ಹಸ್ತಮೈಥುನದ ಬಗ್ಗೆ ಹತ್ತು ಹಲವು ತಪ್ಪು ಕಲ್ಪನೆಗಳಿವೆ. ಅಲ್ಲದೇ ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಹಜವಾಗಿ ಹದಿ ವಯಸ್ಸಿನಲ್ಲಿ  ಹಲವರು ಇಂಥದ್ದೊಂದು ಕೆಲಸಕ್ಕೆ ಕೈ ಹಾಕುತ್ತಾರೆ. ಆದ್ದರಿಂದ ಎಲ್ಲವೂ ಇತಿ ಮಿತಿಯಲ್ಲಿದ್ದರೆ ತಪ್ಪಲ್ಲ. ಮಿತಿ ಮೀರಿದರೆ ಮಾತ್ರ ಎಚ್ಚೆತ್ತುಕೊಳ್ಳಬೇಕೆನ್ನುತ್ತಾರೆ ತಜ್ಞರು. ಈ ಕ್ರಿಯೆ ಬಗ್ಗೆ ಇರುವ ಸತ್ಯ, ಮಿಥ್ಯಗಳೇನು?

  • ಸಂಶೋಧನೆ ಪ್ರಕಾರ ಹಸ್ತಮೈಥುನ ಮನುಷ್ಯನ ಕ್ಯಾಲೋರಿ ಕಡಿಮೆ ಮಾಡುತ್ತದೆ. ಆದರೆ ಲೈಂಗಿಕ ಕ್ರೆಯೆಯಿಂದ ಬರ್ನ್ ಆಗುವಷ್ಟು ಕ್ಯಾಲೋರಿ ಇದರಲ್ಲಿ ಕಡಿಮೆಯಾಗೋಲ್ಲ. ಕೈ ಹೊರತು ಪಡಿಸಿ, ದೇಹದ ಬೇರೆ ಯಾವ ಭಾಗವೂ ಈ ಕ್ರಿಯೆಯಲ್ಲಿ ಭಾಗಿಯಾಗದ ಕಾರಣ ಹೇಳಿಕೊಳ್ಳುವಂಥ ವ್ಯಾಯಾಮವೇನೂ ಈ ಕ್ರಿಯೆಯಿಂದ ಆಗುವುದಿಲ್ಲ.
  • ಆದರೆ, ಮನಸ್ಸಿನ ಭಾರ ಹಾಗೂ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುತ್ತದೆ. 
  • ಆರೋಗ್ಯದ ದೃಷ್ಟಿಯಿಂದ ಹಸ್ತ ಮೈಥುನದ ಮಾಡುವ ಮುನ್ನ ಕೈಗಳನ್ನು ಸ್ವಚ್ಚ ಮಾಡಿಕೊಳ್ಳಬೇಕು. ಹಾಗೂ  ತೇವಾಂಶ ಕಡಿಮೆ ಇದ್ದರೆ ಲ್ಯುಬ್ರಿಕೇಟರ್ ಬಳಸಬಹುದು. 
  • ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ನಮ್ಮದಾಗಬೇಕು. ಮತ್ತೆ ಮತ್ತೆ ಈ ಕ್ರಿಯೆಯಲ್ಲಿ ತೊಡಗಬೇಕು ಎನಿಸಿದಲ್ಲಿ ಮನಸ್ಸನ್ನು ಬದಲಿಸಿಕೊಳ್ಳುವತ್ತ ಚಿಂತಿಸಬೇಕು.
  • ಆದರೆ, ಇದೊಂದು ವಯೋ ಸಹಜ ಗುಣವಾಗಿದ್ದು, ಇದನ್ನು ಮಾಡಿಕೊಳ್ಳುವುದರಿಂದ ಅಪರಾಧ ಪ್ರಜ್ಞೆ ಬೆಳೆಯಿಸಿಕೊಳ್ಳುವ ಅಗತ್ಯವಿಲ್ಲ.