಮ ನಿದ್ರಾಸಮಸ್ಯೆಗಳಿಗೆ ಪರಿಹಾರವಾಗಬಲ್ಲವು. 

6 apps for Insomnia that helps for better sleep

ಸಾಮಾನ್ಯವಾಗಿ ಮನುಷ್ಯರಿಗೆ ಪ್ರತಿ ರಾತ್ರಿ ನಿರಂತರ 8 ಗಂಟೆಗಳ ನಿದ್ರೆ ಅವಶ್ಯಕ. ನಿದ್ರೆ ಸರಿಯಾಗಲಿಲ್ಲವೆಂದರೆ ಮರು ಬೆಳಗಿನ ಯಾವ ಕಾರ್ಯಗಳೂ ಸರಾಗವಾಗಿ ಸಾಗದು. ನಿದ್ರಾಹೀನತೆಯು ಬಹುದೊಡ್ಡ ಸಮಸ್ಯೆಯಾಗಿದ್ದು, ಅದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಇದೀಗ ನಿಮ್ಮ ನಿದ್ದೆಗೆಡಿಸುವ ಮೊಬೈಲ್ ಫೋನನ್ನೇ ಉತ್ತಮ ನಿದ್ದೆ ಪಡೆಯಲು ಬಳಸಿಕೊಳ್ಳಬಹುದು. ಹೇಗೆಂದಿರಾ? ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿ ನೋಡಿ.

1. ನಾಯ್ಸ್ಲಿ(noisli)
ಈ ಆ್ಯಪ್‌ನಲ್ಲಿ ಸ್ಲೀಪ್ ಸೌಂಡ್‌ಟ್ರ್ಯಾಕ್‌ಗಳಿದ್ದು, ನಿಮಗೆ ಸರಿ ಹೊಂದುವುದನ್ನು ಆಯ್ಕೆ ಮಾಡಿಕೊಳ್ಳಿ.
- ಗಾಳಿಯ ಸದ್ದು, ಅಲೆಗಳ ಸದ್ದು, ಕೆಫೆಯ ಗಜಿಬಿಜಿ ಹೀಗೆ ಮುಂತಾದ ಸೌಂಡ್‌ಟ್ರ್ಯಾಕ್‌ಗಳು ಇದರಲ್ಲಿವೆ. ಇವುಗಳಲ್ಲಿ ನಿಮಗೆ ನಿದ್ದೆಗೆ ಅನುಕೂಲಕರ ಎಂಬಂಥದನ್ನು ಆರಿಸಿಕೊಳ್ಳಬಹುದು. ಇಲ್ಲವೇ, ಎರಡು ಮೂರು ಶಬ್ದಗಳನ್ನು ಮಿಕ್ಸ್ ಮಾಡಿ ನಿಮ್ಮದೇ ಆದ ಸೌಂಡ್‌ಟ್ರ್ಯಾಕ್‌ ಸೃಷ್ಟಿಸಿಕೊಳ್ಳಬಹುದು.
- ಲೂಪ್ ಫೀಚರ್ ಇದ್ದು, ಎಷ್ಟು ಬಾರಿ  ಸದ್ದು ರಿಪೀಟ್ ಆಗಬೇಕೆಂದು ಬಯಸುವಿರೋ ಅಷ್ಟು ಬಾರಿಗೆ ಸೆಟಿಂಗ್ಸ್ ಮಾಡಿಕೊಳ್ಳಬಹುದು.
- ಈ ಬ್ಯಾಕ್‌ಗ್ರೌಂಡ್ ಸದ್ದು ನಿಮ್ಮನ್ನು ರಿಲ್ಯಾಕ್ಸ್ ಮಾಡಿ ನಿದ್ದೆಗೆ ತಳ್ಳುತ್ತದೆ.
- ಟೈಮರ್ ಇದ್ದು, ಎಷ್ಟು ಹೊತ್ತು ಬೇಕೋ ಅಷ್ಟು ಹೊತ್ತಿನ ಟೈಮರ್ ಸೆಟ್ ಮಾಡಿಕೊಳ್ಳಬಹುದು. ಇದರಿಂದ ಇಡೀ ರಾತ್ರಿ ಸುಮ್ಮನೆ ಟ್ರ್ಯಾಕ್ ಆನ್ ಇರುವುದನ್ನು ತಪ್ಪಿಸಬಹುದು.

ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

2. ಝಿಜ್ (Pzizz)
ಇದೊಂದು ಜನಪ್ರಿಯ ಸ್ಲೀಪ್ ಆ್ಯಪ್ ಆಗಿದ್ದು, ಒಂದೇ ಬಟನ್‌ನ ಸಹಾಯದಿಂದ ನಿದ್ರೆಗೆ ಜಾರಿಸುತ್ತದೆ.
- ಸೌಂಡ್ ಸೀಕ್ಸೆನ್ಸ್ ಬಳಸಿ ನಿಮ್ಮನ್ನು ನಿದ್ರಾಸಮಸ್ಯೆಯಿಂದ ಹೊರತರುತ್ತದೆ.
- ಟೈಮರ್ ಬಳಸಿ ಬೇಕೆಂದಷ್ಟು ಹೊತ್ತು ಡ್ರೀಮ್‌ಸ್ಕೇಪ್ ಪ್ಲೇ ಮಾಡಬಹುದು. ಡ್ರೀಮ್‌ಸ್ಕೇಪ್‌ನಲ್ಲಿ ವಿವಿಧ ಸೌಂಡ್ ಎಫೆಕ್ಟ್‌ಗಳು, ವಾಯ್ಸ್ ಓವರ್‌ಗಳು ಹಾಗೂ ಮ್ಯೂಸಿಕ್ ಇರುತ್ತದೆ.
- ಪ್ರತಿ ರಾತ್ರಿ ಬೇರೆ ಬೇರೆ ಡ್ರೀಮ್‌ಸ್ಕೇಪ್ ಆಫರ್ ನೀಡುತ್ತದೆ.
- ಸ್ಲೀಪ್ ಮೊಡ್ಯೂಲ್, ಫೋಕಸ್ ಮೊಡ್ಯೂಲ್, ನ್ಯಾಪ್ ಮೊಡ್ಯೂಲ್ ಎಂದು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು.

ಬದುಕು ಬದಲಿಸಬಲ್ಲ ಫಿಟ್‌ನೆಸ್ ಆ್ಯಪ್ಸ್!

3. ಹೆಡ್‌ಸ್ಪೇಸ್
ಇದೊಂದು ಜನಪ್ರಿಯ ಮೆಡಿಟೇಶನ್ ಆ್ಯಪ್ ಆಗಿದ್ದು, ಬಹಳಷ್ಟು ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
- ಇದರಲ್ಲಿ ಧ್ಯಾನ ಮಾಡಲು ಸೂಕ್ತ ಗೈಡ್‌ಲೈನ್ಸ್‌ಗಳಿದ್ದು, ಇವುಗಳನ್ನು ಮನಸ್ಸನ್ನು ರಿಲ್ಯಾಕ್ಸ್ ಮಾಡಿ ನಿದ್ದೆ ಶಾಂತವಾಗಿ ನಿದ್ರಿಸಲು ಸಹಾಯ ಮಾಡುತ್ತವೆ. 
- ದಿನವಿಡೀ ಮೈಂಡ್‌ಫುಲ್ ಆಗಿರಲು ಈ ಆ್ಯಪ್ ರಿಮೈಂಡರ್‌ಗಳನ್ನು ಕಳುಹಿಸುತ್ತಲೇ ಇರುತ್ತಾದ್ದರಿಂದ, ಮೈ ಮರೆತಾಗ ಎಚ್ಚರಗೊಳ್ಳಬಹುದು.
- ಒತ್ತಡ, ಆತಂಕ, ಸುಸ್ತು ಇತರೆ ಸಮಸ್ಯೆಗಳನ್ನು ಎದುರಿಸಲು ಬೇರೆ ಬೇರೆ ರೀತಿಯ ಕೋರ್ಸ್‌ಗಳನ್ನು ನೀಡುತ್ತದೆ.
- ಸ್ಕ್ರೀನ್ ಡಿಮ್ ಆಗಿದ್ದು, ಬಟನ್‌ಗಳು ಬಳಸಲು ಸುಲಭವಾಗಿವೆ.

4. ಸ್ಲೀಪ್ ಸೈಕಲ್
ಈ ಆ್ಯಪ್ ನಿಮ್ಮ ನಿದ್ರಾ ವಿನ್ಯಾಸವನ್ನು ರೆಕಾರ್ಡ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಡೀಪ್  ಸ್ಲೀಪ್‌ನಿಂದ ಹೊರ ಬಂದಾಗ ಅಲಾರ್ಮ್ ಬಾರಿಸಿ ಎಚ್ಚರಿಸುತ್ತದೆ.
- ಲೈಟರ್ ಸ್ಲೀಪ್ ಸ್ಟೇಜ್‌ನಲ್ಲಿರುವಾಗ ಅಲಾರಾಂ ಬಾರಿಸಿ ಎಬ್ಬಿಸುತ್ತದೆ.
- ನಿಮ್ಮ ಫೋನನ್ನು ಹತ್ತಿರದಲ್ಲಿಟ್ಟುಕೊಂಡರೆ ಸಾಕು, ನಿಮ್ಮ ನಿದ್ರಾವಿನ್ಯಾಸವನ್ನು ಟ್ರ್ಯಾಕ್ ಮಾಡುತ್ತದೆ.

5. ಕಾಮ್
ಮಲಗುವಾಗ ಕತೆ ಕೇಳಿದರೆ ನಿದ್ದೆ ಬರುತ್ತದೆ ಎನ್ನುವವರು ನೀವಾದರೆ, ಈ ಆ್ಯಪ್ ನಿಮಗೆ ಹೆಚ್ಚು ಸೂಕ್ತ. 
- ಮಕ್ಕಳಿಗೆ ಹಾಗೂ ದೊಡ್ಡವರಿಗೆ ಮಲಗುವ ಸಮಯದಲ್ಲಿ ಕತೆ ಹೇಳುತ್ತದೆ. 
- ಬಹಳ ಶಾಂತ, ಸಮಾಧಾನಕರ ದನಿಯಲ್ಲಿ ಕತೆ ಹೇಳಲಾಗುತ್ತದೆ. 
- ಧ್ಯಾನ, ರಿಲ್ಯಾಕ್ಸಿಂಗ್ ಮ್ಯೂಸಿಕ್, ಉಸಿರಾಟದ ಪಾಠಗಳು ಸೇರಿ ಹಲವು ಇತರೆ ಲಾಭಗಳನ್ನೂ ಇದೇ ಆ್ಯಪ್‌ನಿಂದ ಪಡೆಯಬಹುದು.

6. ರುಂಟಾಸ್ಟಿಕ್ ಸ್ಲೀಪ್ ಬೆಟರ್
ನಿಮ್ಮ ನಿದ್ದೆಯ ಬಗೆಗೆ ನಿಮಗೆ ಸ್ಪಷ್ಟತೆ ಕೊಡುವ ಆ್ಯಪ್ ಇದು.
- ಫೋನನ್ನು ಫ್ಲೈಟ್ ಮೋಡ್‌ನಲ್ಲಿಟ್ಟಾಗಲೂ ನಿಮ್ಮ ನಿದ್ರಾ ವಿನ್ಯಾಸವನ್ನು ದಾಖಲಿಸಬಲ್ಲದು.
- ನಿಮ್ಮ ಪ್ರತಿದಿನದ ಹವ್ಯಾಸಗಳನ್ನು ಇದರಲ್ಲಿ ದಾಖಲಿಸಬಹುದು. ಇದು ನಿಮ್ಮ ನಿದ್ದೆಗೆ ಯಾವುದು ಅಡಚಣೆ ತರುತ್ತಿದೆ ಎಂದು ತಿಳಿಸುತ್ತದೆ.
- ಡ್ರೀಮ್ ಜರ್ನಲ್ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಕನಸುಗಳ ಬಗ್ಗೆ ಅರ್ಥ ಮಾಡಿಕೊಂಡು ಅವು ನಿದ್ರೆಗೆ ಅಡ್ಡಿ ಉಂಟು ಮಾಡುತ್ತಿವೆಯೇ ಎಂದು ತಿಳಿಯಬಹುದು. 
 

Latest Videos
Follow Us:
Download App:
  • android
  • ios